ಭಾರತದ ಶ್ರೀಮಂತ ಉದ್ಯಮಿ ರತನ್ ಟಾಟಾ, ಕೋಟ್ಯಾಂತರ ಭಾರತೀಯರ ರೋಲ್ ಮಾಡೆಲ್. ಸರಳ ವ್ಯಕ್ತಿತ್ವದ ಟಾಟಾರನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬಿಲಿಯನೇರ್ ಆದರೂ ಟಾಟಾ ಮದುವೆಯಾಗದೆ ಉಳಿದ್ದೇಕೆ? ಅವ್ರಿಗೆ ಯಾವತ್ತೂ ಪ್ರೀತಿಯಾಗಲೇ ಇಲ್ವಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ರತನ್ ಟಾಟಾ, ಭಾರತೀಯರು ಹೆಮ್ಮೆಪಡುವ ಹೆಸರು. ಪ್ರಪಂಚದಾದ್ಯಂತ ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಅದ್ಭುತ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಬಿಸಿನೆಸ್ ಲೋಕದಲ್ಲಿ ಸಾಧನೆಯ ಹೊರತಾಗಿಯೂ ಅವರ ವೈಯುಕ್ತಿಕ ಜೀವನ ಆಗಾಗ ಮುನ್ನಲೆಗೆ ಬರುತ್ತದೆ. ಬಿಲಿಯನೇರ್ ಆದರೂ ಅವರು ಯಾಕೆ ಮದುವೆಯಾಗಲ್ಲಿಲ್ಲ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ತನ್ನ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಾಧಿಸಿದ್ದರೂ, ಈ ಸಕ್ಸಸ್‌ಫುಲ್ ಉದ್ಯಮಿ ಎಂದಿಗೂ ಮದುವೆಯಾಗಲಿಲ್ಲ. ಹೌದು, ರತನ್ ಟಾಟಾ ಅವಿವಾಹಿತರು. ಅವರು ಯಾಕೆ ಅವಿವಾಹಿತರಾಗಿಯೇ ಉಳಿದರು ಎಂಬ ಮಾಹಿತಿಯನ್ನು ಅವರು ಇತ್ತೀಚಿಗೆ ಹಂಚಿಕೊಂಡರು.
ರತನ್ ಟಾಟಾ ಯಾಕೆ ಮದುವೆಯಾಗಲಿಲ್ಲ?
ಹ್ಯೂಮನ್ಸ್ ಆಫ್ ಬಾಂಬೆ ಹಂಚಿಕೊಂಡ ಪಾಡ್‌ಕ್ಯಾಸ್ಟ್‌ನ ಕಿರು ಆಡಿಯೊ ಕ್ಲಿಪ್‌ನಲ್ಲಿ, ಟಾಟಾ ಅವರು ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾಗ ಅವರು ಬಹುತೇಕ ವಿವಾಹ (Marriage)ವಾದರು ಎಂಬುದನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ನಾನು ಹಲವಾರು ಸಂಬಂಧ (Relationship)ಗಳನ್ನು ಹೊಂದಿದ್ದೆ, ಆದರೆ ಯಾವುದೂ ವೈವಾಹಿಕ ಬಂಧವಾಗಿ ಬದಲಾಗಲಿಲ್ಲ ಎಂದು ತಿಳಿಸಿದ್ದಾರೆ.
Interesting Facts: ಮುಕೇಶ್ ಅಂಬಾನಿ, ರತನ್ ಟಾಟಾ ಅವರೆಲ್ಲ ಈ ಬಣ್ಣದ ಬಟ್ಟೆ ಹಾಕೊಲ್ಲವೇಕೆ?
ಮನಸಾರೆ ಪ್ರೀತಿಸಿದ್ದರೂ ಆಕೆಯಿಂದ ದೂರವಾಗಿದ್ದ ಬಿಲಿಯನೇರ್
ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾಗ ಒಬ್ಬಾಕೆಯನ್ನು ಪ್ರೀತಿ (Love)ಸುತ್ತಿದ್ದೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ಅಜ್ಜಿಯ ಕಾರಣದಿಂದಾಗಿ ದೇಶಕ್ಕೆ ಹಿಂದಿರುಗಬೇಕಾಯಿತು. ಹುಡುಗಿ (Girl) ಕೂಡ ಭಾರತದಲ್ಲಿ ನನ್ನನ್ನು ಭೇಟಿ ಮಾಡಲು ಮುಂದಾಗಿದ್ದಳು. ಆದರೆ, ಭಾರತ-ಚೀನಾ ಯುದ್ಧ ಪ್ರಾರಂಭವಾದ ನಂತರ ಹುಡುಗಿಯ ಪೋಷಕರು (Parents) ಭಾರತಕ್ಕೆ ತೆರಳಲು ಅವಕಾಶ ನೀಡಲಿಲ್ಲ ಮತ್ತು ಇದು ಟಾಟಾ ಸಂಬಂಧ ಮುರಿಯಲು ಕಾರಣವಾಯಿತು ಎಂದು ತಿಳಿಸಿದ್ದಾರೆ.
'ಜೀವನದಲ್ಲಿ ಸಂಗಾತಿ ಇಲ್ಲ ಎಂಬುದರ ಬಗ್ಗೆ ನಾನು ಯಾವತ್ತೂ ವಿಷಾದ ವ್ಯಕ್ತಪಡಿಸುವುದಿಲ್ಲ' ಎಂದು ರತನ್ ಟಾಟಾ ಹೇಳಿದ್ದಾರೆ. ಸಂದರ್ಶನದಲ್ಲಿ ರತನ್ ಟಾಟಾ, ತಮ್ಮ ಪೋಷಕರ ವಿಚ್ಛೇದನದ (Divorce) ನಂತರ ತಾವು ಅಜ್ಜಿಯೊಂದಿಗೆ ವಾಸಿಸುತ್ತಿರುವಾಗಿ ತಿಳಿಸಿದರು. 'ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೆ ಮತ್ತು ಪ್ರಯಾಣಿಸುತ್ತಿದ್ದೆ, ನನಗಾಗಿ ಸ್ವಲ್ಪ ಸಮಯ ನೀಡಲು ಸಾಧ್ಯವಾಗಲ್ಲಿಲ್ಲ. ಆದರೆ ಇಂದು ನಾನು ಹಿಂತಿರುಗಿ ನೋಡಿದಾಗ, ನಾನು ಯಾವುದಕ್ಕೂ ವಿಷಾದಿಸುವುದಿಲ್ಲ, ಒಂದು ಸೆಕೆಂಡ್ ಕೂಡ' ಎಂದು ಟಾಟಾ ಸ್ಪಷ್ಟವಾಗಿ ತಿಳಿಸಿದ್ದಾರೆ.
ಅಂಬಾನಿ ಅಳಿಯನ ಕಂಪನಿಯ ಷೇರು ಖರೀದಿಸಿದ ರತನ್ ಟಾಟಾ: ಪಿರಾಮಲ್ ಕಂಪನಿಯ ಭವಿಷ್ಯವೇ ಬದಲು!
ರತನ್ ಟಾಟಾ ಬಾಲ್ಯದ ಜೀವನ ಹೀಗಿತ್ತು?
ರತನ್ ಟಾಟಾ ಅವರ ತಂದೆ ನವಲ್ ಟಾಟಾ ಅವರನ್ನು ನವಾಜಬಾಯಿ ಮತ್ತು ಸರ್ ರತಂಜಿ ಟಾಟಾ ಅವರು ಕುಟುಂಬಕ್ಕೆ (Family) ದತ್ತು ಪಡೆದರು. ನೇವಲ್ ಟಾಟಾ ಅವರು ಸೂನೂ ಕಮಿಶರಿಯಟ್ ಅವರನ್ನು ವಿವಾಹವಾದರು, ಅವರಿಗೆ ರತನ್ ಟಾಟಾ ಮತ್ತು ಜಿಮ್ಮಿ ಟಾಟಾ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಕೆಲವು ವರ್ಷಗಳ ನಂತರ, ನೇವಲ್ ಟಾಟಾ ಮತ್ತು ಸೂನೂ ಟಾಟಾ ಬೇರ್ಪಟ್ಟರು ಮತ್ತು ಇದು ಅವರ ಬಾಲ್ಯದ (Childhood) ಮೇಲೆ ಭಾರಿ ಪರಿಣಾಮ ಬೀರಿತು.
ಒಮ್ಮೆ ಹ್ಯೂಮನ್ಸ್ ಆಫ್ ಬಾಂಬೆಯೊಂದಿಗೆ ಥ್ರೋಬ್ಯಾಕ್ ಸಂದರ್ಶನದಲ್ಲಿ, ರತನ್ ಟಾಟಾ ತಮ್ಮ ಬಾಲ್ಯದ ನೆನಪುಗಳ ಬಗ್ಗೆ ಮಾತನಾಡಿದರು. ಅವರು ಸಂತೋಷದ ಬಾಲ್ಯವನ್ನು ಹೊಂದಿದ್ದಾರೆ ಎಂದು ಅವರು ಹಂಚಿಕೊಂಡರು, ಆದರೆ ಅವರ ಪೋಷಕರು ವಿಚ್ಛೇದನ ಪಡೆದಾಗ, ಅವರು ಬಹಳಷ್ಟು ಅಸ್ವಸ್ಥತೆ ಮತ್ತು ಕೋಪವನ್ನು ಎದುರಿಸಿದ್ದಾಗಿ ತಿಳಿಸಿದ್ದರು. ರತನ್ ಟಾಟಾ ಅವರು ತಮ್ಮ ತಾಯಿಯ ಎರಡನೇ ಮದುವೆಯ ನಂತರ ಸಾಕಷ್ಟು ಖಿನ್ನತೆಗೆ ಒಳಗಾದರು. ಸಹಪಾಠಿ ಗಳುಅವರನ್ನು ಚುಡಾಯಿಸುತ್ತಿದ್ದರು ಎಂಬುದಾಗಿ ಹೇಳಿದ್ದರು