ಪೇರೆಂಟಿಂಗ್ ಅನ್ನೋದು ದೊಡ್ಡ ಟಾಸ್ಕ್. ಮಕ್ಕಳ ತಪ್ಪುಗಳನ್ನು ತಿದ್ದಿ, ಸರಿಯಾದುದನ್ನು ಹೇಳಿಕೊಡುತ್ತಿರಬೇಕು. ಹೀಗಾಗಿಯೇ ಬಹುತೇಕ ಪೋಷಕರು ಯಾವಾಗ್ಲೂ ಸ್ಟ್ರೆಸ್ ಅನುಭವಿಸುತ್ತಾರೆ. ಆದ್ರೆ ವಿಜ್ಞಾನದ ಪ್ರಕಾರ ಮಕ್ಕಳನ್ನು ಹೇಗೆ ಬೆಳೆಸ್ಬೇಕು ನಿಮ್ಗೊತ್ತಾ ? ಈ ರೀತಿ ಮಕ್ಕಳನ್ನು ಬೆಳೆಸಿದ್ರೆ ಪೇರೆಂಟ್ಸ್ ಟೆನ್ಶನ್ ಫ್ರೀ ಆಗಿರ್ಬೋದು.
ಮಕ್ಕಳನ್ನು ಬೆಳೆಸುವುದು ಸಣ್ಣಪುಟ್ಟ ಕೆಲಸವಲ್ಲ. ಪೇರೆಂಟಿಂಗ್ ಎಂಬುದು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕಾದ ಜವಾಬ್ದಾರಿ. ಮಕ್ಕಳು ಕೆಲವೊಮ್ಮೆ ವಿಪರೀತ ಹಠಮಾರಿಗಳಾಗಿ ಬಿಡುತ್ತಾರೆ. ಕೆಲವೊಮ್ಮೆ ಸಣ್ಣಪುಟ್ಟ ವಿಚಾರಕ್ಕೂ ಅಳುತ್ತಾರೆ. ಹೀಗಾಗಿ ಮಕ್ಕಳಿಗೆ ಎಲ್ಲಾ ರೀತಿಯ ಸರಿ ತಪ್ಪುಗಳನ್ನು ಹೇಳಿಕೊಡಬೇಕಾಗುತ್ತದೆ. ಮಗುವನ್ನು ಬೆಳೆಸುವುದು ಒಂದು ಪ್ರಮುಖ ಕಾರ್ಯವಾಗಿದೆ. ಆದರೆ ಆ ಬಗ್ಗೆ ಹೆಚ್ಚು ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ಇತ್ತೀಚಿನ ಟ್ವಿಟ್ಟರ್ ಥ್ರೆಡ್‌ನಲ್ಲಿ, ತಾಯಿ ಮತ್ತು ಅಭಿವೃದ್ಧಿಯ ವಿಜ್ಞಾನಿಯೂ ಆಗಿರುವ ಡೋರ್ಸಾ ಅಮೀರ್, ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಹೇಗೆ ಎಂಬ ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ.
ಪೋಷಕರು (Parents), ನೆರೆಹೊರೆಯವರು ಅಥವಾ ಮಗುವಿನ ಶಿಕ್ಷಕರು (Teachers), ಪ್ರತಿಯೊಬ್ಬರೂ ನಿಮಗೆ ಪೋಷಕರ ಸಲಹೆಯನ್ನು ನೀಡುತ್ತಲೇ ಇರುತ್ತಾರೆ. ಜನರ ಮಾತನ್ನು ಕೇಳುವ ಮೂಲಕ ಪೋಷಕರು ಒತ್ತಡಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ ಮತ್ತು ಕೆಲವೊಮ್ಮೆ ನೀವು ಇಲ್ಲಿಯವರೆಗೆ ಏನು ಮಾಡಿದ್ದರೂ ಅದು ನಿಮ್ಮ ಮಗುವಿನ (Children) ಯೋಗಕ್ಷೇಮಕ್ಕೆ ಸಾಕಾಗುವುದಿಲ್ಲ ಎಂದು ನೀವು ಭಾವಿಸಬಹುದು. ಹೀಗಾಗಿ ವಿಜ್ಞಾನದ ಪ್ರಕಾರ ಸರಿಯಾದ ಪೇರೆಂಟಿಂಗ್ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಮಕ್ಕಳನ್ನು ಈ ರೀತಿ ಬೆಳೆಸಿದರೆ ನೀವು ಟೆನ್ಶನ್ ಮುಕ್ತರಾಗಿರಬಹುದು.
Parenting Tips: ಪೋಷಕರು ಮಾಡೋ ಇಂಥಾ ತಪ್ಪು ಮಕ್ಕಳ ಕಾನ್ಫಿಡೆನ್ಸ್ ಕಡಿಮೆ ಮಾಡುತ್ತೆ
ಎಲ್ಲದರಿಂದ ಕಲಿಯುವುದು ಅನಿವಾರ್ಯವಲ್ಲ: ಕ್ರೀಡೆ ಮತ್ತು ಮನರಂಜನೆಗಾಗಿ ಮಕ್ಕಳನ್ನು ಆಡಲು ಬಿಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಪ್ರತಿಯೊಂದು ಚಟುವಟಿಕೆಯಿಂದಲೂ (Activities) ಅವರೇನಾದರೂ ಹೊಸತನ್ನು ಕಲಿಯಲಿ ಎಂದು ನಿರೀಕ್ಷಿಸಬೇಡಿ. ಮಕ್ಕಳು ತಮ್ಮ ಸ್ವಂತ ಇಚ್ಛೆಯ ಮೇಲೆ ಏನು ಮಾಡುತ್ತಾರೆ ಎಂಬುದರಿಂದಲೂ ಬಹಳಷ್ಟು ಕಲಿಯುತ್ತಾರೆ, ಆದ್ದರಿಂದ ನೀವು ಅವರ ಕಲಿಕೆಯ ಮೇಲೆ ಎಲ್ಲಾ ಸಮಯದಲ್ಲೂ ಗಮನಹರಿಸಬೇಕಾಗಿಲ್ಲ.
ಮಕ್ಕಳಿಗೆ ಬೇಸರವಾಗುವುದು ಸಹಜ: ಪ್ರತಿ ಬಾರಿಯೂ ಮಕ್ಕಳಿಗೆ ಬೇಸರವಾದಾಗ ಎದ್ದು ಬಿದ್ದು ಏನಾಯ್ತು, ಹೇಗಾಯ್ತು ಎಂದೆಲ್ಲಾ ಕೇಳುತ್ತಾ ಕಾಟ ಕೊಡಬೇಡಿ. ಮಕ್ಕಳಿಗೂ ಬೇಸರವಾಗಲು ಅವಕಾಶ ನೀಡಬೇಕು. ಇದು ಬೆಳವಣಿಗೆಯ (Growth) ಒಂದು ಭಾಗವಾಗಿದೆ. ಮಕ್ಕಳು ಬೇಸರಗೊಂಡರೆ ಅದರಲ್ಲಿ ತಪ್ಪೇನಿಲ್ಲ. ಮಗುವನ್ನು ಸದಾ ಮನರಂಜಿಸುವ ಅಥವಾ ಅವರಿಗೆ ಹೊಸ ಚಟುವಟಿಕೆಯನ್ನು ಕಂಡುಕೊಳ್ಳುವ ಒತ್ತಡವನ್ನು (Pressure) ನೀವು ತೆಗೆದುಕೊಳ್ಳುವ ಅಗತ್ಯವಿಲ್ಲ. ಮಗುವಿಗೆ ಸ್ವಂತವಾಗಿ ಯೋಚಿಸಲು ಮತ್ತು ಅವನ ಆಯ್ಕೆಯ ಚಟುವಟಿಕೆಯನ್ನು ಕಂಡುಕೊಳ್ಳಲು ಅವಕಾಶವನ್ನು ನೀಡಿ.
ಮಕ್ಕಳ ಸ್ವತಃ ಸಮಸ್ಯೆ ಪರಿಹರಿಸಲು ಅವಕಾಶ ಮಾಡಿಕೊಡಿ: ಎಲ್ಲಾ ರೀತಿಯ ತೊಂದರೆಗಳಿಂದ ನಿಮ್ಮ ಮಗುವನ್ನು ರಕ್ಷಿಸಲು ಪ್ರಯತ್ನಿಸುವ ಪೋಷಕರ ನೀವಾ ? ಶಾಲೆಯ ಬಸ್ ಆಗಿರಲಿ ಅಥವಾ ಆಟದ ಮೈದಾನವೇ ಇರಲಿ, ನೀವು ಯಾವಾಗಲೂ ಜೊತೆಯಲ್ಲೇ ಇದ್ದು ಪ್ರೊಟೆಕ್ಟ್ ಮಾಡಬೇಕೆಂದು ಬಯಸುತ್ತೀರಾ ? ಹಾಗಿದ್ರೆ ನಿಮ್ಮ ಪೇರೆಟಿಂಗ್ ರೀತಿ ತಪ್ಪಾಗಿದೆ. ನಿಮ್ಮ ಮಗುವಿಗೆ ಸಾಮಾಜಿಕ ಭಿನ್ನಾಭಿಪ್ರಾಯಗಳನ್ನು ಎದುರಿಸಲು ನೀವು ಅನುಮತಿಸಬೇಕು. ಇದರಿಂದ ಮಗು ತನ್ನ ಸಮಸ್ಯೆಯನ್ನು ತಾನೇ ಬಗೆಹರಿಸಿಕೊಳ್ಳಲು ಕಲಿತುಕೊಳ್ಳುತ್ತದೆ.
ಮಗು ಸದಾ ಡಲ್ ಇರುತ್ತಾ? ಮೂಡ್ ಆಫ್ ಆಗುತ್ತಿದ್ದರೆ ಈ ಸಮಸ್ಯೆ ಇರ್ಬಹುದು
ಮಕ್ಕಳು ಆಟದಲ್ಲಿ ತಮ್ಮ ಸಹ ಆಟಗಾರರೊಂದಿಗೆ ಭಿನ್ನಾಭಿಪ್ರಾಯ ಹೊಂದಬಹುದು, ಜಗಳವಾಡಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ. ಇದು ಸಹಜವಾಗಿದೆ. ಸಾಧ್ಯವಾದರೆ ಅವರ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಲಿ. ಯಾವುದೇ ಪರಿಸ್ಥಿತಿ ಸಂಭವಿಸದಂತೆ ತಡೆಯಲು ನೀವು ಪ್ರಯತ್ನಿಸಬೇಕಾಗಿಲ್ಲ. ನಕಾರಾತ್ಮಕ ಭಾವನೆಗಳು ಕೆಟ್ಟದ್ದಲ್ಲ. ಬದಲಿಗೆ ಇಂಥಾ ಘಟನೆಗಳು ಮಗುವಿನ ಮನಸ್ಥಿತಿಯನ್ನು ಇನ್ನಷ್ಟು ಬಲಪಡಿಸುತ್ತದೆ.
ಯಾವಾಗಲೂ ಮಕ್ಕಳ ಸುತ್ತ ಇರಬೇಡಿ: ಪ್ರತಿ ಪೋಷಕರಿಗೂ ಮಗುವಿನ ಬಗ್ಗೆ ಕಾಳಜಿಯಿರುವುದು (Care) ಸಹಜವಾಗಿದೆ. ಹಾಗೆಂದು ದಿನಪೂರ್ತಿ ಅವರ ಜೊತೆಗೇ ಇರುವುದು ಅವರ ಮನಸ್ಥಿತಿಯನ್ನು ಹಾಳುಮಾಡಬಹುದು. ಅಷ್ಟೇ ಅಲ್ಲ ಪೋಷಕರಾದ ನಂತರ, ಬಹುತೇಕರು ತಮ್ಮ ಮಗುವಿಗೆ ಅನುಗುಣವಾಗಿ ತಮ್ಮ ಜೀವನವನ್ನು ಬದಲಾಯಿಸುತ್ತಾರೆ. ಆದರೆ, ಪ್ರತಿ ಬಾರಿ ಮತ್ತು ಯಾವಾಗಲೂ ನಿಮ್ಮ ಮಗುವಿನ ಸಲುವಾಗಿ ನಿಮ್ಮ ಆಯ್ಕೆಯನ್ನು ತ್ಯಾಗ ಮಾಡಬೇಕಾಗಿಲ್ಲ. ಬದಲಿಗೆ ಮಕ್ಕಳು ಸ್ವತಂತ್ರರಾಗಿ ಬೆಳೆಯಲು ಅವಕಾಶ ಮಾಡಿಕೊಡಿ.