ಹಾಸನದಲ್ಲೊಬ್ಬ ಕ್ರೂರ ಶವಸಂಭೋಗಿ! ಈ ಸೈಕೋ ಎಂಥವನು?

By Suvarna NewsFirst Published Aug 27, 2020, 5:09 PM IST
Highlights

ಹಾಸನದ ಬಿಎಂ ರಸ್ತೆಯಲ್ಲಿ ನಡೆದ ಪೈಶಾಚಿಕ ಘಟನೆ ಇಡೀ ನಾಡನ್ನು ಬೆಚ್ಚಿ ಬೀಳಿಸಿದೆ. ಹೆಣ್ಣನ್ನು ಕೊಂದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಎಯ ದೇಹದ ಮೇಲೆ ತನ್ನ ಲೈಂಗಿಕ ತೀಟೆ ತೀರಿಸಿಕೊಂಡಿದ್ದಾನೆ. ಇಂಥವರೂ ಇರ್ತಾರಾ?

ಹಾಸನದ ಬಿಎಂ ರಸ್ತೆಯಲ್ಲಿ ನಡೆದ ಪೈಶಾಚಿಕ ಘಟನೆಯಿಂದ ನಾಡೇ ದಿಗಿಲು ಬಿದ್ದಿದೆ. ಅಲ್ಲೊಬ್ಬ ಪಾತಕಿ, ರಾತ್ರಿ ಬೀದಿ ಬದಿಯಲ್ಲಿ ಮಲಗಿದ್ದ ಅನಾಥೆಯನ್ನು ಲೈಂಗಿಕ ಕ್ರಿಯೆಗಾಗಿ ಬಲಾತ್ಕರಿಸಿದ್ದಾನೆ. ಅವಳು ಒಪ್ಪದೆ ಇದ್ದಾಗ, ಹಾಲೋ ಬ್ಲಾಕ್‌ ತಂದು, ಆಕೆಯ ತಲೆ ಮೇಲೆ ಹೊತ್ತು ಹಾಕಿ ಆಕೆಯನ್ನು ಸಾಯಿಸಿದ್ದಾನೆ. ನಂತರ ರಕ್ತದ ಮಡುವಿನಲ್ಲಿದ್ದ ಆಕೆಯ ದೇಹದ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದೆಲ್ಲವೂ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಮೃಗಗಳೂ ಕೂಡ ಹೀಗೆ ಮಾಡುವುದಿಲ್ಲ. ಇದೆಂತ ಮನಸ್ಥಿತಿ? ಇಂಥವರೂ ಇರ್ತಾರಾ? 

ಹೌದು. ಮೇಲ್ನೋಟಕ್ಕೆ ಇಂಥ ಪಾತಕಿಗಳಲ್ಲಿ ಈ ವಿಕೃತಿ ಇರುವುದು ಗಮನಕ್ಕೇ ಬರುವುದಿಲ್ಲ. ಸ್ತ್ರೀ ಒಂಟಿಯಾಗಿ ಸಿಕ್ಕಿದಾಗ ಅವರಲ್ಲಿರುವ ರಾಕ್ಷಸ ಎಚ್ಚೆತ್ತುಕೊಳ್ಳುತ್ತಾನೆ. ಇವರನ್ನು ಕನ್ನಡದಲ್ಲಿ ಶವಸಂಭೋಗಿಗಳು ಎಂದು ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ಇದಕ್ಕೆ ಹೆಸರು ನೆಕ್ರೋಫೀಲಿಯಾ. ಇದೊಂದು ಗುಣಪಡಿಸಲಾಗದ ಸೈಕೋ ಗುಣ. ಇವರು ಮಾನಸಿಕ ಸಮಸ್ಯೆಯ ತುತ್ತ ತುದಿಯಲ್ಲಿ ಇರುತ್ತಾರೆ. ಇವರನ್ನು ಯಾವ ಔಷಧವೂ, ಯಾವ ಕೌನ್ಸೆಲಿಂಗೂ ಗುಣಪಡಿಸಲಾರದು. ಇವರಿಗೆ ಎರಡು ಬಗೆ- ಶವವೊಂದು ಸಿಕ್ಕಿದರೆ ಅದರ ಜೊತೆ ಸಂಭೋಗ ನಡೆಸುವವರು. ಇನ್ನೊಂದು ಬಗೆ- ಹೆಣ್ಣನ್ನು ಕೊಂದು ಅತ್ಯಾಚಾರ ನಡೆಸುವವರು. ಇವರು ಅತ್ಯಂತ ಅಪಾಯಕಾರಿ. 

ಮೊದಲ ಬಗೆಯ ಶಂವಸಂಭೋಗಿಗಳಲ್ಲಿ ಹಲವು ಬಗೆಯವರು ಇರಬಹುದು. ಕೆಲವರು ನಿರಂತರವಾಗಿ ಶವಸಂಭೋಗವನ್ನೇ ರೂಢಿಯಾಗಿ ಮಾಡಿಕೊಂಡಿರಬಹುದು. ಇಂತವರು ಸಾಮಾನ್ಯವಾಗಿ ಸ್ಮಶಾನದಲ್ಲಿ, ಮಾರ್ಚುರಿಗಳಲ್ಲಿ ಇರುತ್ತಾರೆ. ಶವದ ಮನೆಯಲ್ಲಿ ಇರುವ ಹಲವರು ಯಾವಾಗಲೂ ಶವಗಳನ್ನು ನೋಡೀ ನೋಡಿ ಇಂಥ ಆಕರ್ಷಣೆ ಬೆಳೆಸಿಕೊಂಡಿರಬಹುದು. ಅವರು ಹೀಗೆ ಮಾಡಬಹುದು. ಇವರಿಗೆ ಸಾಮಾನ್ಯವಾಗಿ ಸ್ತ್ರೀಯರನ್ನು ಬೆತ್ತಲೆಯಾಗಿ ನೋಡಿದರೂ ಉದ್ರೇಕ ಉಂಟಾಗಲಾರದು. ಆದರೆ ಶವ ಕಂಡಾಗ ಉದ್ರೇಕವಾಗುತ್ತದೆ.

ಕಾಗೆಗಳ ಶವ ಸಂಭೋಗ: ಇದೆಂಥಾ ವಿಚಿತ್ರ ನಡವಳಿಕೆ

ಇನ್ನು ಕೆಲವರು ಸಿಟ್ಟಿನಿಂದ ರೊಚ್ಚಿಗೆದ್ದು ವ್ಯಕ್ತಿಯನ್ನು ಕೊಂದು ಶವಸಂಭೋಗ ನಡೆಸುವವರು. ಇವರಿಗೆ ಸೆಕ್ಸ್ ಹಾಗೂ ಅಪರಾಧ ಎರಡೂ ಸೇರಿದಾಗ ಉಂಟಾಗುವ ಒಂದು ಬಗೆಯ ಥ್ರಿಲ್‌ನಿಂಧ ಸುಖ ಸಿಗುತ್ತದೆ. ಕೊಲೆ ಮಾಡಿದ ನಂತರ ದೇಹದ ಮೇಲೆ ಲೈಂಗಿಕ ಕ್ರಿಯೆ ಎಸಗುವಾಗ ಇನ್ನೂ ದೇಹದ ಶಾಖ ಪೂರ್ತಿ ಆರಿರುವುದಿಲ್ಲವಾದ್ದರಿಂದ, ಜೀವಂತ ವ್ಯಕ್ತಿಯನ್ನೇ ಭೋಗಿಸಿದ್ದೇವೆ ಎಂದು ಇವರು ಅಂದುಕೊಳ್ಳುತ್ತಾರೆ. ಮೇಲೆ ಹೇಳಿದ ಅಪರಾಧ ಮಾಡಿದಾತ ಇಂಥ ಜಾತಿಯವನು. ಕೆಲವು ತಿಂಗಳ ಹಿಂದೆ ದಿಲ್ಲಿಯಲ್ಲೂ ಇಂಥದೊಂದು ಪ್ರಕರಣ ವರದಿಯಾಗಿತ್ತು. ಅಲ್ಲಿ ಬಟ್ಟೆ ಅಂಗಡಿಯವನೊಬ್ಬ ಮಳಿಗೆಗೆ ಬಂದ ಹೆಣ್ಣನ್ನು ಕೊಂದು ಭೋಗಿಸಿದ್ದ. 

ಶವಜ ಜೊತೆ ಸಂಭೋಗ ನಡೆಸುವವರುು ಎಂಥ  ವಿಕೃತ ಕಾಮಿಗಳು?

ಇನ್ನು ಹಲವರು ತಂತ್ರ, ವಾಮಾಚಾರ ಸಾಧನೆ ಮಾಡುವವರು ಕೂಡ ಶವಸಂಭೋಗ ಮಾಡುತ್ತಾರೆ. ಇಂಥವರು ಅಪರೂಪ. ಇವರಿಗೆ ಶವಸಂಭೋಗ ಗೀಳಲ್ಲ; ಇವರು ಸಾಧನೆಯ ಹುಚ್ಚಿನಿಂದ, ಅಪರೂಪಕ್ಕೊಮ್ಮೆ ಹಾಗೆ ಮಾಡುವವರು. ಇವರಲ್ಲಿ ನಿಜವಾದ ಸಾಧಕರೂ ಇರುತ್ತಾರೆ, ಬೋಗಸ್‌ ವ್ಯಕ್ತಿಗಳೂ ಇರುತ್ತಾರೆ. ತಂತ್ರದಲ್ಲಿ, ಶವಕ್ಕೂ ನಿಜ ಜೀವಕ್ಕೂ ವ್ಯತ್ಯಾಸ ಹಾಗೂ ಜಿಗುಪ್ಸೆಯ ಭಾವನೆಯನ್ನು ಹೊಡೆದೋಡಿಸಲು ಹೀಗೆ ಮಾಡಲಾಗುತ್ತದೆ. 

"
ಶವಸಂಭೋಗದ ಮನಸ್ಥಿತಿಗೆ ಕಾರಣವಾಗುವುದು ಏನು? ಇದೊಂದು ಮನೋರೋಗ, ಮನೋವಿಕೃತಿ ಅಷ್ಟೇ. ಯಾವುದ್ಯಾವುದೋ ಕಾರಣಗಳಿಂದಾಗಿ ಇವರಿಗೆ ಶವವೇ ಜೀವಂತ ಮನುಷ್ಯರಿಗಿಂತ ಹೆಚ್ಚು ಉದ್ರೇಕಕಾರಿಯಾಗಿ ಕಾಣುತ್ತದೆ. ಇಂಥವರನ್ನು ಔಷಧ ಹಾಗೂ ಕೌನ್ಸೆಲಿಂಗ್‌ನಿಂಧ ಸರಿಪಡಿಸಬಹುದು. ಆದರೆ ಇವರು ಮನೋರೋಗದ ತುರೀಯ ಅವಸ್ಥೆಗೆ ಮುಟ್ಟಿರುವುದರಿಂದ ಗುಣಮುಖರಾಗುವುದು ಕಷ್ಟಸಾಧ್ಯ. ಕೆಲವರಿಗೆ ಶವದ ಬದಲು ನಿಶ್ಚೇತನ ಸೆಕ್ಸ್ ಗೊಂಬೆಯನ್ನು ನೀಡಿ ಸರಿಪಡಿಸುವ ಯತ್ನವನ್ನೂ ತಜ್ಞರು ನಡೆಸಿದ್ದಾರೆ.  ಸಂಭೋಗಕ್ಕಾಗಿ ಶವವನ್ನು ಪಡೆಯಲೆಂದೇ ಕೊಲೆ ಮಾಡುವವರು ಮಾತ್ರ ತೀರಾ ಅಪಾಯಕಾರಿ. ಇವರು ಸಮಾಜಘಾತುಕರು. ಇಂತವರು ಯಾವುದೇ ಕ್ಷಮೆಯಿಲ್ಲದೆ ಗಲ್ಲಿಗೇರಲು ಸೇರಲು ಲಾಯಕ್ಕು. 

ಕರುವಿನ ಜೊತೆ ಸಂಭೋಗ ನಡೆಸಿದ ವಿಕೃತ ಕಾಮಿ

click me!