ನಾವು ಮಾಡಿದ ಕೆಲಸ ಸರಿಯಾ ತಪ್ಪಾ ಎನ್ನುವ ಗೊಂದಲ ಅನೇಕ ಬಾರಿ ನಮ್ಮನ್ನು ಕಾಡುತ್ತೆ. ಈ ಮಹಿಳೆ ಕೂಡ ಅದೇ ಸ್ಥಿತಿಯಲ್ಲಿದ್ದಾಳೆ. ಮಗನ ಗರ್ಲ್ ಫ್ರೆಂಡ್ ಗೆ ಸಲಹೆ ನೀಡಿ ಮಗ, ಪತಿಯ ಕೋಪಕ್ಕೆ ಗುರಿಯಾಗಿದ್ದಾಳೆ.
ಒಂದು ಹೆಣ್ಣಿಗೆ ಏನು ಬೇಕು ಎನ್ನುವುದು ಇನ್ನೊಂದು ಹೆಣ್ಣಿಗೆ ಮಾತ್ರ ತಿಳಿಯೋಕೆ ಸಾಧ್ಯ. ಪತಿಯಲ್ಲಿ ಏನೆನ್ನು ಮಹಿಳೆ ಬಯಸ್ತಾಳೆ, ಆಕೆ ಯಶಸ್ವಿಯಾಗಲು, ಖುಷಿಯಾಗಿರಲು ಏನೆಲ್ಲ ಬೇಕು ಎನ್ನುವುದು ಕೂಡ ಇನ್ನೊಬ್ಬ ವಿವಾಹಿತ ಮಹಿಳೆಗೆ ತಿಳಿದಿರುವಷ್ಟು ಪುರುಷ ತಿಳಿದಿರೋದಿಲ್ಲ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳು ಸಂತೋಷದಿಂದ ಇರಲಿ, ಸದಾ ಖುಷಿಯಾಗಿರಲಿ ಎಂದೇ ಬಯಸ್ತಾರೆ. ಮಕ್ಕಳಿಗಾಗಿ ತಾಯಿ ಏನು ಮಾಡಲೂ ಸಿದ್ಧವಿರ್ತಾಳೆ. ಮಗನಿಗೆ ಸಂಗಾತಿ ಹುಡುಕುವ ಸಮಯದಲ್ಲಿ ಕೂಡ ಸಾಕಷ್ಟು ಜಾಗೃತಿವಹಿಸ್ತಾಳೆ. ಮಗನ ಸ್ವಭಾವ ಮೊದಲೇ ತಿಳಿದಿರುವುದ್ರಿಂದ ಅದಕ್ಕೆ ಹೊಂದಿಕೆಯಾಗುವ ಪತ್ನಿ ಬೇಕೆಂದು ತಾಯಿ ಬಯಸೋದು ಸಹಜ.
ಕೆಲ ಮಹಿಳೆಯರು ಬರೀ ಮಕ್ಕಳ ಬಗ್ಗೆ ಮಾತ್ರವಲ್ಲ ಮನೆಗೆ ಬರುವ ಸೊಸೆ ಪರ ನಿಂತೂ ಆಲೋಚನೆ ಮಾಡ್ತಾರೆ. ಆಕೆ ನಮ್ಮ ಮನೆಗೆ ಬಂದ್ರೆ, ಮಗನ ಜೊತೆ ಸಂಸಾರ (Family) ಮಾಡಿದ್ರೆ ಸುಖವಾಗಿರ್ತಾಳಾ ಎಂದು ಚಿಂತಿಸುವ ಜನರಿದ್ದಾರೆ. ಅದ್ರಲ್ಲಿ ಈ ಮಹಿಳೆ ಕೂಡ ಸೇರಿದ್ದಾಳೆ. ಆಕೆ ತನ್ನ ಮಗನ ಗರ್ಲ್ ಫ್ರೆಂಡ್ (Girlfriend) ಗೆ ನೀಡಿದ ಸಲಹೆಯೊಂದು ಮಗನ ಬ್ರೇಕ್ ಅಪ್ (Break Up) ಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ತನ್ನ ಕಥೆ ಹೇಳಿದ್ದಾಳೆ.
ಮದುವೆ ಆನಿವರ್ಸರಿಗೆ ಗಿಫ್ಟ್ ನೀಡದ ಗಂಡ, ಚಾಕುವಿನಿಂದ ಇರಿದ ಬೆಂಗಳೂರಿನ ಮಹಿಳೆ!
ಮಹಿಳೆಗೆ ನಲವತ್ತು ವರ್ಷ. ಆಕೆ ಮಗನ ಗರ್ಲ್ ಫ್ರೆಂಡ್ ಗೆ ಇಪ್ಪತ್ತು ವರ್ಷ. ಹೈಸ್ಕೂಲ್ ನಲ್ಲಿರುವಾಗ್ಲೇ ಮಗ ಹಾಗೂ ಆಕೆ ಪ್ರೀತಿಸಲು ಶುರು ಮಾಡಿದ್ದರು. ಮೂರು ವರ್ಷಗಳಿಂದ ಇಬ್ಬರೂ ಸಂಬಂಧದಲ್ಲಿದ್ದಾರೆ. ಮುಂದೆ ಮದುವೆಯಾಗುವ ಆಲೋಚನೆ ಮಾಡಿದ್ದಾರೆ. ಇಬ್ಬರ ಮಧ್ಯೆ ಅಪಾರ ಪ್ರೀತಿ ಇದೆ. ಇಷ್ಟಿದ್ದು ಸಂಬಂಧದ ಬಗ್ಗೆ ಇನ್ನೊಮ್ಮೆ ಆಲೋಚನೆ ಮಾಡುವಂತೆ ನಾನು ಮಗನ ಗರ್ಲ್ ಫ್ರೆಂಡ್ ಗೆ ಹೇಳಿದ್ದೆ. ಅದೇ ಈಗ ಮಗ ಹಾಗೂ ನನ್ನ ಪತಿ ಮುನಿಸಿಕೊಳ್ಳಲು ಕಾರಣವಾಗಿದೆ ಎಂದು ಮಹಿಳೆ ಹೇಳಿದ್ದಾಳೆ.
ಆಕೆ ಪ್ರಕಾರ, ಆಕೆಯ ಮಗನ ಗರ್ಲ್ ಫ್ರೆಂಡ್ ಆಕ್ಟಿವ್ ಆಗಿದ್ದಾಳೆ. ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ್ತಾಳೆ. ಓದಿನಲ್ಲಿ ಮುಂದಿದ್ದು ಡಾಕ್ಟರ್ ಆಗುವ ಆಸೆ ಹೊಂದಿದ್ದಾಳೆ. ಗೇಮ್ಸ್ ಮೇಲೆ ಅಪಾರ ಆಸಕ್ತಿ ಇದೆ. ಆದ್ರೆ ಮಗನ ಸ್ವಭಾವ ಭಿನ್ನವಾಗಿದೆ. ಓದು, ಗೇಮ್ ಬಿಟ್ಟರೆ ಪಾರ್ಟಿ, ಸ್ನೇಹಿತರ ಜೊತೆ ಮಗ ಸುತ್ತಾಡುತ್ತಿರುತ್ತಾನೆ. ಇಬ್ಬರ ಮಧ್ಯೆ ಪ್ರೀತಿ (Love) ಇದ್ರೂ ಮುಂದೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನುತ್ತಾಳೆ ಮಹಿಳೆ. ಈ ಪ್ರೀತಿ ಸಂಬಂಧ ಶುರು ಆದ್ಮೇಲೆ ಮಗ ಮತ್ತಷ್ಟು ಹಾಳಾಗಿದ್ದಾನೆ ಎಂಬುದು ಮಹಿಳೆ ಆರೋಪ. ತನ್ನ ಪ್ರೇಮಿಗೆ ಮಗ ಹೆಚ್ಚು ಮಹತ್ವ ನೀಡ್ತಿಲ್ಲ ಎಂಬುದು ಕೂಡ ಮಹಿಳೆ ಆರೋಪವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಮಗನ ಗರ್ಲ್ ಫ್ರೆಂಡ್ ಬೇಸರದಲ್ಲಿದ್ದಳು. ವಿಚಾರಿಸಿದಾಗ ಮಗ ಮಹತ್ವಾಕಾಂಕ್ಷಿಯಲ್ಲ, ಸೋಮಾರಿ ಎಂದು ಆರೋಪಿಸಿದ್ದಳು. ಅದಕ್ಕೆ ಉತ್ತರ ನೀಡಿದ ತಾಯಿ, ಮಗ ಸದ್ಯದಲ್ಲಿ ಸುಧಾರಿಸೋದು ಅನುಮಾನ ಎಂದಿದ್ದಲ್ಲದೆ, ನನ್ನ ಜಾಗದಲ್ಲಿ ನೀನಿದ್ದರೆ ಏನು ಮಾಡ್ತಿದ್ದೆ ಎನ್ನುವ ಪ್ರಶ್ನೆಗೆ ಇನ್ನೊಮ್ಮೆ ಸಂಬಂಧದ ಬಗ್ಗೆ ಆಲೋಚನೆ ಮಾಡುತ್ತಿದ್ದೆ ಎಂದಿದ್ದಳು. ಮೊದಲು ನಿನಗೆ ಆದ್ಯತೆ ನೀಡು, ನಿನ್ನ ಬಗ್ಗೆ ಆಲೋಚನೆ ಮಾಡು ಎಂದು ಮಗನ ಗರ್ಲ್ ಫ್ರೆಂಡ್ ಗೆ ಮಹಿಳೆ ಸಲಹೆ ನೀಡಿದ್ದಳಂತೆ.
ಅಯ್ಯೋ ಶ್ರೇಷ್ಠಾ ಮದ್ವೆಯಾದವನ ಹಿಂದೆ ಹೋಗೋದು ಬೇಕಿತ್ತಾ ನಿಂಗೆ ಅಂತಿದ್ದಾರೆ ಫ್ಯಾನ್ಸ್!
ಇದಾದ ಮರುದಿನ ಮಗ ಅಮ್ಮನ ಬಳಿ ಬಂದು, ಗರ್ಲ್ ಫ್ರೆಂಡ್ ಮೆಸ್ಸೇಜ್ ಮಾಡಿದ್ದು, ಬ್ರೇಕ್ ಅಪ್ (Break Up) ಮಾಡಿಕೊಂಡಿದ್ದಾಳೆ ಎಂದಿದ್ದಾನೆ. ನಿಮ್ಮಮ್ಮ ಇನ್ನೊಮ್ಮೆ ಆಲೋಚನೆ ಮಾಡುವಂತೆ ಹೇಳಿದ್ದಳು. ನಾನು ಬ್ರೇಕ್ ಅಪ್ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮೆಸ್ಸೇಜ್ ಮಾಡಿದ್ದಳು. ಇದಾದ್ಮೇಲೆ ಮಗ ಹಾಗೂ ಪತಿ ಬ್ರೇಕ್ ಅಪ್ ಗೆ ನಾನೇ ಕಾರಣ ಎನ್ನುತ್ತಿದ್ದು, ನಾನು ಬ್ರೇಕ್ ಅಪ್ ಮಾಡಿಕೊಳ್ಳುವಂತೆ ಹೇಳಿರಲಿಲ್ಲ, ನನ್ನ ತಪ್ಪೇನು ಇದ್ರಲ್ಲಿ ಎಂದು ಪ್ರಶ್ನಿಸಿದ್ದಾಳೆ.
AITA for telling my son’s girlfriend to break up with him?
byu/Minute-Layer-4412 inAmItheAsshole