ಒಂದೇ ಸಮಯದಲ್ಲಿ ನಾಲ್ವರನ್ನು ಹ್ಯಾಂಡಲ್‌ ಮಾಡ್ತಿದ್ದ ರಣ್ಬೀರ್‌ : ರಿಷಿ ಕಪೂರ್ ಮಾತು ಈಗ ವೈರಲ್

By Suvarna News  |  First Published Aug 4, 2024, 6:10 PM IST

ಬಾಲಿವುಡ್‌ನ ಹಿರಿಯ  ನಟ ದಿವಂಗತ ರಿಷಿ ಕಪೂರ್ ಅವರು ತಮ್ಮ ಮಗನ ಪ್ರೇಮ ಸಂಬಂಧದ ಬಗ್ಗೆ ಮಾತನಾಡಿದ ವೀಡಿಯೋವೊಂದು ಈಗ ವೈರಲ್ ಆಗಿದ್ದು, ರಣ್‌ಬೀರ್ ತಂದೆಯಾಡಿದ ಮಾತು ರಣ್‌ಬೀರ್ ಕಪೂರ್‌ಗೆ ಸಿಕ್ಕ ಸ್ತ್ರೀಲೋಲ ಎಂಬ ಲೇಬಲ್‌ಗೆ ತಕ್ಕನಾದ ಉಪಮೆಯಂತಿದೆ.


ಎನಿಮಲ್ ನಟ ಕಪೂರ್ ಕುಟುಂಬದ ಕುಡಿ  ನಟ ರಣಬೀರ್‌ ಕಪೂರ್ ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್‌ಗಳಲ್ಲಿ ಒಬ್ಬರು, ಬಾಲಿವುಡ್‌ನ ಹಲವು ಸುಪ್ರಸಿದ್ಧ ನಟಿಯರ ಜೊತೆ ಡೇಟಿಂಗ್ ಮಾಡಿರುವ ರಣ್‌ಬೀರ್‌ಗೆ ಬೆರಗಾಗದ ಹುಡುಗಿರೇ ಇಲ್ಲ, ಪ್ರಸ್ತುತ, ಬಾಲಿವುಡ್ ನಟಿ ಆಲಿಯಾ ಭಟ್‌ ಗಂಡನಾಗಿ ಮುದ್ದು ಮಗಳು ರಾಹಾಳ ಅಪ್ಪನಾಗಿ ಸಂಸಾರ ಜೀವನವನ್ನು ಎಂಜಾಯ್ ಮಾಡುತ್ತಿರುವ ರಣ್‌ಬೀರ್‌ ಆದರೆ ಕೆಲ ದಿನಗಳ ಹಿಂದೆ ತಮ್ಮ ಪ್ರೇಮಸಂಬಂಧಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.  ಬಾಲಿವುಡ್‌ನ ಖ್ಯಾತ ನಟಿಯರ ಜೊತೆಗೆ ತಮ್ಮ ಪ್ರೇಮ ಸಂಬಂಧ ಬ್ರೇಕಾಪ್ ಆದ ನಂತರ ನನಗೆ ಸ್ತ್ರೀಲೋಲ ಎಂಬ ಪಟ್ಟ ಕಟ್ಟಲಾಯ್ತು, ನನ್ನನ್ನು ಮೋಸಗಾರ ಎಂದು ಲೇಬಲ್ ಮಾಡಲಾಯ್ತು ಎಂದೆಲ್ಲಾ ಹೇಳಿಕೊಂಡಿದ್ದರು. ಆದರೆ ಅವರ ತಂದೆ ಬಾಲಿವುಡ್‌ನ ಹಿರಿಯ  ನಟ ದಿವಂಗತ ರಿಷಿ ಕಪೂರ್ ಅವರು ತಮ್ಮ ಮಗನ ಪ್ರೇಮ ಸಂಬಂಧದ ಬಗ್ಗೆ ಮಾತನಾಡಿದ ವೀಡಿಯೋವೊಂದು ಈಗ ವೈರಲ್ ಆಗಿದ್ದು, ರಣ್‌ಬೀರ್ ತಂದೆಯಾಡಿದ ಮಾತು ರಣ್‌ಬೀರ್ ಕಪೂರ್‌ಗೆ ಸಿಕ್ಕ ಸ್ತ್ರೀಲೋಲ ಎಂಬ ಲೇಬಲ್‌ಗೆ ತಕ್ಕನಾದ ಉಪಮೆಯಂತಿದೆ.

ಹಾಗಿದ್ರೆ ರಿಷಿ ಕಪೂರ್ ತಮ್ಮ ಪುತ್ರನ ಬಗ್ಗೆ ಏನ್ ಹೇಳಿದ್ರು?

Tap to resize

Latest Videos

undefined

2013ರ ಫಿಲಂಫೇರ್ ಸಮಾರಂಭದ ವೇಳೆ ಸಂದರ್ಶನದಲ್ಲಿ ಮಾತನಾಡಿದ ರಿಷಿ ಕಪೂರ್, ರಣ್‌ಬೀರ್ ಒಂದೇ ಅವಧಿಯಲ್ಲಿ ಅಂದರೆ ಒಟ್ಟೊಟ್ಟಿಗೆ 3ರಿಂದ 4 ಹುಡುಗಿಯರನ್ನು ಡೇಟಿಂಗ್ ಮಾಡ್ತಿದ್ದರು ಎಂದಿದ್ದಾರೆ. ರಣ್‌ಬೀರ್ ತುಂಬಾ ಯಶಸ್ವಿಯಾಗಿದ್ದಾನೆ,  ಯಾವುದೇ ಹುಡುಗಿಯೂ ಅವನೊಂದಿಗೆ ಡೇಟ್ ಮಾಡಲು ಬಯಸುತ್ತಾಳೆ. ಈಗ ಆತ ಜೀವನ ಎಂಜಾಯ್ ಮಾಡಿಲ್ಲ ಎಂದರೆ ಮತ್ತೆ ಯಾವಾಗ ಎಂಜಾಯ್ ಮಾಡೋಕಾಗುತ್ತೆ? ನನ್ನ ವಯಸ್ಸಿಗೆ ಬಂದ ಮೇಲೆ ಜೀವನ ಎಂಜಾಯ್ ಮಾಡಲು ಆಗುತ್ತದೆಯೇ ಎಂದು ರಿಷಿ ಕಪೂರ್ ಹೇಳಿದ್ದರು. 
ಅಲ್ಲದೇ ಮುಂದುವರೆದು ಮಾತನಾಡಿದ ಅವರು, ರಣ್‌ಬೀರ್ ನಾಲ್ಕು ಹುಡುಗಿಯರ ಜೊತೆ ಕಾಣಿಸಿಕೊಳ್ಳುತ್ತಾನೆ. ಈ ನಾಲ್ಕು ಮಹಿಳೆಯರಿಗೆ ನಿಜವಾಗಿಯೂ ಪರಸ್ಪರರ ಬಗ್ಗೆ ತಿಳಿದಿರಲಿಲ್ಲ,  ಅವನು(ರಣ್‌ಬೀರ್‌) ಎಲ್ಲರನ್ನು ನೋಡುತ್ತಿದ್ದ, ಏಕೆಂದರೆ ಮನೆಯಲ್ಲಿ ರಣ್‌ಬೀರ್ ಜೊತೆ ಎ, ಬಿ, ಸಿ, ಡಿ ಹೀಗೆ ಎಲ್ಲರನ್ನು ನಾನು ನೋಡ್ತಿದ್ದೆ. ಆದರೆ ಎ ಗೆ ಬಿ ಬಗ್ಗೆ ಅಥವಾ ಸಿ ಗೆ ಡಿ ಬಗ್ಗೆ ನಿಜವಾಗಿಯೂ ಗೊತ್ತಿರಲಿಲ್ಲ,  ಆದರೆ ಮನೆಯ ಸಿಬ್ಬಂದಿ ಹಾಗೂ ನನಗೆ ಮಾತ್ರ ಈ ವಿಚಾರ ಗೊತ್ತಿತ್ತು ಎಂದು  ರಿಷಿ ಕಪೂರ್‌ ಅವರು ಮಗನ ಆಟಟೋಪದ ಬಗ್ಗೆ ತೆರೆದ ಹೃದಯದಿಂದ ಮಾತನಾಡಿದ್ದರು. 

ಫಸ್ಟ್ ಟೈಂ ಆಲಿಯಾಳನ್ನ ಭೇಟಿಯಾಗಿದ್ದಾಗ ಆಕೆಗೆ 9 ವರ್ಷ, ನನಗೆ...? ಏಜ್ ಗ್ಯಾಪ್‌ಗೆ ರಣ್‌ಬೀರ್ ಮಾತು

ಅವರ ಈ ನೇರವಂತಿಕೆಯ ಮಾತಿನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಣ್‌ಬೀರ್‌ಗೆ ಏಕೆ ಸ್ತ್ರೀಲೋಲ ಪಟ್ಟ ಸಿಕ್ತು ಎಂಬುದಕ್ಕೆ ಕಾರಣ ಸಿಕ್ಕಿದೆ. ಕೆಲ ದಿನಗಳ ಹಿಂದೆ ರಣ್‌ಬೀರ್‌ ಕಪೂರ್ ನಿಖಿಲ್‌ ಕಾಮತ್ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು. ತಾನು ಬಾಲಿವುಡ್‌ನ ಇಬ್ಬರು ಯಶಸ್ವಿ ನಟಿಯರ ಜೊತೆ ಸಂಬಂಧ ಹೊಂದಿದ್ದೆ. ಆದರೆ ಅವರೊಂದಿಗಿನ ಬ್ರೇಕಾಪ್ ನನಗೆ ಮೋಸಗಾರ, ಸ್ತ್ರೀಲೋಲ ಎಂಬ ಪಟ್ಟ ಕಟ್ಟಿತು. ಈಗಲೂ ಅದೇ ರೀತಿ ಕರೆಯಲ್ಪಡುತ್ತಿದ್ದೇನೆ ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. 

ರಣ್ಬೀರ್ ಬಾಲಿವುಡ್ನ ಖ್ಯಾತ ನಟಿರಾದ ಕತ್ರೀನಾ ಕೈಫ್ (Katrina Kaif)ಹಾಗೂ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡಿದ್ದರು. ಅದರಲ್ಲೂ ರಣ್ಬೀರ್, ದೀಪಿಕಾ ಪಡುಕೋಣೆ ನಡುವಿನ ರೋಮಾನ್ಸ್‌ ಬಹುಶಃ ಬಾಲಿವುಡ್‌ನ ಇದುವರೆಗಿನ ಬಹುಚರ್ಚಿತವಾದ ಸಂಬಂಧಗಳಲ್ಲಿ ಒಂದು. ಇವರಿಬ್ಬರ ಕೋಟ್ಯಾಂತರ ಅಭಿಮಾನಿಗಳು ಇವರಿಬ್ಬರನ್ನು ಪರದೆ ಮೇಲೆ ಜೊತೆಯಾಗಿ  ನೋಡುವುದಕ್ಕೆ ಖುಷಿಪಡುತ್ತಾರೆ. ಅಂದಹಾಗೆ ಒಂದು ಕಾಲದ ಬಾಲಿವುಡ್‌ನ ಜೋಡಿ ಹಕ್ಕಿಗಳಾದ ಇವರಿಬ್ಬರು ಬಚ್ನಾ ಆಯೆ ಹಸೀನೋ ಸಿನಿಮಾದ ಶೂಟಿಂಗ್ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ರಣ್ಬೀರ್‌ ಜೊತೆ ಗಾಢವಾಗಿ ಪ್ರೀತಿಯಲ್ಲಿ ಬಿದ್ದಿದ್ದ ದೀಪಿಕಾ ಪಡುಕೋಣೆ ಆತನ ಹೆಸರನ್ನು ಬೆನ್ನ ಹಿಂದೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಆದರೆ 2009ರ ಸಮಯದಲ್ಲಿ ರಣ್ಬೀರ್‌ಗೆ ಕತ್ರೀನಾ ಸಿಕ್ಕಿದ್ದು, ಆಕೆಗಾಗಿ ದೀಪಿಕಾಳ ಜೊತೆ ರಣ್ಬೀರ್ ಬ್ರೇಕಾಫ್ ಮಾಡಿಕೊಂಡರು ಎಂದು ವರದಿ ಆಗಿತ್ತು. 2010ರಿಂದ 2016ರವರೆಗೂ ಕತ್ರೀನಾ ಹಾಗೂ ರಣ್ಬೀರ್ ಕಪೂರ್ ಡೇಟಿಂಗ್‌ನಲ್ಲಿದ್ದರು. ಅಲ್ಲದೇ ಇವರಿಬ್ಬರೂ ಮದುವೆಯೂ ಆಗಲಿದ್ದಾರೆ ಎಂದು ರೂಮರ್ಸ್‌ಗಳು ಕೂಡ ಹಬ್ಬಿದ್ದವು. ಆದರೆ ಅದೇನಾಯ್ತೋ ಏನು ರಣ್ಬೀರ್ ಹಾಗೂ ಕತ್ರೀನಾ 2016ರಲ್ಲಿ ದೂರಾದರು. 

ಪರ್ಫೆಕ್ಟ್ ಪೇರೆಂಟಿಂಗ್ ಕಾನ್ಸೆಪ್ಟ್ ಅನುಸರಿಸ್ತಾರಾ ಆಲಿಯಾ? ಎಲ್ಲ ಪಾಲಕರು ತಿಳೀಬೇಕು ಈ ವಿಷ್ಯ

ನಂತರ ರಣ್ಬೀರ್‌ಗೆ ಸಿಕ್ಕಿದ್ದೆ ಆಲಿಯಾ, 5ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದ ಈ ಜೋಡಿ 2022ರಲ್ಲಿ ಮದ್ವೆಯಾಗಿದ್ದು ರಾಹಾ ಹೆಸರಿನ ಮುದ್ದಾದ ಹೆಣ್ಣುಮಗುವಿನ ಪೋಷಕರಾಗಿದ್ದಾರೆ. ಇತ್ತ ದೀಪಿಕಾ ಪಡುಕೋಣೆ (Deepika Padukone)ಕೂಡ ರಣ್ವೀರ್ ಕಪೂರ್ (Ranveer Kapoor)ಅವರನ್ನು ಮದುವೆಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತ ಕತ್ರೀನಾ ಕೈಫ್ ಕೂಡ ನಟ ವಿಕ್ಕಿ ಕೌಶಲ್ (Vicky Koushal) ಅವರನ್ನು ಮದುವೆಯಾಗಿ ಸುಖವಾಗಿದ್ದಾರೆ.

click me!