ಸೌಂದರ್ಯ, ಮಹತ್ವಾಕಾಂಕ್ಷೆ, ಸೆನ್ಸ್ ಆಫ್ ಹ್ಯೂಮರ್, ವ್ಯಕ್ತಿತ್ವ...ಇವೆಲ್ಲ ನಮ್ಮನ್ನು ಕೆಲವು ವ್ಯಕ್ತಿಗಳ ಕಡೆಗೆ ಆಕರ್ಷಿತರಾಗುವಂತೆ ಮಾಡಬಲ್ಲವು. ನಾವೂ ಸಹ ಈ ಗುಣಗಳಿಂದ ಇತರರನ್ನು ಸೆಳೆಯಬಲ್ಲೆವು. ಆದರೆ, ಇವನ್ನೂ ಮೀರಿದ ಹಲವು ಅಂಶಗಳು ಇಲ್ಲಿ ಪ್ರಭಾವ ಬೀರುತ್ತವೆ.
ಎಲ್ಲೋ ಒಂದು ಕಡೆ ಅವರನ್ನು ಭೇಟಿಯಾಗಿರುತ್ತೇವೆ. ಪರಸ್ಪರ ಕಾಂಟ್ಯಾಕ್ಟ್ ನಂಬರ್ ಶೇರ್ (Share) ಮಾಡಿಕೊಂಡಿರುತ್ತೇವೆ. ಹಾಗೆಯೇ ಚಾಟಿಂಗ್ (Chating), ಮಾತುಕತೆಗಳು ಶುರುವಾಗುತ್ತವೆ. ಅವರೊಂದಿಗೆ ಮಾತನಾಡಿದರೆ ಖುಷಿ(Happy)ಯಾಗುತ್ತದೆ, ಸದಾಕಾಲ ಅವರ ಸನಿಹ(Near), ಸಲಹೆ ಬೇಕು ಎನಿಸುತ್ತದೆ. ಇಂಥದ್ದೊಂದು ಸಂಬಂಧ (Relationship) ಎಲ್ಲಿಯವರೆಗೆ ಬೇಕಿದ್ದರೂ ಹೋಗಿ ತಲುಪಬಹುದು. ಅಷ್ಟಕ್ಕೂ ನಿಮ್ಮನ್ನು ಅವರತ್ತ ಸೆಳೆದಿರುವುದು ಯಾವ ಅಂಶ ಗೊತ್ತೇನು? ಅದನ್ನು ಗುರುತಿಸಲು ಸಾಧ್ಯವಾಗುವುದು ಕಷ್ಟ ಕಷ್ಟ. ಆದರೆ, ಯಾರತ್ತಲಾದರೂ ನಾವು ಆಕರ್ಷಿತ(Attraction)ರಾಗಲು ಕೆಲವು ಅಂಶಗಳ ಪ್ರಭಾವ ಇದ್ದೇ ಇರುತ್ತದೆ. |
ನೀವೊಮ್ಮೆ ವಿಚಾರ ಮಾಡಿ, ನಮಗೆ ಯಾರೆಂದರೆ ಅವರಲ್ಲಿ ಆಸಕ್ತಿ (Interest) ಮೂಡುವುದಿಲ್ಲ, ಆಕರ್ಷಣೆ, ಸೆಳೆತ ಉಂಟಾಗುವುದಿಲ್ಲ. ವಿಭಿನ್ನ ಲಿಂಗಿಗಳು ಪರಸ್ಪರ ಆಕರ್ಷಿತವಾಗುವುದು ಸಹಜವಾಗಿದ್ದರೂ ಕೆಲವೇ ಕೆಲವು ಮಂದಿ ಮಾತ್ರ ನಮ್ಮೊಳಗೆ ಪ್ರವೇಶ ಪಡೆಯಬಲ್ಲರು. ಒಂದೊಮ್ಮೆ ಅವರೊಂದಿಗೆ ಸ್ನೇಹ ಸಾಧ್ಯವಾಗದಿದ್ದರೂ ಅವರು ಸ್ಮೃತಿಪಟಲದಲ್ಲಿ ಸ್ಥಿರವಾಗಿರುತ್ತಾರೆ. ಹಾಗಿದ್ದರೆ ಮತ್ತದೇ ಪ್ರಶ್ನೆ, ಅವರತ್ತ ನಮ್ಮನ್ನು ಸೆಳೆಯುವುದು ಯಾವ ಅಂಶ?
ಹೌದು, ಯಾರೊಂದಿಗಾದರೂ ನಮಗೆ ಸ್ನೇಹ (Friendship) ಉಂಟಾಗಲು, ಅವರತ್ತ ಆಕರ್ಷಿತರಾಗಲು ನಮ್ಮ ಅರಿವಿಲ್ಲದ ಹಲವು ಅಂಶಗಳು ಕ್ರಿಯಾಶೀಲವಾಗಿರುತ್ತವೆ.
• ಸಾಮೀಪ್ಯ (Proximity)
ಸಿನಿಮಾ ಅಥವಾ ಸೀರಿಯಲ್ ಗಳಲ್ಲಿ ಒಟ್ಟಾಗಿ ಪಾತ್ರ ಮಾಡಿದವರು ನಿಜ ಜೀವನದಲ್ಲೂ ಡೇಟಿಂಗ್ ಮಾಡುವುದು ಅತಿ ಸಾಮಾನ್ಯ ವಿಚಾರ. ಪರಸ್ಪರರ ಸಾಮೀಪ್ಯ ಅವರ ನಡುವೆ ಸೆಳೆತ ಉಂಟುಮಾಡಬಲ್ಲದು. ಅಷ್ಟೇ ಏಕೆ? ಒಂದೇ ಕಡೆ ಕೆಲಸ ಮಾಡುವ ಸಹೋದ್ಯೋಗಿಗಳ ನಡುವೆ ಆಕರ್ಷಣೆ, ಸ್ನೇಹ, ಕೆಲವೊಮ್ಮೆ ಲೈಂಗಿಕ ಸಂಬಂಧವೂ ಇರುವುದು ಕಂಡುಬರುತ್ತದೆ. ಇಲ್ಲಿಯೂ ಸಾಮೀಪ್ಯವೇ ಪ್ರಧಾನ ಅಂಶ. ದಿನವೂ ಒಬ್ಬರನ್ನು ಭೇಟಿಯಾದಾಗ ಅವರ ಇಷ್ಟಾನಿಷ್ಟಗಳ ಪರಿಚಯವಾಗುತ್ತದೆ. ಒಂದೇ ರೀತಿಯ ಹವ್ಯಾಸ, ಸಮಾನ ಅಭಿರುಚಿಗಳಿಂದ ಆಕರ್ಷಣೆ ಉಂಟಾಗುತ್ತದೆ.
undefined
• ಆರೋಗ್ಯ (Health) ಹಾಗೂ ದೈಹಿಕ ಸದೃಢತೆ (Fitness)
ಆರೋಗ್ಯದಿಂದ ನಳನಳಿಸುವವರು, ದೈಹಿಕವಾಗಿ ಸದೃಢವಾಗಿರುವವರು ಹಾಗೂ ಉತ್ತಮ ಸಂತಾನೋತ್ಪತ್ತಿ (Fertility) ಸಾಮರ್ಥ್ಯ ಹೊಂದಿರುವವರು ಇತರರನ್ನು ಬೇಗ ಆಕರ್ಷಿಸುತ್ತಾರೆ. ಹೀಗಾಗಿ, ಸಹಜವಾಗಿ ಕಿರಿ ವಯಸ್ಸಿನ ಮಹಿಳೆಯರ ಕಡೆಗೆ ಎಲ್ಲರೂ ಬೇಗ ಆಕರ್ಷಿತರಾಗುತ್ತಾರೆ. ಹಾಗೆಯೇ 40 ಮೀರದ ಸದೃಢ ಪುರುಷರ ಕಡೆಗೂ ಮಹಿಳೆಯರು ಆಸಕ್ತರಾಗುತ್ತಾರೆ. ಮುಖದ ಲಕ್ಷಣಗಳು, ಮುಖದ ರಚನೆ, ಮೈಮಾಟ, ಮುಖ್ಯವಾಗಿ, ಭುಜ, ಸೊಂಟ ಹಾಗೂ ಹೊಟ್ಟೆಯ ಭಾಗ ನೀಟಾಗಿದ್ದರೆ ಆಕರ್ಷಣೆ ಹೆಚ್ಚು ಎನ್ನುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.
ಮಗಳ ಮಗುವನ್ನೇ ಹೆತ್ತುಕೊಟ್ಟ ತಾಯಿ..! ಇದು ಭಾರತದ ಮೊದಲ ಬಾಡಿಗೆ ತಾಯ್ತನದ ಕಥೆ
• ಸಾಮಾಜಿಕ (Social) ವಾತಾವರಣದ ಪ್ರಭಾವ
ಶ್ರೀಮಂತ ವ್ಯಕ್ತಿಗಳು, ಅತ್ಯುನ್ನತ ಹುದ್ದೆಯಲ್ಲಿರುವವರು, ಉನ್ನತ ವ್ಯಾಸಂಗ ಮಾಡಿದವರು, ಸಾಮಾಜಿಕವಾಗಿ ಗುರುತಿಸಿಕೊಂಡವರತ್ತ ಮಹಿಳೆಯರು ಆಕರ್ಷಿತರಾಗುವುದು ಹೆಚ್ಚು. ಶ್ರೀಮಂತ ಹಾಗೂ ಪ್ರೌಢ ವ್ಯಕ್ತಿ ತಮ್ಮನ್ನು ಹಾಗೂ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯೂ ಮಹಿಳೆಯರಲ್ಲಿದೆ. ಹೀಗಾಗಿ, ಅವರು ಅಂಥವರ ಸ್ನೇಹವನ್ನು ಇಷ್ಟಪಡುತ್ತಾರೆ.
• ಸಕಾರಾತ್ಮಕ ವ್ಯಕ್ತಿತ್ವ (Possitive Personality)
ವ್ಯಕ್ತಿತ್ವವೂ ಆಕರ್ಷಣೆಗೆ ಕಾರಣವಾಗುತ್ತದೆ. ಚೆನ್ನಾಗಿ ಮಾತನಾಡುವ, ಮಾತುಮಾತಿಗೂ ವಿನೋದವಾಗಿರುವ, ಸದಾ ಸಕಾರಾತ್ಮಕ ನಿಲುವು ಹೊಂದಿರುವವರತ್ತ ಹೆಚ್ಚು ಜನ ಆಕರ್ಷಿತರಾಗುತ್ತಾರೆ.
Extramarital Affairs : ಈ ಸಂಬಂಧ ಅತಿ ಬೇಗ ಕೊನೆಯಾಗುವುದೇಕೆ?
• ಹಾರ್ಮೋನ್ (Harmone) ಕೈಚಳಕ
ಹಿಂದೆ ನಡೆದಿದ್ದ ಒಂದು ಅಧ್ಯಯನದ ಪ್ರಕಾರ, ಟೆಸ್ಟೋಸ್ಟಿರಾನ್ (Testostirone) ಮಟ್ಟ ಅತ್ಯುತ್ತಮವಾಗಿರುವ ಪುರುಷರತ್ತ ಮಹಿಳೆಯರು ಆಕರ್ಷಿತರಾಗುತ್ತಾರೆ. ಟೆಸ್ಟೋಸ್ಟಿರಾನ್ ಸೆಕ್ಸ್ ಹಾರ್ಮೋನ್ ಆಗಿದೆ ಎನ್ನುವುದು ವಿಶೇಷ. ಕೆಲವು ವರ್ಷಗಳ ಹಿಂದೆ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯ ನಡೆಸಿದ್ದ ಒಂದು ಅಧ್ಯಯನದ ಪ್ರಕಾರ, ಮಹಿಳೆಯರ ಋತುಚಕ್ರ(Cycle)ವೂ ಇಲ್ಲಿ ಪ್ರಭಾವ ಬೀರುತ್ತದೆ. ಅಂಡಾಣು ಬಿಡುಗಡೆಯಾಗುವ ಋತುಚಕ್ರದ ಮಧ್ಯದ ಸಮಯದಲ್ಲಿ ಮಹಿಳೆಯರು ಸ್ವಲ್ಪ ಚೆಲ್ಲಾಗಿರುವ, ಬೇಜವಾಬ್ದಾರಿ ಪುರುಷರತ್ತ ಸೆಳೆಯಲ್ಪಟ್ಟರೆ, ಮಾಸಿಕ ಋತುಸ್ರಾವ ಸಮೀಪವಾಗುತ್ತಿರುವ ಸಮಯದಲ್ಲಿ ಜವಾಬ್ದಾರಿಯುತ ವ್ಯಕ್ತಿಯನ್ನು ಇಷ್ಟಪಡುತ್ತಾರೆ!