ಮಕ್ಕಳ ಮೇಲೆ ಪಾಲಕರಿಗೆ ಅತಿಯಾದ ಪ್ರೀತಿ ಇರುತ್ತೆ. ಅದು ತಪ್ಪಲ್ಲ. ಆದ್ರೆ ಈ ಪ್ರೀತಿ, ಮಮತೆಯ ಹುಚ್ಚಿನಲ್ಲಿ ಅತಿಯಾಗಿ ವರ್ತಿಸಿದ್ರೆ ಸಮಸ್ಯೆ. ನಿಮ್ಮ ಕೆಲಸ ನಿಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸ್ಬೇಕೆ ವಿನಃ ಹಾಳ್ಮಾಡಬಾರದು.
ನಾವು ಪಟ್ಟ ಕಷ್ಟವನ್ನು ಮಕ್ಕಳು ಕಾಣ್ಬಾರದು.. ಒಂದೇ ಡ್ರೆಸ್, ಒಂದೇ ಚಪ್ಪಲಿಯಲ್ಲಿ ಇಡೀ ವರ್ಷ ಕಳೆದ ನಮ್ಮ ಸ್ಥಿತಿ ಮಕ್ಕಳಿಗೆ ಬರಬಾರದು. ನಮ್ಮ ಬಳಿ ಸಾಕಷ್ಟು ಹಣವಿದೆ, ದುಡಿಯೋದೇ ಮಕ್ಕಳ ಸಲುವಾಗಿ ಅಂದ್ಮೇಲೆ, ಮಕ್ಕಳಿಗೆ ಖರ್ಚು ಮಾಡ್ದೆ ಮತ್ತ್ಯಾರಿಗೆ ಮಾಡೋದು? ಇದು ಈಗಿನ ಪಾಲಕರ ಸ್ವಭಾವ. ಬಹುತೇಕ ಪಾಲಕರು, ತಮ್ಮ ಮಕ್ಕಳಿಗೆ ಕುಂದು ಕೊರತೆ ಇಲ್ಲದಂತೆ ಬೆಳೆಸಲು ಮುಂದಾಗ್ತಾರೆ. ಮಕ್ಕಳನ್ನು ಅತಿಯಾಗಿ ಪ್ರೀತಿಸುವ ಪಾಲಕರಿಗೆ ಮಕ್ಕಳ ಕಷ್ಟ ನೋಡೋಕೆ ಸಾಧ್ಯವಿಲ್ಲ. ಮಕ್ಕಳು ಒಂದಿಲ್ಲ ಅಂದ್ರೆ ನಾಲ್ಕು ಕೊಡಿಸುವ ಪಾಲಕರ ಸಂಖ್ಯೆ ಸಾಕಷ್ಟಿದೆ.
ಹಳ್ಳಿಯಿಂದ ಮೆಟ್ರೋ (Metro) ಸಿಟಿಯವರೆಗೆ ಬಹುತೇಕ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆ (Private School) ಗೆ ಹೋಗ್ತಿದ್ದಾರೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಾಲಕರು ಇಂಗ್ಲೀಷ್ ಮೀಡಿಯಂಗೆ (English Medium) ಮಕ್ಕಳನ್ನು ಸೇರಿಸ್ತಿದ್ದಾರೆ. ಮಗುವಿಗೆ ಎರಡು, ಮೂರು ವರ್ಷವಾಗ್ತಿದ್ದಂತೆ ಶಾಲೆ ಶುರು..ಪ್ರಾಜೆಕ್ಟ್ (Project) ಹೆಸರಿನಲ್ಲಿ ಖಾಸಗಿ ಶಾಲೆಗಳು ಮಕ್ಕಳಿಗೆ ಅನೇಕ ಆಕ್ಟಿವಿಟಿ ಮಾಡಿಸ್ತವೆ. ಈ ಸಮಯದಲ್ಲಿ ಮಕ್ಕಳಿಗೆ ಒಂದಿಷ್ಟು ಪೆನ್, ಪೆನ್ಸಿಲ್, ಪೇಪರ್ ಅಗತ್ಯವಿರುತ್ತದೆ ನಿಜ. ಆದ್ರೆ ಮಕ್ಕಳಿಗೆ ಶಾಲೆಯಲ್ಲಿ ತೊಂದ್ರೆ ಆಗದಿರಲಿ ಎಂದು ಪಾಲಕರು ವಸ್ತುಗಳನ್ನು ಮಕ್ಕಳಿಗೆ ಕೊಡಿಸ್ತಾರೆ. ಕೆಲ ಪಾಲಕರು ಬೇರೆ ವಿಷ್ಯದಲ್ಲಿ ಕಂಜೂಸಿ ಮಾಡಿದ್ರೂ ಮಕ್ಕಳ ವಿಷ್ಯದಲ್ಲಿ ಮಾತ್ರ ಕೈಬಿಚ್ಚಿ ನಿಲ್ಲುತ್ತಾರೆ.
VIRAL STORY : ಮದುವೆಯಾಗಿ ಮಕ್ಕಳಾದ್ಮೇಲೆ ಹೆಂಡತಿಯಾಗಿ ಬದಲಾದ ಗಂಡ…
ಮಕ್ಕಳಿರುವ ಮನೆಗೆ ಹೋದ್ರೆ ನಿಮಗೆ ವಾಸ್ತವದ ಅರಿವಾಗುತ್ತದೆ. ಮಕ್ಕಳ ಬಳಿ ಏನಿಲ್ಲ? ಮಕ್ಕಳಿಗೆ ಅಗತ್ಯವಿರದ ಮೊಬೈಲ್‌ನಿಂದ ಹಿಡಿದು ಪೆನ್ಸಿಲ್, ಪೆನ್, ಸ್ಕೇಲ್ ಸೇರಿದಂತೆ ಶಾಲೆಗೆ ಬೇಕಾಗಿರುವ ವಸ್ತುಗಳ ರಾಶಿ ಇರುತ್ತದೆ. ಮನೆಯಲ್ಲಿ ಇರೋದು ಒಂದು ಮಗು. ಆದ್ರೆ ಮನೆಯಲ್ಲಿರೋ ಪೆನ್ಸಿಲ್, ಪೆನ್, ಬಣ್ಣದ ಪೆನ್ಸಿಲ್, ಸ್ಕೆಚ್ ಪೆನ್ಸ್ ರಾಶಿ ಬಿದ್ದಿರುತ್ತವೆ. ಸ್ಕೆಚ್ ಪೆನ್ ನಲ್ಲಿ ಕಪ್ಪು ಬಣ್ಣ ಖಾಲಿಯಾದ್ರೆ ಇಡೀ ಸ್ಕೆಚ್ ಪೆನ್ ಬಾಕ್ಸ್ ಮನೆಗೆ ಬಂದಿರುತ್ತದೆ.
ಅನೇಕ ಪಾಲಕರು ಪದೇ ಪದೇ ಮಾರುಕಟ್ಟೆಗೆ ಹೋಗಿ ಈ ವಸ್ತುಗಳನ್ನು ತರುವ ಉಸಾಪರಿ ಬೇಡ ಅಂತ ಪ್ಯಾಕ್ ಗಟ್ಟಲೆ ಸಾಮಾನು ತರ್ತಾರೆ. ಇದನ್ನು ನೋಡಿದ ಮಕ್ಕಳಿಗೆ ಹಬ್ಬ. ಕಾಗದ ಹರಿದು ಅದಕ್ಕೊಂದಿಷ್ಟು ಬಣ್ಣ ತುಂಬಿ ಅದನ್ನು ಕಸಕ್ಕೆ ಎಸೆಯುತ್ತಾರೆ.
ಪಾಲಕರ ಕೈನಲ್ಲಿದೆ ಮಕ್ಕಳ ಭವಿಷ್ಯ : ನಿಮ್ಮ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಕೊಡಿಸಿ. ಮಕ್ಕಳು ಹಠ ಮಾಡ್ತಾರೆ ಎನ್ನುವ ಕಾರಣಕ್ಕೆ ಅಥವಾ ಮಕ್ಕಳು ನಮ್ಮಂತೆ ಕಷ್ಟ ನೋಡ್ಬಾರದು ಎಂಬ ಕಾರಣಕ್ಕೆ ಅವರು ಹೇಳಿದ್ದೆಲ್ಲ ಕೊಡಿಸಿದ್ರೆ ಅದೇ ಮುಂದೆ ಹಠವಾಗಿ ಬದಲಾಗುತ್ತದೆ. ತಮಗೆ ಬೇಕಾಗಿದ್ದು ಸಿಕ್ಕಿಲ್ಲ ಎಂದಾಗ ಮಕ್ಕಳು ಹಠ ಮಾಡಲು ಶುರು ಮಾಡ್ತಾರೆ. ಇಲ್ಲ ಎನ್ನುವ ಸ್ಥಿತಿಯನ್ನು ಎಂದೂ ಅನುಭವಿಸದ ಮಕ್ಕಳಿಗೆ ಮುಂದೆ ಪರಿಸ್ಥಿತಿ ನಿಭಾಯಿಸೋದು ಕಷ್ಟವಾಗುತ್ತದೆ.
ಈಗಿನ ಮಕ್ಕಳಿಗೆ ಪಾಲಕರು ಹೇಳಿದ್ದೆಲ್ಲ ನೀಡುವ ಕಾರಣ ಮಕ್ಕಳಿಗೆ ಕಷ್ಟದ ಅರಿವಾಗ್ತಿಲ್ಲ. ದುಡ್ಡಿನ ಬೆಲೆ ತಿಳಿಯುತ್ತಿಲ್ಲ. ಪಾಲಕರ ಬಳಿ ಅದೆಷ್ಟೇ ಹಣವಿರಲಿ ಅದನ್ನು ಮಕ್ಕಳ ಮುಂದೆ ಪ್ರದರ್ಶಿಸುವ ಅಗತ್ಯವಿಲ್ಲ. ಮಕ್ಕಳಿಗೆ ಕಷ್ಟವೇನು ಎಂಬುದು ತಿಳಿದಿರಬೇಕು.
ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಗರ್ಲ್‌ಫ್ರೆಂಡ್ ಜೊತೆ ಮದುವೆ!
ಒಂದು ಪೆನ್ ಇಂಕ್ ಖಾಲಿಯಾಗಿದೆ ಎಂದಾಗ ಇಂಕ್ ನೀಡುವ ಬದಲು ಇಡೀ ಪೆನ್ ಬದಲಿಸುವ ಜೊತೆಗೆ ಐದಾರು ಪೆನ್ ಮಕ್ಕಳಿಗೆ ನೀಡಿದ್ರೆ ಅದು ವ್ಯರ್ಥ. ಮಕ್ಕಳಿಗೆ ಅಗತ್ಯವಿರೋದು ಒಂದೇ ಪೆನ್ ಅಥವಾ ಪೆನ್ಸಿಲ್ ಎಂದಾದ್ರೆ ಅಷ್ಟನ್ನು ಮಾತ್ರ ಕೊಡಿಸಿ. ಇದ್ರಿಂದ ಹಣ ಉಳಿಯುತ್ತದೆ. ಮಕ್ಕಳಿಗೆ ಹಣದ ಮಹತ್ವವನ್ನು ತಿಳಿಸಿದ್ರೆ ಮುಂದೆ ಅವರೇ ಈ ಅನಗತ್ಯ ವಸ್ತುಗಳು ಬೇಡ ಎನ್ನಲು ಶುರು ಮಾಡ್ತಾರೆ. ಬದಲಾವಣೆ ಪಾಲಕರಿಂದಾಗಬೇಕು.