ಗಂಡನನ್ನು ಸ್ವೀಟ್ ಹಾರ್ಟ್ ಎಂದ್ಲು ವೈಟ್ರೆಸ್, ರಣಚಂಡಿಯಾದ್ಲು ಪಕ್ಕದಲ್ಲಿದ್ದ ಹೆಂಡ್ತಿ!

By Suvarna News  |  First Published Nov 24, 2023, 3:17 PM IST

ಮಹಿಳೆ ತನ್ನ ಗಂಡನನ್ನು ಬೇರಾರೋ ಪ್ರೀತಿಯಿಂದ ಕರೆಯುವುದನ್ನು ಸ್ವಲ್ಪವೂ ಸಹಿಸಿಕೊಳ್ಳುವುದಿಲ್ಲ, ಅದೇ ರೀತಿ ಪೊಸೆಸಿವ್‌ನೆಸ್ ಹೊಂದಿದ್ದ ಮಹಿಳೆಯಬ್ಬರು ಹೊಟೇಲ್‌ ಬಿಲ್‌ ಒಂದು ಈಗ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.



ಗಂಡನ ಮೇಲೆ ಹೆಂಡ್ತಿಗೆ ಹೆಂಡ್ತಿ ಮೇಲೆ ಗಂಡನಿಗೆ ಬಹಳ ಪೊಸೆಸಿವ್‌ನೆಸ್ ಇರುತ್ತದೆ, ತಾವು ಎಷ್ಟೇ ತಮ್ಮ ಗಂಡ ಅಥವಾ ಹೆಂಡ್ತಿ ಬಗ್ಗೆ ನಿರ್ಲಕ್ಷ್ಯವಹಿಸಲಿ, ಆದರೆ ಮತ್ತೊಬ್ಬರು ಮಾತ್ರ ಆತನ ಆಕೆಯ ಮೇಲೆ ಪ್ರೀತಿ ಕಾಳಜಿ ತೋರುವಂತಿಲ್ಲ, ಹಾಗೇನಾದರೂ ಆದರೆ ಮಹಾಯುದ್ಧವೇ ನಡೆದು ಹೋಗುತ್ತದೆ. ಇದೇ ಕಾರಣಕ್ಕೆ ವಿವಾಹವಾದ ನಂತರ ಪುರುಷರು ತಮ್ಮ ಮಹಿಳಾ ಸ್ನೇಹಿತರ ಜೊತೆ ಹಾಗೆಯೇ ಮಹಿಳೆಯರು ತಮ್ಮ ಪುರುಷ ಸ್ನೇಹಿತರ ಜೊತೆ ಮಾತನಾಡುವುದನ್ನೇ ಬಿಟ್ಟು ಬಿಡುತ್ತಾರೆ (ಎಲ್ಲರೂ ಅಲ್ಲ) ಏಕೆಂದರೆ ಈ ಪೊಸಿಸಿವ್‌ನೆಸ್‌ ಕೆಲವೊಮ್ಮೆ ಹೆಚ್ಚಾಗಿ ತಮ್ಮ ವೈವಾಹಿಕ ಸಂಬಂಧವನ್ನೇ ಹಾಳು ಮಾಡಬಹುದು ಎಂಬ ಭಯ ಇಬ್ಬರಲ್ಲೂ ಇರುತ್ತದೆ.  ಅದರಲ್ಲೂ ಕೆಲವು ಮಹಿಳೆಯರಂತೂ ತಮ್ಮ  ಗಂಡನ ಮೇಲೆ ತುಸು ಹೆಚ್ಚೆ ಎನ್ನುವಂತಹ ಪೊಸೆಸಿವ್‌ನೆಸ್ ಹೊಂದಿದ್ದು, ತನ್ನ ಗಂಡನನ್ನು ಬೇರಾರೋ ಪ್ರೀತಿಯಿಂದ ಕರೆಯುವುದನ್ನು ಸ್ವಲ್ಪವೂ ಸಹಿಸಿಕೊಳ್ಳುವುದಿಲ್ಲ, ಅದೇ ರೀತಿ ಪೊಸೆಸಿವ್‌ನೆಸ್ ಹೊಂದಿದ್ದ ಮಹಿಳೆಯಬ್ಬರು ಹೊಟೇಲ್‌ ಬಿಲ್‌ ಒಂದು ಈಗ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಸಾಮಾನ್ಯವಾಗಿ ಹೊಟೇಲ್‌ಗಳಿಗೆ ಹೋದಾಗ ಅಲ್ಲೊಂದು ಅತಿಥಿಗಳ ಅನುಭವ ಬರೆಯುವ ಪುಸ್ತಕವಿರುತ್ತದೆ. ಅಲ್ಲಿ ಕೆಲವರು ಆ ಹೊಟೇಲ್ ಅತಿಥ್ಯದ ಅನುಭವ ಹೇಗಿತ್ತು ಎಂಬುದನ್ನು ಬರೆಯುತ್ತಾರೆ. ಆದರೆ ಇಲ್ಲಿ ಹೊಟೇಲ್ ಬಿಲ್ ಮೇಲೆಯೇ ಮಹಿಳೆಯೊಬ್ಬಳು ತನ್ನ ಅಸಮಾಧಾನ ಹೊರ ಹಾಕಿದ್ದಾಳೆ. ಅದಕ್ಕೆ ಕಾರಣವಾಗಿದ್ದು, ವೈಟ್ರೆಸ್.  (ಅಂದರೆ ನಾವು ಆರ್ಡರ್ ಮಾಡಿದ ಆಹಾರವನ್ನು ತಂದು ಟೇಬಲ್‌ಗಿಡುವ ಮಹಿಳಾ ಪೂರೈಕೆದಾರರು).

Latest Videos

undefined

ಹೌದು ವೈಟ್ರೆಸ್ ಒಬ್ಬರು ಮಹಿಳೆಯ ಗಂಡನನ್ನು ಸ್ವಿಟ್‌ಹಾರ್ಟ್ ಎಂದು ಕರೆದಿದ್ದೆ ಮಹಿಳೆಯ ಅಸಮಾಧಾನಕ್ಕೆ ಕಾರಣ. ಇದನ್ನು ಆ  ಮಹಿಳೆ ಹೊಟೇಲ್ ಬಿಲ್‌ನಲ್ಲಿಯೇ ತೋರ್ಪಡಿಸಿದ್ದು, ತನ್ನ ಗಂಡನನ್ನು ಸ್ವೀಟ್‌ಹಾರ್ಟ್ ಎಂದು ಕರೆಯದಂತೆ ಸೂಚಿಸಿದ್ದಾಳೆ. 32.72 ಡಾಲರ್ ಅಂದರೆ 2700 ರೂಪಾಯಿಯ ಬಿಲ್‌ನ ಟಿಪ್ ಸೀಟ್, ಅಥವಾ ಬಿಲ್‌ನಲ್ಲಿದ್ದ ಖಾಲಿ ಜಾಗದಲ್ಲಿ ನನ್ನ ಗಂಡನನ್ನು ಸ್ವೀಟ್‌ಹಾರ್ಟ್ ಎಂದು ಕರೆಯದಂತೆ ಬರೆದಿದ್ದಾಳೆ ಮಹಿಳೆ. 

Imgur ಎಂಬ ಸೋಶಿಯಲ್ ಮೀಡಿಯಾದಲ್ಲಿ ಈ ಬಿಲ್ ಪೋಸ್ಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಕೆಲವರು ಟಿಪ್ ನೀಡುವ ವಿಚಾರದ ಬಗ್ಗೆ ಚರ್ಚಿಸಿದರೆ ಮತ್ತೆ ಕೆಲವರು  ಬೇರೆಯವರ ಗಂಡನಿಗೆ ಸ್ವಿಟ್‌ಹಾರ್ಟ್‌ ಎಂದು ಕರೆದ ವೈಟ್ರೆಸ್ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಇವಳೊಬ್ಬಳು ಮೂರ್ಖ ಮಹಿಳೆ ಕೆಲವು ಕಡೆಗಳಲ್ಲಿ ವೈಟ್ರೆಸ್‌ಗಳು ಗ್ರಾಹಕರನ್ನು ಹನಿ, ಸ್ವೀಟಿ ಮುಂತಾದ ಪದಗಳಿಂದ ಗೌರವಪೂರ್ವಕವಾಗಿ ಕರೆಯುತ್ತಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. 

ವೈಟ್ರೆಸ್‌ಗೆ ಆತನೇ ಹಣ ಪಾವತಿ ಮಾಡುವುದು ಎಂದು ತಿಳಿದಿದೆ ಹೀಗಾಗಿ ಆಕೆ ತನ್ನ ಪ್ರಯತ್ನ ಮಾಡಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈ ಮಹಿಳೆ ಸಂಬಂಧದಲ್ಲಿ ಅಭದ್ರತೆ ಎದುರಿಸುತ್ತಿದ್ದಾಳ ಎಂದೆನಿಸುತ್ತಿದೆ. ಅಥವಾ ಆಕೆಯ ಗಂಡ  ಫ್ಲರ್ಟ್ ಇರಬಹುದು, ಅಥವಾ ಸರ್ವರ್‌ ಮಾಡಿದಾಕೆ ಆಕೆಯ ಗಂಡನೊಂದಿಗೆ ಫ್ಲರ್ಟ್ ಮಾಡಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಒಟ್ಟಿನಲ್ಲಿ ಸುಭದ್ರವಾದ ಸಂಬಂಧಗಳು ಗಂಡ ಹೆಂಡತಿ ಮಧ್ಯೆ ಇದೇ ಎಂದಾದರೆ ಇದ್ಯಾವುದು ಕೂಡ ದೊಡ್ಡ ವಿಷಯವಾಗುವುದಿಲ್ಲ,  ಹೀಗೆಲ್ಲಾ ವೈಟ್ರೆಸ್ ಅಥವಾ ಇನ್ಯಾರೋ ಹೀಗೆ ಕರೆದರೆ ಬಳಿಕ ಹೆಂಡತಿಯೂ ಹಾಗೆಯೇ ಗಂಡನ್ನು ತಮಾಷೆ ಹಾಗೂ ಟೀಕೆ ಮಿಶ್ರಿತವಾಗಿ ಆಗಾಗ ಕರೆದು ಪರಸ್ಪರ ತಮಾಷೆ ಮಾಡಿಕೊಳ್ಳುತ್ತಾರೆ. 


 

click me!