ಜಗತ್ತಿನಲ್ಲಿ ಜನರ ಸಮಸ್ಯೆಗಳು ಭಿನ್ನವಾಗಿರುತ್ತವೆ. ಈ ವ್ಯಕ್ತಿ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಪತ್ನಿ ಜೊತೆ ನೆಮ್ಮದಿಯಾಗಿ ಶಾಪಿಂಗ್ ಮಾಡೋ ಅವಕಾಶ ಇವನಿಗೆ ಸಿಗ್ತಿಲ್ಲ. ಪತ್ನಿ ಜೊತೆ ಹೊರಗೆ ಹೋಗೋಕೆ ಭಯ.
ದಿನನಿತ್ಯದ ಕೆಲಸದ ನಡುವೆ ವಾರದ ಕೊನೆಯಲ್ಲೋ ಅಥವಾ ರಜಾ ದಿನಗಳಲ್ಲೋ ಮನೆಯಿಂದ ಹೊರಗಡೆ ಸುತ್ತಾಡುವುದು ಸಾಮಾನ್ಯ. ಇದರಿಂದ ಮನೆಯವರೆಲ್ಲರೂ ಒಟ್ಟಿಗೆ ಕಾಲಕಳೆಯುವ ಅವಕಾಶ ಸಿಗುತ್ತದೆ. ಹೀಗೆ ಹೊರಗಡೆ ಸುತ್ತಾಡುವುದನ್ನು ದೊಡ್ಡವರು ಹಾಗೂ ಮಕ್ಕಳು ಎಲ್ಲರೂ ಇಷ್ಟಪಡುತ್ತಾರೆ. ಗಂಡ ಹೆಂಡತಿಯರಿಗೂ ಇದರಿಂದ ಹೆಚ್ಚಿನ ಸಂತೋಷ ಸಿಗುತ್ತದೆ.
ಸಾಮಾನ್ಯವಾಗಿ ಎಲ್ಲರೂ ಸಮಯವಿದ್ದಾಗ ಹೆಂಡತಿ (Wife) ಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಾರೆ. ಹೀಗೆ ಇಬ್ಬರೂ ಒಟ್ಟಿಗೆ ಸಮಯ ಕಳೆಯುವುದರಿಂದ ಹಲವು ರೀತಿಯ ಬೇಸರ, ಟೆನ್ಶನ್ ಗಳು ದೂರವಾಗುತ್ತವೆ. ಆದರೆ ಬ್ರಿಟನ್ (Britain ) ನಿವಾಸಿಯಾಗಿರುವ ಜೋನಾಥನ್ ಎಶ್ಟನ್ ಎನ್ನುವ ವ್ಯಕ್ತಿ ತನ್ನ ಹೆಂಡತಿಯನ್ನು ಹೊರಗಡೆ ಕರೆದುಕೊಂಡು ಹೋಗಲು ಭಯಪಡುತ್ತಾನೆ. ಈ ಭಯದ ಹಿಂದಿರುವ ಕಾರಣ ನಮ್ಮನ್ನು ದಂಗಾಗಿಸುತ್ತದೆ.
LIFE SKILL: ಮುಳ್ಳುಹಂದಿಯನ್ನು ತಬ್ಬಿಕೊಳ್ಳುವುದು ಹೇಗೆ?
ಹೆಂಡತಿ ಜೊತೆ ಹೊರಗಡೆ ಹೋದ್ರೆ ಜೈಲು (Prison) ಶಿಕ್ಷೆ: ಬ್ರಿಟನ್ ನಲ್ಲಿ ವಾಸಿಸುತ್ತಿರುವ ಜೋನಾಥನ್ ಎಶ್ಟನ್ ಎನ್ನುವ ವ್ಯಕ್ತಿಗೆ 22 ವರ್ಷದ ಲಿಂಡ್ಸೆ ಎಶ್ಟನ್ ಎಂಬ ಹೆಸರಿನ ಪತ್ನಿಯಿದ್ದಾಳೆ. ಎಲ್ಲರೂ ಸಂತೋಷದ ಕ್ಷಣಗಳನ್ನು ಕಳೆಯಲು ಹೆಂಡತಿಯ ಜೊತೆ ಸುತ್ತಾಡಲು ಹೋದರೆ ಜೋನಾಥನ್ ತನ್ನ ಪತ್ನಿ ಲಿಂಡ್ಸೆ ಜೊತೆ ಹೊರಗಡೆ ಹೋಗಲು ಹೆದರುತ್ತಾನೆ. ಈತ ಹೆಂಡತಿಯ ಜೊತೆ ಹೊರಗಡೆ ಹೋದರೆ ಜನರು ಈತನನ್ನು ಅಪಹಾಸ್ಯ ಮಾಡುತ್ತಾರೆ. ಹೆದರಿಸುತ್ತಾರೆ ಹಾಗೂ ಜೈಲು ಶಿಕ್ಷೆಯ ಬೆದರಿಕೆಯನ್ನೂ ಒಡ್ಡುತ್ತಾರೆ.
ಜೋನಾಥನ್ ಅವರ ಪತ್ನಿ ಲಿಂಡ್ಸೆ ಕೇವಲ 4.10 ಅಡಿ ಎತ್ತರವಿದ್ದಾರೆ. ಹಾಗಾಗಿ ಅವರು ನೋಡಲು ಚಿಕ್ಕ ಹುಡುಗಿಯಂತೆ ಕಾಣುತ್ತಾರೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ನೋಡಿದವರಿಗೆ ಲಿಂಡ್ಸೆ ಜೋನಾಥನ್ ಅವರ ಮೂರನೇ ಮಗು ಎನಿಸುವಷ್ಟು ಚಿಕ್ಕವರಾಗಿ ಕಾಣುತ್ತಾರೆ. ಹಾಗಾಗಿ ಲಿಂಡ್ಸೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಹೊರಗಡೆ ಹೊರಟರೆ ಜನರು ಜೋನಾಥನ್ ಅವರಿಗೆ ಛೀಮಾರಿ ಹಾಕುತ್ತಾರೆ. ಜೋನಾಥನ್ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದಾನೆ ಹಾಗೂ ಅವಳಿಂದ ಎರಡು ಮಗುವನ್ನು ಹೊಂದಿದ್ದಾನೆ ಎಂದು ಜನರು ಭಾವಿಸುತ್ತಾರೆ. ಜೋನಾಥನ್ ಅಪ್ರಾಪ್ತ ಹುಡುಗಿಯನ್ನು ಮದುವೆಯಾಗಿದ್ದಾನೆ ಎನ್ನುವ ಕಾರಣಕ್ಕೆ ಅವನನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ.
ಚಿಕ್ಕವಳಿರುವಾಗಲೇ ಕ್ಯಾನ್ಸರ್ ಗೆ ಒಳಗಾದ ಲಿಂಡ್ಸೆ ಎಶ್ಟನ್ : ಅನೇಕ ದೇಶಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆಯಾಗುವುದು ಕಾನೂನುಬಾಹಿರವಾದ್ದರಿಂದ ಜೋನಾಥನ್ ಎಶ್ಟನ್ ಅವರಿಗೆ ಸಾರ್ವಜನಿಕರು ಈ ರೀತಿ ಬೆದರಿಕೆ ಒಡ್ಡುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಜೋನಾಥನ್ ಅವರ ಪತ್ನಿ ಲಿಂಡ್ಸೆ ಚಿಕ್ಕವಳಿರುವಾಗಲೇ ರಾಬ್ಡೋಮಿಯೊಸಾರ್ಕೊಮಾ ಎನ್ನುವ ಅಪರೂಪದ ಕ್ಯಾನ್ಸರ್ ಗೆ ಒಳಗಾದರು. ಇದರಿಂದ ಅವರ ದೇಹ ಎಲ್ಲರಂತೆ ಬೆಳೆಯಲಿಲ್ಲ. ಈ ಕಾರಣದಿಂದ ಅವರು ಇಂದಿಗೂ 12 ವರ್ಷದ ಹುಡುಗಿಯಂತೆ ಕಾಣುತ್ತಾರೆ. ಆಕೆಯ ಧ್ವನಿ ಕೂಡ ಚಿಕ್ಕಮಕ್ಕಳಂತೇ ಇದೆ.
ಮದುವೆ ಆನಿವರ್ಸರಿಗೆ ಗಿಫ್ಟ್ ನೀಡದ ಗಂಡ, ಚಾಕುವಿನಿಂದ ಇರಿದ ಬೆಂಗಳೂರಿನ ಮಹಿಳೆ!
ನಾನು ನನ್ನ ವಯಸ್ಸನ್ನು ತಪ್ಪಾಗಿ ಹೇಳುತ್ತೇನೆ ಎಂದು ಅನೇಕ ಮಂದಿ ನನ್ನನ್ನು ದೂರುತ್ತಾರೆ. ನಾನು ನನ್ನ ಗುರುತಿನ ಚೀಟಿಯನ್ನು ತೋರಿಸಿದ ನಂತರವೇ ನನಗೆ ಮದ್ಯ ಖರೀದಿಸಲು ಅವಕಾಶ ನೀಡುತ್ತಾರೆ. ನನ್ನನ್ನು ನೋಡಿ ಜನರು ಸಾಕಷ್ಟು ಅಪಹಾಸ್ಯ ಮಾಡುತ್ತಾರೆ ಎಂದು ಲಿಂಡ್ಸೆ ಎಶ್ಟನ್ ಹೇಳುತ್ತಾರೆ.
ಲಿಂಡ್ಸೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯವಾಗಿದ್ದಾರೆ. ಅಲ್ಲಿ ಸಾವಿರಾರು ಮಂದಿ ಫ್ಯಾನ್ಸ್ ಹೊಂದಿದ್ದಾರೆ. ಅವರು ಗರ್ಭಿಣಿಯಾದ ಸಮಯದಲ್ಲಿನ ಟಿಕ್ ಟಾಕ್ ವಿಡಿಯೋ (Tik Tok Video) ಕೇವಲ 48 ಗಂಟೆಯಲ್ಲಿ ನಾಲ್ಕು ಮಿಲಿಯನ್ ವ್ಯೂ ಪಡೆದುಕೊಂಡಿತ್ತು. ಲಿಂಡ್ಸೆ ತುಂಬಾ ಚಿಕ್ಕ ವಯಸ್ಸಿನವರಂತೆ ಕಾಣೋದು ಒಂದ್ಕಡೆ ಖುಷಿ ಎನ್ನಿಸಿದ್ರೂ ಪತಿಗೆ ಅಪಾಯಕಾರಿಯಾಗಿದೆ.