ಬ್ರಾಂಡ್ ಹೆಸರು ಬಳಸಿ Ex Boyfriend ಬಗ್ಗೆ ವಿವರಿಸಿ ಎಂದಿದ್ದೇ ತಡ ಹುಡುಗಿಯರ ಒಂದೊಂದು ಕಾಮೆಂಟ್ ಬೆಂಕಿ

Published : Mar 10, 2025, 05:06 PM ISTUpdated : Mar 11, 2025, 10:29 AM IST
ಬ್ರಾಂಡ್ ಹೆಸರು ಬಳಸಿ   Ex Boyfriend ಬಗ್ಗೆ ವಿವರಿಸಿ ಎಂದಿದ್ದೇ ತಡ  ಹುಡುಗಿಯರ ಒಂದೊಂದು ಕಾಮೆಂಟ್ ಬೆಂಕಿ

ಸಾರಾಂಶ

ಇನ್‌ಫ್ಲುಯೆನ್ಸರ್ ಕರೆಗೆ ಹೆಣ್ಣು ಮಕ್ಕಳು ತಮ್ಮ ಮಾಜಿ ಪ್ರಿಯಕರರನ್ನು ವಿವಿಧ ಬ್ರಾಂಡ್‌ಗಳಿಗೆ ಹೋಲಿಸಿ ಮಜಾ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಉಬರ್‌ನಿಂದ ನೆಟ್‌ಫ್ಲಿಕ್ಸ್‌ವರೆಗೆ, ಹೆಣ್ಣುಮಕ್ಕಳು ತಮ್ಮ ಅನುಭವಗಳನ್ನು ತಮಾಷೆಯಾಗಿ ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ  ಪ್ರೀತಿಗೇ ಆಯಸ್ಸು ತುಂಬಾ ಕಡಿಮೆ ಬ್ರೇಕಾಪ್‌ಗಳೆಲ್ಲಾ ಅತೀ ಸಾಮಾನ್ಯ ವಿಚಾರಗಳು, ಅಲ್ಲದೇ ಈ ಬ್ರೇಕಾಪ್‌ ಕಾರಣಕ್ಕೆ ಪಾರ್ಟಿ ಮಾಡುವವರು ಇದ್ದಾರೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಇನ್‌ಫ್ಲುಯೆನ್ಸರ್‌ ಒಬ್ಬರು ನಿಮ್ಮ ಮಾಜಿ ಪ್ರಿಯಕರನ ಬಗ್ಗೆ ಒಂದು ಬ್ರಾಂಡ್ ಹೆಸರು ಬಳಸಿ ವಿವರಿಸಿ ಎಂದು  ಹೆಣ್ಣು ಮಕ್ಕಳಿಗೆ ಕರೆ ನೀಡಿದ್ದಾರೆ. ಇನ್‌ಫ್ಲುಯೆನ್ಸರ್ ಒಬ್ಬರ ಈ ಕರೆಗೆ ಹೆಂಗೆಳೆಯರು ನವತರುಣಿಯರು ಬಹಳ ಮಜಾವಾಗಿ ಪ್ರತಿಕ್ರಿಯಿಸಿದ್ದು, ಒಂದಕ್ಕಿಂತ ಒಂದು ಕಾಮೆಂಟ್‌ಗಳು ಮುತ್ತು ರತ್ನ ಎಂಬಂತಿವೆ. 

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇನ್‌ಫ್ಲುಯೆನ್ಸರ್‌ಗಳ ಕಂಟೆಂಟ್‌ಗಳು ಸಖತ್ ಮಜಾ ನೀಡುತ್ತಿರುತ್ತವೆ. ನಕ್ಕು ನಗಿಸುವಂತೆ ಮಾಡುತ್ತವೆ. ಹಾಗೆಯೇ aparnathomas ಎಂಬ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಒಬ್ಬರು ಹುಡುಗಿಯರೇ ನಿಮ್ಮ ಮಾಜಿ ಪ್ರಿಯಕರ ಅಥವಾ ಎಕ್ಸ್ ಬಗ್ಗೆ ಯಾವುದಾದರು ಬ್ರಾಂಡ್ ಹೆಸರು ಹೇಳಿ ವಿವರಿಸಿ ನಾವು ಸ್ವಲ್ಪ ನಗೋಣ ಎಂದು ಕರೆ ನೀಡಿದ್ದಾರೆ. ಅಲ್ಲದೇ ಎಕ್ಸ್‌ ಬಾಯ್‌ಫ್ರೆಂಡ್‌ಗೆ ಅದೇ ಬ್ರಾಂಡ್ ಏಕೆ ಎಂದು ಕೂಡ ವಿವರಿಸಬೇಕು ಎಂದು ಕರೆ ನೀಡಿದ್ದಾರೆ. ಇವರ ಕರೆಗೆ ಹೆಣ್ಣು ಮಕ್ಕಳು ಸುಂಟರಗಾಳಿಯಂತೆ ಪ್ರತಿಕ್ರಿಯಿಸಿದ್ದು, ಕಾಮೆಂಟ್‌ಗಳೆಲ್ಲವೂ ಬೆಂಕಿ ಉಗುಳುತ್ತಿವೆ. 15 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ಅಪ್ಪ ಅಮ್ಮನ ಒಪ್ಪಿಗೆ ಇಲ್ಲದೇ ನಿಮ್ಮ 'ಪ್ರೀತಿ'ಯನ್ನು ಮದ್ವೆ ಆಗ್ತೀರಾ? ಹುಡುಗರ ಉತ್ತರ ಕೇಳಿ ಹುಡುಗಿರು ಗರಂ

ಗೋಲ್ ಡಿಗ್ಗರ್ ಎಂಬ ಖಾತೆ ಹೊಂದಿರುವ ಯುವತಿ H&M ಎಂದು ಕಾಮೆಂಟ್ ಮಾಡಿದ್ದು ಅವನಿಗೆ ನಾನು ಬೇಕು ಆಕೆಯೂ ಬೇಕು ಎಂದು ಕಾರಣ ನೀಡಿದ್ದಾರೆ,  H&M ಒಂದು ಸ್ವೀಡನ್ ಮೂಲದ ಬಟ್ಟೆ  ಬ್ರಾಂಡ್ ಆಗಿದೆ. ಈಕೆಯ ಕಾಮೆಂಟ್‌ಗೆ ಅನೇಕರು ನಮ್ಮದೂ ಅದೇ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಮತ್ತೊಬ್ಬರು ಜುಡಿಯೋ( Zudio)ಎಂದಿದ್ದು, ಅದು ನನ್ನದು ಎಂದು ನಾನು ಭಾವಿಸಿದ್ದೆ, ಆದರೆ ನನ್ನ ಗೆಳತಿಯೂ ಅದನ್ನು ಹೊಂದಿದ್ದಳು ಎಂದು ಕಾರಣ ನೀಡಿದ್ದಾರೆ. ಇನ್ನೊಬ್ಬರು ಉಬರ್‌ಗೆ (Uber) ಹೋಲಿಕೆ ಮಾಡಿದ್ದು, ಒಂದೇ ರೈಡ್‌, ಪ್ರತಿ ರಾತ್ರಿ ಹೊಸ ಪ್ರಯಾಣಿಕರು ಎಂದು ವಿವರಿಸಿದ್ದಾರೆ.

 ಮತ್ತೊಬ್ಬರು ರೋಲೆಕ್ಸ್‌ ವಾಚ್‌ಗೆ (Rolex) ತನ್ನ ಮಾಜಿ ಪ್ರಿಯಕರನನ್ನು ಹೋಲಿಸಿದ್ದು, ಅವನು ತನ್ನ ಮಾಜಿ ಗೆಳತಿಯ ಸುತ್ತಲೇ ಯಾವಾಗಲೂ ಸುತ್ತುತ್ತಿರುತ್ತಾನೆ ಎಂದು ಕಾರಣ ನೀಡಿದ್ದಾರೆ. ಇನ್ನೊಬ್ಬರು ತಮ್ಮ ಮಾಜಿ ಗೆಳೆಯನನ್ನು ಆಧಾರ್ ಒಟಿಪಿಗೆ ಹೋಲಿಸಿದ್ದು, ನನಗೆ ಆತನ ಅಗತ್ಯ ತುಂಬಾ ಇದ್ದಾಗ ಯಾವತ್ತೂ ಆತ ಬರುವುದೇ ಇಲ್ಲ ಎಂದು ವಿವರಿಸಿದ್ದಾರೆ. ಅಶು ಎಂಬುವವರು ತನ್ನ ಮಾಜಿ ಪ್ರಿಯಕರನನ್ನು ಗೋಲ್ಡಿ ಮಸಾಲೆ (goldie masale ಮಸಾಲೆ ಬ್ರಾಂಡ್‌)ಗೆ ಹೋಲಿಸಿದ್ದು, ಜಹಾ ಜಾಯೆ ರಿಸ್ತೆ ಬನಾಯೇ ಎಂದು ವಿವರಿಸಿದ್ದಾರೆ. ಅಂದರೆ ಎಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ಹೊಸ ಸಂಬಂಧ ಸೃಷ್ಟಿ ಮಾಡುತ್ತಾರೆ ಅಂತ.

ಫೋನ್‌ನಲ್ಲಿ ಮಾತನಾಡ್ತಾ ಮಗುವನ್ನು ಆಟೋದಲ್ಲೇ ಬಿಟ್ಟು ಹೋದ ತಾಯಿ!

ಬಾವಿ ಎಂಬುವವರು ತಮ್ಮ ಬಾಯ್‌ಫ್ರೆಂಡ್‌ನನ್ನು ಏಷ್ಯನ್ ಫೈಂಟ್‌ಗೆ (Asian Paint)ಹೋಲಿಕೆ ಮಾಡಿದ್ದು, ಪ್ರತಿ ಕಡೆಯೂ ವಿಭಿನ್ನ ಬಣ್ಣ ಎಂದು ವಿವರಿಸಿದ್ದಾರೆ. ಹೆಣ್ಣು ಮಕ್ಕಳ ಒಳ ಉಡುಪಿನ ಬ್ರಾಂಡ್ ಆದ ವಿಕ್ಟೋರಿಯಾ ಸೀಕ್ರೇಟ್‌ಗೆ (Victoria Secret) ಒಬ್ಬರು ತಮ್ಮ ಮಾಜಿ ಗೆಳೆಯನ್ನು ಹೋಲಿಕೆ ಮಾಡಿದ್ದು, ಆತ ಆತನ ರಹಸ್ಯವಾದ ವಿಕ್ಟೋರಿಯಾಳನ್ನು ನನಗೆ ತಿಳಿಯದಂತೆ ಇಟ್ಟುಕೊಂಡಿದ್ದ ಎಂದು ವಿವರಿಸಿದ್ದಾರೆ. 
ಇನ್ನೊಬ್ಬರು ಯುವತಿ ಸ್ವಿಗ್ಗಿ(swiggy)ಗೆ  ತನ್ನ ಮಾಜಿ ಪ್ರಿಯಕರನ ಹೋಲಿಕೆ ಮಾಡಿದ್ದು, ಪ್ರತಿಯೊಬ್ಬರಿಗೂ ಫ್ಲರ್ಟಿ ಮೆಸೇಜ್ ಕಳುಹಿಸುತ್ತಿದ್ದ ಎಂದು ವಿವರಿಸಿದ್ದಾರೆ.(ಸ್ವಿಗ್ಗಿ ಆಹಾರ ಪೂರೈಕೆ ಆಪ್ ತನ್ನ ಪ್ರತಿ ಗ್ರಾಹಕರಿಗೂ ಬಹಳ ರೋಮ್ಯಾಂಟಿಕ್ ಎನಿಸುವ ಸಂದೇಶಗಳನ್ನು ಕಳುಹಿಸುವುದು ನಿಮಗೂ ತಿಳಿದಿರಬಹುದು

ಹೆಣ್ಣು ಮಕ್ಕಳು ತಮ್ಮ ಮಾಜಿ ಗೆಳೆಯನನ್ನು ವಿವರಿಸುವ ಭರದಲ್ಲಿ ಹಾಲಿನ ಬ್ರಾಂಡನ್ನು ಕೂಡ ಬಿಟ್ಟಿಲ್ಲ, ಹಾಲಿನ ಬ್ರಾಂಡ್ ಅಮೂಲ್‌ (Amul) ಹಾಗೂ ಅದರ ಟ್ಯಾಗ್‌ ಲೈನ್ ಆದ ಟೆಸ್ಟ್ ಅಫ್ ಇಂಡಿಯಾಗೆ ತನ್ನ ಮಾಜಿ ಪ್ರಿಯಕರನನ್ನು ಹೋಲಿಸಿದ ಯುವತಿಯೊಬ್ಬಳು, ಆತ ಪ್ರತಿಯೊಬ್ಬಳು ದೇಸಿ ಹುಡುಗಿಯ ಜೊತೆ ಅನುಭವ ಪಡೆಯಲು ಬಯಸಿದ್ದ ಎಂದು ದೂರಿದ್ದಾರೆ. ಹಾಗೆಯೇ ಮತ್ತೊಬ್ಬರು ಮಹಿಳೆ ತನ್ನ ಮಾಜಿ ಗೆಳೆಯನನ್ನು ನೆಟ್‌ಫ್ಲಿಕ್ಸ್‌ಗೆ ಹೋಲಿಸಿದ್ದು, ಏಕೆಂದರೆ ಆತ ಒಬ್ಬ ಪ್ರಮುಖ ಸಬ್‌ಸ್ಕ್ರೈಬರನ್ನು ಹೊಂದಿದ್ದ ಜೊತೆ ಜೊತೆಗೆ ಹಲವು ಬಳಕೆದಾರರನ್ನು ಕೂಡ ಹೊಂದಿದ್ದ ಎಂದು ವಿವರಿಸಿದ್ದಾರೆ. ಇನ್ನೊಬ್ಬರು ತಮ್ಮ ಮಾಜಿ ಗೆಳೆಯನನ್ನು ಮಮ ಅರ್ಥ್‌ಗೆ (Mama earth)ಹೋಲಿಸಿದ್ದು, ಆತನಿಗೆ ಅಮ್ಮನೇ ಪ್ರಪಂಚ ಎಂದು ವಿವರಿಸಿದ್ದಾರೆ.

ಇನ್ನು ಒಬ್ಬರು ವಾಶಿಂಗ್ ಪೌಡರ್ ನಿರ್ಮಾಗೆ ಹೋಲಿಸಿದರೆ ಮತ್ತೊಬ್ಬರು ಇನ್ನು ತುಸು ಮುಂದೆ ಹೋಗಿ ಸಂಡೇ ಮಾರ್ಕೆಟ್‌ಗೆ ಹೋಲಿಸಿದ್ದಾರೆ, ಇನ್ನೊಬ್ಬ ಯುವತಿ ಚೈನಾ ಪ್ರಾಡಕ್ಟ್ ಎಂದಿದ್ದಾರೆ. ಮತ್ತೊಬ್ಬರು ತಮಗೆ ಯಾವುದೇ ಬ್ರಾಂಡ್‌ನ್ನು ಅವಮಾನಿಸಲು ಇಷ್ಟವಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ತಮ್ಮ ಮಾಜಿ ಪ್ರಿಯಕರನ್ನು ಬ್ರಾಂಡ್ ಹೆಸರಲ್ಲಿ ವಿವರಿಸಲು ಹೊರಟ ಹೆಣ್ಣು ಮಕ್ಕಳು ಬಹಳ ಕ್ರಿಯೇಟಿವಿಯಿಂದ ಯೋಚನೆ ಮಾಡಿದ್ದು, ಒಂದೊಂದು ಪ್ರತಿಕ್ರಿಯೆಗಳು ಬಿದ್ದು ಬಿದ್ದು ನಗುವಂತೆ ಮಾಡುತ್ತಿದೆ. 

ಕಣ್ಣೀರು ತರಿಸುವಂತಿದೆ ಪ್ರಸೂತಿ ವೈದ್ಯೆಯೊಬ್ಬರು ಹಂಚಿಕೊಂಡ ತಾಯಿಯೊಬ್ಬಳ ನೋವಿನ ಕತೆ

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌