ಅಮೆರಿಕದಲ್ಲಿ ಈಗ ಸ್ಪೈಟ್ ಪೋರ್ನ್ ಅಥವಾ ಬೈಗುಳ ಪೋರ್ನ್‌ನ ಟ್ರೆಂಡ್. ಮಾಜಿ ಪ್ರಿಯಕರ ಅಥವಾ ಮಾಜಿ ಗೆಳತಿಗೆ ಕರೆ ಮಾಡಿ ಅಶ್ಲೀಲವಾಗಿ ಬೈಯುವುದು ಇದರ ಸ್ವರೂಪ.
ಅವಳೊಬ್ಬ ಎಕ್ಸ್ ರೇಟೆಡ್ ಪೋರ್ನ್ ನಟಿ. ಆಕೆ ಇತ್ತೀಚೆಗೆ ಮೀಡಿಯಾ ಮುಂದೆ ಬಂದು ಸದ್ಯದ ಪೋರ್ನ್ ಟ್ರೆಂಡ್ ಬಗ್ಗೆ ಮಾತಾಡಿದ್ದಾಳೆ. ಅವಳು ಹೇಳೋ ಪ್ರಕಾರ ಈಗ ಬಹಳ ಫೇಮಸ್ ಆಗ್ತಿರೋದು ಸ್ಪೈಟ್ ಪೋರ್ನ್. ಅಮೆರಿಕಾದಲ್ಲೆಲ್ಲ ಹುಡುಗ, ಹುಡುಗೀರಿಂದ ಮುದುಕ ಮುದುಕೀರವರೆಗೆ ಹೆಚ್ಚಿನವರು ಈ ಸ್ಪೈಟ್ ಪೋರ್ನ್ಗೆ ಮುಗಿ ಬೀಳ್ತಿದ್ದಾರೆ. ಅಮೆರಿಕಾದಲ್ಲಿ ನಮ್ಮ ಥರ ಲಾಕ್‌ಡೌನ್ ಇಲ್ಲದಿದ್ದರೂ ಕೊರೋನಾಗೆ ಹೆದರಿ ಎಲ್ಲ ಮನೆ ಸೇರ್ಕೊಂಡಿದ್ದಾರೆ. ಮನೆಯಲ್ಲಿ ಕೆಲಸ ಇಲ್ಲದೇ ಇರುವಾಗ ಬೇಡ ಬೇಡ ಅಂದರೂ ನೆನಪಾಗೋದು ಎಕ್ಸ್‌ಗಳು. ಅವರಿಂದ ಆದ ನೋವು, ಅವಮಾನಗಳು. ಕೆಲವರು ಅದನ್ನೆಲ್ಲ ಮರೆತು ಮಾಜಿ ಪ್ರಿಯಕರರನ್ನು ಮತ್ತೆ ಸಂಪರ್ಕಿಸುವ ಪ್ರಯತ್ನ ಮಾಡಿದರೆ, ಹೆಚ್ಚಿನವರು ಅವರ ವಿರುದ್ಧ ರಿವೆಂಜ್ ತೀರಿಸಿಕೊಳ್ಳುವ ಹಪಿಹಪಿಯಲ್ಲಿರುತ್ತಾರೆ.
ಇವರ ಈ ಮೆಂಟಾಲಿಟಿಯನ್ನು ಅಲ್ಲಿನ ಪೋರ್ನ್ ಇಂಡಸ್ಟ್ರಿ ಚೆನ್ನಾಗಿ ಬಳಸಿಕೊಳ್ತಿದೆ. ಇಲ್ಲಿರುವ ಪೋರ್ನ್ ನಟ ನಟಿಯರಿಗೆ ಹೊಸ ಹೊಸ ಬೇಡಿಕೆಗಳು ಬರುತ್ತಿವೆ. ಶುರು ಶುರುವಿಗೆ ಈ ಬೇಡಿಕೆಗಳು ಚಕಿತಗೊಳಿಸುವ ಹಾಗಿದ್ದವು. ಆದರೆ ಅದಕ್ಕೆ ಸರಿಯಾಗಿ ರೆಸ್ಪಾನ್ಸ್ ಸಿಕ್ಕಿದ್ದೇ ಸ್ಪೈಟ್ ಪೋರ್ನ್ ಅನ್ನೋದು ಪೋರ್ನ್ ಇಂಡಸ್ಟ್ರಿಯ ಹಣದ ಹರಿವನ್ನು ಇನ್ನಷ್ಟು ಹೆಚ್ಚಿಸಿದೆ.
#Feelfree: ಮೊದಲ ರಾತ್ರಿ ಅವಳನ್ನು ಗೆಲ್ಲುವೆನೋ ಇಲ್ವೋ ಎಂಬ ಭಯ!
ಅಷ್ಟಕ್ಕೂ ಸ್ಪೈಟ್ ಪೋರ್ನ್ ಅಂದರೇನು?
ನೀವು ನಿಮ್ಮ ಬಾಯ್ ಫ್ರೆಂಡ್‌ನಿಂದಲೋ, ಗರ್ಲ್ ಫ್ರೆಂಡ್‌ನಿಂದಲೋ ಮೋಸ ಹೋಗಿದ್ದೀರಿ ಅಥವಾ ನೋವು ಅನುಭವಿಸಿದ್ದೀರಿ ಇಲ್ಲವೇ ಅವರ ಬಗ್ಗೆ ನಿಮಗೆ ಸಿಕ್ಕಾಪಟ್ಟೆ ಸಿಟ್ಟಿದೆ. ಒಂಚೂರು ಏಕಾಂತ ಸಿಕ್ಕರೂ ಅವರ, ಅವರು ಮಾಡಿದ ಅವಮಾನದ ನೆನಪಾಗಿ ಮೈ ಕೈ ಪರಚಿಕೊಳ್ಳುವಷ್ಟು ಇರಿಟೇಟ್ ಆಗುತ್ತೆ. ನೀವು ಜಬ್ ವಿ ಮೆಟ್ ಸಿನಿಮಾ ನೋಡಿರಬಹುದು. ಅದರಲ್ಲಿ ಕರೀನಾ ಕಪೂರ್ ಪಾತ್ರ ನೆನಪಿಸಿಕೊಳ್ಳಿ. ಬಾಯ್ ಫ್ರೆಂಡ್‌ನಿಂದ ಮೂಲೆಗೆ ಎಸೆಯಲ್ಪಟ್ಟರೂ, ಅವನಿಂದ ಎಷ್ಟೇ ಬೈಸಿಕೊಂಡರೂ, ಏನೇ ಮಾಡಿದರೂ ಅವಳಿಗೆ ಅವನ ನೆನಪಿನಿಂದ ಹೊರ ಬರಲಿಕ್ಕಾಗುವುದಿಲ್ಲ. ಕೊನೆಗೆ ಶಾಹಿದ್ ಕಪೂರ್ ಅವಳ ದುಃಖ ಮರೆಸಿದ್ದು, ಬಾಯ್ ಫ್ರೆಂಡ್ಗೆ ಕಾಲ್ ಮಾಡಿ ಚೆನ್ನಾಗಿ ಬೈಯಿಸುವ ಮೂಲಕ. ಇತ್ತೀಚೆಗೆ ಬಂದ ಲವ್ ಮಾಕ್ಟೇಲ್ ಸಿನಿಮಾದಲ್ಲೂ ಅಂಥಾದ್ದೊಂದು ಸಣ್ಣ ಸೀಕ್ವೆನ್ಸ್ ಇದೆ. ಅಲ್ಲಿಗೆ ಎಕ್ಸ್ ಪ್ರೇಯಸಿ ಅಥವಾ ಪ್ರಿಯತಮನನ್ನು ಮನಸ್ಸಿಂದ ಹೊರ ಹಾಕಲಿಕ್ಕೆ ಬೈಯ್ಯೋದು ಬೆಸ್ಟ್ ದಾರಿ ಅಂದ ಹಾಗಾಯ್ತಲ್ಲಾ. ಈ ಮೈಂಡ್ ಸೆಟ್ ಅನ್ನು ಪೋರ್ನ್ ಇಂಡಸ್ಟ್ರಿ ಸಖತ್ ಚಾಲೂ ಆಗಿ ಬಳಸಿಕೊಂಡಿದೆ.
ಪೌರಾಣಿಕ ಕತೆಗಳ ಪರಮ ಪ್ರೇಮಿಗಳಿವರು
ಕಾಸು ಕೊಟ್ಟು ಅಶ್ಲೀಲವಾಗಿ ಬೈಯಿಸಿ
ನೀವು ಎಕ್ಸ್ ರೇಟೆಡ್ ನಟಿ ಅಥವಾ ನಟನಾಗಿದ್ದರೆ ಇಂಥ ಸ್ಪೈಟ್ ಪೋರ್ನ್‌ಗೆ ಅರ್ಹ ವ್ಯಕ್ತಿ. ಸಾಕಷ್ಟು ಅಶ್ಲೀಲ ಬೈಗುಳ ಉಪಯೋಗಿಸಲು ಗೊತ್ತಿರಬೇಕು. ಪೋರ್ನ್ ಇಂಡಸ್ಟ್ರಿಯಲ್ಲಿ ಏನು ನಡೆಯತ್ತದೆ ಅಂತ ಗೊತ್ತಿರಬೇಕು. ಕೇಟ್ ಅನ್ನುವ ನಟಿ ತನ್ನ ಮಾಜಿ ಪ್ರಿಯಕರನಿಗೆ, ಹೊಸ ಪೋರ್ನ್ ನಟ ಗೆಳೆಯನಿಂದ ಬೈಯಿಸಿದ್ದು ಕ್ರಿಯೇಟಿವ್ ಆಗಿತ್ತು. ತನ್ನ ಮಾಜಿ ಪ್ರಿಯಕರ ತನ್ನ ಜೊತೆ ಲೈಂಗಿಕವಾಗಿ ಹೇಗೆ ಸುಖಪಟ್ಟ, ನಂತರ ಹೇಗೆ ಕೈಕೊಟ್ಟ, ತನಗೆ ಸುಖ ಕೊಡಲು ಅವನಿಂದ ಹೇಗೆ ಸಾಧ್ಯವೇ ಆಗಲಿಲ್ಲ, ಅವನ ಪುರುಷತ್ವ ಹೇಗೆ ಕೆಲವೇ ಕ್ಷಣಗಳಲ್ಲಿ ಖಲಾಸ್ ಆಗಿಬಿಡುತ್ತಿತ್ತು, ಅವನಿಗೆ ಹೇಗೆ ಶೀಘ್ರಸ್ಖಲನ ಆಗುತ್ತಿತ್ತು, ಅವನಿಂದ ಯಾವತ್ತೂ ತನಗೆ ಹೇಗೆ ಸುಖವೇ ಸಿಗದಂತಾಯಿತು, ಅವನಿಗೆ ಹೊಸ ಭಂಗಿಗಳು ಹೇಗೆ ಗೊತ್ತೇ ಇರಲಿಲ್ಲ, ಅವನು ಕ್ರಿಯೇಟಿವ್ ಅಲ್ಲದ ಮೂರ್ಖನಾಗಿದ್ದ- ಹೀಗೆಲ್ಲ ನಗೆ ಬರುವಂತೆ ಜರೆದಿದ್ದಾಳೆ. ಇದನ್ನು ಕೇಳಿದವರು ಆ ಪ್ರಿಯಕರನ ಅವಸ್ಥೆಗೆ ನಗುವುದು ಮಾತ್ರವಲ್ಲ, ಅದರಲ್ಲಿ ಉಪಯೋಗಿಸಿದ ಲೈಂಗಿಕ ವಿವರಗಳಿಂದಾಗಿ ಕಾಮಪ್ರಚೋದನೆಗೆ ಒಳಗಾಗುವುದೂ ಸಾಧ್ಯ. ಇದು ಬೈಗುಳ ಪೋರ್ನ್‌ನ ವಿಚಿತ್ರ ಲಾಭ ಹಾಗೂ ಬಹುಮುಖಿ ಪ್ರಯೋಜನ.
ಒಬ್ಬಾಕೆ ಐವರ ಪತ್ನಿಯಾಗುವ ದ್ರೌಪದಿ ಪದ್ಧತಿ ನಿಜಕ್ಕೂ ಭಾರತದಲ್ಲಿದೆ!
ಈ ಬಗೆಯ ಪೋರ್ನ್ ಇನ್ನೊಂದು ವಿಧಾನದಿಂದಲೂ ಚಾಲ್ತಿಯಲ್ಲಿತ್ತು ಅನ್ನಲಾಗುತ್ತದೆ. ಅದೇ ಹಿಂಸಾರತಿ ಅಥವಾ ಸ್ಯಾಡಿಸಂ. ಲೈಂಗಿಕವಾಗಿ ಹಿಂಸೆಯನ್ನು ಆನಂದಿಸುವವರು ಸಂಗಾತಿಯಿಂದ ನಿಂದಿಸಿಕೊಂಡು ಅಥವಾ ಸಂಗಾತಿಯನ್ನು ನಿಂದಿಸಿ ಒಂದು ಬಗೆಯ ಸಂತೃಪ್ತಿ ಅನುಭವಿಸುವುದು ಇದೆ. ಇದು ಕೂಡ ಸ್ಪೈಟ್ ಪೋರ್ನ್‌ನ ಇನ್ನೊಂದು ವಿಧ ಇರಬಹುದು.