18ರ ಹರೆಯಲ್ಲಿ ಪ್ರೀತಿ, ಆತನಿಗಾಗಿ ತಲೆ ಬೋಳಿಸಿಕೊಂಡ ಯುವತಿ, ಆದರೂ ಕರಗದ ಕೋಪಕ್ಕೆ ದುರಂತ ಅಂತ್ಯ

Published : Apr 03, 2025, 10:04 PM ISTUpdated : Apr 03, 2025, 10:09 PM IST
18ರ ಹರೆಯಲ್ಲಿ ಪ್ರೀತಿ, ಆತನಿಗಾಗಿ ತಲೆ ಬೋಳಿಸಿಕೊಂಡ ಯುವತಿ, ಆದರೂ ಕರಗದ ಕೋಪಕ್ಕೆ ದುರಂತ ಅಂತ್ಯ

ಸಾರಾಂಶ

ದೂರದ ಸಂಬಂಧಿ ಜೊತೆ ಪ್ರೀತಿ ಶುರುವಾಗಿತ್ತು. ಇಬ್ಬರು ಗುಟ್ಟಾಗಿ ಮದುವೆ ಕೂಡ ಆಗಿದ್ದರು. ಆತನ ಕೇಳಿದ ಒಂದು ಪ್ರಶ್ನೆಗೆ ತಲೆ ಬೋಳಿಸಿಕೊಂಡು ಉತ್ತರ ನೀಡಿದ್ದಳು. ಈಕೆಯ ಪ್ರೀತಿಯಲ್ಲಿ ಒಂದಿಂಟು ಕಲ್ಮಷ ಇರಲಿಲ್ಲ. ಆದರೆ ದಿಢೀರ್ ಈಕೆಯಿಂದ ದೂರವಾದ ಪ್ರೀತಿಯಿಂದ ಕಂಗಾಲಾಗಿದ್ದಾಳೆ. ಸುಂದರ ಜಗತ್ತಿಗೆ ಗುಡ್ ಬೈ ಹೇಳಿದ ಕರುಣಾಜನಕ ಘಟನೆ ಇದು.

ನವದೆಹಲಿ(ಏ.03) ಪ್ರೀತಿ ಬಳಿಕ ಮನಸ್ತಾಪ, ದುರಂತ ಅಂತ್ಯದ ಹಲವು ಘಟನೆಗಳು ವರದಿಯಾಗಿದೆ. ಆದರೆ ಈ ಘಟನೆ ಮತ್ತೆ ಮತ್ತೆ ಕಾಡುತ್ತೆ. ಕಾರಣ ಆಕೆ 18ರ ಹರೆಯದ ಹುಡುಗಿ. ದೂರದ ಸಂಬಂಧಿಯನ್ನೇ ಪ್ರೀತಿಸಿದ್ದಳು. ಮೊದಲು ಆ ಸಂಬಂಧಿಯೇ ಪ್ರಪೋಸ್ ಮಾಡಿದ್ದ. ಈಕೆಯೂ ಪ್ರೀತಿಸುತ್ತಿದ್ದ ಕಾರಣ ಪ್ರಪೋಸಲ್ ಒಕೆಯಾಗಿ ಪ್ರಣಯ ಹಕ್ಕಿಗಳಾಗಿದ್ದರು. ಇದರ ನಡುವೆ ಗುಟ್ಟಾಗಿ ಮದುವೆಯನ್ನು ಆಗಿದ್ದರೂ. ಆತನಿಗಾಗಿ ತಲೆಯನ್ನು ಬೋಳಿಸಿಕೊಂಡಿದ್ದಳು. ಆದರೆ ದಿಢೀರ್ ಈಕೆಯಿಂದ ಆತ ದೂರವಾಗಿದ್ದ. ಅಲ್ಲಿಗೆ ತನ್ನ ನಿಷ್ಕಲ್ಮಷ ಪ್ರೀತಿಗೆ ಫುಲ್ ಸ್ಟಾಪ್ ಬಿದ್ದಿತ್ತು. ಇತ್ತ ಹುಡುಗಿ ದುರಂತ ಅಂತ್ಯಕಂಡ ಘಟನೆ ದೆಹಲಿಯಲ್ಲಿ ನಡೆದಿದೆ.

ದೂರದ ಸಂಬಂಧಿ ಜೊತೆ ಪ್ರೀತಿ
ಆಕೆಯ ಹೆಸರು ಪ್ರೀತಿ ಕುಶ್ವಾಹ, ವಯಸ್ಸು 18. ದೆಹಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. 2 ವರ್ಷಗಳ ಹಿಂದೆ ಕುಶ್ವಾಹ ಕುಟುಂಬ ಹುಟ್ಟೂರಿಗೆ ತೆರಳಿತ್ತು. ಹತ್ತಿರದ ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಕೆಲ ದಿನಗಳ ರಜೆ ಪಡೆದು ಕುಟುಂಬದ ಜೊತೆ ಊರಿಗೆ ತೆರಳಿದ್ದ ಪ್ರೀತಿ ಕುಶ್ವಾಹಗೆ ಅದೇ ಮದುವೆಯಲ್ಲಿ ದೂರದ ಸಂಬಂಧಿಯೊಬ್ಬ ಪರಿಚಯವಾಗಿದ್ದ. ಆತನ ಹೆಸರು ರಿಂಕು. 

180 ರೂಪಾಯಿ ಟೋಲ್‌ ಉಳಿಸಲು ಹೋಗಿ ಪ್ರಾಣಬಿಟ್ಟ ಒಂದೇ ಕುಟುಂಬದ ನಾಲ್ವರು!

ಪ್ರಣಯ ಹಕ್ಕಿಗಳ ಸುತ್ತಾಟ
ಇವರ ಪರಿಚಯ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಫೋನ್ ನಂಬರ್ ಎಕ್ಸ್‌ಚೇಂಜ್ ಆಗಿತ್ತು. ಪ್ರೀತಿ ಕಶ್ವಾಹ ಮರಳಿ ದೆಹಲಿಗೆ ಬಂದರೂ ಇವರ ಫೋನ್ ಸಂಭಾಷಣೆ ಮುಂದುವರಿದಿತ್ತು. ಪ್ರೀತಿ ಕುಶ್ವಾಹಗೆ ರಿಂಕು ಮೇಲೆ ಪ್ರೀತಿ ಹೆಚ್ಚಾಗಿತ್ತು. ಅತ್ತ ರಿಂಕೂ ಕತೆನೂ ಇದೆ. ಆತನೇ ಪ್ರಪೋಸ್ ಕೂಡ ಮಾಡಿದ್ದ. ರೋಗಿ ಬಯಸಿದ್ದು ಹಾಲು, ವೈದ್ಯರು ಹೇಳಿದ್ದು ಹಾಲು ಅನ್ನೋ ಹಾಗೆ ಆತ ಪ್ರಪೋಸಲ್ ಮಾತುಗಳು ಮುಗಿಯುವ ಮುನ್ನವೇ ಈಕೆ ಒಕೆ ಎಂದಿದ್ದಳು. ಅಲ್ಲಿಗೆ ಪ್ರಣಯ ಹಕ್ಕಿಗಳಾಗಿದ್ದರು.

ಭೇಟಿಯಾಗಲು ರಿಂಕು ದೆಹಲಿಗೆ ಬರುತ್ತಿದ್ದ. ಜೊತೆಯಾಗಿ ಸುತ್ತಾಡುತ್ತಿದ್ದರು. ಪ್ರವಾಸಕ್ಕೂ ತೆರಳಿದ್ದರು. ಇದರ ನಡುವೆ ಪ್ರೀತಿ ಗಾಢವಾಗಿತ್ತು. ಇಬ್ಬರು ಸೀಕ್ರೆಟ್ ಆಗಿ ಮದುವೆಯಾಗಿದ್ದರು. ಇದು ಕುಟುಂಬಸ್ಥರಿಗೆ, ಮನೆಯವರಿಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಪ್ರೀತಿ ಕುಶ್ವಾಹ ಕೆಲ ಆಪ್ತ ಸ್ನೇಹಿತರಿಗೆ ತಿಳಿದಿತ್ತು. ಕಳೆದೆರಡು ವರ್ಷದಿಂದ ಇವರ ಪ್ರೀತಿ ಮುಂದುವರಿದಿತ್ತು. ಮನೆಯವರ ಒಪ್ಪಿಸಿ ಮದುವೆಗೆ ಈಕೆ ತಯಾರಿ ಆರಂಭಿಸಿದ್ದಳು.

ತಲೆ ಬೋಳಿಸಿಕೊಂಡಿದ್ದ ಪ್ರೀತಿ
ಇದರ ನಡುವೆ ರಿಂಕು ಒಂದು ಪ್ರಶ್ನೆ ಕೇಳಿದ್ದ. ನಿನ್ನ್ನು ಬೇರೆ ಯಾರಾದರೂ ಇಷ್ಟ ಪಟ್ಟರೇ ಎಂದು ಮಾತುಕತೆಯಲ್ಲಿ ಕೇಳಿದ್ದ. ಪ್ರೀತಿ ಕುಶ್ವಾಹ ಪ್ರೀತಿ ಅಶಲಿಯಾಗಿತ್ತು. ಹೃದಯ ಮನಸ್ಸು, ಎಲ್ಲವೂ ಆತನೇ ಆಗಿದ್ದ. ಈಕೆಯ ಪ್ರೀತಿಯಲ್ಲಿ ಎಳ್ಳಷ್ಟು ಮೋಸ ಇರಲಿಲ್ಲ. ಆದರೆ ಈ ಪ್ರಶ್ನೆಗೆ ಆಕೆ ಮಾತಿನಲ್ಲಿ ಉತ್ತರ ನೀಡಲಿಲ್ಲ. ಬದಲಾಗಿ, ತಕ್ಷಣವೇ ಪಾರ್ಲರ್‌ಗೆ ತೆರಳಿ ತಲೆ ಬೋಳಿಸಿಕೊಂಡಿದ್ದಳು. ಬಳಿಕ ವಿಡಿಯೋ ಕಾಲ್ ಮಾಡಿ, ನನ್ನ ಈಗ ಯಾರೂ ಇಷ್ಟಪಡಲ್ಲ. ನನಗೆ ನೀನು ಮಾತ್ರ ಇಷ್ಟ. ಇನ್ಯಾರೂ ನನಗೆ ಬೇಡ ಎಂದಿದ್ದಳು. 

ಶುರುವಾಯ್ತು ಮನಸ್ತಾಪ
ಮದುವೆ ಕುರಿತು ಈಕೆ ಒತ್ತಾಯ ಮಾಡುತ್ತಿದ್ದಂತೆ ರಿಂಕು ಅಸಲಿ ಸ್ವಭಾವ ಹೊರಬಂದಿತ್ತು. ಮದುವೆ ಮುಂದೂಡಲು ಆರಂಭಿಸಿದ್ದ. ಇದೇ ಕಾರಣದಿಂದ ಮನಸ್ತಾಪ ಆಗಿತ್ತು. ದಿಢೀರ್ ಈಕೆಯ ಫೋನ್ ಸ್ವೀಕರಿಸದೇ ದೂರವಿದ್ದ. ಮಾತು ಕೂಡ ಬಿಟ್ಟಿದ್ದ. ಬಳಿಕ ಆಕೆಯ ನಂಬರ್ ಬ್ಲಾಕ್ ಮಾಡಿದ್ದ. ಅದೇನೇ ಪ್ರಯತ್ನ ಮಾಡಿದರೂ ರಿಂಕು ಮನಸ್ಸು ಕರಗಲೇ ಇಲ್ಲ. ಇತ್ತ ಬೇರೆ ದಾರಿ ಕಾಣದ ಪ್ರೀತಿ ಇಹಲೋಹ ತ್ಯಜಿಸಿದ್ದಳು. 

'ಕೊನೆಯ ಅಡುಗೆ ಮಾಡಿದ್ದೇನೆ, ಊಟ ಮಾಡಿ, ಜೀವನ ಸಾಕಾಗಿದೆ' ಎಂದು ಪತಿಗೆ ಹೇಳಿ ಜೀವಕ್ಕೆ ವಿದಾಯ ಹೇಳಿದ ಶಿಕ್ಷಕಿ!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು