
ಮದುವೆ ರಾತ್ರಿ ವಿಡಿಯೋ ಮಾಡ್ತಿದ್ದ ಗಂಡನಿಗೆ ಹೆಂಡತಿ ಕೇಳಿದ ಪ್ರಶ್ನೆ ಈಗ ವೈರಲ್ ಆಗಿದೆ. ಆಮೇಲೆ ಗಂಡನ ಉತ್ತರ ಕೇಳಿ, ವಿಡಿಯೋ ಎಷ್ಟು ಚೆನ್ನಾಗಿದೆ ಅಂತ ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಗಾದರೆ ಆ ವಿಡಿಯೋದಲ್ಲಿ ಏನಿದೆ?
ಹೆಂಡ್ತಿ ಕೇಳಿದ ಪ್ರಶ್ನೆ ಏನು?
ಸಜ್ಜಾದ್ ಚೌಧರಿ ಎನ್ನುವವರು ವಿಡಿಯೋ ಮಾಡ್ತಿದ್ದಾರೆ. ಆಗ ಹೆಂಡತಿ ಕೂಡ ಅಲ್ಲಿಯೇ ಹಾಸಿಗೆ ಮೇಲೆ ಕಾಣಿಸುತ್ತಾರೆ. ಗಂಡ ವಿಡಿಯೋ ಮಾಡ್ತಿದ್ದಾಗ ಹೆಂಡತಿ “ನಮ್ಮ ಖಾಸಗಿ ವಿಷಯಗಳನ್ನ ಜನಗಳಿಗೆ ತೋರಿಸ್ತೀಯಾ?” ಅಂತ ಕೇಳುತ್ತಾರೆ. ಆಗ ಸಜ್ಜಾದ್ ನೀಡಿದ ಉತ್ತರ, ಹೆಂಡತಿಯ ನಗು ಎಲ್ಲ ಸೇರಿ ವಿಡಿಯೋ ತುಂಬಾ ಚೆನ್ನಾಗಿದೆ ಅಂತ ನೆಟ್ಟಿಗರು ಹೇಳ್ತಿದ್ದಾರೆ.
ಸಜ್ಜಾದ್ ನೀಡಿದ ಉತ್ತರ ಏನು?
ಸಜ್ಜಾದ್ ಸ್ವಲ್ಪ ಕಪ್ಪು, ಹೆಂಡತಿ ಬಿಳಿ. ಇದನ್ನೇ ಸಜ್ಜಾದ್ ವಿಡಿಯೋದಲ್ಲಿ ಹೇಳ್ತಾನೆ. “ಬಣ್ಣ ಮುಖ್ಯ ಅಲ್ಲ, ಹೃದಯದಿಂದ ಪ್ರೀತಿಸಬೇಕು” ಅಂತ ಹೆಂಡತಿಯನ್ನ ತೋರಿಸಿ ಹೇಳ್ತಾನೆ. ಆಗ ಹೆಂಡತಿ ಒಂದು ಚೆಂದದ ಉತ್ತರ ಕೊಡ್ತಾಳೆ.
“ನನಗೆ ಇಷ್ಟು ಚಂದದ ಹೆಂಡತಿ ಇದ್ದಾಳೆ, ಜನಗಳಿಗೆ ತೋರಿಸದೇ ಇರೋದ್ಯಾಕೆ?” ಅಂತ ಸಜ್ಜಾದ್ ಕೇಳ್ತಾನೆ. ರೂಮಿನ ಲೈಟ್ ಆಫ್ ಆದಾಗ ಹೆಂಡತಿ ಕಾಣಿಸ್ತಾಳೆ, ಗಂಡ ಕಾಣಿಸಲ್ಲ. ಈ ತಮಾಷೆ ಕೂಡ ವಿಡಿಯೋದಲ್ಲಿದೆ. ಅಶ್ಲೀಲ ವಿಡಿಯೋಗಳ ಅಬ್ಬರದಲ್ಲಿ ಈ ಜೋಡಿ ವಿಡಿಯೋ ನಿಜಕ್ಕೂ ಕ್ಯೂಟ್ ಎನ್ನಬಹುದು.
ಬೆಳಕಲ್ಲಿ ಹೊಳೆಯುವ ಪತ್ನಿ!
“ಎಷ್ಟು ಚಂದದ ಹುಡುಗೀನ ಮದುವೆ ಆಗಿದ್ದೀನಿ. ನೀವು ನನ್ನನ್ನ ನೋಡ್ತಿದ್ದೀರೋ ಇಲ್ವೋ ಅನ್ನೋದು ಮುಖ್ಯ ಅಲ್ಲ, ನನ್ನ ಹೆಂಡತಿ ಜೊತೆಗಿದ್ದಾಳೆ ಅಂದ್ರೆ ನಾನು ಅವಳ ಬೆಳಕಲ್ಲಿ ಹೊಳೆಯುತ್ತೇನೆ. ಎಲ್ಲರಿಗೂ ಬಾಯ್. ಪ್ರೀತಿಸಿ, ಮದುವೆ ಆಗಿ, ಸಂತೋಷವಾಗಿರಿ” ಅಂತ ಹೇಳಿ ಸಜ್ಜಾದ್ ವಿಡಿಯೋ ಮುಗಿಸ್ತಾನೆ.
ಕಾಲೆಳೆದ ನೆಟ್ಟಿಗರು!
ತುಂಬಾ ಜನ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಮೊದಲು ನಿನ್ನ ಪತ್ನಿಯ ಮೇಕಪ್ ತೆಗೆದು ಆಮೇಲೆ ಬ್ಯೂಟಿ ಬಗ್ಗೆ ಹೇಳು ಎಂದು ಓರ್ವ ಹೇಳಿದ್ದರೆ, ಕಲರ್ ಮ್ಯಾಟರ್ ಆಗಲ್ಲ, ಮನಿ ಮ್ಯಾಟರ್ ಆಗತ್ತೆ, ನೀವು ಸರ್ಕಾರಿ ನೌಕರಿಯಲ್ಲಿದ್ದರೆ ಮ್ಯಾಟರ್ ಆಗತ್ತೆ ಎಂದು ಕೂಡ ಕೆಲವರು ಕಾಲೆಳೆದಿದ್ದಾರೆ. ಫಸ್ಟ್‌ನೈಟ್ ವಿಡಿಯೋ ಎಂದಕೂಡಲೇ ಕೆಲವರು ಅಶ್ಲೀಲತೆ ಇರುವುದು ಎಂದು ತಿಳಿಯಬಹುದು. ಆದರೆ ಇಲ್ಲಿ ಮಾತ್ರ ಯುವಕ ಬಣ್ಣ ನೋಡಿ ಪ್ರೀತಿಸೋದಲ್ಲ, ಮನಸ್ಸು ನೋಡಿ ಲವ್ ಮಾಡಿ ಎಂದು ಸಂದೇಶ ನೀಡಿದ್ದಾರೆ. ಒಬ್ಬರಿಗಿಂತ ಒಬ್ಬರ ಕಲರ್ ಡಿಫರೆಂಟ್ ಆಗಿರುವುದು ಎಂದು ಕೂಡ ಕೆಲವರು ಸಲಹೆ ಕೂಡ ನೀಡಿದ್ದಾರೆ. ಇನ್ನು ಸಜ್ಜಾದ್ ದಂಪತಿ ಯಾವ ಭಾಷೆಯಲ್ಲಿ ಮಾತನಾಡಿದ್ದಾರೆ ಎನ್ನೋದು ಕೂಡ ಕೆಲವರಿಗೆ ಅರ್ಥ ಆಗಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.