Viral Video: ಗರ್ಲ್ ಫ್ರೆಂಡ್ ಪರಿಚಯಿಸೋಕೆ ಮುಂದಾದ ಮಗ, ಅಮ್ಮ ಕೊಟ್ಟ ಶಾಕ್ ಇದು!

By Suvarna News  |  First Published Aug 4, 2023, 12:36 PM IST

ಮಹಿಳೆ, ಮಹಿಳೆನೇ. ಆಕೆ ಯಾವಾಗ್ಲೂ ಕೆಲವೊಂದು ವಿಷ್ಯದಲ್ಲಿ ಬದಲಾಗಲ್ಲ. ಹುಡುಗಿ, ತನ್ನ ಹುಡುಗನ ವಿಷ್ಯದಲ್ಲಿ ಅಮ್ಮ ತನ್ನ ಮಗನ ವಿಷ್ಯದಲ್ಲಿ ತನ್ನದೇ ರೂಲ್ಸ್ ಫಾಲೋ ಮಾಡ್ತಾಳೆ. ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ  ವೈರಲ್ ಆಗಿರೋ ವಿಡಿಯೋದಲ್ಲಿ ನೀವಿದನ್ನು ನೋಡ್ಬಹುದು.


ಅವಳನ್ ಬಿಟ್ ..ಇವಳನ್ ಬಿಟ್.. ಮತ್ತ್ಯಾರನ್ನೋ ಮದುವೆಯಾಗುವ ಜಮಾನಾ ಇದು. ಇಲ್ಲಿ ಒಬ್ಬ ಹುಡುಗಿ ಅಥವಾ ಹುಡುಗ ಅನೇಕರನ್ನು ಪ್ರೀತಿಸಿ ಕೈಬಿಟ್ಟಿರುತ್ತಾರೆ. ಇದು ಬಹುತೇಕ ಎಲ್ಲರಿಗೂ ತಿಳಿದಿರುತ್ತೆ ಕೂಡ. ಇಷ್ಟಿದ್ರೂ ತಾನು ಪ್ರೀತಿ ಮಾಡುವ, ಮದುವೆಯಾಗುವ ಹುಡುಗ ಅಥವಾ ಹುಡುಗಿ ಮೊದಲು ಯಾರನ್ನೂ ಪ್ರೀತಿಸಿರಬಾರದು ಎಂದು ಬಯಸೋರೇ ಜಾಸ್ತಿ. ಹುಡುಗ ಮೊದಲು ಪ್ರೀತಿ ಮಾಡಿದ ಹುಡುಗಿ ಬಗ್ಗೆ ತಿಳಿದ್ರೆ ಒಂದು ಸ್ವಲ್ಪ ದಿನ ಹುಡುಗಿ ರಂಪಾಟ ಮಾಡೋದು ಇದೆ. ನನಗಿಂತ ಮೊದಲು ನನ್ನ ಹುಡುಗನ ಜೊತೆ ಸುತ್ತಾಡಿದ ಹುಡುಗಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ಆಕೆಗಿರುತ್ತದೆ. ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಕಾಟ ಕೊಡ್ತಾಳೆ. ಇದೊಂದು ವಿಷ್ಯವಾದ್ರೆ ಇನ್ನೊಂದು ಕಡೆ ಮೊದಲ ಬಾರಿ ಹುಡುಗನ ತಾಯಿ ಭೇಟಿಯಾಗೋವಾಗ ಹುಡುಗಿ ಎಷ್ಟೇ ಬೋಲ್ಡ್ ಇದ್ರೂ ಬೆವರುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಎರಡೂ ವಿಷ್ಯದ ಸಾರಾಂಶ ಹೊಂದಿರುವ ಅನೇಕ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದ ಜನರು ಅನೇಕ ರೀತಿಯ ಕಮೆಂಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ : @superhumour ಹೆಸರಿನ ಇನ್ಸ್ಟಾಗ್ರಾಮ್  (Instagram) ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಬಾಯ್ ಫ್ರೆಂಡ್ ತನ್ನ ಗರ್ಲ್ ಫ್ರೆಂಡ್ (Girl Friend)  ಜೊತೆ ಉದ್ಯಾನವನದಲ್ಲಿ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಮಧ್ಯೆ, ಅವನು ತನ್ನ ತಾಯಿಗೆ ವೀಡಿಯೊ (Video)  ಕರೆ ಮಾಡುತ್ತಾನೆ. ವಿಡಿಯೋದಲ್ಲಿ ಅವನು ತನ್ನ ಗೆಳತಿಯನ್ನು ತಾಯಿಗೆ ಪರಿಚಯಿಸುತ್ತಾನೆ. ಹಲೋ ಮಮ್ಮಿ ಎನ್ನುವ ಹುಡುಗ, ನಾನು ಹೇಳಿದ್ದೆನಲ್ಲ.. ನೋಡು, ನಿನ್ನ ಭಾವಿ ಸೊಸೆ ಇಲ್ಲಿದ್ದಾಳೆ ಎಂದು ತಾಯಿಗೆ ಹೇಳುತ್ತಾನೆ. ಇದಾದ ನಂತರ ಗೆಳತಿಯೂ ತಲೆಬಾಗಿ ತಾಯಿಗೆ ನಮಸ್ತೆ ಆಂಟಿ ಎನ್ನುತ್ತಾಳೆ.

Tap to resize

Latest Videos

ಸಂಭೋಗಕ್ಕಿಲ್ಲ ವಯಸ್ಸಿನ ಹಂಗು, 60ರ ಹರೆಯದಲ್ಲೂ ಚೆನ್ನಾಗಿಟ್ಟು ಕೊಳ್ಳಿ ಲೈಂಗಿಕ ಜೀವನ

ಬಹಿರಂಗವಾಯ್ತು ಮಗನ ರಹಸ್ಯ: ವಿಡಿಯೋ ಆರಂಭದಲ್ಲಿ ಎಲ್ಲವೂ ಸರಿಯಾಗೇ ಇತ್ತು. ಆದರೆ ಆ ನಂತ್ರ ತಾಯಿ ಬಾಂಬ್ ಸಿಡಿಸುತ್ತಾಳೆ. ತಾಯಿ ಹೇಳಿದ ಮಾತು ಕೇಳಿ ಗರ್ಲ್ ಫ್ರೆಂಡ್ ಕಂಗಾಲಾಗ್ತಾಳೆ. ಅಷ್ಟಕ್ಕೂ ತಾಯಿ ಏನು ಹೇಳ್ತಾಳೆ ಗೊತ್ತಾ?. ಅವತ್ತು ತೋರಿಸಿದ ಹುಡುಗಿಗಿಂತ ಇವಳು ಚೆನ್ನಾಗಿದ್ದಾಳೆ ಎನ್ನೋದಾ? 

ಕೋಪಗೊಂಡ ಹುಡುಗಿ.. ಕಾಲ್ ಕಟ್ : ತಾಯಿ ಬಾಯಿಂದ ಈ ಮಾತು ಕೇಳಿ ಬರ್ತಿದ್ದಂತೆ ಹುಡುಗಿ ಪ್ರಶ್ನಾರ್ಥಕ ಕಣ್ಣುಗಳಿಂದ ಹುಡುಗನನ್ನು ನೋಡಲಾರಂಭಿಸುತ್ತಾಳೆ. ಅವಳು ಯಾರು ಎಂದು ಕೇಳಲು ಶುರು ಮಾಡುತ್ತಾಳೆ. ಅದಕ್ಕೆ ಹೆದರಿದ ಹುಡುಗ ಯಾರೂ ಇಲ್ಲ ಎನ್ನುತ್ತಾನೆ. ಅಲ್ಲದೆ ತಮಾಷೆ ಮಾಡ್ಬೇಡ ಎಂದು ತಾಯಿಗೆ ಹೇಳ್ತಾನೆ. ತಾಯಿ ಏನೂ ಹೇಳೋದಿಲ್ಲ. ಇದ್ರಿಂದ ಅನುಮಾನಗೊಂಡ ಗೆಳತಿ, ಹುಡುಗನ ಕೈ ಹಿಡಿದು ಎಳೆಯಲು ಶುರು ಮಾಡ್ತಾಳೆ. ಹುಡುಗಿ ಈ ವರ್ತನೆ ನೋಡಿದ ಹುಡುಗ ಕಾಲ್ ಕಟ್ ಮಾಡ್ತಾನೆ.

ಹೃತಿಕ್​ ರೋಷನ್​ಗೆ ಮಾಜಿ ಪತ್ನಿ ತಿರುಗೇಟು: ಪ್ರಿಯತಮನ​ ಜೊತೆಗಿನ ರೊಮ್ಯಾಂಟಿಕ್​ ರೀಲ್ಸ್​ ಶೇರ್​!

ವೈರಲ್ ಆದ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ : ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದು ಸ್ಕ್ರಿಪೆಡ್ ವಿಡಿಯೋ ಆದ್ರೂ ಜನರು ಕಂಟೆಂಟ್ ಇಷ್ಟಪಟ್ಟಿದ್ದಾರೆ. ಫಿಲ್ಟರ್ ಮಾಡದೆ ಹುಡುಗಿ ಫೋಟೋ ತೋರಿಸ್ಬೇಕು ಎಂದು ಒಬ್ಬರು ಬರೆದ್ರೆ ಮತ್ತೊಬ್ಬರು ಸ್ಮಾರ್ಟ್ ಮದರ್ ಎಂದು ಕಮೆಂಟ್ ಮಾಡಿದ್ದಾರೆ. ಸತ್ತಾ ಮಗಾ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕಿದ ವ್ಯಕ್ತಿ ನಾನು ಸಿಕ್ಕಿಬಿದ್ದೆ ಎಂದು ಶೀರ್ಷಿಕೆ ಹಾಕಿರೋದನ್ನು ನೀವು ಕಾಣ್ಬಹುದು. 
 

click me!