ಪ್ರೀತಿ ಹುಡುಗ- ಹುಡುಗಿ ಮಧ್ಯೆಯೇ ಚಿಗುರಬೇಕಾಗಿಲ್ಲ. ಹುಡುಗ- ಹುಡುಗ, ಹುಡುಗಿ –ಹುಡುಗಿ ಮಧ್ಯೆಯೂ ಅರಳಬಹುದು. ಹಿಂದೆ ಇದ್ದ ಮಡಿವಂತಿಕೆ ಈಗಿಲ್ಲ. ಸತ್ಯ ಒಪ್ಪಿಕೊಂಡು ಸ್ನೇಹಿತೆಯನ್ನು ಕೈಹಿಡಿದ ಹುಡುಗಿಯೊಬ್ಬಳ ಕಥೆ ಇಲ್ಲಿದೆ.
ವಿಶ್ವದ ಹಲವು ದೇಶಗಳಲ್ಲಿ ಸಲಿಂಗಕಾಮವನ್ನು ಮುಕ್ತ ಹೃದಯದಿಂದ ಸ್ವೀಕರಿಸಲಾಗುತ್ತಿದೆ. ಇನ್ನೂ ಕೆಲವು ದೇಶಗಳಲ್ಲಿ ಇದಕ್ಕಾಗಿ ಕಾನೂನಿನ ಒಪ್ಪಿಗೆ ಸಿಕ್ಕಿಲ್ಲ. ಮತ್ತೆ ಕೆಲ ದೇಶಗಳಲ್ಲಿ ಕಾನೂನಿನ ಒಪ್ಪಿಗೆ ಸಿಕ್ಕಿದ್ರೂ ಜನರು ಅದನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಿಲ್ಲ. ಭಾರತದಲ್ಲಿಯೂ ಸಲಿಂಗಕಾಮವನ್ನು ಎಲ್ಲರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಕೆಲವರು ಸಲಿಂಗಕಾಮಿಗಳನ್ನು ನೋಡುವ ದೃಷ್ಟಿ ಬದಲಾಗಿಲ್ಲ. ನಮ್ಮಲ್ಲಿ ಮಾತ್ರವಲ್ಲ ಅನೇಕ ದೇಶ (Country) ಗಳಲ್ಲಿ ಸಲಿಂಗಕಾಮಿ (Homosexual) ಗಳು ಜೀವನ ನಡೆಸಲು ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ತಮ್ಮ ಪ್ರೀತಿ (Love) ಪಡೆಯಲು, ಕುಟುಂಬಸ್ಥರ ಮನವೊಲಿಸಲು ನಿರಂತರ ಪ್ರಯತ್ನ ನಡೆಸಬೇಕು.
ಅನೇಕರು ಪ್ರೀತಿ ಹಾಗೂ ಕುಟುಂಬ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದೆ ತೊಳಲಾಟ ನಡೆಸುತ್ತಾರೆ. ಕುಟುಂಬಸ್ಥರು ಅವರ ಪ್ರೀತಿಯನ್ನು ಬೇಗ ಅರ್ಥ ಮಾಡಿಕೊಳ್ಳುವುದಿಲ್ಲ. ಕೆಲವು ಬಾರಿ ಸಲಿಂಗಕಾಮಿಗಳಿಗೆ ತಾವು ಸಲಿಂಗಕಾಮಿಗಳು ಎಂಬ ವಿಷ್ಯ ತಿಳಿಯಲು ಅನೇಕ ವರ್ಷಗಳು ಹಿಡಿಯುತ್ತವೆ. ಸಲಿಂಗಕಾಮಿಯೊಬ್ಬಳು ತನ್ನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. 11 ವರ್ಷಗಳ ನಂತ್ರ ಗೊತ್ತಾದ ಸತ್ಯವೇನು, ಪ್ರೀತಿ ಹೇಗೆ ಚಿಗುರಿತು ಎಂಬೆಲ್ಲವನ್ನು ಆಕೆ ಬಿಚ್ಚಿಟ್ಟಿದ್ದಾಳೆ.
'ನನ್ನ ಗಂಡನನ್ನು ಹುಡುಕಿಕೊಟ್ರೆ 5 ಸಾವಿರ ಡಾಲರ್ ಗಿಫ್ಟ್..' ಸುಂದರಿಯ ಆಫರ್‌ಗೆ ಭರ್ಜರಿ ರೆಸ್ಪಾನ್ಸ್!
ಸಲಿಂಗಕಾಮಿಗಳ ಕಥೆ : ಇದು ಯುಕೆಯಲ್ಲಿ ನಡೆದ ಘಟನೆ. ಜೇಮಿ ಮತ್ತು ಶಾಬಾ ಹೆಸರಿನ ಇಬ್ಬರು ಯುವತಿಯರ ಪ್ರೇಮ ಕಥೆ. ಜೇಮಿ ಮತ್ತು ಶಾಬಾ ಇಬ್ಬರೂ ಹ್ಯಾಲೋವೀನ್ ಪಾರ್ಟಿಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಇಬ್ಬರ ಸ್ನೇಹ ಅಲ್ಲಿಂದ ಶುರುವಾಗಿತ್ತು. ಆದ್ರೆ ಜೇಮಿ, ಶಬಾಳನ್ನು ಸ್ನೇಹಿತೆಗಿಂತ ಹೆಚ್ಚಾಗಿ ಪ್ರೀತಿಸತೊಡಗಿದ್ದಳು. ಆದ್ರೆ ಇದನ್ನು ಶಬಾ ಮುಂದೆ ಹೇಳಿದ್ರೆ, ಶಬಾ ಅದನ್ನು ಸ್ವೀಕರಿಸದೆ ಇರಬಹುದು, ಇದ್ರಿಂದ ಸ್ನೇಹ ಹಾಳಾಗುತ್ತೆ ಎಂದು ಜೇಮಿ ಭಾವಿಸಿದ್ದಳು. ಇದೇ ಕಾರಣಕ್ಕೆ ಅನೇಕ ದಿನ ಈ ವಿಷ್ಯವನ್ನು ಜೇಮಿ ಮುಚ್ಚಿಟ್ಟಿದ್ದರು. ಕೆಲ ಸಂದರ್ಭದಲ್ಲಿ ಅನೇಕ ಸನ್ಹೆಗಳು, ಮಾತಿನ ಮೂಲಕ ಶಬಾಗೆ ತನ್ನ ಭಾವನೆ ಹೇಳುವ ಪ್ರಯತ್ನವನ್ನು ಜೇಮಿ ಮಾಡಿದ್ದಳು. ಆದ್ರೆ ಸ್ಪಷ್ಟವಾಗಿ ಏನನ್ನೂ ಹೇಳಿರಲಿಲ್ಲ.
ಕಾಲೇಜಿನಲ್ಲಿ ಶುರುವಾಯ್ತು ಡೇಟಿಂಗ್ : ಶಬಾ ಮತ್ತು ಜೇಮಿ ಕಾಲೇಜಿನಲ್ಲಿ ಭೇಟಿಯಾಗಲು ಶುರು ಮಾಡಿದ್ದರು. ಒಟ್ಟಿಗೆ ಇಬ್ಬರೂ ಸಮಯ ಕಳೆಯುತ್ತಿದ್ದರು. ಧೈರ್ಯ ಮಾಡಿದ ಶಬಾ, ಜೇಮಿಗೆ ಪ್ರೀತಿ ವಿಷ್ಯವನ್ನು ಹೇಳಿದ್ದಾಳೆ. ಇಬ್ಬರೂ ಡೇಟಿಂಗ್ ಪ್ರಾರಂಭಿಸಿದ್ದಾರೆ. ತಾನೇಕೆ ಹುಡುಗಿಯನ್ನು ಇಷ್ಟಪಡ್ತಿದ್ದೇನೆ ಎನ್ನುವ ಪ್ರಶ್ನೆ ಜೇಮಿ ಮನಸ್ಸಿನಲ್ಲಿ ಮೂಡಿದೆ. ಟಿವಿಯಲ್ಲಿ ಟ್ರಾನ್ಸ್ಜೆಂಡರ್ ಶಬ್ಧವನ್ನು ಕೇಳಿದ ಜೇಮಿ ಮನಸ್ಸು ಮತ್ತಷ್ಟು ಗೊಂದಲಕ್ಕೆ ಒಳಗಾಗಿದೆ. ಈ ಬಗ್ಗೆ ಶಬಾ ಮುಂದೆ ಜೇಮಿ ಪ್ರಶ್ನೆ ಮಾಡಿದ್ದಾಳೆ. ಅಲ್ಲದೆ ತಾನು ಸಲಿಂಗಕಾಮಿ ಎಂದು ಜೇಮಿ ಹೇಳಿದ್ದಾಳೆ. ನಾನು ಹುಡುಗನಾಗಿದ್ದು, ಹುಡುಗಿಯ ದೇಹದಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದ ಜೇಮಿ, ಲಿಂಗ ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾಳೆ. ಆಕೆಯ ಈ ಎಲ್ಲ ನಿರ್ಧಾರವನ್ನು ಶಬಾ ಬೆಂಬಲಿಸಿದ್ದಾಳೆ. ಅವಳ ಜೊತೆ ನಿಂತಿದ್ದಾಳೆ.
ಇಂಥ ಹೆಂಡ್ತಿ ಇದ್ದರೆ, ಹತ್ತಿರವೂ ಹೋಗಬೇಡಿ ಅನ್ನುತ್ತೆ ಚಾಣಕ್ಯ ನೀತಿ
ಸದ್ಯ ಶಬಾ ಮತ್ತು ಜೇಮಿ ಪತಿ-ಪತ್ನಿಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ಕಥೆಯನ್ನು ಜೇಮಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶಬಾ ಕುಟುಂಬ, ಮಗಳ ವರ್ತನೆಯಿಂದ ತುಂಬಾ ಬೇಸರಗೊಂಡಿತ್ತಂತೆ. ಶಬಾ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ಶುರು ಮಾಡಿದ್ದರಂತೆ. ಒಂದು ದಿನ ಜೇಮಿ, ಶಬಾಳ ತಾಯಿಗೆ ಕರೆ ಮಾಡಿ ಹೊಸ ವರ್ಷಕ್ಕೆ ಶುಭಹಾರೈಸಿದ್ದಳಂತೆ. ನಂತ್ರ ಶಬಾ ಕುಟುಂಬದ ಸದಸ್ಯರು ಈ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರಂತೆ. ಶಬಾ ತಾಯಿಗೆ ಈ ಸಂಬಂಧ ಒಪ್ಪಗೆಯಾಗಿತ್ತಂತೆ. ಮದುವೆಗೆ ಶಬಾ ತಾಯಿಯೇ ಸಿದ್ಧತೆ ನಡೆಸಿದ್ದರು ಎಂದು ಜೇಮಿ ಹೇಳಿದ್ದಾರೆ.