Parenting Tips: ಮಕ್ಕಳ ಮುಂದೆ ಇವುಗಳ ಪ್ರದರ್ಶನ ಬೇಡ ಅಂತಾರೆ ಸದ್ಗುರು!

By Suvarna News  |  First Published Mar 6, 2024, 4:38 PM IST

ಮಕ್ಕಳ ಮನಸ್ಸು ಸೂಕ್ಷ್ಮ. ನೋಡಿದ್ದು, ಕೇಳಿದ್ದನ್ನ ತಕ್ಷಣ ಅಳವಡಿಸಿಕೊಳ್ಳುವ ಅವರು, ಅದನ್ನೇ ಫಾಲೋ ಮಾಡ್ತಾರೆ. ಇದು ಅವರ ಭವಿಷ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಮಕ್ಕಳ ಮುಂದೆ ಪಾಲಕರು ಹೇಗಿರಬೇಕೆಂದು ಸದ್ಗುರು ಹೇಳಿದ್ದಾರೆ. 
 


ಮಕ್ಕಳಿಗೆ ಮದುವೆ ಆಗಿ ಅವರಿಗೆ ಮಕ್ಕಳಾದ್ರೂ ತಂದೆ – ತಾಯಿಗೆ ಅವರು ಮಕ್ಕಳಾಗೇ ಇರ್ತಾರೆ. ತಮ್ಮ ಮಕ್ಕಳ ಜೀವನ ಸದಾ ಸುಖವಾಗಿರಲಿ ಎಂದು ಎಲ್ಲ ಪಾಲಕರು ಬಯಸುತ್ತಾರೆ. ಆದ್ರೆ ಮಕ್ಕಳನ್ನು ಬೆಳೆಸೋದು ಹೇಳಿದಷ್ಟು ಸುಲಭವಲ್ಲ. ಮಕ್ಕಳ ಮುಂದೆ ಪಾಲಕರು ಮಾಡುವ ಕೆಲಸ  ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಒತ್ತಡದ ಜೀವನಶೈಲಿ ಮತ್ತು ಕುಟುಂಬದ ವಿಘಟನೆ ಮಕ್ಕಳ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಪಾಲಕರು ಮಕ್ಕಳ ಮುಂದೆ ಯಾವೆಲ್ಲ ವಿಷ್ಯವನ್ನು ಹೇಳ್ಬಾರದು ಎಂದು ಸದ್ಗುರು ಸಲಹೆ ನೀಡಿದ್ದಾರೆ.

ಭಾರತ (India)ದ ಪ್ರಸಿದ್ಧ ವ್ಯಕ್ತಿಗಳಲ್ಲಿ ಜಗ್ಗಿ ವಾಸುದೇವ್ ಒಬ್ಬರು. ಅವರನ್ನು ಸದ್ಗುರು ಎಂದೇ ಗುರುತಿಸಲಾಗುತ್ತದೆ. ಸದ್ಗುರು (Sadhguru) ಭಕ್ತರು, ಅನುಯಾಯಿಗಳಿಗೆ ಅಗತ್ಯವಿರುವ ಸಲಹೆಗಳನ್ನು ನೀಡ್ತಾರೆ. ಎಲ್ಲರೂ ಸಂತೋಷದಿಂದ ಬದುಕಲು ಏನು ಮಾಡ್ಬೇಕು ಎಂಬುದನ್ನು ಅವರು ಕಲಿಸುತ್ತಿದ್ದಾರೆ. ಒತ್ತಡ, ಕೋಪವನ್ನು ಹೇಗೆ ದೂರ ಮಾಡಬೇಕು ಎಂಬುದು ಮಾತ್ರವಲ್ಲದೆ ಮಕ್ಕಳ ಮಾನಸಿಕ (Mental ) ಆರೋಗ್ಯ ಸುಧಾರಿಸಲು ಏನು ಮಾಡ್ಬೇಕು ಎನ್ನುವ ಬಗ್ಗೆ ತಮ್ಮ ಭಕ್ತರಿಗೆ ಸಲಹೆ ನೀಡಿದ್ದಾರೆ. 

ಸದ್ಗುರು ಪ್ರಕಾರ, ಮಕ್ಕಳನ್ನು ಹೀಗೆ ಬೆಳೆಸಬೇಕು ಎಂದು ಎಲ್ಲೂ ನಿಯಮವಿಲ್ಲ. ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಮಕ್ಕಳನ್ನು ಬೆಳೆಸುತ್ತಾರೆ. ಐದು – ಹತ್ತು ಮಕ್ಕಳನ್ನು ಬೆಳೆಸಿರುವ ಪಾಲಕರಿಗೆ ಕೂಡ ಮಕ್ಕಳನ್ನು ಸರಿಯಾಗಿ ಬೆಳೆಸೋದು ಹೇಗೆ ಎಂಬುದು ಗೊತ್ತಿರೋದಿಲ್ಲ.

Latest Videos

undefined

ಪ್ರೀತಿಗೆ ನಿಜವಾದ ಅರ್ಥ ಅನಂತ್ ಅಂಬಾನಿ- ರಾಧಿಕಾ ಲವ್ ಸ್ಟೋರಿ

ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಆಲೋಚನೆ ಮಾಡುವ ಮೊದಲು ನಾವು ಹೇಗಿದ್ದೇವೆ ಎಂದು ಪಾಲಕರು ನೋಡಿಕೊಳ್ಳಬೇಕು ಎನ್ನುತ್ತಾರೆ ಸದ್ಗುರು. ಪ್ರತಿಯೊಬ್ಬ ವ್ಯಕ್ತಿ ಮಕ್ಕಳ ಮುಂದೆ ಏನು ಮಾಡ್ತಿದ್ದೇನೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕುಳಿತುಕೊಳ್ಳೋದರಿಂದ ಹಿಡಿದು ಮಲಗುವವರೆಗೆ ಮಕ್ಕಳ ಮುಂದೆ ಹೇಗಿರಬೇಕು ಎಂಬುದನ್ನು ಪಾಲಕರು ಮೊದಲು ಕಲಿಯಬೇಕು ಎನ್ನುತ್ತಾರೆ ಸದ್ಗುರು. ಪಾಲಕರು ಏನು ಮಾಡ್ತಿದ್ದಾರೋ ಅದನ್ನು ಪಾಲಕರು ಅತಿ ವೇಗದಲ್ಲಿ ಕಲಿಯುತ್ತಾರೆ. 

ಮಕ್ಕಳ ಮುಂದೆ ಈ ಕೆಲಸ ಮಾಡಬೇಡಿ : 

ಖಿನ್ನರಾಗಿ ಇರಬೇಡಿ (Don't be Depressed): ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಅವರು ಕಣ್ಣಿನಲ್ಲಿ ನೋಡಿದ್ದನ್ನು ಸಂಪೂರ್ಣ ಸತ್ಯವೆಂದು ನಂಬುತ್ತಾರೆ. ಮಕ್ಕಳು ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ನೀವು ನಿಮ್ಮ ದುಃಖ, ಕೋಪವನ್ನು ಮಾತ್ರವಲ್ಲ ನಿಮಗೆ ಯಾವುದೇ ವಿಷ್ಯದ ಬಗ್ಗೆ ಅಸಮಾಧಾನವಿದ್ರೂ, ನೋವಿದ್ರೂ ಮಗುವಿನ ಮುಂದೆ ತೋರಿಸಿಕೊಳ್ಳಬೇಡಿ. ಪಾಲಕರ ಹತಾಷೆ, ಖಿನ್ನತೆ ಮುಖ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಇದು ಅವರನ್ನು ನಕಾರಾತ್ಮಗೊಳಿಸುತ್ತದೆ.

ಮಕ್ಕಳ ಮುಂದೆ ಪಾಲಕರು ಎಲ್ಲ ದುಃಖವನ್ನು ನುಂಗಿ ಸಂತೋಷದಿಂದ ಇರಬೇಕು. ಪ್ರೀತಿಯಿಂದ ವರ್ತಿಸಬೇಕು. ಪಾಲಕರ ಮುಖದಲ್ಲಿ ನಗುವಿದ್ದರೆ, ಯಾವುದೇ ವಿಷ್ಯವನ್ನು ಅವರು ಖುಷಿಯಾಗಿ ಸ್ವೀಕರಿಸಿದ್ರೆ ಅದು ಮಕ್ಕಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. 

ಅಂಚೆ ಅಣ್ಣನ ಜೊತೆ ಸಿಹಿ ಮಾತುಕತೆ ಸಕ್ಸಸ್‌: ಪುಟಾಣಿ ನೋಡ್ತಿದ್ದಂತೆಯೇ ರಾಮ್‌ಗೆ ಬಂತು ಜೀವ...

ಮಕ್ಕಳಿಗೆ ಒಳ್ಳೆ ಉದಾಹರಣೆ ನೀಡಿ ಎನ್ನುತ್ತಾರೆ ಸದ್ಗುರು : ಮಕ್ಕಳ ಜೊತೆ ಮಾತನಾಡುವಾಗ ನಾವೇನು ಮಾತನಾಡ್ತಿದ್ದೇವೆ ಎನ್ನುವ ಗಮನ ಇರಬೇಕು. ಮಕ್ಕಳಿಗೆ ಧೈರ್ಯ ನೀಡುವ ಸಂದರ್ಭದಲ್ಲಿ ಅಥವಾ ಅವರಿಗೆ ಬುದ್ಧಿವಾದ ಹೇಳುವ ಸಮಯದಲ್ಲಿ ಆಗಿರಲಿ ಮಕ್ಕಳಿಗೆ ಉತ್ತಮ ಉದಾಹರಣೆ ನೀಡಿ. ನಿಮಗಿಷ್ಟವಿಲ್ಲದ, ನೀವು ಕೇಳ ಬಯಸದ ವಿಷ್ಯವನ್ನು ಮಕ್ಕಳ ಮುಂದೆ ಹೇಳಬೇಡಿ. ಕೆಟ್ಟ ಉದಾಹರಣೆಯನ್ನು ಮಕ್ಕಳಿಗೆ ನೀಡಬೇಡಿ ಎಂದು ಸದ್ಗುರು ತಮ್ಮ ಉಪದೇಶದಲ್ಲಿ ಹೇಳ್ತಾರೆ.  

ಕುಟುಂಬಸ್ಥರಲ್ಲಿ ಕಿತ್ತಾಟ (don't Quarrel) : ಪತಿ – ಪತ್ನಿ ಆಗಿರಲಿ ಇಲ್ಲ ಕುಟುಂಬದ ಇತರ ಸದಸ್ಯರಾಗಿರಲಿ ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಜಗಳ ಆಡಬೇಡಿ. ಇದು ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. 
 

click me!