ಈಗಿನ ದಿನಗಳಲ್ಲಿ ಜನರು ಹಣದ ಹಿಂದೆ ಓಡ್ತಿದ್ದಾರೆ. ಹಣ ಅವರನ್ನು ಸ್ವಾರ್ಥಿಯನ್ನಾಗಿ ಮಾಡ್ತಿದೆ. ಹೆತ್ತವರ ಮೇಲೂ ಪ್ರೀತಿ ಇಲ್ಲದ ಮಕ್ಕಳು, ಕರುಣೆ ಇಲ್ಲದೆ ವೃದ್ಧರನ್ನು ಮನೆಯಿಂದ ಹೊರಗೆ ಹಾಕ್ತಿದ್ದಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ಅಮೆರಿಕಾದಲ್ಲೂ ಇಂಥ ಘಟನೆ ಬೆಳಕಿಗೆ ಬಂದಿದೆ.
ಜನರು ಮದುವೆಯಾಗ್ತಾರೆ, ಆಮೇಲೆ ವಂಶಾಭಿವೃದ್ಧಿಗಾಗಿ, ನಮ್ಮನ್ನು ಮುಂದೆ ನೋಡಿಕೊಳ್ತಾರೆ ಎನ್ನುವ ದೊಡ್ಡ ಭರವಸೆಯಲ್ಲಿ ಮಕ್ಕಳಿಗೆ ಜನ್ಮ ನೀಡ್ತಾರೆ. ಆ ಮಕ್ಕಳನ್ನು ಬೆಳೆಸಲು ತಮ್ಮ ಇಡೀ ಜೀವನವನ್ನು ಮುಡುಪಾಗಿ ಇಡ್ತಾರೆ. ಮಕ್ಕಳ ವಿದ್ಯಾಭ್ಯಾಸ, ಅವರ ಆರೈಕೆ, ಅವರ ಉದ್ಯೋಗ, ಅವರ ಮದುವೆ, ಅವರ ಮಕ್ಕಳು ಹೀಗೆ ಮಕ್ಕಳಾದ್ಮೇಲೆ ಪಾಲಕರಿಗೆ ಮಕ್ಕಳೇ ಸರ್ವಸ್ವವಾಗ್ತಾರೆ. ತಮ್ಮ ವೃತ್ತಿ, ತಮ್ಮ ಆಸೆ – ಆಕಾಂಕ್ಷೆಗಳನ್ನು ಬದಿಗಿಟ್ಟು ಮಕ್ಕಳಿಗಾಗಿ ದುಡಿಯುವ ಪಾಲಕರಿಗೆ ಮಕ್ಕಳು ನೀಡೋದು ಏನು ಎಂಬ ಪ್ರಶ್ನೆ ಈಗಿನ ದಿನಗಳಲ್ಲಿ ಕಾಡ್ತಿದೆ. ಮಕ್ಕಳನ್ನು ಬೆಳೆಸಿ, ಅವರಿಗೆ ವಿದ್ಯಾಭ್ಯಾಸ ನೀಡುವುದು ಪಾಲಕರ ಕರ್ತವ್ಯ ಎಂದು ಭಾವಿಸುವ ಮಕ್ಕಳು, ದೊಡ್ಡವರಾಗ್ತಿದ್ದಂತೆ ಪಾಲಕರ ಕೈ ಬಿಡ್ತಾರೆ. ಕೆಲವರು ಪಾಲಕರನ್ನು ದೇಶದಲ್ಲಿ ಒಂಟಿಯಾಗಿ ಬಿಟ್ಟು ವಿದೇಶಕ್ಕೆ ಹೋಗಿ ವಾಸ ಶುರು ಮಾಡ್ತಾರೆ. ಮತ್ತೆ ಕೆಲ ಮಕ್ಕಳು ತಮ್ಮ ಸಂಸಾರದಲ್ಲಿ ಬ್ಯುಸಿಯಾಗಿರುವ ಕಾರಣ ಪಾಲಕರನ್ನು ವೃದ್ಧಾಶ್ರಮಕ್ಕೆ ಬಿಟ್ಟು ಹೋಗ್ತಾರೆ. ತಮ್ಮ ವೃದ್ಧಾಪ್ಯದಲ್ಲಿ ಮಕ್ಕಳು ನೆರವಾಗ್ತಾರೆ ಎಂಬ ಅತಿ ಆಸೆ ಇಟ್ಟುಕೊಳ್ಳದೆ ಹೋದ್ರೂ ಸಣ್ಣ ಭರವಸೆಯನ್ನಿಟ್ಟುಕೊಂಡ ಪಾಲಕರಿಗೆ ಮಕ್ಕಳ ಈ ಕೆಲಸ ನಿರಾಸೆಯುಂಟು ಮಾಡುತ್ತದೆ. ಅದ್ರಲ್ಲೂ ಮಕ್ಕಳು ಪಾಲಕರಿಗೆ ಮೋಸ ಮಾಡಿದ್ರೆ, ಪಾಲಕರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ರೆ ಅದ್ರಷ್ಟು ನೋವು ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ.
ಅಮೆರಿಕಾ (America) ದ ಕ್ಯಾಲಿಫೋರ್ನಿಯಾದಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ವೃದ್ಧ ದಂಪತಿಯನ್ನು ಮಗ (Son) ಮನೆಯಿಂದ ಹೊರ ಹಾಕಿದ್ದಾನೆ. ದಂಪತಿ ತಮ್ಮದೇ ಒಂದು ಸೂರು ಮಾಡಿಕೊಂಡು 20 ವರ್ಷಗಳಿಂದ ಈ ಮನೆಯ ಇಎಂಇ ತುಂಬುತ್ತಿದ್ದರು. ಆದ್ರೀಗ ಅವರ ಮನೆಯಿಂದಲೇ ಅವರನ್ನು ಮಗ ಹೊರಗೆ ಹಾಕಿದ್ದಾನೆ.
undefined
ನಾವು ಈಗಲೂ ಯುವ ಜೋಡಿಯಂತೆ ಡೈವ್ ಹೋಗುತ್ತೇವೆ: ಮುಖೇಶ್ ಅಂಬಾನಿ ಪ್ರೀತಿ ಬಗ್ಗೆ ನೀತಾ ಮಾತು
ಮನೆ ಖರೀದಿ ವೇಳೆಯೇ ಮೋಸ (Cheating) ಮಾಡಿದ ಮಗ : ಇಸ್ಮಾಯೆಲ್ ಮತ್ತು ಏಂಜೆಲಿಟಾ ರಾಮಿರೆಜ್ ನೊಂದ ದಂಪತಿ. 2003 ರಲ್ಲಿ ಇವರು ತಮ್ಮ ಮಗನ ಜೊತೆ ಮನೆ ಖರೀದಿ ಮಾಡಿದ್ದರು. ಮನೆ ಖರೀದಿ ವೇಳೆಯೇ ಮಗ ಪಾಲಕರಿಗೆ ಮೋಸ ಮಾಡಿದ್ದ. ಹೆಸರು ಹಾಕುವ ಅಗತ್ಯವಿಲ್ಲ ಎಂದಿದ್ದ. ಪೇಪರ್ ಇಂಗ್ಲೀಷ್ ನಲ್ಲಿತ್ತು. ದಂಪತಿಗೆ ಇಂಗ್ಲೀಷ್ ಓದಲು ಬರೋದಿಲ್ಲ. ಅವರಿಗೆ ಸ್ಪ್ಯಾನಿಷ್ ಗೊತ್ತು. ಹಾಗಾಗಿ ಅವರು ದಾಖಲೆ ಪೇಪರ್ ಓದದೇ ಸಹಿ ಹಾಕಿದ್ದಾರೆ.
ಇಷ್ಟು ವರ್ಷದ ಮೇಲೆ ಶಾಕ್ ನೀಡಿದ ಮಗ : ಮನೆ ಖರೀದಿ ಮಾಡಿದ ಖುಷಿಯಲ್ಲಿ ಈ ದಂಪತಿ ಇಪ್ಪತ್ತು ವರ್ಷಗಳ ಕಾಲ ಇಎಂಐ ಪಾವತಿ ಮಾಡಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದ ದಂಪತಿ ಎಲ್ಲ ದುಡಿಮೆಯನ್ನು ಮನೆಯ ಇಎಂಐಗೆ ಖರ್ಚು ಮಾಡಿದ್ದಾರೆ. ಆದ್ರೆ ಈಗ ಮಗನಿಂದ ನೋವಿನ ಸುದ್ದಿ ಸಿಕ್ಕಿದೆ. ಒಂದು ದಿನ ಮನೆಗೆ ನೊಟೀಸ್ ಬಂದಿದೆ. ಅದ್ರಲ್ಲಿ ಮನೆ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಇದನ್ನು ನೋಡಿದ ವೃದ್ಧ ದಂಪತಿ ದಂಗಾಗಿದ್ದಾರೆ. ಸರಿಯಾಗಿ ವಿಚಾರಿಸಿದಾಗ ಇವರ ಮನೆಯನ್ನು ಇವರ ಒಪ್ಪಿಗೆ ಇಲ್ಲದೆ ಮಗ ಮಾರಾಟ ಮಾಡಿದ್ದಾನೆ. ಮನೆ ಖರೀದಿ ಮಾಡಿದ ಮಹಿಳೆ ದಂಪತಿಗೆ ನೊಟೀಸ್ ಕಳುಹಿಸಿದ್ದಾಳೆ. ಮನೆ ಖಾಲಿ ಮಾಡುವಂತೆ ನೊಟೀಸ್ ನಲ್ಲಿ ಸೂಚನೆ ಇದೆ.
ವಯಸ್ಸಾದ ಮೇಲೆ ಸುಖವಾಗಿರಬೇಕು ಅಂದ್ರೆ ಯವ್ವೌನದಲ್ಲಿ ಈ ಕೆಲ್ಸ್ ಮಾಡಿ ಅಂತಾನೆ ಚಾಣಕ್ಯ!
ಸಿಗಲಿಲ್ಲ ಕಾನೂನು ಬೆಂಬಲ : ಇಬ್ಬರೂ ಕಾನೂನು ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಕಾನೂನು ಕೂಡ ಇವರ ಕೈ ಹಿಡಿದಿಲ್ಲ. ಯಾಕೆಂದ್ರೆ ಮನೆ ಮಗನ ಹೆಸರಿನಲ್ಲಿತ್ತು. ಮಗ ಯಾಕೆ ಹೀಗೆ ಮಾಡಿದ ಎನ್ನುವುದು ನಮಗೆ ಅರ್ಥವಾಗ್ತಿಲ್ಲ ಎನ್ನುತ್ತಾರೆ ದಂಪತಿ. ಅಮೆರಿಕಾದಲ್ಲಿ ಇಂಥ ಘಟನೆ ಮಾಮೂಲಿಯಾಗಿದೆ. ಅನೇಕರು ತಮ್ಮ ಪಾಲಕರ ಆಸ್ತಿ, ಹಣ ಕಸಿದುಕೊಂಡು ಅವರನ್ನು ಬೀದಿಗೆ ತಳ್ಳುತ್ತಿದ್ದಾರೆ. ದಂಪತಿ ಕೈನಲ್ಲಿರುವ ಹಣ ಹೊಸ ಮನೆ ಖರೀದಿಗೆ ಸಾಲುತ್ತಿಲ್ಲ. ಬಾಡಿಗೆ ಮನೆ ಪಡೆಯಲೂ ಆಗ್ತಿಲ್ಲ. ಸದ್ಯ ದಂಪತಿ ಮಗಳ ಮನೆಯಲ್ಲಿ ವಾಸವಾಗಿದ್ದಾರೆ.