ಹದಿಹರೆಯದ ಮಕ್ಕಳಿಗೇಕೆ ತಾಯಿಯ ಮೇಲೆ ಅಷ್ಟು ಕೋಪ ?

By Suvarna NewsFirst Published May 14, 2022, 6:31 PM IST
Highlights

ಎಲ್ಲಾ ತಾಯಂದಿರಿಗೆ (Mother) ಮಕ್ಕಳೆಂದ್ರೆ ಪಂಚಪ್ರಾಣ. ಹಾಗೆಯೇ ಮಕ್ಕಳು (Children) ಸಹ ತಾಯಿಯನ್ನು ತುಂಬಾ ಹಚ್ಚಿಕೊಂಡಿರುತ್ತಾರೆ. ಆದರೆ ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ತಾಯಿಯನ್ನು ದ್ವೇಷಿಸಲು (Hate) ಆರಂಭಿಸುತ್ತಾರೆ. ಇದಕ್ಕೇನು ಕಾರಣ ?

ಪುಟ್ಟ ಮಗುವಾಗಿದ್ದಾಗ, ಮಕ್ಕಳಿಗೆ (Children) ತಾಯಿಯ (Mother) ಧ್ವನಿ ಮತ್ತು ಮಡಿಲು ಅತ್ಯಂತ ಸಾಂತ್ವನದ ವಿಷಯವಾಗಿದೆ. ತಾಯಿಯು ಮಗುವನ್ನು ತಬ್ಬಿಕೊಂಡು ಲಾಲಿಯನ್ನು ಗುನುಗಿದಾಗ, ಮಗು ತಾನು ಸುರಕ್ಷಿತ ಸ್ಥಳದಲ್ಲಿದೆ ಎಂದು ತಿಳಿಯುತ್ತದೆ. ದೊಡ್ಡದಾಗುತ್ತಾ ಹೋಗುತ್ತಲೇ ಮಕ್ಕಳು ಯಾವುದೇ ಅಪಾಯದ ಕ್ಷಣದಲ್ಲಿ ಅಮ್ಮನ ಬಳಿಗೆ ಓಡುತ್ತಾರೆ. ಒಂದೊಂದು ವರ್ಷ ಕಳೆಯುವಾಗಲೂ ಅಮ್ಮನಿಗೆ ಹೆಚ್ಚು ಆಪ್ತವಾಗಿ ಹೋಗುತ್ತಾರೆ. ಎಲ್ಲಾ ವಿಷಯದಲ್ಲೂ ತಾಯಿಯ ಸಲಹೆ, ಸೂಚನೆಗಳನ್ನು ಪಾಲಿಸುತ್ತಾರೆ. ತಾಯಿಗೆ ಇಷ್ಟವಾದ ಆಹಾರ (Food), ಡ್ರೆಸ್ ಎಲ್ಲವನ್ನೂ ಮಾಡುತ್ತಾರೆ. ಆದರೆ ನಂತರ ಇದ್ದಕ್ಕಿದ್ದಂತೆ, ಮಕ್ಕಳು 13 ವರ್ಷಕ್ಕೆ ಕಾಲಿಟ್ಟಾಗ, ತಾಯಿಯ ವಿರುದ್ಧ ಸಿಟ್ಟಿಗೇಳುತ್ತಾರೆ. ತಾಯಿಯ ಎಲ್ಲಾ ವರ್ತನೆಗಳು (Behaviour0 ಅವರಿಗೆ ಸಿಟ್ಟನ್ನು ತರಿಸುತ್ತದೆ ಯಾಕೆ ? 

ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಜರ್ನಲ್ ಆಫ್ ನ್ಯೂರೋಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಉತ್ತರವನ್ನು ಪಡೆದುಕೊಂಡಿದೆ. ಮಕ್ಕಳು 13 ವರ್ಷಕ್ಕೆ ಬಂದಾಗ, ಅವರು ತಾಯಿಯಿಂದ ಪ್ರತ್ಯೇಕತೆಯನ್ನು ಬಯಸುತ್ತಾರೆ. ಪ್ರತಿಯೊಂದು ವಿಷಯದಲ್ಲೂ ತಾಯಿ ಸಲಹೆ ಕೊಡುವುದು ಅವರಿಗೆ ಇಷ್ಟವಾಗುವುದಿಲ್ಲ. ಜರ್ನಲ್ ಆಫ್ ನ್ಯೂರೋಸೈನ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನವನ್ನು ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ್ದರು. ಹಾಗಿದ್ರೆ ಮಕ್ಕಳು ತಾಯಿಯನ್ನು ದ್ವೇಷಿಸುವುದು ಯಾಕೆ ತಿಳಿಯೋಣ.

ಗಂಡ-ಹೆಂಡ್ತಿ ಜಗಳದ ಮಧ್ಯೆ ಕೂಸು ಬಡವಾಗ್ಬಾರ್ದು ಅಂದ್ರೆ ಹೀಗೆ ಮಾಡಿ

ತಾಯಿಯ ಬುದ್ಧಿಮಾತುಗಳು ಮಕ್ಕಳಿಗೆ ಇಷ್ಟವಾಗುವುದಿಲ್ಲ: ಹೆಚ್ಚಿನ ಮಕ್ಕಳು ಬೆಳೆಯುತ್ತಾ ತಮ್ಮ ತಾಯಿಯನ್ನು ದ್ವೇಷಿಸಲು ಬೆಳೆಯುತ್ತಾರೆ. ಏಕೆಂದರೆ ಹೆಚ್ಚಿನ ತಾಯಂದಿರು ಮಕ್ಕಳ ಒಳಿತಿಗಾಗಿ ಅವರನ್ನು ಬಯ್ಯುತ್ತಲೇ ಇರುತ್ತಾರೆ. ಇದೊಂದು ಕಾರಣದಿಂದ ಮಕ್ಕಳು ತಾಯಿಯಿಂದ ಅಂತರವನ್ನು ಕಾಪಾಡುತ್ತಾರೆ. ಮನೆಯಲ್ಲಿ ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ನಿಂದಿಸುವುದು ಅವರಿಗೆ ಇಷ್ಟವಾಗುವುದಿಲ್ಲ. ಅದು ತಮ್ಮ ಒಳಿತಿಗಾಗಿ ಹೇಳುತ್ತಿರುವುದೆ ಆಗಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ.

ಕಠಿಣ ನಿಯಮಗಳು: ಹೆಚ್ಚಿನ ತಾಯಂದಿರು ಮಕ್ಕಳು ದೊಡ್ಡವರಾದಂತೆ ಅವರ ಬುದ್ಧಿ ಹಾಳಾಗಬಾರದೆಂದು ಅವರಿಗೆ ಕೆಲವೊಂದು ರಿಸ್ಟ್ರಿಕ್ಷನ್ ಹಾಕಲು ಆರಂಭಿಸುತ್ತಾರೆ. ಸಂಜೆ ನಿರ್ಧಿಷ್ಟ ಸಮಯದೊಳಗೆ ಮನೆಯೊಳಗೆ ಸೇರಬೇಕು. ಹೆಚ್ಚು ಹೊತ್ತು ಮೊಬೈಲ್, ಟಿವಿ ನೋಡಬಾರದು, ಗೇಮ್ ಆಡಬಾರದು ಎಂದೆಲ್ಲಾ ಹೇಳುತ್ತಾರೆ. ಮಕ್ಕಳಿಗೆ ಇಂಥಾ ರೂಲ್ಸ್ ಇಷ್ಟವಾಗುವುದಿಲ್ಲ. ತಾಯಿ ತಮ್ಮ ಮೇಲೆ ವಿನಾಕಾರಣ ರಿಸ್ಟ್ರಿಕ್ಷನ್ ಹೇರುತ್ತಿದ್ದಾರೆ. ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದಾರೆ ಎಂದೇ ಭಾವಿಸುತ್ತಾರೆ.

Kids Care : ಉಗುರು ಕಚ್ಚಿ ಮಕ್ಕಳು ಆರೋಗ್ಯ ಹಾಳ್ಮಾಡಿಕೊಂಡ್ರೆ ಹೀಗೆ ಮಾಡಿ

ತಾಯಿ ಔಟ್‌ಡೇಟೆಡ್ ಅನಿಸಿಬಿಡುತ್ತಾಳೆ: ಮಕ್ಕಳು ಮತ್ತು ಹದಿಹರೆಯದವರು ವರ್ಷ ಕಳೆಯುತ್ತಾ ಹೋದಂತೆ ತಮ್ಮದೇ ವಯಸ್ಸಿನ ಮಕ್ಕಳ ಜೊತೆ ಹೆಚ್ಚು ಆಪ್ತರಾಗುತ್ತಾರೆ. ತಮ್ಮದೇ ಹರೆಯದ ಮಕ್ಕಳ ಜೊತೆ ಅವರ ಚಿಂತನೆಗಳು ಹೆಚ್ಚು ತಾಳೆಯಾಗುತ್ತವೆ. ಹೀಗಾಗಿ ತಾಯಿ ಮಾತನಾಡುವುದು ಅವರಿಗೆ ಔಟ್‌ಡೇಟೆಡ್ ಅನಿಸಿಬಿಡುತ್ತದೆ. ಹೀಗಾಗಿ ಸಣ್ಣಪುಟ್ಟ ವಿಚಾರಗಳಿಗೂ ತಾಯಿಯನ್ನು ದೂರುವುದು, ತಾಯಿಯ ವಿರುದ್ಧ ರೇಗಾಡುವುದು ಸಾಮಾನ್ಯವಾಗಿಬಿಡುತ್ತದೆ.

ಮಕ್ಕಳು ತಾಯಿಯಿಂದ ದೂರವಾಗುವುದು ಹದಿಹರೆಯದವರು ಪ್ರಪಂಚದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರ ಕುಟುಂಬದ ಹೊರಗೆ ಸಾಮಾಜಿಕವಾಗಿ ಪ್ರವೀಣರಾಗಲು ಸಹಾಯ ಮಾಡುವ ಸಂಪರ್ಕಗಳನ್ನು ಮಾಡಲು ಅವರಿಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅವರು ತಮ್ಮ ಯೋಗಕ್ಷೇಮದ ಕಡೆಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾರೆ. ಇದು ಪ್ರಬುದ್ಧತೆಯೆಡೆಗೆ ಸ್ವಾಗತಾರ್ಹ ಹೆಜ್ಜೆ. ಅಮ್ಮನ ಕೆಲಸ ಮುಗಿದಂತೆ. ಪ್ರೀತಿ ಉಳಿದಿದೆ, ಆದರೆ ಮಗುವಿನ ಪ್ರತ್ಯೇಕತೆ ಅರಳುತ್ತದೆ ಮತ್ತು ದೃಢೀಕರಣವು ಆದ್ಯತೆಯನ್ನು ಪಡೆಯುತ್ತದೆ.

click me!