ಸಂಸ್ಕೃತ ಮೂಲದ ಹೆಸರನ್ನು ಮಗುವಿಗಿಟ್ಟ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿ

Published : Apr 21, 2022, 12:09 PM IST
ಸಂಸ್ಕೃತ ಮೂಲದ ಹೆಸರನ್ನು ಮಗುವಿಗಿಟ್ಟ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿ

ಸಾರಾಂಶ

ಸರೋಗಸಿ ವಿಧಾನದ ಮೂಲಕ ಮನೆಗೆ ಮಗಳನ್ನು ಸ್ವಾಗತಿಸಿದ್ದ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ನಿಕ್ ಜೋನಾಸ್ ( Nick Jonas) ದಂಪತಿ ಈಗ ಮಗಳ (Daughter) ಹೆಸರು ರಿವೀಲ್ ಮಾಡಿದ್ದಾರೆ. ಮಗಳಿಗೆ ಮಾಲತಿ ಮೇರಿ ಚೋಪ್ರಾ ಜೋನಾಸ್ ಎಂದು ಹೆಸರಿಟ್ಟಿದ್ದಾರೆ. ಸಂಸ್ಕೃತ ಮೂಲದ ಈ ಪದದ ಅರ್ಥವೇನು ?

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಅವರ ಪತಿ, ಗಾಯಕ ನಿಕ್ ಜೋನಾಸ್ (Nick Jonas) ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದು, ಮಗುವಿಗೆ ನಾಮಕರಣ ಮಾಡಿದ್ದಾರೆ. ಜೋನಾಸ್ ದಂಪತಿ ತಮ್ಮ ಮಗಳ (Daughter) ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಮಗುವಿನ ಜನನ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಮಗುವಿಗೆ ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಎಂದು ಹೆಸರಿಡಲಾಗಿದೆ. ಜನವರಿ 15ರಂದು ಸ್ಯಾನ್ ಡಿಯಾಗೋ ಆಸ್ಪತ್ರೆಯಲ್ಲಿ ರಾತ್ರಿ 8 ಗಂಟೆಗೆ ಮಗು ಜನಿಸಿದ್ದು, ಜೋನಾಸ್ ದಂಪತಿ ಸರೋಗೆಸಿ ಮೂಲಕ ಮಗುವನ್ನು ಪಡೆದಿದ್ದಾರೆ. 

ನಿಕ್ ಮತ್ತು ಪ್ರಿಯಾಂಕಾ ಇಬ್ಬರೂ ಜನವರಿ 22 ರಂದು ಮಗುವಿನ ಜನನದ ಬಗ್ಗೆ ಸೋಷಿಯಲ್ ಮೀಡಿಯಾ (Social Media)ದಲ್ಲಿ ಪೋಸ್ಟ್ ಮಾಡಿದ್ದರು ನಾವು ಬಾಡಿಗೆ ತಾಯಿಯ ಮೂಲಕ ಮಗುವನ್ನು ಸ್ವಾಗತಿಸಿದ್ದೇವೆ ಎಂದು ಖಚಿತಪಡಿಸಲು ನಮಗೆ ತುಂಬಾ ಸಂತೋಷವಾಗಿದೆ. ಈ ವಿಶೇಷ ಸಮಯದಲ್ಲಿ ನಾವು ನಮ್ಮ ಕುಟುಂಬದ ಮೇಲೆ ಕೇಂದ್ರೀಕರಿಸಿದಂತೆ ಗೌಪ್ಯತೆಯನ್ನು ಗೌರವದಿಂದ ಕೇಳುತ್ತೇವೆ. ತುಂಬಾ ಧನ್ಯವಾದಗಳು ಎಂದು ತಿಳಿಸಿದ್ದರು.

ಬಾಲ್ಯದ ಫೋಟೋ ಶೇರ್ ಮಾಡಿ ಪ್ರೀತಿಯ ಅಜ್ಜಿಗೆ ಪ್ರಿಯಾಂಕಾ ಚೋಪ್ರಾ ಬರ್ತಡೇ ವಿಶ್

ಜೋನಾಸ್ ದಂಪತಿಯ ಮಗಳ ಹೆಸರಿನ ಅರ್ಥವೇನು?
ದಂಪತಿಗಳು ಮಗುವಿಗೆ ಮಾಲ್ತಿ ಎಂಬ ಹೆಸರು ಯಾಕಿಟ್ಟರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಪದದ ಸಂಸ್ಕೃತ ಮೂಲವು ಸಣ್ಣ ಪರಿಮಳಯುಕ್ತ ಹೂವು ಅಥವಾ ಚಂದ್ರನ ಬೆಳಕು ಎಂಬ ಅರ್ಥವನ್ನು ಹೊಂದಿದೆ. ಮಾಲತಿ ಸಂಸ್ಕೃತ ಮೂಲದ ಪದವಾಗಿದ್ದು, ಹೂವಿನ ಸುವಾಸನೆ, ಬೆಳದಿಂಗಳು ಎಂಬರ್ಥವಿದೆ. ಮೇರಿ ಎಂದರೆ ಲ್ಯಾಟಿಲ್ ಸ್ಟೆಲಾ ಮೇರಿಸ್ ಎಂದರ್ಥ, ಅಂದರೆ ಸಮುದ್ರದ ತಾರೆ. ಫ್ರೆಂಚ್‌ನಲ್ಲಿ ಜೀಸ್‌ಸ್‌ನ ತಾಯಿ ಎಂಬರ್ಥ ಕೂಡ ಇದೆ ಎಂದು ಹಾಲಿವುಡ್ ಮಾಧ್ಯಮವೊಂದು ವರದಿ ಮಾಡಿದೆ.

ಮಗಳ ಬಗ್ಗೆ ಪ್ರಿಯಾಂಕಾ ಮೊದಲ ಮಾತು
ಮಗುವಿನ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ ( Priyanka Chopra ) ಅವರು, "ನನ್ನ ಆಸೆ, ಭಯವನ್ನು ನನ್ನ ಮಗಳ ಮೇಲೆ ಹೇರಲು ಬಯಸುವುದಿಲ್ಲ. ಇದು ನನ್ನ ಮಗು, ಅದರ ವ್ಯಕ್ತಿತ್ವವನ್ನು ಸರಿಯಾಗಿ ರೂಪಿಸುವೆ. ಮಕ್ಕಳು ಅವರ ಜೀವನವನ್ನು ಅವರೇ ಕಂಡುಕೊಂಡು, ಕಟ್ಟಿಕೊಳ್ಳಬೇಕು. ನನ್ನ ಪಾಲಕರು ಕೂಡ ಇದೇ ಹಾದಿಯಲ್ಲಿ ನಡೆದುಕೊಂಡರು" ಎಂದು ಹೇಳಿದ್ದರು.

ಹೆಣ್ಣು ಮಕ್ಕಳಿಗೆ ಪ್ರಿಯಾಂಕಾ ಚೋಪ್ರಾ ಹೇಳಿದ 12 ಪಾಠಗಳು

12 ವಾರಗಳು ಮುಂಚಿತವಾಗಿ ಪ್ರಿಯಾಂಕಾರ ಮಗಳು, ಬಾಡಿಗೆ ತಾಯಿಯ ಮೂಲಕ ಜನಿಸಿತ್ತು. ಪ್ರೀ-ಮೆಚ್ಯೂರ್ ಬೇಬಿಯಾಗಿರುವುದರಿಂದ ಮಗು, ಬಾಡಿಗೆ ತಾಯಿ ಕೆಲಕಾಲ ಸದರ್ನ್ ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇದ್ದರು, ಇದುವರೆಗೂ ಮಗಳ ಫೋಟೋವನ್ನು ಜೋನಾಸ್ ದಂಪತಿ ರಿವೀಲ್ ಮಾಡಿಲ್ಲ.

ಸರೋಗಸಿ ಮೂಲಕ ಮಗು ಪಡೆದಿದ್ದು ಯಾಕೆ?
2018ರಲ್ಲಿ ನಿಕ್ ಜೋನಾಸ್, ಪ್ರಿಯಾಂಕಾ ಚೋಪ್ರಾ ಅವರು ಜೋಧಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವರ್ಷಗಳ ಕಾಲ ಈ ಜೋಡಿ ಅವರ ಪ್ರೀತಿಯನ್ನು ಗೌಪ್ಯವಾಗಿ ಇಟ್ಟಿತ್ತು. ನಿಕ್ ಜೋನಾಸ್‌ಗೂ ಪ್ರಿಯಾಂಕಾ ಚೋಪ್ರಾಗೂ 10 ವರ್ಷಗಳ ವಯಸ್ಸಿನ ಅಂತರವಿದೆ, ನಿಕ್‌ಗಿಂತ ಪ್ರಿಯಾಂಕಾ 10 ವರ್ಷ ದೊಡ್ಡವರು. ಮದುವೆ ನಂತರ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ, ಪ್ರಿಯಾಂಕಾ ಚೋಪ್ರಾ, ನಿಕ್ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಪ್ರಿಯಾಂಕಾಗೆ 39 ವರ್ಷ ಆಗಿರೋದರಿಂದ ಬಿಡುವಿಲ್ಲದ ಕೆಲಸದ ಮಧ್ಯೆ ಅಂಡೋತ್ಪತ್ತಿ ಆಗುವ ವೇಳೆ ದೈಹಿಕವಾಗಿ ಜೊತೆಗಿದ್ದು ಗರ್ಭ ಧರಿಸುವುದು ಕಷ್ಟ ಎಂದು ಅರಿತು ಜೋನಾಸ್ ದಂಪತಿ ಸರೋಗಸಿಗೆ ಮೊರೆ ಹೋಗಿದ್ದರು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?