ಇಬ್ಬರು ಮಕ್ಕಳು ಪತಿಯನ್ನು ಬಿಟ್ಟು ಪ್ರಿಯಕರನಿಗಾಗಿ ಕುವೈಟ್‌ಗೆ ಹಾರಿದ ಮಹಿಳೆ, ಇಸ್ಲಾಂಗೆ ಮತಾಂತರ!

By Suvarna News  |  First Published Aug 15, 2023, 3:40 PM IST

ಗಡಿಯಾಚೆಗಿನ ಪ್ರೀತಿ ಇದೀಗ ಅಪಾಯದ ಸಂಕೇತ ನೀಡುತ್ತಿದೆ. ಅಂಜು ಪಾಕಿಸ್ತಾನಕ್ಕೆ ತೆರಳಿದರೆ ಮದುವೆಯಾದರೆ, ಇದೀಗ ದೀಪಿಕಾ ಅನ್ನೋ ವಿವಾಹಿತ ಮಹಿಳೆ ಪ್ರಿಯಕರನಿಗಾಗಿ ಕುವೈಟ್‌ಗೆ ಹಾರಿದ್ದಾಳೆ. ದೀಪಿಕಾ ಇದೀಗ ಇಸ್ಲಾಂಗೆ ಮತಾಂತರಗೊಂಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. 
 


ಜೈಪುರ(ಆ.15) ಗಡಿಯಾಚೆಗಿನ ಪ್ರೀತಿ ಇದೀಗ ಟ್ರೆಂಡ್ ಆಗಿದೆ. ಮೊಟ್ಟೆಯಿಂದ ಹೊರಬರುವ ಮುನ್ನವೇ ಇದೀಗ ಗಡಿಯಾಚೆಗಿನ ಪ್ರೀತಿ ಚಿಗುರೊಡೆದಿರುತ್ತೆ. ಇತ್ತೀಚೆಗೆ ಹಲವು ಪ್ರಕರಣಗಳು ವರದಿಯಾಗುತ್ತಿದೆ. ಅಂಜು ಪ್ರಕರಣ ಒಂದು ಉದಾಹರಣೆ ಅಷ್ಟೆ. ಇದೀಗ ಅಂಜ ರೀತಿಯಲ್ಲೇ ಮತ್ತೊಂದು ಪ್ರಕರಣ ವರದಿಯಾಗಿದೆ. ದೀಪಿಕಾ ಪಾಟೀದಾರ್ ಅನ್ನೋ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳು ಹಾಗೂ ಪತಿಯನ್ನು ಬಿಟ್ಟು ಪ್ರೀತಿಯ ಇನಿಯ ಇರ್ಫಾನ್‌ಗಾಗಿ ಕುವೈಟ್‌ಗೆ ಹಾರಿದ್ದಾಳೆ. ಇದೀಗ ದೀಪಿಕಾ ಪಾಟೀದಾರ್ ಇಸ್ಲಾಂಗೆ ಮತಾಂತರವಾಗಿ, ಇರ್ಫಾನ್ ಜೊತೆ ಮದುವೆಯಾಗಿದ್ದಾಳೆ. ಇತ್ತ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ದುಂಗಾರ್‌ಪುರ್ ಜಿಲ್ಲೆಯ 35 ವರ್ಷ ದೀಪಿಕಾ ಪಾಟೀದಾರ್ ಇದೀಗ ಕುವೈಟ್‌ನಲ್ಲಿ ಪತಿ ಇರ್ಫಾನ್ ಜೊತೆ ಬದುಕು ಆರಂಭಿಸಿದ್ದಾಳೆ. ಮುಕೇಶ್ ಪಾಟೀದಾರ್ ಹಾಗೂ ದೀಪಿಕಾ ಪಾಟಿದಾರ್ ಸಂಸಾರದಲ್ಲಿ ಮನಸ್ತಾಪ, ದ್ವೇಷಗಳು, ಬಡಿದಾಟ ಇರಲಿಲ್ಲ. ಆದರೆ ಮುಕೇಶ್ ಪಾಟೀದಾರ್ ಮುಂಬೈನಲ್ಲಿ ಕೆಲಸ ಮಾಡುತಿದ್ದ. 15 ದಿನ, ತಿಂಗಳಿಗೆ ಮನೆಗೆ ಬಂದು ಒಂದೆರೆಡು ರಜೆ ಕಳೆದು ಮತ್ತೆ ಮುಂಬೈಗೆ ವಾಪಾಸ್ಸಾಗುತ್ತಿದ್ದ. 

Tap to resize

Latest Videos

ಸೀಮಾ, ಅಂಜು ಬಳಿಕ ಅಮೀನಾ ಸರದಿ, ವಿಡಿಯೋ ಕಾಲ್ ಮೂಲಕ ಭಾರತೀಯನ ವರಿಸಿದ ಪಾಕ್ ಯುವತಿ!

ಮುಕೇಶ್ ಪಾಟೀದಾರ್ ಮುಂಬೈನಲ್ಲಿದ್ದರೆ, ಪತ್ನಿ ದೀಪೀಕಾ ಪಾಟೀದಾರ್ ಮನೆಯಲ್ಲಿರುತ್ತಿದ್ದಳು. ಪತಿ ದೂರವಿದ್ದ ಕಾರಣ ಸಾಮಾಜಿಕ ಮಾಧ್ಯಮದ ಮೂಲಕ ಕುವೈಟ್‌ನ ಇರ್ಫಾನ್ ಹೈದರ್ ಜೊತೆ ಪ್ರೀತಿ ಶುರುವಾಗಿದೆ. ಮುಕೇಶ್ ಪಾಟೀದಾರ್ ಹಾಗೂ ದೀಪಿಕಾ ಪಾಟೀದಾರ್‌ಗೆ 11 ವರ್ಷ ಹಾಗೂ 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ಶಾಲಾ ಶುಲ್ಕಾ, ಮನೆಯ ಖರ್ಚು ಸೇರಿದಂತೆ ಇತರ ಸಂಪೂರ್ಣ ವೆಚ್ಚಗಳನ್ನು ಮುಕೇಶ್ ಪಾಟೀದಾರ್ ಭರಿಸುತ್ತಿದ್ದ. 

ದೀಪಿಕಾ ಪಾಟೀದಾರ್ ತಲೆನೋವು, ಕೈ ನೋವು ಎಂದು ಪದೇ ಪದೇ ಜೈಪುರದ ಆಸ್ಪತ್ರೆ ತೆರಳುತ್ತಿದ್ದಳು. ಈ ವೇಳೆ ಗುಜರಾತ್‌ಗೆ ತೆರಳಿ ಇದೇ ಇರ್ಫಾನ್ ಅನ್ನೋ ಯುವಕನ ಭೇಟಿ ಮಾಡುತ್ತಿದ್ದಳು. ಆದರೆ ಈ ವಿಚಾರವನ್ನು ದೀಪಿಕಾ ಗೌಪ್ಯವಾಗಿಟ್ಟದ್ದಳು. ಹೀಗೆ ಆಸ್ಪತ್ರೆಗೆ ಎಂದು ತೆರಳಿದ ದೀಪಿಕಾ ಪಾಟೀದಾರ್ ಮರಳಿ ಮನೆಗೆ ಬಂದಿಲ್ಲ. ಮಕ್ಕಳು ಭಯದಿಂದ ತಂದೆ ಮುಕೇಶ್ ಪಾಟೀದಾರ್‌ಗೆ ಕರೆ ಮಾಡಿದ್ದಾರೆ.  ಪತ್ನಿಗೆ ಕರೆ ಮಾಡಿದರೆ ಸ್ವಿಚ್ ಆಫ್. ತಕ್ಷಣವೇ ರೈಲು ಹತ್ತಿದ ಮುಕೇಶ್ ಪಾಟೀದಾರ್, ಆಪ್ತರು ಹಾಗೂ ಕುಟುಂಬಸ್ಥರಿಗೆ ಸೂಚನೆ ನೀಡಿದ್ದಾರೆ. ಮನೆಗೆ ತೆರಳಿ ಮಕ್ಕಳನ್ನು ನೋಡಿಕೊಳ್ಳುವಂತೆ ಸೂಚಿಸಿದ್ದಾನೆ.

ಸಹೋದರನ ಕೆಲಸಕ್ಕೆ ಕೊಕ್, ಮಕ್ಕಳು ತಬ್ಬಲಿ; ಅಂಜು ಮತಾಂತರ ಬಳಿಕ ಸಂಕಷ್ಠದಲ್ಲಿ ಕುಟುಂಬ!

ಮರುದಿನ ದುಂಗಾರ್‌ಪುರ್‌ಗೆ ಆಗಮಿಸಿದ ಮುಕೇಶ್ ಪಾಟೀದಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಪಾಟೀದಾರ್ ಫೋಟೋ ಹರಿದಾಡತೊಡಗಿದೆ. ದೀಪಿಕಾ ಬುರ್ಖಾ ಧರಿಸಿದ ಫೋಟೋ ವೈರಲ್ ಆಗಿದೆ. ಸಂಜೆ ವೇಳೆಗೆ ವ್ಯಾಟ್ಸ್ಆ್ಯಪ್ ಮೂಲಕ ಮುಕೇಶ್ ಪಾಟೀದಾರ್‌ಗೆ ಕರೆಯೊಂದು ಬಂದಿದೆ. ಈ ವೇಳೆ ದೀಪಿಕಾ ಪಾಟೀದಾರ್ ಮಾತನಾಡಿದ್ದಾಳೆ. ತಾನು ಕುವೈಟ್‌ನಲ್ಲಿ ಇರ್ಫಾನ್ ಮದುವೆಯಾಗಿರುವುದಾಗಿ ಹೇಳಿದ್ದಾಳೆ.

ಇತ್ತ ತಾಯಿ ನಾಳೆ ಬರುತ್ತಾಳೆ ಎಂದು ಇಬ್ಬರು ಮಕ್ಕಳು ಈಗಲೂ ಕಾಯುತ್ತಿದ್ದಾರೆ. ಕುಟುಂಬ ಸುಖವಾಗಿರಲಿ ಎಂದು ಮುಂಬೈಗೆ ತೆರಳಿ ಕೆಲಸ ಮಾಡುತ್ತಿದ್ದ ಪತಿ ಮುಕೇಶ್ ಪಾಟೀದಾರ್‌ಗೆ ದಿಕ್ಕೆ ತೋಚದಂತಾಗಿದೆ.

click me!