
ಒಂದು ಹುಡುಗ ಹುಡುಗಿ ಯಾವಾಗಲೂ ಜೊತೆಯಾಗೇ ಇರುತ್ತಾರೆ, ಮಾತನಾಡುತ್ತಾರೆ ಎಂದಾದರೆ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿರಬಹುದೆಂದು ಎಲ್ಲರೂ ಅಂದುಕೊಳ್ತಾರೆ. ಆದರೆ ಆ ಹುಡುಗ ಹುಡುಗಿಯನ್ನು ಕೇಳಿದರೆ ಅವನು ನನ್ನ ಬೆಸ್ಟ್ ಫ್ರೆಂಡ್ ಅಥವಾ ಅವಳು ನನ್ನ ಗೆಳತಿ ಮಾತ್ರ ಎನ್ನುವ ಉತ್ತರ ಬರುತ್ತೆ.
ಪ್ರೀತಿ (Love) ಯ ಮೊದಲ ಹೆಜ್ಜೆಯೇ ಗೆಳೆತನ (Friendship) ಅಂತ ಹೇಳ್ತಾರೆ. ಸೆಲೆಬ್ರಿಟಿ (Celebrity) ಗಳು ಸೇರಿದಂತೆ ಅನೇಕರು ಬಾಲ್ಯದ ಗೆಳೆಯ, ಗೆಳತಿಯರನ್ನೇ ವರಿಸಿರುವುದನ್ನು ನಾವು ನೋಡಿದ್ದೇವೆ. ಅನೇಕ ಸಿನಿಮಾಗಳಲ್ಲೂ ಕೂಡ ಒಳ್ಳೆಯ ಫ್ರೆಂಡ್ಸ್ ಆಗಿದ್ದವರು ನಂತರ ಮದುವೆಯಾಗುವುದನ್ನು ನೋಡಿದ್ದೇವೆ. ಆದರೂ ಅನೇಕ ಯುವಕ ಯುವತಿಯರು ನಮ್ಮಿಬ್ಬರ ನಡುವೆ ಪ್ರೀತಿ ಗೀತಿ ಅಂತ ಏನೂ ಇಲ್ಲ. ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ. ಒಪೊಸಿಟ್ ಜಂಡರ್ ಜೊತೆ ಕೇವಲ ಫ್ರೆಂಡ್ ಶಿಪ್ ಮಾತ್ರ ಇದೆ ಎನ್ನುವುದು ವಾಸ್ತವವಲ್ಲ. ಗಂಡು ಹೆಣ್ಣಿನ ನಡುವೆ ಪರಸ್ಪರ ಆಕರ್ಷಣೆ ಇದ್ದೇ ಇರುತ್ತೆ. ಯುವಕರಾಗಲೀ ಅಥವಾ ಮದುವೆಯಾದವರೇ ಆಗಲೀ ಒಪೊಸಿಟ್ ಸೆಕ್ಸ್ ನವರು ಹೆಚ್ಚು ದಿನಗಳ ಕಾಲ ಗೆಳೆತನದಲ್ಲಿದ್ದರೆ ಅವರ ನಡುವೆ ಗೆಳೆತನಕ್ಕಿಂತ ಹೆಚ್ಚಿನದು ಎನ್ನುವ ಏನೋ ಒಂದು ಬಾಂಧವ್ಯ ಬೆಳೆಯುವುದು ಸಹಜ. ಹಾಗಾಗಿ ಒಬ್ಬ ಹುಡುಗ ಹಾಗೂ ಹುಡುಗಿಯ ಮಧ್ಯೆ ಕೇವಲ ಸ್ನೇಹ ಇರಲು ಸಾಧ್ಯವೇ ಇಲ್ಲ ಎಂದು ಈ ಅಧ್ಯಯನ ಹೇಳುತ್ತೆ.
ಬ್ಯೂಟಿಫುಲ್, ಕ್ಯೂಟ್ ಅನ್ನೋದೆಲ್ಲಾ ಬಿಟ್ಬಿಡಿ, ಹುಡುಗೀರು ಎಂಥಾ ಕಾಂಪ್ಲಿಮೆಂಟ್‌ಗೆ ಬೇಗ ಫಿದಾ ಆಗ್ತಾರೆ ತಿಳ್ಕೊಳ್ಳಿ
ಅಧ್ಯಯನ ಹೇಳೋದೇನು? : ಜರ್ನಲ್ ಆಫ್ ಸೋಷಿಯಲ್ ಎಂಡ್ ಪರ್ಸನಲ್ ರಿಲೇಶನ್ಶಿಪ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹುಡುಗ ಮತ್ತು ಹುಡುಗಿ ಸ್ನೇಹಿತರಾಗಲು ಸಾಧ್ಯವಿಲ್ಲ. ಈ ಹೇಳಿಕೆಯಲ್ಲಿ ಸತ್ಯವಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ. ವಿರುದ್ಧ ಲಿಂಗದವರೊಂದಿಗೆ ಒಳ್ಳೆಯ ಸ್ನೇಹಿತರಾಗಿರಬಹುದು ಎಂದು ಭಾವಿಸಿದರೂ ಗಂಡು ಹೆಣ್ಣಿನ ನಡುವೆ ಪರಸ್ಪರ ಆಕರ್ಷಣೆಯಾಗುತ್ತೆ ಕೆಲವೊಮ್ಮೆ ಸ್ನೇಹವನ್ನು ಮೀರಿ ರೊಮಾನ್ಸ್ ಕೂಡ ನಡೆಯಬಹುದು ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ.
ಹುಡುಗಿಯರಿಗೆ ಹೋಲಿಸಿದರೆ ಹುಡುಗರಿಗೆ ತನ್ನ ಗೆಳತಿಯನ್ನು ಕೇವಲ ಒಳ್ಳೆಯ ಫ್ರೆಂಡ್ ಆಗಿ ನೋಡಲು ಸಾಧ್ಯವಿಲ್ಲ ಅಥವಾ ಹಾಗೆ ಇರಲು ಅವರಿಗೆ ಹೆಚ್ಚು ಕಷ್ಟವಾಗುತ್ತೆ. ಅಧ್ಯಯನದಲ್ಲಿ ಒಪೊಸಿಟ್ ಸೆಕ್ಸ್ ಫ್ರೆಂಡ್ಶಿಪ್ ಬಗ್ಗೆ ಯುವಕ ಯುವತಿಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯ್ತು. ಅದರಿಂದ ಹುಡುಗರು ತಮ್ಮ ಫೀಮೇಲ್ ಫ್ರೆಂಡ್ಸ್ ಜೊತೆ ರೋಮಾನ್ಸ್ ಮಾಡುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಎನ್ನುವುದು ತಿಳಿದುಬಂದಿದೆ. ಅದೇ ಹುಡುಗಿಯರು ತಮ್ಮ ಗೆಳೆಯನ ಜೊತೆ ರೊಮಾನ್ಸ್ ಮಾಡುವ ಬಗ್ಗೆ ವಿಚಾರ ಮಾಡುವುದಿಲ್ಲ ಎಂದು ಅಧ್ಯಯನ ಹೇಳಿದೆ.
Viral Video: ಗರ್ಲ್ ಫ್ರೆಂಡ್ ಪರಿಚಯಿಸೋಕೆ ಮುಂದಾದ ಮಗ, ಅಮ್ಮ ಕೊಟ್ಟ ಶಾಕ್ ಇದು!
ಮದುವೆಯಾದ ಮಹಿಳೆ ಹಾಗೂ ಪುರುಷ ಕೂಡ ಫೆಂಡ್ಸ್ ಆಗಿರಲು ಸಾಧ್ಯವಿಲ್ಲ : ಸೋಷಿಯಲ್ ಎಂಡ್ ಪರ್ಸನಲ್ ರಿಲೇಶನ್ಶಿಪ್ ಬಗ್ಗೆ ನಡೆಸಿದ ಅಧ್ಯಯನದಲ್ಲಿ 249 ಮಂದಿ ವಯಸ್ಕರನ್ನು ಕೂಡ ಶಾಮೀಲು ಮಾಡಲಾಗಿತ್ತು. ಅವರ ಅಭಿಪ್ರಾಯದ ಮೇರೆಗೆ ಒಪೊಸಿಟ್ ಸೆಕ್ಸ್ ಫ್ರೆಂಡ್ ಶಿಪ್ ನ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಪಟ್ಟಿ ಮಾಡಲಾಯ್ತು. ಅದರ ಪ್ರಕಾರ ಅನೇಕ ಮಂದಿ ನಕಾರಾತ್ಮಕ ಪರಿಣಾಮ ಮತ್ತು ರೊಮ್ಯಾಂಟಿಕ್ ಅಟ್ರಾಕ್ಷನ್ ಬಗ್ಗೆಯೇ ಹೇಳಿದ್ದಾರೆ. ಮದುವೆಯಾದ ಪುರುಷ ಅಥವಾ ಮಹಿಳೆಯರು ಕೂಡ ಪರಸ್ಪರ ಒಳ್ಳೆಯ ಫ್ರೆಂಡ್ಸ್ ಆಗಿರುವುದು ಸಾಧ್ಯವಿಲ್ಲ ಎನ್ನುವುದೇ ಹಲವರ ಅಭಿಪ್ರಾಯವಾಗಿದೆ. ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ತಮ್ಮ ಒಪೊಸಿಟ್ ಜೆಂಡರ್ ನವರೊಂದಿಗೆ ಸ್ನೇಹವನ್ನು ಹೊಂದಿದ್ದರೆ ಅದರಿಂದ ಅವರು ಹೆಚ್ಚು ತೊಂದರೆಯನ್ನು ಅನುಭವಿಸುತ್ತಾರೆ ಅಥವಾ ಅವರಿಗೆ ತಮ್ಮ ವಿರುದ್ಧ ಲಿಂಗದವರೊಂದಿಗೆ ಫ್ರೆಂಡ್ ಶಿಪ್ ಮುಂದುವರೆಸುವುದು ಕಷ್ಟವಾಗುತ್ತದೆ ಎಂದು ಅಧ್ಯಯನ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.