ವಧುವಿಗೆ ಕುಟುಂಬ ನೀಡಿತು ಸರ್ಪ್ರೈಸ್‌; ಅದೃಷ್ಟವಂತೆ ಅಂದ್ರು ನೆಟಿಜನ್ಸ್

By Suvarna News  |  First Published Mar 7, 2024, 10:54 AM IST

ಮದುವೆಯ ಮೆಹಂದಿ ದಿನ ಕುಟುಂಬವು ವಧುವಿಗೆ ನೀಡಿದ ಸರ್ಪ್ರೈಸ್ ನೆಟ್ಟಿಗರ ಮನ ಕರಗಿಸಿದೆ. ಕುಟುಂಬ ಮತ್ತು ಹುಡುಗ ಇಷ್ಟು ಪ್ರೀತಿಸಿದರೆ ಇನ್ನೇನು ಬೇಕು ಎನ್ನುತ್ತಿದ್ದಾರೆ ಅವರು.
 


ಮದುವೆಯು ಪ್ರತಿಯೊಬ್ಬರ ಜೀವನದಲ್ಲಿ ಒಂದು ವಿಶೇಷ ದಿನವಾಗಿದೆ ಮತ್ತು ಆ ದಿನವನ್ನು ಹೆಚ್ಚು ಸ್ಮರಣೀಯವಾಗಿಸಲು ಈಗೀಗ ಹೆಚ್ಚು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಮದುವೆಯ ಹಿಂದಿನ ಅರಿಶಿನ, ಮೆಹಂದಿ, ಸಂಗೀತ ನೃತ್ಯ -ಕುಟುಂಬ ಒಡಗೂಡಿ ಮಾಡುವ ಎಲ್ಲವೂ ಸುಂದರ ಕ್ಷಣಗಳೇ. 

ಹಾಗಾಗಿ ಮದುವೆಗೆ ಸಂಬಂಧಿಸಿದ ಶಕ್ತಿಯುತ ನೃತ್ಯ ಪ್ರದರ್ಶನಗಳಿಂದ ಹಿಡಿದು ಹೃದಯಸ್ಪರ್ಶಿ ಪ್ರತಿಕ್ರಿಯೆಗಳವರೆಗೆ ನಮ್ಮನ್ನು ಆಕರ್ಷಿಸುವ ಹಲವಾರು ವೀಡಿಯೊಗಳು ವೈರಲ್ ಆಗುತ್ತವೆ. ಮದುವೆಯ ಪೂರ್ವದ ಸಂಭ್ರಮಗಳಿಗೆ ನೃತ್ಯ ಪ್ರದರ್ಶನಗಳನ್ನು ಸಿದ್ಧಪಡಿಸುವುದರಿಂದ ಹಿಡಿದು ಮೇಕಪ್, ಹೊಸ ಬಟ್ಟೆವರೆಗೆ ಎಲ್ಲವೂ ಸಂತೋಷ ತರುವ ವಿಷಯಗಳೇ. ಇತ್ತೀಚೆಗೆ, ವಧುವಿಗೆ ಕಸಿನ್ಸ್ ಮತ್ತು ವರ ನೀಡಿದ ಆಶ್ಚರ್ಯಕರ ಸ್ವಾಗತದ ವೀಡಿಯೊ ಆನ್‌ಲೈನ್‌ನಲ್ಲಿ ಅನೇಕರ ಆಸಕ್ತಿಯನ್ನು ಸೆರೆಹಿಡಿದಿದೆ.

Tap to resize

Latest Videos

ಕ್ಲಿಪ್‌ನಲ್ಲೇನಿದೆ?
ಕ್ಲಿಪ್ ತನ್ನ ಮೆಹೆಂದಿ ಫಂಕ್ಷನ್‌ನಲ್ಲಿ ವಧುವು ಮನೆಗೆ ಪ್ರವೇಶಿಸುತ್ತಿದ್ದಂತೆಯೇ  ಕುಟುಂಬವು ತಮ್ಮ ಕೈಯಲ್ಲಿ ಎಲ್‌ಇಡಿ ದೀಪಗಳನ್ನು ಹಿಡಿದು ತಿರುಗಿಸುತ್ತಾ ಅವಳನ್ನು ಸ್ವಾಗತಿಸುತ್ತದೆ. ಹುಡುಗಿ ಸೊಗಸಾದ ಇಂಡೋ-ವೆಸ್ಟರ್ನ್ ಗ್ರೀನ್ ಡ್ರೆಸ್ ಧರಿಸಿದ್ದಾಳೆ. ವೀಡಿಯೊ ಮುಂದುವರೆದಂತೆ, ವರನು 'ಕಲ್ ಹೋ ನಾ ಹೋ' ಚಿತ್ರದ 'ಮಾಹಿ ವೆ' ಹಾಡಿನ ಟ್ಯೂನ್‌ಗಳಿಗೆ ಹೆಜ್ಜೆ ಹಾಕುತ್ತಾ ಬರುವುದನ್ನು ಕಾಣಬಹುದು. ಅಂದ ಹಾಗೆ ಈ ಹುಡುಗಿಯ ಹೆಸರೂ ಮಾಹಿಯೇ ಆಗಿದೆ. 

ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಕುಣಿದಿದ್ದಕ್ಕೆ ಶಾರೂಖ್, ಸಲ್ಮಾನ್, ಆಮೀರ್ ಚಾರ್ಜ್ ಮಾಡಿದ್ದೆಷ್ಟು?
 

ವರನು ವಧುವಿನ ಮನೆಯಲ್ಲಿ ಕಾಣಿಸಿಕೊಂಡು ಆಕೆಗೆ ಸರ್ಪ್ರೈಸ್ ನೀಡುತ್ತಾನೆ ಮತ್ತು ನಂತರ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ. ಈ ಹೃದಯಸ್ಪರ್ಶಿ ವೀಡಿಯೊ ಸರಳವಾಗಿ ಸುಂದರವಾಗಿದ್ದು, ವಧು ವರ ಮತ್ತು ಕುಟುಂಬದ ಬಂಧವನ್ನು ತೋರಿಸುತ್ತದೆ. ಇದೇ ಕಾರಣಕ್ಕೋ ಏನೋ ಸಾಮಾಜಿಕ ಜಾಲತಾಣದಲ್ಲಿ ಇದು ಸಾಕಷ್ಟು ಜನರನ್ನು ಸೆಳೆದಿದೆ. 

@mahiparmar_04 ಹೆಸರಿನ Instagram ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಹಂಚಿಕೊಳ್ಳುತ್ತಾ, ಬಳಕೆದಾರರು 'ಅನಿರೀಕ್ಷಿತ ಸಂತೋಷ' ಎಂದು ಬರೆದಿದ್ದಾರೆ.

5 ಕೋಟಿ ವಾಚ್, 9 ಲಕ್ಷದ ಟಾಪ್ ಪ್ಯಾಂಟ್, ಹತ್ತಾರು ಕೋಟಿ ಲೆಹೆಂಗಾ..ಸಾವ್ರಗಳಲ್ಲಿರೋ ಏನನ್ನೂ ಧರಿಸೋದೇ ಇಲ್ವಾ ಶ್ಲೋಕಾ ಅಂಬಾನಿ?
 

ಪೋಸ್ಟ್, 1 ಮಿಲಿಯನ್ ವೀಕ್ಷಣೆಗಳು ಮತ್ತು ಸಾವಿರಾರು ಲೈಕ್‌ಗಳನ್ನು ಸಂಗ್ರಹಿಸಿದೆ. ಸಂಖ್ಯೆಗಳು ಇನ್ನೂ ಹೆಚ್ಚುತ್ತಿವೆ. ವೈರಲ್ ವೀಡಿಯೊ ಹಲವಾರು ಬಳಕೆದಾರರನ್ನು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಮತ್ತು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರೇರೇಪಿಸಿದೆ. Instagram ಬಳಕೆದಾರರೊಬ್ಬರು 'ಎಷ್ಟು ಮುದ್ದಾಗಿದೆ' ಎಂದರೆ ಮತ್ತೊಬ್ಬರು 'ನಾನು ಇಂದು ಅಂತರ್ಜಾಲದಲ್ಲಿ ನೋಡಿದ ಅತ್ಯಂತ ಸುಂದರವಾದ ವಿಷಯ' ಎಂದಿದ್ದಾರೆ. 'ಈ ರೀತಿ ವೆಲ್ಕಂ ಪಡೆಯಲು, ಕುಟುಂಬ ಮತ್ತು ಹುಡುಗನನ್ನು ಪಡೆಯಲು ಆಕೆ ಬಹಳ ಅದೃಷ್ಟವಂತೆ' ಎಂದು ಇನ್ನೊಬ್ಬರು ಸೇರಿಸಿದ್ದಾರೆ.

 

click me!