
ವ್ಯಾಪಾರವನ್ನೇ ಕಸುಬಾಗಿಸಿಕೊಂಡಿರುವ ಮರ್ವಾಡಿ ಸಮುದಾಯವೂ ದೇಶದ ಅತ್ಯಂತ ಶ್ರೀಮಂತ ಸಮುದಾಯಗಳಲ್ಲಿ ಒಂದಾಗಿದೆ. ರಾಜಸ್ತಾನಿ ಮೂಲದವರಾದರೂ ಇವರು ಇಂದು ದೇಶದ ಮೂಲೆ ಮೂಲೆಗಳಿಗೂ ತಲುಪಿದ್ದು, ವ್ಯಾಪಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೇಳಿ ಕೇಳಿ ಅತೀ ಶ್ರೀಮಂತ ಸಮುದಾಯವೆನಿಸಿಕೊಂಡಿರು ಈ ಮರ್ವಾಡಿ ಸಮುದಾಯದ ಮದುವೆಯಲ್ಲಿ ನೀಡಿದ ದುಬಾರಿ ಉಡುಗೊರೆಗಳ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಂದು ಸಮುದಾಯದಿಂದ ಮತ್ತೊಂದು ಸಮುದಾಯಕ್ಕೆ ಆಚಾರ ವಿಚಾರ ಭಾಷೆ ಸಂಸ್ಕೃತಿಯಲ್ಲಿ ವಿಭಿನ್ನತೆ ವೈವಿಧ್ಯತೆ ಇರುವಂತೆಯೇ ಮದುವೆಯ ಸಂಪ್ರದಾಯಗಳು ಒಂದೊಂದು ಕಡೆ ಒಂದೊಂದು ತರ. ಅದೇ ರೀತಿ ಇಲ್ಲಿ ಮದುವೆಯ ವೇಳೆ ವಧುವಿಗೆ ಆಕೆಯ ತಾಯಿಯ ತವರು ಮನೆಯವರು ಎಂದರೆ ಸೋದರ ಮಾವನವರ ಕಡೆಯಿಂದ ಅದ್ದೂರಿ ಉಡುಗೊರೆಯನ್ನು ನೀಡಲಾಗುತ್ತದೆ. ತಮ್ಮ ಯೋಗ್ಯತೆ ಶ್ರೀಮಂತಿಕೆಗೆ ತಕ್ಕಂತೆ ಈ ಉಡುಗೊರೆಗಳನ್ನು ಸೋದರ ಮಾನವ ಮನೆಯವರು ತಮ್ಮ ಅಕ್ಕನ ಮಗಳಿಗೆ ಮದುವೆಯ ಸಮಯದಲ್ಲಿ ನೀಡುತ್ತಾರೆ. ಅದೇ ರೀತಿ ಇದನ್ನು ಮೈರಾ ಎಂದು ಕರೆಯಲಾಗುತ್ತದೆ. ಅದೇ ರೀತಿ ಇಲ್ಲಿ ನಡೆದ ಮದುವೆಯೊಂದರಲ್ಲಿ ಮರ್ವಾಡಿ ಸಮುದಾಯದವರು ತಮ್ಮ ಸೊಸೆಗೆ ದುಬಾರಿ ಗಿಫ್ಟ್ ನೀಡಿದ್ದು, ಈ ವಿಚಾರವೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸೊಸೆಗೆ ಕೊಟ್ಟ ದುಬಾರಿ ಗಿಫ್ಟ್‌ನಲ್ಲಿ ಏನೇನಿದೆ?
ಅಂದಹಾಗೆ ಇಲ್ಲಿ ಸುಮಾರು 15 ಕೋಟಿ ಮೊತ್ತದ ಉಡುಗೊರೆಯನ್ನು ನೀಡಲಾಗಿದೆ. ಇದರಲ್ಲಿ ಒಂದು ಕೇಜಿ ಚಿನ್ನ,3 ಕೇಜಿ ಬೆಳ್ಳಿ, 4 ಸೂಟ್‌ಕೇಸ್‌ನಷ್ಟು ಕ್ಯಾಶ್, 210 ಬಿಘಾದಷ್ಟು ಭೂಮಿ, ಒಂದು ಪೆಟ್ರೋಲ್ ಪಂಪನ್ನು ಉಡುಗೊರೆಯಾಗಿ ನೀಡಲಾಗಿದೆ. ಇವುಗಳ ಒಟ್ಟು ಮೊತ್ತ ಸುಮಾರು 15.65 ಕೋಟಿ. ಅಂದಹಾಗೆ ರಾಜಸ್ತಾನದ ಜಡೇಲಿ ಜಿಲ್ಲೆಯಲ್ಲಿ ನಡೆದ ಮದುವೆಯೊಂದರಲ್ಲಿ ವಧುವಿನ ಸೋದರ ಮಾವನ ಮನೆಯವರು ಆಕೆಗೆ ಈ ದುಬಾರಿ ಗಿಫ್ಟ್ ನೀಡಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಹುಬ್ಬೇರುವಂತೆ ಮಾಡಿದೆ. ವೀಡಿಯೋದಲ್ಲಿ ಮುಖ್ಯಸ್ಥರೊಬ್ಬರು ವಧುವಿಗೆ ಹಾಗೂ ಆಕೆಯ ಗಂಡನ ಮನೆಯವರಿಗೆ ಆಕೆಯ ತವರು ಹಾಗೂ ಮಾವನ ಮನೆಯವರು ನೀಡುತ್ತಿರುವ ಉಡುಗೊರೆಗಳಲ್ಲಿ ಏನೇನೆಲ್ಲಾ ಇದೆ ಎಂಬುದನ್ನು ಘೋಷಣೆ ಮಾಡುತ್ತಿದ್ದಾರೆ. ಈ ವೀಡಿಯೋವನ್ನು 25 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ವೀಡಿಯೊದಲ್ಲಿ ನಡೆಯುತ್ತಿರುವ ಆಚರಣೆಯನ್ನು ಮೈರಾ ಎಂದು ಕರೆಯಲಾಗುತ್ತದೆ. ರಾಜಸ್ಥಾನದ ಮಾರ್ವಾಡಿ ಸಮುದಾಯಗಳಲ್ಲಿ ಮೈರಾ ಒಂದು ಸಾಂಪ್ರದಾಯಿಕ ಪದ್ಧತಿಯಾಗಿದ್ದು, ಅಲ್ಲಿ ತಾಯಿಯ ಸಹೋದರರು ತಮ್ಮ ಸಹೋದರಿಯರು, ಸೊಸೆಯಂದಿರು ಅಥವಾ ಸೋದರಳಿಯನಿಗೆ ದುಬಾರಿ ಮದುವೆ ಉಡುಗೊರೆಗಳನ್ನು ನೀಡುತ್ತಾರೆ. ಹಾಗೆಯೇ ರಾಜಸ್ಥಾನದ ಜಡೇಲಿ ಜಿಲ್ಲೆಯಲ್ಲಿ ದಾಖಲಾದ ಅತ್ಯುನ್ನತ ಮೈರಾ ಎಂದು ಪರಿಗಣಿಸಲಾದ ಈ ಕಾರ್ಯಕ್ರಮದಲ್ಲಿ ನಗದು, ಚಿನ್ನ, ಭೂಮಿ ಮತ್ತು ಉಡುಗೊರೆಗಳ ಭವ್ಯ ಪ್ರದರ್ಶನವೇ ಇತ್ತು. ಈ ಉಡುಗೊರೆಗಳನ್ನು ದೊಡ್ಡ ಮೆರವಣಿಗೆಯ ಮೂಲಕ ತರಲಾಯ್ತು. 600 ರಿಂದ 700ಕ್ಕೂ ಹೆಚ್ಚು ಜನರು 100ಕ್ಕೂ ಹೆಚ್ಚು ಕಾರುಗಳು ಹಾಗೂ 4 ಐಷಾರಾಮಿ ಬಸ್‌ಗಳಲ್ಲಿ ಆಗಮಿಸಿ ವರನ ಕುಟುಂಬಕ್ಕೆ ಮೈರಾವನ್ನು ನೀಡಿದರು ಎಂದು ವರದಿಯಾಗಿದೆ.
ಇನ್ನು ವೀಡಿಯೋ ನೋಡಿದ ಜನ ಹಲವು ಕಾಮೆಂಟ್ ಮಾಡಿದ್ದಾರೆ. ಇಡೀ ಮದುವೆ ಕಾರ್ಯಕ್ರಮದಲ್ಲಿ ಡಿಜಿ ಮಾಡಲು ಕೇವ 10 ಸಾವಿರ ತೆಗೆದುಕೊಂಡು ಡಿಜಿ ಆಪರೇಟರ್ ಇದನ್ನು ನೋಡಿ ಅಳಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಇದನ್ನು ವರದಕ್ಷಿಣೆ ಎಂದು ಭಾವಿಸಿದ್ದು, ಇದನ್ನು ನಿಲ್ಲಿಸುವಂತೆ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಪ್ರತಿಕ್ರಿಯಿಸಿದ್ದು, ಇದು ವರದಕ್ಷಿಣೆ ಅಲ್ಲ, ವಧುವಿಗೆ ವಧುವಿನ ತಾಯಿಯ ಸೋದರರನ್ನು ನೀಡುವ ಉಡುಗೊರೆ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಮರ್ವಾಡಿ ಸಮುದಾಯದವರು ವ್ಯವಹಾರದಲ್ಲಿ ಮಾಡುವ ಕಂಜೂಸುತನವನ್ನು ಟೀಕಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.