
ಎಂಗೇಜ್ಮೆಂಟ್ ಆದ ಬಳಿಕ ಭಾವಿ ಪತ್ನಿಯನ್ನು ನೋಡಿದ ಈಗ ನಿನ್ನ ನೋಡಿದ್ರೆ ನನಗೆ ಮೂಡ್ ಬರಲ್ಲ. ನನಗೆ ಇದಾಗಲೇ ನಾಲ್ವರು ಗರ್ಲ್‌ಫ್ರೆಂಡ್ಸ್ ಇದ್ದು, ಅವರೇ ಬೆಸ್ಟ್ ಎಂದು ಭಾವಿ ಪತಿ, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಶಹಜಹಾನ್ ಹೇಳಿದ್ದರಿಂದ ನೊಂದು ಯುವತಿ ಸಾವಿಗೆ ಶರಣಾಗಿರುವ ಶಾಕಿಂಗ್ ಘಟನೆ ನಡೆದಿದೆ. ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯ ಚಿನ್ನ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮದುವೆ ಕ್ಯಾನ್ಸಲ್ ಆಗಿದ್ದರಿಂದ 26 ವರ್ಷದ ರೆಹಾನಾ ಎಂಬುವವರು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿನ ಹಾದಿ ಹಿಡಿದಿದ್ದಾರೆ.
ಆಂಧ್ರಪ್ರದೇಶದವರಾದ ಶೆಹಜಹಾನ್ ಮತ್ತು ರೆಹಾನಾ ಎಂಗೇಜ್ಮೆಂಟ್ ಕಳೆದ ಫೆಬ್ರುವರಿ 15ರಂದು ನಡೆದಿತ್ತು. ಕಡಪ ನಿವಾಸಿ ರೆಹಾನಾ ತನ್ನ ಎಂ.ಎಸ್ಸಿ ಮುಗಿಸಿದ್ದರು. ಪ್ರೊದ್ದತ್ತೂರಿನ ನಿವಾಸಿ ಶಹಜಹಾನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶಹಜಹಾನ್ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಅವರ ಮದುವೆ ಆಗಸ್ಟ್‌ನಲ್ಲಿ ನಿಗದಿಯಾಗಿತ್ತು. ಅವರ ನಿಶ್ಚಿತಾರ್ಥದ ನಂತರ, ದಂಪತಿ ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತಿದ್ದರು ಮತ್ತು ಆಗಾಗ್ಗೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.
ಇನ್ನೇನು ಮದುವೆ ಹತ್ತಿರ ಬರುತ್ತಿರುವಾಗಲೇ ಶಹಜಹಾನ್ಗೆ ಭಾವಿ ಪತ್ನಿ ಬೋರ್ ಆಗ ತೊಡಗಿದರು. ನಿನ್ನನ್ನು ಇಷ್ಟಪಡುವುದಿಲ್ಲ, ನಿನ್ನ ನೋಡಿದ್ರೆ ಯಾವುದೇ ಭಾವನೆ ಬರಲ್ಲ. ನನಗೆ ಬಹು ಸಂಬಂಧಗಳಿವೆ ಮತ್ತು ನಾಲ್ಕು ಗರ್ಲ್ ಫ್ರೆಂಡ್ಸ್ ಇದ್ದಾರೆ ಎಂದಿದ್ದಾನೆ. ಆರಂಭದಲ್ಲಿ, ರೆಹಾನಾ ಅವನ ಹೇಳಿಕೆಗಳನ್ನು ಕೇವಲ ತಮಾಷೆ ಎಂದು ಭಾವಿಸಿ ತಳ್ಳಿಹಾಕಿದರು. ಆದಾಗ್ಯೂ, ಅವನು ಪದೇ ಪದೇ ಅದೇ ಮಾತನ್ನು ಹೇಳಿದಾಗ, ಆಕೆ ಖಿನ್ನತೆಗೆ ಒಳಗಾಗಿದ್ದರು. ಕೊನೆಗೆ ಭಾವಿ ಪತಿ ಹೇಳುತ್ತಿರುವುದು ನಿಜ ಎಂದು ತಿಳಿದಿದೆ. ಕೊನೆಗೆ 12 ಪುಟಗಳ ಆತ್ಮ*ಹತ್ಯೆ ಪತ್ರ ಬರೆದು ಸಾವಿಗೆ ಶರಣಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ 12 ಪುಟಗಳ ಪತ್ರವನ್ನು ವಶಪಡಿಸಿಕೊಂಡರು, ಅದರಲ್ಲಿ ಆಕೆ ಎಲ್ಲಾ ವಿಷಯ ಬರೆದಿದ್ದಾರೆ. ರೆಹಾನಾಳ ತಂದೆ ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಶಹಜಹಾನ್ ನಾಪತ್ತೆಯಾಗಿದ್ದಾನೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತಮ್ಮ ಮಗಳು ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದಳು. ಶೆಹಜಹಾನ್ ತೀವ್ರವಾಗಿ ಕುಡಿತದ ಚಟಕ್ಕೆ ಒಳಗಾಗಿದ್ದ. ಆತನಿಗೆ ಹಲವಾರು ಸಂಬಂಧಗಳು ಇದ್ದವು. ತನ್ನ ತಂದೆ ಫೋರ್ಸ್ ಮಾಡಿದ್ದಕ್ಕೆ ಈ ಮದುವೆಗೆ ಒಪ್ಪಿಕೊಂಡಿದ್ದ. ಅದೆಲ್ಲ ಮೊದಲು ನಮಗೆ ತಿಳಿಯಲೇ ಇಲ್ಲ. ಈಗ ಎಲ್ಲಾ ವಿಷಯ ಬೆಳಕಿಗೆ ಬರುತ್ತಿದೆ, ಆದರೆ ನಮ್ಮ ಮಗಳು ಈ ಹೆಜ್ಜೆ ಇಟ್ಟುಬಿಟ್ಟಿದ್ದಾಳೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.