
ಈಗ ಮದುವೆ ಅನ್ನೋದು ಏಳು ಜನ್ಮಕ್ಕಿಂತಲೂ ಹೆಚ್ಚಿನ ಜನ್ಮಗಳ ಅನುಬಂಧವಾಗಿ ಮಾರ್ಪಟ್ಟಿದೆ. ಹೆಣ್ಣು ಸಿಗಲ್ಲ, ಸರಿಯಾದ ವರ ಸಿಗಲ್ಲ ಅನ್ನೋ ಆರೋಪ. ಇತ್ತ ಸಂಸಾರ ಸಾಗಿಸುವುದೇ ಕಷ್ಟ. ಹೀಗೆ ಸಾವಿರ ಸಮಸ್ಯೆಗಳು. ಇತ್ತೀಚಿನ ದಿನಗಳಲ್ಲಿ ವಧು ವರರ ಹುಡುಕಾಟ ಮ್ಯಾಟ್ರಿಮೋನಿ ಸೈಟ್‌ಗಳ ಮೂಲಕ ಹೆಚ್ಚಾಗಿ ನಡೆಯುತ್ತದೆ. ಹಲವು ಬಾರಿ ವರ ಅಥವಾ ವಧುವಿನ ಬೇಡಿಕೆ ಭಾರಿ ಚರ್ಚೆಯಾಗುತ್ತಿದೆ. ಇದೀಗ ವರನ ಬೇಡಿಕೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ವರ 37ರ ಹರೆಯದ ಐಐಟಿ. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ. ಈತ ವಿಚ್ಚೇದಿತ. ಈ ವರನಿಗೆ 30ರ ಹರೆಯದ ಕನ್ಯೆ ಬೇಕಿದೆ. ಆಕೆ ಬ್ರಾಹ್ಮಣ ಸಮುದಾಯದ ಹುಡುಗಿ ಆಗಿರಬೇಕು, ವರ್ಜಿನ್ ಆಗಿರಬೇಕು ಎಂಬ ಷರತ್ತು ವಿಧಿಸಿದ್ದಾನೆ. ಇದೇ ವಿವಾದಕ್ಕೆ ಕಾರಣಾಗಿದೆ.
ಮ್ಯಾಚ್‌ಮೇಕರ್ ಹಾಗೂ ಡೇಟಿಂಗ್ ಕೋಚ್ ಒಂಡ್ರಿಲ್ಲಾ ಕಪೂರ್ ಮ್ಯಾಟ್ರಿಮೋನಿ ಸೈಟ್‌ನಲ್ಲಿ ವರನ ಬೇಡಿಕೆ ನೋಡಿ ಅಚ್ಚರಿಗೊಂಡಿದ್ದಾರೆ. ಈ ಕುರಿತು ವಿಡಿಯೋ ಮಾಡಿ ಚರ್ಚೆ ಹುಟ್ಟುಹಾಕಿದ್ದಾರೆ. ಇದೀಗ ಚರ್ಚೆ ಭಾರಿ ಸಂಚಲನ ಸೃಷ್ಟಿಸಿದೆ. ಇಲ್ಲಿ ವರ ಪ್ರತಿಷ್ಠಿತ ಕಂಪನಿಯಲ್ಲಿ ಉತ್ತಮ ವೇತನ ಪಡೆಯುತ್ತಿದ್ದಾನೆ. ಎಲ್ಲವೂ ಸರಿ, ಆದರೆ ಆತನ ಬೇಡಿಕೆ ಬಾರಿ ವಿವಾದ ಸೃಷ್ಟಿಸಿದೆ.
ಕಪೂರ್ ತಮ್ಮ ವಿಡಿಯೋದಲ್ಲಿ ಈ ಬೇಡಿಕೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಇಲ್ಲಿ ವರನ ವಯಸ್ಸು 37. ಇಷ್ಟೇ ಅಲ್ಲ ಆತ ಡಿವೋರ್ಸಿ. ಈತ ಬಯಸುತ್ತಿರುವುದು ಮದುವೆಯಾಗದ, ಆಕೆ ಯಾವುದೇ ರಿಲೇಶನ್‌ಶಿಪ್‌ನಲ್ಲಿ ಇಲ್ಲದ, ವರ್ಜಿನ್ ಆಗಿರುವ ಹುಡುಗಿ ಆಗಿರಬೇಕು ಎಂದು. ಈತನ ಬಳಿ ಸ್ಯಾಲರಿ ಇದೆ, ದುಡ್ಡಿದೆ ಎಂದು ಕೇಳುವುದಕ್ಕೂ, ಬೇಡಿಕೆ ಇಡುವುದಕ್ಕೂ ಒಂದು ಮಿತಿ ಇಲ್ಲವೇ ಎಂದು ಕಪೂರ್ ಹೇಳಿದ್ದಾರೆ.
ಕಪೂರ್ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಪರ ವಿರೋಧಗಳು ವ್ಯಕ್ತವಾಗಿ. ಪುರುಷ ತಾನು ಮದುವೆಯಾಗಿ ಡಿವೋರ್ಸ್ ಪಡೆದಿದ್ದಾನೆ. ಆದರೆ ತನಗೆ 30ರ ಹರೆಯದ ಮದುವೆಯಾಗದ, ವರ್ಜಿನ್ ಕನ್ಯೆ ಬೇಕು ಎಂದು ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಪರ ವಾದಗಳು ವ್ಯಕ್ತವಾಗಿದೆ. ಆತನ ಬೇಡಿಕೆ ಹೇಳಿದ್ದಾನೆ. ಮುಕ್ತವಾಗಿ ಹೇಳಿಕೊಂಡಲ್ಲಿ ತಪ್ಪೇನಿದೆ. ಈ ಬೇಡಿಕೆ ನೋಡಿ ಆತನ ಮದುವೆಯಾಗಲು ಯಾರಾದರೂ ಮುಂದೆ ಬಂದರೆ ಅದರಲ್ಲಿ ತಪ್ಪೇನಿದೆ. ಇಲ್ಲಿ ಯಾವುದನ್ನು ಮುಚ್ಚಿಟ್ಟು ಮದುವೆಯಾಗುತ್ತಿಲ್ಲ. ಸಂಸಾರದಲ್ಲಿ ಗಂಡ ಹೆಂಡತಿ ನಡುವೆ ರಹಸ್ಯಗಳು ಇರಬಾರದು. ಇಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಹೇಳಲಾಗಿದೆ. ಹೀಗಾಗಿ ಆತನ ಬೇಡಿಕೆಯಲ್ಲಿರುವ ತಪ್ಪೇನು ಎಂದು ಹಲವರು ಪ್ರಶ್ನಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.