ವೈವಾಹಿಕ ಜೀವನ ಬೋರಿಂಗ್ ಎನ್ನುವವರಿಗೆ...

By Suvarna News  |  First Published May 23, 2020, 1:37 PM IST

ವೈವಾಹಿಕ ಜೀವನ ಬೋರಿಂಗ್, ಪಾರ್ಟ್ನರ್ ಸಿಕ್ಕಾಪಟ್ಟೆ ಬೋರಿಂಗ್ ಎಂದು ಅನಿಸುತ್ತಿದ್ದರೆ, ತಡವಾಗುವ ಮುನ್ನವೇ ಈ ಬಗ್ಗೆ ನೀವು ಬದಲಾವಣೆಗಾಗಿ ಸ್ವಲ್ಪ ಜಾಗೃತರಾಗಬೇಕು. 


ಹಾಗೆ ನೋಡಿದರೆ ಯಾವುದು ತಾನೇ ಬೋರಿಂಗ್ ಅಲ್ಲ ಹೇಳಿ? ಹೆಚ್ಚು ಕಾಲ ಒಂಟಿಯಾಗಿದ್ದರೆ ಒಂಟಿತನವೂ ಬೋರೆನಿಸುತ್ತದೆ, ಪ್ರೀತಿಯಲ್ಲಿ ಮೂರ್ನಾಲ್ಕು ವರ್ಷ ಕಳೆದರೆ ಪ್ರೀತಿ ಮಾತುಗಳೂ ಹಳಸಲಾಗಿ ಪ್ರೀತಿಯೂ ಬೋರಿಂಗ್ ಎನಿಸುತ್ತದೆ. ಇನ್ನು ವೈವಾಹಿಕ ಜೀವನ ಅರ್ಧ ಶತಮಾನದ ಯಾತ್ರೆ... ಆಗಾಗ ಬೋರಿಂಗ್ ಎನಿಸುವುದರಲ್ಲಿ ವಿಶೇಷವೇನಿಲ್ಲ. ಬದುಕಿರುವುದೇ ಹಾಗೆ. ಯಾವುದಾದರೂ ಏಕತಾನತೆಗೆ ತಿರುಗುತ್ತಲೇ ಬೋರಿಂಗ್ ಆಗಿಬಿಡುತ್ತದೆ. ಆಗ ಅಲ್ಲೊಂಚೂರು ಬದಲಾವಣೆಯನ್ನು ನಾವೇ ತಂದುಕೊಳ್ಳಬೇಕು. ಬಹಳ ಸಮಯ ಬೋರ್ ಎನ್ನುವ ಭಾವ ಕೂತುಬಿಡಲು ಬಿಡಬಾರದು. ಇದು ವಿವಾಹಕ್ಕೂ ಅನ್ವಯಿಸುತ್ತದೆ. ಏಕೆಂದರೆ, ಸಮಯ ಕಳೆದಂತೆಲ್ಲ ಹೆಚ್ಚು ಹೆಚ್ಚು ಸವಾಲೊಡ್ಡುತ್ತಾ ಹೋಗುತ್ತದೆ ವೈವಾಹಿಕ ಜೀವನ. ಅವುಗಳನ್ನು ಗೆಲ್ಲುತ್ತಾ ಹೋಗಬೇಕು. 

ಮುಟ್ಟಾದಾಗ ಸ್ನಾನ ಮಾಡಿದ್ರೆ ಹೆಣ್ಣು ಬಂಜೆಯಾಗುತ್ತಾಳೆ!

ಸಾಮಾನ್ಯವಾಗಿ ಪತಿ ಅಥವಾ ಪತ್ನಿಯಾಗುವವರ ಬಗ್ಗೆ ನಮಗೊಂದು ಕಲ್ಪನೆಯಿರುತ್ತದೆ. ಕಲ್ಪನೆಗೆ ಮಿತಿಯಿಲ್ಲದ ಕಾರಣ, ಬಹುತೇಕರು ಅಲ್ಲೊಬ್ಬ ಹೀರೋ ಅಥವಾ ಹೀರೋಯಿನ್ನನ್ನೇ ಊಹಿಸಿಕೊಂಡಿರುತ್ತಾರೆ. ಸಾಹಸ, ಸದಾ ಕಾಲ ಹೊಸತನದ ಹುಡುಕಾಟ, ಆದರ್ಶ, ವೈವಿಧ್ಯತೆಯ ಬದುಕು ಇತ್ಯಾದಿ ಇತ್ಯಾದಿ... ಆದರೆ, ನಮ್ಮ ಕಲ್ಪನೆಗಳಲ್ಲಿ ದುಡಿಯುವ ಕಷ್ಟ, ಸಂಸಾರದಲ್ಲೆದುರಾಗುವ ಸಮಸ್ಯೆಗಳನ್ನು ಊಹಿಸಿಕೊಳ್ಳಲು ನಾವು ಇಷ್ಟಪಡುವವರಲ್ಲ. ಹಾಗಾಗಿ, ನೈಜ ಜೀವನಕ್ಕೆ ಎದುರಾದಾಗ ಇವೆಲ್ಲವನ್ನೂ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಎಲ್ಲ ಸವಾಲುಗಳನ್ನು ಎದುರಿಸುತ್ತಲೇ ಕನಸುಗಳನ್ನು ಈಡೇರಿಸಿಕೊಳ್ಳಬೇಕಾದ ಅನಿವಾರ್ಯತೆ ಕಬ್ಬಿಣದ ಕಡಲೆಯಂತೆ ಕಾಣತೊಡಗುತ್ತದೆ. ಪತಿ ಅಥವಾ ಪತ್ನಿ ಬಹಳ ಬೋರಿಂಗ್ ಎನಿಸಿದರೆ ಅವರು ನಿಜವಾಗಿ ಬೋರಿಂಗ್ ಅಲ್ಲ, ನಮ್ಮ ಕಲ್ಪನೆ ಬೇರೆ ಇತ್ತು ಅಷ್ಟೇ, ಅಥವಾ ಆಸಕ್ತಿಗಳು ವಿಭಿನ್ನವಾಗಿರುತ್ತವೆ ಅಷ್ಟೇ. ಅವನ್ನು ಅರಿತರೆ ಬದುಕನ್ನು ಚಂದವಾಗಿಸುವ ಹಾದಿಗೆ ತೆಗೆದುಕೊಂಡು ಹೋಗಬಹುದು. ಇಲ್ಲದಿದ್ದಲ್ಲಿ ವಿವಾಹ ಸಂಬಂಧ ಮುರಿದು ಬೀಳುವ, ಮತ್ತಷ್ಟು ಹದಗೆಡುವ ಚಾನ್ಸ್ ಇರುತ್ತದೆ. 

Tap to resize

Latest Videos

undefined

- ವೈಯಕ್ತಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ
ಮೊದಲು ನಿಮ್ಮ ಬಗ್ಗೆ ಯೋಚಿಸಿ, ಖಿನ್ನತೆ ಆಥವಾ ಆತಂಕಕ್ಕೆ ಒಳಗಾಗಿದ್ದೀರಾ ಎಂದು. ಹಾಗಿದ್ದರೆ ಅದನ್ನು ಸರಿಮಾಡಿಕೊಳ್ಳುವತ್ತ ಗಮನ ಹರಿಸಿ. ಇನ್ನು ಮನಸ್ಸಿನಲ್ಲೇ ಒಂದಿಷ್ಟು ಕೊರಗುಗಳಿದ್ದರೆ ಅವೇನೆಂದು ನಿಧಾನವಾಗಿ ನೋಡಿಕೊಂಡು ಯಾರ ಬಳಿಯಾದರೂ ಹಂಚಿಕೊಳ್ಳಿ. ಪ್ರಾಣಾಯಾಮ, ಯೋಗ ಹಾಗೂ ಧ್ಯಾನ ರೂಢಿಸಿಕೊಳ್ಳಿ. 

- ದೃ,ಷ್ಟಿಕೋನ ಬದಲಾಯಿಸಿ
ನಿಮ್ಮ ಪತಿ ಬೋರಿಂಗ್ ಎಂದು ನಿರ್ಧರಿಸುವ ಮೊದಲು ನೀವೆಷ್ಟು ಆಸಕ್ತಿಕರವಾಗಿದ್ದೀರಿ, ಅರಿಗೆ ನೀವು ಬೋರಿಂಗ್ ಆಗಿಲ್ಲವೇ ಎಂಬುದರತ್ತ ಯೋಚಿಸಿ. ಯಾವುದೋ ವ್ಯೂಹದಲ್ಲಿ ಬಂದು ಸಿಲುಕಿಕೊಂಡೆ ಎಂದುಕೊಳ್ಳುವ ಬದಲು ನಿಮ್ಮ ವ್ಯೂಹದಲ್ಲಿ ಮತ್ತೊಬ್ಬರು ಬಂಧಿಯಾಗಿದ್ದಾರೆಯೇ ಯೋಚಿಸಿ. ಹಾಗೊಂದು ವೇಳೆ ಹೌದು ಎನಿಸಿದರೆ ಸಂಗಾತಿಗೆ ಬೋರಿಂಗ್ ಎನ್ನಿಸದಿರಲು ನಿಮ್ಮಲ್ಲಿ ನೀವು ಏನೆಲ್ಲ ಬದಲಾವಣೆ ಮಾಡಿಕೊಳ್ಳಬೇಕು, ಅವರ ಆಸಕ್ತಿಗಳಿಗೆ ಅನುಗುಣವಾಗಿ ಹೇಗೆ ವರ್ತಿಸಬೇಕು ಎಂಬುದನ್ನೆಲ್ಲ ಯೋಚಿಸಿ ಆ ಬದಲಾವಣೆಗಳನ್ನು ತಂದುಕೊಳ್ಳುವತ್ತ ಗಮನ ಹರಿಸಿ. ವಿವಾಹವನ್ನು ವ್ಯೂಹ ಎಂದುಕೊಳ್ಳುವ ಬದಲು ಪ್ರೀತಿಯ ಬಂಧ ಎಂದುಕೊಳ್ಳಿ. ನೀವಿಬ್ಬರೂ ಸೇರಿ ವಿವಾಹ ಜೀವನವನ್ನು ಆಸಕ್ತಿಕರವಾಗಿಸುವ ಬಗ್ಗೆ ಮಾತನಾಡಿ. 

- ಜಂಟಿಯಾಗಿ ಹೊಸತನ್ನು ಮಾಡಿ
ನಿಮಗೆ ಸಾಮಾನ್ಯವಲ್ಲದ ಕೆಲಸಗಳನ್ನು ಒಟ್ಟಾಗಿ ಮಾಡಿ. ಸಾಮಾನ್ಯವಾಗಿ ಸೋಫಾದಲ್ಲಿ ಕುಳಿತು ನೆಟ್‌ಫ್ಲಿಕ್ಸ್ ನೋಡುವ ಅಭ್ಯಾಸ ನಿಮ್ಮದಾಗಿದ್ದಲ್ಲಿ, ಆ ಸಮಯದಲ್ಲಿ ಇಬ್ಬರೂ ವಾಕಿಂಗ್ ಹೋಗಿಬನ್ನಿ ಅಥವಾ ಹೊಸ ಮನೆಯೋ, ಕಾರ್ನ ಬಗ್ಗೆಯೋ ಕನಸು ಕಟ್ಟಿ. ಇಲ್ಲವೇ ಬಹಳ ಹಿಂದೆ ಇಬ್ಬರೂ ಒಟ್ಟಿಗೆ ಮಾಡುತ್ತಿದ್ದ ಕೆಲಸವನ್ನು ಈಗ ಮತ್ತೆ ಮಾಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ. ಯಾವ ಜೋಡಿಯು ಹೊಸ ಹೊಸ ಅನುಭವಗಳನ್ನು ಒಟ್ಟೊಟ್ಟಿಗೇ ಪಡೆಯುತ್ತದೆಯೋ ಆ ಜೋಡಿ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಎನ್ನುತ್ತದೆ ಅಧ್ಯಯನ. ಹೀಗೆ ಹೊಸ ಅನುಭವಗಳಿಗಾಗಿ ಒಟ್ಟಿಗೇ ಸೈಕ್ಲಿಂಗ್ ಮಾಡಬಹುದು, ಟ್ರೆಕ್ಕಿಂಗ್, ಅಡುಗೆ, ಮನೆ ಸ್ವಚ್ಛಗೊಳಿಸುವುದು, ಸಾಹಸೀ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು, ನಾಟಕ, ಸಂಗೀತ ಕಾರ್ಯಕ್ರಮಗಳಿಗೆ ಹೋಗುವದು, ಜಿಮ್‌ಗೆ ಹೋಗುವುದು ಇತ್ಯಾದಿ ಮಾಡಬಹುದು. 

ಪೌರಾಣಿಕ ಕತೆಗಳ ಪರಮ ಪ್ರೇಮಿಗಳಿವರು

- ದಿನದಲ್ಲಿ ಕನಿಷ್ಠ ಅರ್ಧ ಗಂಟೆ ಎತ್ತಿಡಿ
ದಿನದಲ್ಲಿ ಅದೆಷ್ಟೇ ಬ್ಯುಸಿ ಇದ್ದರೂ ಇಬ್ಬರೂ ಕುಳಿತು ಒಂದರ್ಧ ಗಂಟೆ ಅದೂ ಇದೂ ಮಾತನಾಡಿ. ವಿಷಯ ಇರಲೇಬೇಕೆಂದೇನಿಲ್ಲ. ನಿಮಗನ್ನಿಸಿದ್ದೆಲ್ಲ ಮಾತನಾಡಬಹುದು. ಯಾವುದೂ ವಿಷಯವಿಲ್ಲವೆನಿಸಿದರೆ ನೋಡಿದ ಮೂವಿಯೊಂದರ ಬಗ್ಗೆ, ಓದಿದ ಪುಸ್ತಕದ ಬಗ್ಗೆ ಹೇಳಿಕೊಳ್ಳಬಹುದು. ಟೆರೇಸ್‌ನಲ್ಲಿ ಕತ್ತಲೆಯಲ್ಲಿ ಕುಳಿತು ಒಬ್ಬರ ತೊಡೆಯ ಮೇಲೆ ಮಲಗಿ ಆಕಾಶ ನೋಡುತ್ತಾ ಮಾತನಾಡುವ ಸುಖ ರೂಢಿಸಿಕೊಳ್ಳಬಹುದು. 

- ಲೈಂಗಿಕ ಜೀವನ ವರ್ಣಮಯವಾಗಿಸಿಕೊಳ್ಳಿ
ನಿಮ್ಮ ಬೆಡ್‌ರೂಂ ಜೀವನ ಕೂಡಾ ಏಕತಾನತೆಗೆ ಹೊರಳಿರಬಹುದು. ಇದನ್ನು ಬ್ರೇಕ್ ಮಾಡಲು ಇಬ್ಬರೂ ಪರಸ್ಪರ ನಿಮ್ಮ ಫ್ಯಾಂಟಸಿಗಳನ್ನು ಹೇಳಿಕೊಳ್ಳಿ. ಮಸಾಜ್, ಮ್ಯೂಸಿಕ್, ಕ್ಯಾಂಡಲ್ ಲೈಟ್, ಕನ್ನಡಿ, ಪೊಸಿಶನ್ಸ್... ಹೀಗೆ ಕೆಲವೊಂದು ಬದಲಾವಣೆಗಳು, ಹೊಸತನಗಳು ಈ ಜೀವನವನ್ನು ಕಲರ್‌ಫುಲ್ ಆಗಿಸುತ್ತವೆ. 

- ಪ್ರತಿದಿನ ಹೊಸತು ಕಲಿಯಿರಿ
ವಿವಾಹ ಜೀವನ ಎಂದಕೂಡಲೇ ಎಲ್ಲ ಸುಖಸಂತೋಷಗಳನ್ನೂ ಪರಸ್ಪರರಲ್ಲಿ ಹುಡುಕುವುದು ತಪ್ಪು, ಮಧ್ಯೆ ಮಧ್ಯೆ ಬೇರೆ ಗೆಳೆಯರನ್ನು ಭೇಟಿಯಾಗುವುದು, ಅವರೊಂದಿಗೆ ಸಂಪರ್ಕದಲ್ಲಿರುವುದು, ಪ್ರತಿದಿನದ ಸುದ್ದಿಸಮಾಚಾರಗಳನ್ನು ತಿಳಿಯುವುದು, ಕಚೇರಿ ಜೀವನ, ಸಂಬಂಧಿಕರ ಭೇಟಿ, ಹವ್ಯಾಸಗಳಿಗೆ ಸಮಯ, ಹೊಸ ಗುರಿಗಳ ಸಾಧನೆ- ಹೀಗೆ ವಿವಾಹ ಜೀವನದ ಹೊರಗೂ ಒಂದು ಬದುಕನ್ನು ಕಟ್ಟಿಕೊಳ್ಳುವುದು ಮುಖ್ಯ. 

click me!