ಸಂಬಂಧಗಳು ಎಷ್ಟು ಸುಂದರವಾಗಿವೆಯೋ ಕೆಲವೊಮ್ಮೆ ಅಷ್ಟೇ ಕಗ್ಗಂಟಾಗಿ ಪರಿಣಮಿಸುತ್ತವೆ. ಇಲ್ಲೊಬ್ಬಾಕೆಗೂ ಹಾಗೇ ಆಗಿದೆ, ಮದುವೆಯಾಗಿ ಗರ್ಭಿಣಿಯಾದ ನಂತರ ತಾನು ಮದುವೆಯಾಗಿರೋದು ತನ್ನ ಸೋದರ ಸಂಬಂಧಿಯನ್ನೇ ಎಂಬ ವಿಚಾರ ಬಯಲಾಗಿದೆ. ಆ ನಂತ್ರ ಏನಾಯ್ತು. ಇಲ್ಲಿದೆ ಹೆಚ್ಚಿನ ಮಾಹಿತಿ.
ಕುಟುಂಬ ಎಂಬುದು ಒಂದು ಸುಂದರವಾದ ಬಾಂಧವ್ಯ. ಆದ್ರೆ ಇದು ಕೆಲವೊಮ್ಮೆ ಸಂಪೂರ್ಣವಾಗಿ ಅರ್ಥವಾಗದಿದ್ದರೆ ಕಗ್ಗಂಟಾಗಿಯೂ ಪರಿಣಮಿಸಬಹುದು. ಇತ್ತೀಚೆಗೆ ಮಾರ್ಸೆಲ್ಲಾ ಹಿಲ್ ಎಂಬ ಮಹಿಳೆ (Woman) ಇಂಥದ್ದೇ ಸಮಸ್ಯೆ ಎದುರಿಸಿದ್ದರು. ಮದುವೆಯಾಗಿ ಖುಷಿಯಿಂದ ಜೀವನ ನಡೆಸುತ್ತಿದ್ದ ಮಹಿಳೆ ಗರ್ಭಿಣಿಯೂ ಆಗಿದ್ದರು. ಆದ್ರೆ ಇತ್ತೀಚಿಗೆ ಅವರಿಗೆ ತಾನು ಮದುವೆಯಾಗಿರುವುದು ತನ್ನ ಸೋದರ ಸಂಬಂಧಿ (Brother)ಯನ್ನೇ ಎಂಬ ವಿಚಾರ ತಿಳಿದುಬಂದಿದೆ. ಈ ಬಗ್ಗೆ ಅವರು ಟಿಕ್‌ಟಾಕ್‌ನಲ್ಲಿ ಹೇಳಿಕೊಂಡಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.
ಗರ್ಭಿಣಿಯಾಗಿದ್ದಾಗ ಆಕೆ ತನ್ನ ಪತಿ ತನ್ನ ಸೋದರಸಂಬಂಧಿ ಎಂದು ಅವಳು ಹೇಗೆ ಕಂಡುಕೊಂಡಳು ಎಂಬ ಕುತೂಹಲದ ವಿಷಯ ಈ ವಿಡಿಯೋದಲ್ಲಿ ಇದೆ. 'ನನ್ನದು ದೊಡ್ಡ ಕುಟುಂಬ. ನಾನು ಆಕಸ್ಮಿಕವಾಗಿ ನನ್ನ ಸೋದರಸಂಬಂಧಿಯನ್ನು ಮದುವೆಯಾಗಿದ್ದೇನೆ ಎಂದು ನನಗೇ ಗೊತ್ತಿರಲಿಲ್ಲ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ, ಕುಟುಂಬದ ಬಗ್ಗೆ ಸ್ಟಡಿ ಮಾಡುತ್ತಿದ್ದೆ. ಆಗಲೇ ತಿಳಿದದ್ದು ನನಗೆ ಮತ್ತು ಪತಿಗೆ ಒಂದೇ ಅಜ್ಜ ಮತ್ತು ಅಜ್ಜಿ ಇದ್ದಾರೆ ಎಂದು. ನನಗೆ ದಿಗ್ಭ್ರಮೆಯಾಯಿತು' ಎಂದು ಮಾರ್ಸೆಲ್ಲಾ ಹೇಳಿದ್ದಾರೆ.
ಯಪ್ಪಾ..ಫಸ್ಟ್‌ನೈಟ್‌ಗೆ ಬೆಡ್‌ರೂಮ್‌ನಲ್ಲಿ ದಂಪತಿ ಜೊತೆ ವಧು ತಾಯಿಯೂ ಇರ್ಬೇಕಂತೆ !
ಸೋದರ ಸಂಬಂಧಿಯನ್ನೇ ಮದ್ವೆಯಾದ ಮಹಿಳೆ
ಮಾರ್ಸೆಲ್ಲಾ ಮತ್ತು ಅವರ ಪತಿ (Husband) ಸತ್ಯವನ್ನು ದೃಢೀಕರಿಸಲು ಅಜ್ಜಿಯರನ್ನು ಕೇಳಲು ಮುಂದಾದರು. ಅಜ್ಜಿಯರ ಬಳಿ ಈ ವಿಚಾರದ ಚರ್ಚೆ ನಡೆಸಿದಾಗ ಮಹಿಳೆ ಹಾಗೂ ಅವರ ಪತಿ ಇಬ್ಬರೂ ಸೋದರ ಸಂಬಂಧ ಹೊಂದಿದ್ದರು ಎಂಬುದು ಗೊತ್ತಾಗಿದೆ. ಮಾತ್ರವಲ್ಲ, ಅವರು ಒಟ್ಟಿಗೆ ಬೆಳೆದಿದ್ದರು ಮತ್ತು ಮಕ್ಕಳಂತೆ ಒಟ್ಟಿಗೆ ವಾಸಿಸುತ್ತಿದ್ದರು. ಅವಳು ಮತ್ತು ಅವಳ ಪತಿ ಮೂರನೇ ಸೋದರಸಂಬಂಧಿ ಎಂದು ಅವಳು ಅರಿತುಕೊಂಡಿದ್ದಾಗಿ ಮಾರ್ಸೆಲ್ಲಾ ಹೇಳಿದ್ದಾರೆ. 42 ವರ್ಷದ ಮಾರ್ಸೆಲ್ಲಾ ಹಿಲ್ ಟಿಕ್‌ಟಾಕ್‌ನಲ್ಲಿಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಟಿಕ್‌ಟಾಕ್‌ನಲ್ಲಿ ಮಾರ್ಸೆಲ್ಲಾ, ಸುಮಾರು 300,000 ಅನುಯಾಯಿಗಳನ್ನು ಹೊಂದಿದ್ದಾರೆ. ವೀಡಿಯೋ ಒಂದು ಮಿಲಿಯನ್ ವೀಕ್ಷಣೆಯನ್ನು ಗಳಿಸಿದೆ.
ಮಾರ್ಸೆಲ್ಲಾ ಹಿಲ್, 42, ಕಳೆದ ಸೋಮವಾರ ಟಿಕ್‌ಟಾಕ್‌ನಲ್ಲಿ ಸುಮಾರು 300,000 ಅನುಯಾಯಿಗಳಿಗೆ ತನ್ನ ಮತ್ತು ಅವರ ಪತಿ ತೇಜ್ ಬಗ್ಗೆ ಬಹಿರಂಗಪಡಿಸುವಿಕೆಯನ್ನು ಹಂಚಿಕೊಂಡಿದ್ದಾರೆ. ನಾಲ್ಕು ಮಕ್ಕಳೊಂದಿಗೆ (Children) ಸಂಯೋಜಿತ ಕುಟುಂಬವನ್ನು ಹೊಂದಿರುವ ದಂಪತಿಗಳು ಮಾರ್ಚ್‌ನಲ್ಲಿ ತಮ್ಮ 12ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ.
ಸೋದರ ಸಂಬಂಧಿಯನ್ನೇ ಮದ್ವೆಯಾಗುವುದರಿಂದ ತೊಂದ್ರೆ ಇದ್ಯಾ ?
ಸೋದರ ಸಂಬಂಧಿಯನ್ನೇ ಮದುವೆ (Marriage)ಯಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ದಂಪತಿ (Couple), ತಕ್ಷಣ ಈ ರೀತಿ ಮದುವೆಯಾಗುವುದರಿಂದ ಆಗೋ ಅಡ್ಡಪರಿಣಾಮಗಳ (Side effects) ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದರು. ಅದೃಷ್ಟವಶಾತ್ ಮೂರನೇ ಸೋದರ ಸಂಬಂಧಿಯನ್ನು ಮದುವೆಯಾಗುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ತಿಳಿದುಬಂದ ಕಾರಣ ದಂಪತಿ ನಿರಾಳವಾದರು. ಸಂಶೋಧಕರು ಮೂರನೇ ಮತ್ತು ನಾಲ್ಕನೇ ಸೋದರಸಂಬಂಧಿಗಳನ್ನು ಮದುವೆಯಾಗುವುದು ಸಂತಾನೋತ್ಪತ್ತಿಗೆ ತುಂಬಾ ಸೂಕ್ತವಾಗಿದೆ ಏಕೆಂದರೆ ಅವರು ಎರಡೂ ಪ್ರಪಂಚದ ಅತ್ಯುತ್ತಮ ಅಂಶವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದರು.
ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!
ಟಿಕ್‌ಟಾಗ್ ವೀಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ನಿಮಗೆ ಇದು ಯಾಕೆ ಮೊದಲೇ ತಿಳಿಯಲ್ಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, 'ಮದುವೆಯ ಸಂದರ್ಭ ಕುಟುಂಬಗಳ ಪರಿಶೀಲನೆ ನಡೆಸಲಿಲ್ಲವೇ' ಎಂದಿದ್ದಾರೆ. 'ನಿಮ್ಮ ಅಜ್ಜಿಯರು ಮದುವೆಯಲ್ಲಿ ಇರಲಿಲ್ಲವೇ' ಎಂದು ಮತ್ತೊಬ್ಬರು ಕೇಳಿದ್ದಾರೆ. ಅದೇನೆ ಇರ್ಲಿ, ಮದುವೆಯಾಗಿ, ಖುಷಿಯಿಂದ ಜೀವನ ನಡೆಸಿ, ನಾಲ್ಕು ಮಕ್ಕಳೂ ಆದ ಬಳಿಕ ಈ ವಿಚಾರ ಗೊತ್ತಾಗಿರುವುದು ವಿಪರ್ಯಾಸವೇ ಸರಿ.