ಕುಸಿದು ಬಿದ್ದ ವೃದ್ಧನಿಗೆ ಸಹಾಯ ಮಾಡದ ದಾರಿಹೋಕರಿಗೆ ₹16 ಲಕ್ಷ ದಂಡ

ರಸ್ತೆಯಲ್ಲಿ ಕುಸಿದು ಬಿದ್ದ ವೃದ್ಧನಿಗೆ ಸಹಾಯ ಮಾಡದ 10 ಜನರಿಗೆ 16 ಲಕ್ಷ ರೂ. ದಂಡ ವಿಧಿಸುವಂತೆ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ. ವೃದ್ಧನಿಗೆ ಸಹಾಯ ಮಾಡಿದ್ದರೆ ಜೀವ ಉಳಿಯುತ್ತಿತ್ತು ಎಂದು ಕುಟುಂಬ ವಾದಿಸಿದೆ.

Rs 16 lakh fine Pedestrians seen Elderly man lying road sat

ವೃದ್ಧನೊಬ್ಬ ರಸ್ತೆಯಲ್ಲಿ ಕುಸಿದುಬಿದ್ದರೂ ಅವರಿಗೆ ಸಹಾಯ ಮಾಡದೇ ಸುಮಾರು 10 ಜನರು ದಾಟಿಕೊಂಡು ಹೋಗಿದ್ದಾರೆ. ಕೆಲವು ಹೊತ್ತಿನಲ್ಲಿ ವೃದ್ಧ ಸಾವಿಗೀಡಾಗಿದ್ದು, ಈ ದೃಶ್ಯವನ್ನು ನೋಡಿಕೊಂಡು ಹೋದ ದಾರಿ ಹೋಕರಿಗೆ 16 ಲಕ್ಷ ರೂ. ದಂಡ ವಿಧಿಸುವಂತೆ ವೃದ್ಧನ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ.

ನಾವು ಮನೆಯಲ್ಲಿ ಪೋಷಕರಿಗೆ ಅಥವಾ ಕುಟುಂಬ ಸದಸ್ಯರಿಗೆ ಎಷ್ಟು ಗೌರವ ಕೊಟ್ಟು ರಕ್ಷಣೆ ಮಾಡುತ್ತೇವೆಯೋ ಆಹಗೆ ಸಮಾಜದಲ್ಲಿ ಹಿರಿಯರನ್ನೂ ಕೂಡ ಗೌರವಿಸಬೇಕು. ಇನ್ನು ವೃದ್ಧರು ಅಸಾಯಕ ಸ್ಥಿತಿಯಿಮದ ಸಂಕಸಷ್ಟಕ್ಕೆ ಸಿಲುಕಿದ್ದರ ಅವರ ನೆರವಿಗೆ ಧಾವಿಸಬೇಕು. ಇದನ್ನು ಮಾನವೀಯತೆ ಎಂದು ಹೇಳಲಾಗುತ್ತದೆ. ಆದರೆ, ಇಲ್ಲೊಂದು ಘಟನೆಯಲ್ಲಿ ವೃದ್ಧ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಿಯೂ ಮಾನವೀಯತೆಯನ್ನು ಮರೆತು 10 ಜನರು ದಾಟಿಕೊಂಡು ಹೋಗಿದ್ದಾರೆ.

Latest Videos

ನಿಯಮಗಳು ಸಮಾಜದಲ್ಲಿ ಎರಡು ರೀತಿಯಲ್ಲಿ ಕೆಲಸ ಮಾಡುತ್ತವೆ. ಒಂದು ಲಿಖಿತ ನಿಯಮ. ಮತ್ತೊಂದು ಸಂದರ್ಭಕ್ಕೆ ತಕ್ಕಂತೆ ಹೊಸದಾಗಿ ಹುಟ್ಟಿಕೊಂಡು ದಿಢೀರನೇ ಜಾರಿಯಾಗುವ ಅಲಿಖಿತ ನಿಯಮ. ಯಾವುದೇ ದೇಶವು ತನ್ನ ಸಾಂಸ್ಕೃತಿಕ ಮತ್ತು ರಾಜಕೀಯ ವಿಶೇಷತೆಗಳನ್ನು ಒಳಗೊಂಡಂತೆ ಲಿಖಿತ ನಿಯಮವನ್ನು ರಚಿಸಲಾಗುತ್ತದೆ. ಆದರೆ, ಸಮಾಜದಲ್ಲಿ ಉಂಟಾಗುವ ಅಲಿಖಿತ ನಿಯಮವು ಆ ಸಮಾಜವು ಕಾಲಕಾಲಕ್ಕೆ ಗಳಿಸಿದ ಕೆಲವು ಸಾಂಸ್ಕೃತಿಕ ವಿಶೇಷತೆಗಳನ್ನು ಆಧರಿಸಿರುತ್ತದೆ. ಪೋಷಕರೊಂದಿಗೆ ಗುರುಗಳನ್ನು ಗೌರವಿಸುವುದು ಭಾರತೀಯ ಉಪಖಂಡದ ಒಂದು ಅಲಿಖಿತ ನಿಯಮ. ಅದು ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿದೆ. ಅದೇ ರೀತಿ ವಯಸ್ಸಾದವರು, ಮಹಿಳೆಯರು, ಮಕ್ಕಳು ಇವರನ್ನು ಸ್ವಲ್ಪ ದಯೆಯಿಂದ ನೋಡಿಕೊಳ್ಳುವುದು ಪ್ರತಿಯೊಂದು ಸಮಾಜವು ತಾನಾಗಿಯೇ ರೂಪಿಸಿಕೊಂಡಿರುವ ಅಲಿಖಿತ ನಿಯಮಗಳಲ್ಲಿ ಒಂದಾಗಿದೆ. ಆದರೆ, ಇಂತಹ ಅಲಿಖಿತ ನಿಯಮಗಳನ್ನು ಪಾಲಿಸಬೇಕೋ ಬೇಡವೋ ಎಂದು ಪ್ರತಿಯೊಬ್ಬ ವ್ಯಕ್ತಿಯೂ ತಾನೇ ನಿರ್ಧರಿಸಬಹುದು.

ಇದನ್ನೂ ಓದಿ: ಸ್ಪೇನ್ ಮೆಟ್ರೋ ನಿಲ್ದಾಣದಲ್ಲಿ ಗಾಯತ್ರಿ ಮಂತ್ರ ಪಠಿಸಿದ ಸ್ಪಾನಿಷ್ ಮಹಿಳೆ, ವಿಡಿಯೋ ವೈರಲ್

ಚೀನಾದಲ್ಲಿ ರಸ್ತೆಯಲ್ಲಿ ಕುಸಿದು ಬಿದ್ದು ಮೃತಪಟ್ಟ 87 ವರ್ಷದ ವೃದ್ಧನಿಗೆ ಸಹಾಯ ಮಾಡಲಿಲ್ಲ ಎಂದು ಆರೋಪಿಸಿ ಅವರ ಕುಟುಂಬವು ಹತ್ತಕ್ಕೂ ಹೆಚ್ಚು ದಾರಿಹೋಕರನ್ನು ನ್ಯಾಯಾಲಯಕ್ಕೆ ಎಳೆದಿದೆ. ಷಾಂಗ್‌ಡಾಂಗ್ ಪ್ರಾಂತ್ಯದ ನಗರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹೋಗುತ್ತಿದ್ದ 87 ವರ್ಷದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ರಸ್ತೆಗೆ ಬೀಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ವೃದ್ಧನ ಮನೆಯವರು ಈ ಸಮಯದಲ್ಲಿ ಅವನಿಗೆ ಸಹಾಯ ಮಾಡದೆ ಹೋದ 10 ದಾರಿಹೋಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ವೃದ್ಧ ಬಿದ್ದಾಗ ಜನರು ಗಮನಿಸಿ ನಂತರ ನಡೆದುಕೊಂಡು ಹೋಗುವುದು ವೀಡಿಯೊದಲ್ಲಿ ಕಾಣಬಹುದು ಎಂದು ವರದಿಗಳು ಹೇಳುತ್ತವೆ. ಒಬ್ಬ ಯುವಕ ವೃದ್ಧನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾಗ, ಹತ್ತಿರದಲ್ಲಿದ್ದ ಇನ್ನೊಬ್ಬ ವ್ಯಕ್ತಿ, 'ಅದು ಒಂದು ಕೆಲಸವಾಗುತ್ತದೆ ಮತ್ತು ಇಂತಹ ವಂಚನೆಗಳು ಇಲ್ಲಿ ಸಾಮಾನ್ಯ' ಎಂದು ಯುವಕನಿಗೆ ಸಲಹೆ ನೀಡಿದನೆಂದು ವರದಿಗಳು ಹೇಳುತ್ತವೆ. ಏನೇ ಆಗಲಿ, ಪ್ರತಿ ದಾರಿಹೋಕರು 1,40,000 ಯುವಾನ್ (ಸುಮಾರು 16,50,000 ರೂಪಾಯಿ) ಪರಿಹಾರ ನೀಡಬೇಕೆಂದು ಕುಟುಂಬ ನ್ಯಾಯಾಲಯದಲ್ಲಿ ಕೇಳಿದೆ. ಯಾರಾದರೂ ಸಹಾಯ ಮಾಡಿದ್ದರೆ ಅವನ ಜೀವ ಉಳಿಸಬಹುದಿತ್ತು ಎಂದು ಕುಟುಂಬ ವಾದಿಸಿದೆ.

ಇದನ್ನೂ ಓದಿ: ಪಾಕ್‌ ಹಿಂದೂಗಳ ಜನಸಂಖ್ಯೆ ಎಷ್ಟು? ಬೆಚ್ಚಿಬೀಳಿಸುತ್ತೆ ಅಂಕಿ-ಅಂಶ!

ಕಳೆದ ಮಾರ್ಚ್‌ನಲ್ಲಿ ಬಂದ ತೀರ್ಪು ಕುಟುಂಬಕ್ಕೆ ವಿರುದ್ಧವಾಗಿತ್ತು. ದಾರಿಹೋಕರು ವೃದ್ಧನಿಗೆ ಸಹಾಯ ಮಾಡಬೇಕಾದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅವರ ನಡುವೆ ಯಾವುದೇ ದೈಹಿಕ ಸಂಬಂಧವಿಲ್ಲದ ಕಾರಣ ವೃದ್ಧನ ಸಾವಿಗೆ ದಾರಿಹೋಕರು ಜವಾಬ್ದಾರರಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಚೀನೀ ಕಾನೂನಿನ ಪ್ರಕಾರ ವೈದ್ಯರು, ಪೊಲೀಸರು ಮಾತ್ರ ಸಾರ್ವಜನಿಕರಿಗೆ ತುರ್ತು ಸೇವೆಗಳನ್ನು ನೀಡಲು ಬದ್ಧರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ಅದೇ ಸಮಯದಲ್ಲಿ ಈ ಪ್ರಕರಣದ ಬಗ್ಗೆ ಚೀನೀ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆ ನಡೆದಿದೆ. ಅನೇಕರು ಹೊಸ ಯುಗದಲ್ಲಿ ಪರಸ್ಪರ ಸಹಕಾರ ಮತ್ತು ಗೌರವವನ್ನು ಮನುಷ್ಯ ಕಳೆದುಕೊಳ್ಳುತ್ತಿದ್ದಾನೆ ಎಂದು ಬರೆದಿದ್ದಾರೆ. ಸಮಾಜದ ನೈತಿಕ ಮಟ್ಟ ಕುಸಿಯುತ್ತಿದೆ ಎಂದು ವೀಕ್ಷಕರು ಬರೆದಿದ್ದಾರೆ.

vuukle one pixel image
click me!