
ಬೆಳಗಾವಿ (ಮಾ.10): ಬೆಳಗಾವಿಯಲ್ಲಿ ಮುಸ್ಲಿಂ ಯುವಕನೊಂದಿಗೆ ಓಡಿಹೋದ ಹಿಂದೂ ಯುವತಿ, ತಾಯಿಯ ಕಣ್ಣೀರಿಗೂ ಕರಗದ ಮನಸ್ಸು. ಮದುವೆಯಾಗಿ ಬಂದಿದ್ದೇನೆ, ಮನೆಗೆ ಬರುವುದಿಲ್ಲ ಎಂದ ಮಗಳು. ಇದರಿಂದ ತಾಯಿ ಪೊಲೀಸ್ ಠಾಣೆಯಲ್ಲೇ ಕುಸಿದುಬಿದ್ದ ಘಟನೆ.
ಗಡಿಜಿಲ್ಲೆ ಬೆಳಗಾವಿಯಲ್ಲಿ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೀತಿಸಿ ಮುಂಬೈಗೆ ಆತನೊಂಡಿಗೆ ಓಡಿ ಹೋಗಿದ್ದಳು. ಇತ್ತ ಯುವತಿ ಮನೆಯವರು ಕಿಡ್ನಾಪ್ ದೂರು ದಾಖಲಿಸಿದ್ದರು. ಪೊಲೀಸರು 22 ದಿನಗಳಲ್ಲಿ ಜೋಡಿಯನ್ನು ಹುಡುಕಿ ಠಾಣೆಗೆ ಕರೆತಂದಾಗ ಅಮ್ಮ ನಾವು ನಿನ್ನ ಮದುವೆ ಮಾಡಿಕೊಡುತ್ತೇವೆ ಎಂದು ಕರೆದರೂ ಬಾರದೇ, ನಾನು ಮದುವೆ ಆಗಿದ್ದೇನೆ ನನ್ನನ್ನು ಮನೆಗೆ ಕರೆಯಬೇಡಿ ಎಂದು ಹೇಳಿದ್ದಾಳೆ. ಮಗಳು ಹೇಳಿದ್ದನ್ನು ಕೇಳಿ ತಾಯಿ ಪೊಲೀಸ್ ಠಾಣೆಯಲ್ಲಿಯೇ ಕುಸಿದುಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಬೆಳಗಾವಿಯಲ್ಲಿ ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಈ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ಮಗಳು ರಾಧಿಕಾ ಕಿಡ್ನಾಪ್ ಆಗಿರುವ ಶಂಕೆ ಅವರ ತಾಯಿ ದೀಪಾ ಅವರು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ಅಂದರೆ, ಹಿಂದೂ ಯುವತಿ ರಾಧಿಕಾಳನ್ನು ಸದ್ರುದಿನ್ ಬೇಪಾರಿ ಎನ್ನುವ ಅನ್ಯಕೋಮಿನ ಯುವಕ ಕಿಡ್ನಾಪ್ ಮಾಡಿದ್ದಾನೆ ಎಂದು ದೀಪಾ ದೂರು ನೀಡಿದ್ದರು. ದೂರನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಇಬ್ಬರನ್ನೂ ಪತ್ತೆ ಮಾಡಿ 22 ದಿನಗಳ ಬಳಿಕ ಮುಂಬೈನಲ್ಲಿದ್ದ ಜೋಡಿಯನ್ನು ಪತ್ತೆ ಮಾಡಿ ಬೆಳಗಾವಿಗೆ ಕರೆತಂದಿದ್ದಾರೆ.
ಇದನ್ನೂ ಓದಿ: Tumakuru: ಆಟೋದಲ್ಲಿ 4 ಲಕ್ಷ ಮೌಲ್ಯದ ಚಿನ್ನಾಭರಣದ ಬ್ಯಾಗ್ ಮರೆತ ಮಹಿಳೆ, ಡ್ರೈವರ್ ಪ್ರಾಮಾಣಿಕತೆ!
ಸದ್ರುದಿನ್ ಬೇಪಾರಿ- ರಾಧಿಕಾ ಮುಚ್ಚಂಡಿ ಜೋಡಿಯನ್ನು ಬೆಳಗಾವಿ ಮಹಿಳಾ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇದಾದ ನಂತರ ದೂರು ಕೊಟ್ಟಿದ್ದ ರಾಧಿಕಾಳ ತಾಯಿ ದೀಪಾ ಅವರ ಎದುರು ಹಾಜರುಪಡಿಸಲಾಗಿದೆ. ಈ ಜೋಡಿಯನ್ನು ನೋಡಿದ ರಾಧಿಕಾ ತಾಯಿ ದೀಪಾ ಅವರು, ಕಣ್ಣೀರು ಸುರಿಸುತ್ತಾ ಮನೆಗೆ ಬರುವಂತೆ ಮಗಳನ್ನು ಗೋಗರೆದರೂ ಕರೆದಿದ್ದಾರೆ. ಆದರೆ, ತಾಯಿ ಕಣ್ಣೀರಿಗೂ ಮಗಳ ಮನಸ್ಸು ಮಾತ್ರ ಕರಗಲಿಲ್ಲ. ತಾಯಿ ದೀಪಾ ಸೇರಿ ಕುಟುಂಬಸ್ಥರು ಮನೆಗೆ ಬರುವಂತೆ ರಾಧಿಕಾಗೆ ಮನವಿ ಮಾಡಿದ್ದಾರೆ. ನಿನಗೆ ಆತನೊಂದಿಗೇ ಮದುವೆ ಮಾಡಿ ಕೊಡ್ತಿವಿ ಬಾ ಎಂದು ಕಣ್ಣೀರು ಹಾಕಿದ್ದಾರೆ.
ಆದರೆ, ತಾಯಿ ಹಾಗೂ ಮನೆಯವರು ಸೇರಿ ಕರೆದರೂ ಮನೆಗೆ ಹೋಗಲು ಒಪ್ಪದ ಯುವತಿ ದೀಪಾ ಈಗಾಗಲೇ ನಾನು ಪ್ರೀತಿಸಿದ ಸದ್ರುದಿನ್ ಜೊತೆಗೆ ಮದುವೆ ಆಗಿಯೇ ಬಂದಿದ್ದೇನೆ. ನಾನು ಪ್ರೀತಿಸಿ ಮದುವೆ ಆದವನ ಜೊತೆಗೆ ಇರುತ್ತೇನೆ. ನಾನು ಮನೆಗೆ ಬರಲ್ಲ, ಯಾರೂ ನನ್ನನ್ನು ಮನೆಗೆ ಕರೆಯಬೇಡಿ ಎಂದಿದ್ದಾಳೆ. ಮಗಳ ವರ್ತನೆಗೆ ಬೇಸತ್ತು ಆಕೆಯ ತಾಯಿ ದೀಪಾ ಪೊಲೀಸ್ ಠಾಣೆಯಲ್ಲೇ ಕುಸಿದುಬಿದ್ದಿದ್ದಾಳೆ. ತಕ್ಷಣವೇ ದೀಪಾ ಅವರನ್ನು ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಇನ್ನು ಇಬ್ಬರೂ ಜೋಡಿ ಮೇಜರ್ ಆಗಿದ್ದರಿಂದ ಅವರ ಹೇಳಿಕೆಯನ್ನು ಪಡೆದು ಜೋಡಿಯನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ: ಮದುವೆಯಾದ ಹಿಂದೂ-ಮುಸ್ಲಿಂ ಜೋಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.