Asianet Suvarna News Asianet Suvarna News

ವಿದ್ಯಾರ್ಥಿ ಜತೆ ಲೈಂಗಿಕ ಸಂಬಂಧ: ಅತ್ಯಾಚಾರ ಆರೋಪದ ಮೇಲೆ ಶಿಕ್ಷಕಿ ಅರೆಸ್ಟ್‌, ಬಾಲಕನ ತಂದೆಯೂ ಸೆರೆ!

ಹೈಲಿ ನಿಚೆಲ್ ಕ್ಲಿಫ್ಟನ್ ಕಾರ್ಮ್ಯಾಕ್ ಮತ್ತು ಆಕೆಯ ವಿದ್ಯಾರ್ಥಿಯ ನಡುವಿನ ಸಂಬಂಧದ ಬಗ್ಗೆ ಸಹಪಾಠಿಯೊಬ್ಬ ತಿಳಿದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಾಲೆಯ ಸಂಪನ್ಮೂಲ ಅಧಿಕಾರಿಗೆ ಈ ಬಗ್ಗೆ ವರದಿ ಮಾಡಿದ್ದರು. ನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. 

us female teacher arrested on rape charges after having sx with student boy s father also booked for condoning relationship ash
Author
First Published Jan 11, 2024, 3:51 PM IST

ವಾಷಿಂಗ್ಟನ್‌ (ಜನವರಿ 11, 2024): 16ರ ಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಅಮೆರಿಕದಲ್ಲಿ ಮಹಿಳಾ ಶಿಕ್ಷಕಿಯೊಬ್ಬರ ಮೇಲೆ ಅತ್ಯಾಚಾರ ಆರೋಪ ಹೊರಿಸಲಾಗಿದೆ. ಇನ್ನು, ಶಿಕ್ಷಕಿಯೊಂದಿನಿಗಿನ ಲೈಂಗಿಕ ಸಂಬಂಧವನ್ನು ಬೆಂಬಲಿಸಿದ ಆರೋಪದ ಮೇಲೆ ವಿದ್ಯಾರ್ಥಿಯ ತಂದೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಆರೋಪಿ ಶಿಕ್ಷಕಿಯನ್ನು 26 ವರ್ಷದ ಹೈಲಿ ನಿಚೆಲ್ ಕ್ಲಿಫ್ಟನ್ ಕಾರ್ಮ್ಯಾಕ್ ಎಂದು ಗುರುತಿಸಲಾಗಿದೆ. ಕಳೆದ ವಾರ ಅಮೆರಿಕದ ಟೆಕ್ಸಾಸ್‌ನ ಗಾರ್ಡನ್ ರಿಡ್ಜ್‌ನಲ್ಲಿರುವ ಮನೆಗೆ ಪರಾರಿಯಾಗುತ್ತಿದ್ದಾಗ ಅಮೆರಿಕದ ಮಿಸೌರಿ ರಾಜ್ಯದ ಲ್ಯಾಕ್ವಿ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದ ಹೈಲಿಯನ್ನು ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.

ಗಂಡ ಹೆಂಡತಿ ಜಗಳಕ್ಕೆ ಹೆತ್ತ ಮಗುವನ್ನೇ ಕೊಂದ ತಾಯಿ? ಪತಿಗೆ ಕಂದಮ್ಮನ ಕೊಡಲು ಇಷ್ಟವಿಲ್ಲದೆ ಕೊಲೆ!

ಹೈಲಿ ನಿಚೆಲ್ ಕ್ಲಿಫ್ಟನ್ ಕಾರ್ಮ್ಯಾಕ್ ಮತ್ತು ಆಕೆಯ ವಿದ್ಯಾರ್ಥಿಯ ನಡುವಿನ ಸಂಬಂಧದ ಬಗ್ಗೆ ಸಹಪಾಠಿಯೊಬ್ಬ ತಿಳಿದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಾಲೆಯ ಸಂಪನ್ಮೂಲ ಅಧಿಕಾರಿಗೆ ಈ ಬಗ್ಗೆ ವರದಿ ಮಾಡಿದ್ದರು ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ. ನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. 

ತನ್ನ ಸಹಪಾಠಿ ಹೈಲಿ ನಿಚೆಲ್ ಕ್ಲಿಫ್ಟನ್ ಕಾರ್ಮ್ಯಾಕ್‌ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಸಾಕ್ಷಿಯಾಗಿದ್ದ ವಿದ್ಯಾರ್ಥಿ ಪೊಲೀಸರಿಗೆ ತಿಳಿಸಿದ್ದಾನೆ. ಅವನು ತಮ್ಮ ಸಹಪಾಠಿಯ ಬೆನ್ನಿನ ಮೇಲೆ ಗೀರುಗಳಿರುವ ಚಿತ್ರಗಳನ್ನು ಸಹ ತೋರಿಸಿದ್ದು, ಇದು ಶಿಕ್ಷಕಿಯಿಂದ ಉಂಟಾಯಿತು ಎಂದಿದ್ದಾನೆ. ಅಲ್ಲದೆ, ಶಿಕ್ಷಕಿ ತನ್ನ ಸಹಪಾಠಿಯೊಂದಿಗಿನ ಸಂಬಂಧದಿಂದಾಗಿ ಇತ್ತೀಚೆಗೆ ತನ್ನ ಪತಿಗೆ ವಿಚ್ಛೇದನ ನೀಡಿದ್ದಾಳೆ ಎಂದೂ ಆತ ಹೇಳಿದ್ದಾನೆ.

ಆರೋಪ ನಿರಾಕರಿಸಿದ್ದ ಶಿಕ್ಷಕಿ
ಕಳೆದ ಡಿಸೆಂಬರ್‌ನಲ್ಲಿ ಪೊಲೀಸರು ಈ ಸಂಬಂಧ ಹೈಲಿಯನ್ನು ಪ್ರಶ್ನಿಸಿದ್ದು, ಆದರೆ ಆಕೆ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದರು. ಬಳಿಕ ಆಕೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಹೈಲಿ ಮತ್ತು ವಿದ್ಯಾರ್ಥಿಯ ನಡುವೆ ವಿನಿಮಯವಾದ ಸಂದೇಶಗಳು ಅವರು ಸಂಬಂಧದಲ್ಲಿದ್ದಾರೆ ಎಂದು ದೃಢಪಡಿಸಿದೆ. ನಂತರ, ಹೈಲಿ ಮಿಸೌರಿಯನ್ನು ತೊರೆದು ಟೆಕ್ಸಾಸ್‌ಗೆ ತೆರಳಿದ್ದರು. ನಂತರ ಬಂಧನ ವಾರಂಟ್ ಜಾರಿ ಮಾಡಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನು ಓದಿ: ಗೋವಾದಲ್ಲಿ ಮಗು ಕೊಂದ ಬೆಂಗಳೂರು ಸ್ಟಾರ್ಟಪ್‌ ಸಂಸ್ಥಾಪಕಿ ಅರೆಸ್ಟ್: ಶವದ ಸಮೇತ ಕರ್ನಾಟಕದಲ್ಲಿ ಸಿಕ್ಕಿಬಿದ್ದ ಪಾತಕಿ!

ವಿದ್ಯಾರ್ಥಿಯ ತಂದೆಗೆ ಸಂಬಂಧದ ಬಗ್ಗೆ ತಿಳಿದಿತ್ತು
ತನಿಖೆಯ ವೇಳೆ, ವಿದ್ಯಾರ್ಥಿಯ ತಂದೆ ಮಾರ್ಕ್ ಕ್ರೈಟನ್‌ಗೆ ಹೈಲಿ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ. ನಂತರ ಅವರನ್ನು ಬಂಧಿಸಿ ಮಗನ ಯೋಗಕ್ಷೇಮಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದೂ ವರದಿಯಾಗಿದೆ.
 

Follow Us:
Download App:
  • android
  • ios