ಸಚಿನ್ ತೆಂಡುಲ್ಕರ್ ಮಗಳಿಗೆ ಕೈ ಕೊಟ್ರಾ ಶುಭ್ಮನ್‌ ಗಿಲ್‌, ಡಿಸೆಂಬರ್‌ನಲ್ಲಿ ಸೀರಿಯಲ್ ನಟಿ ಜೊತೆ ಮದುವೆ?

By Vinutha Perla  |  First Published Jun 1, 2024, 6:10 PM IST

ಬಹುಕಾಲದಿಂದ ಕ್ರಿಕೆಟ್‌ ದೇವರು ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಹಾಗೂ ಶುಭ್ಮನ್‌ ಗಿಲ್ ರಿಲೇಶನ್‌ ಶಿಪ್‌ನಲ್ಲಿದ್ದಾರೆ ಎಂದೇ ಹೇಳಲಾಗ್ತಿದೆ. ಆದ್ರೆ ಈಗ ಡಿಸೆಂಬರ್‌ನಲ್ಲಿ 9 ವರ್ಷ ಹಿರಿಯ ನಟಿ ಜೊತೆಗೆ ಶುಭ್ಮನ್‌ ಗಿಲ್‌ ಮದುವೆ ಅನ್ನೋ ಮಾತು ಕೇಳಿ ಬರ್ತಿದೆ.


ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆಯಾಗಿರುವ ಶುಭ್ಮನ್ ಗಿಲ್ ಕೇವಲ ತಮ್ಮ ಅತ್ಯುತ್ತಮ ಆಟಕ್ಕಾಗಿ ಮಾತ್ರವಲ್ಲ ರಿಲೇಶನ್‌ ಶಿಪ್‌ ವಿಷಯದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಸಾರಾ ತೆಂಡೂಲ್ಕರ್ ಮತ್ತು ಬಾಲಿವುಡ್‌ ನಟಿ ಸಾರಾ ಆಲಿ ಖಾನ್‌ ಅವರೊಂದಿಗೆ ಶುಭ್ಮನ್‌ ಗಿಲ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ವಂದತಿಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಯಾರೂ ಅಧಿಕೃತವಾಗಿ ಮಾತನಾಡಿರಲಿಲ್ಲ. ಇದೀಗ ಮತ್ತೊಮ್ಮೆ ಶುಭ್ಮನ್‌ ಗಿಲ್‌ ಅವರ ಮದುವೆ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಹುಕಾಲದಿಂದ ಕ್ರಿಕೆಟ್‌ ದೇವರು ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಹಾಗೂ ಶುಭ್ಮನ್‌ ಗಿಲ್ ರಿಲೇಶನ್‌ ಶಿಪ್‌ನಲ್ಲಿದ್ದಾರೆ ಎಂದೇ ಹೇಳಲಾಗ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಶುಭ್ಮನ್‌ ಮೈದಾನದಲ್ಲಿ ಅತ್ಯುತ್ತಮವಾಗಿ ಆಡಿದಾಗ ಸಾರಾ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದ್ರೆ ಈಗ ಡಿಸೆಂಬರ್‌ನಲ್ಲಿ 9 ವರ್ಷ ಹಿರಿಯ ನಟಿ ಜೊತೆಗೆ ಶುಭ್ಮನ್‌ ಗಿಲ್‌ ಮದುವೆ ಅನ್ನೋ ಮಾತು ಕೇಳಿ ಬರ್ತಿದೆ.

Tap to resize

Latest Videos

ಟೀಮ್‌ ಇಂಡಿಯಾದ ಇವ ಆಟಕ್ಕೆ ಮಾತ್ರವಲ್ಲ ಐಷಾರಾಮಿ ಜೀವನಶೈಲಿಗೂ ಫೇಮಸ್‌!

ದೂರದರ್ಶನದ ನಟಿ ರಿಧಿಮಾ ಪಂಡಿತ್ ಮತ್ತು ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಆದರೆ, ಇದೀಗ ವದಂತಿಗಳ ಬಗ್ಗೆ ನಟಿ ಅಂತಿಮವಾಗಿ ಮೌನ ಮುರಿದು ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ.

ರಿಧಿಮಾ ಪಂಡಿತ್ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ, 'ನನ್ನ ಮದುವೆಯ ಬಗ್ಗೆ ಪತ್ರಕರ್ತರಿಂದ ಸಾಕಷ್ಟು ಕರೆಗಳು ಬಂದಿವೆ. ಆದರೆ ನಾನು ಸದ್ಯ ಯಾರನ್ನೂ ಮದುವೆಯಾಗುತ್ತಿಲ್ಲ. ನನ್ನ ಜೀವನದಲ್ಲಿ ಅಂಥಾ ಘಟನೆಯಾದರೆ ನಾನೇ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ' ಎಂದು ಶುಭ್ಮನ್‌ ಗಿಲ್ ತಿಳಿಸಿದ್ದಾರೆ. 

ಗುಟ್ಟು ಗುಟ್ಟಾಗಿ ಬಾಯ್‌ಫ್ರೆಂಡ್ ಶುಭ್‌ಮನ್‌ ಗಿಲ್‌ ಮೀಟಾದ್ರಾ ಸಾರಾ ತೆಂಡೂಲ್ಕರ್? ವಿಡಿಯೋ ವೈರಲ್‌

ರಿಧಿಮಾ ಪಂಡಿತ್ ಜನಪ್ರಿಯ ಕಿರುತೆರೆ ನಟಿಯಾಗಿದ್ದು, 'ಬಹು ಹುಮಾರಿ ರಜನಿಕಾಂತ್' ಚಿತ್ರದಲ್ಲಿ ರೋಬೋಟ್ ರಜನಿ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ಇದರ ನಂತರ, ನಟಿ ಖತ್ರೋನ್ ಕೆ ಕಿಲಾಡಿ 9ನಂತಹ ಹಲವಾರು ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದರು. ಇದರಲ್ಲಿ ಎರಡನೇ ರನ್ನರ್ ಅಪ್ ಆದರು. ಬಿಗ್ ಬಾಸ್ OTTಯಲ್ಲಿ ಸಹ ಭಾಗವಹಿಸಿದರು. ಯೇ ಕೆ ಹುವಾ ಬ್ರೋ ಎಂಬ ಶೀರ್ಷಿಕೆಯ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ. ರಾಘವ್ ಜುಯಲ್ ಅವರೊಂದಿಗೆ ಡ್ಯಾನ್ಸ್ ರಿಯಾಲಿಟಿ ಶೋ, ಡ್ಯಾನ್ಸ್ ಪ್ಲಸ್‌ನ್ನು ಸಹ ಆಯೋಜಿಸಿದರು.

click me!