ಪೋರ್ನ್ ಚಟ, ದಿನಕ್ಕೆ 2-3 ಸಲ ದೈಹಿಕ ಸಂಬಂಧಕ್ಕೆ ಪತ್ನಿ ಒತ್ತಾಯ, ಸುಸ್ತಾಗಿ ಕೋರ್ಟ್ ಮೊರೆ ಹೋದ ಪತಿ

By Roopa Hegde  |  First Published Oct 22, 2024, 12:54 PM IST

ನಿತ್ಯ ಅಶ್ಲೀಲ ಚಿತ್ರ ವೀಕ್ಷಣೆ ಮಾಡ್ತಿದ್ದ ಪತ್ನಿಯೊಬ್ಬಳ ಬೇಡಿಕೆಗೆ ಪತಿ ಬೇಸತ್ತಿದ್ದಾನೆ. ರಾತ್ರಿ ಮೂರು ಬಾರಿ ಸಂಬಂಧ ಬೆಳೆಸಲಾಗದೆ ಸುಸ್ತಾಗಿ ಕೋರ್ಟ್ ಮೊರೆ ಹೋಗಿದ್ದಾನೆ. ಕೋರ್ಟ್ ಏನು ತೀರ್ಪು ನೀಡಿದೆ ಗೊತ್ತಾ?
 


ಪಂಜಾಬ್ ಹರ್ಯಾಣ ಹೈಕೋರ್ಟ್ (Punjab Haryana High Court), ವಿಚ್ಛೇದನ ಪ್ರಕರಣ (divorce case ) ವೊಂದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ಪತ್ನಿ ತನ್ನ ಪತಿಯನ್ನು  ಹಿಜ್ರಾ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ಜಸ್ಜಿತ್ ಸಿಂಗ್ ಬೇಡಿ ಅವರ ವಿಭಾಗೀಯ ಪೀಠ, ಪತ್ನಿ ಅರ್ಜಿಯನ್ನು ವಜಾ ಮಾಡಿ, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. 

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಮದುವೆ, 2017ರಲ್ಲಿ ನಡೆದಿತ್ತು. ಪತ್ನಿಯ ವರ್ತನೆಗೆ ಬೇಸತ್ತ ಪತಿ, ವಿಚ್ಛೇದನಕ್ಕೆ ಮುಂದಾಗಿದ್ದ. ಅರ್ಜಿಯಲ್ಲಿ ಆತ ಪತ್ನಿಯ ಮೇಲೆ ಹೊರಿಸಿರುವ ಆರೋಪಗಳು ವಿಚಿತ್ರವಾಗಿವೆ. ಪತ್ನಿ, ಮಧ್ಯರಾತ್ರಿಯವರೆಗೂ ಎಚ್ಚರವಿರ್ತಿದ್ದಳು. ಮಧ್ಯರಾತ್ರಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಅತ್ತೆಗೆ, ಆಹಾರವನ್ನು ರೂಮಿಗೆ ತಂದುಕೊಡುವಂತೆ ತಾಕೀತು ಮಾಡುತ್ತಿದ್ದಳು ಎಂದು ಪತಿ ಹೇಳಿದ್ದಾನೆ. ಇಷ್ಟೇ ಅಲ್ಲ, ಪತ್ನಿಯ ಲೈಂಗಿಕ ಚಟಕ್ಕೆ ಆತ ಬೇಸತ್ತಿದ್ದ.  ತನ್ನ ಪತ್ನಿಗೆ ಪೋರ್ನ್ ನೋಡುವ ಚಟವಿದೆ. ಮೊಬೈಲ್ ಗೇಮ್‌ಗಳನ್ನು ಆಡುವ ಆಕೆ, ಲೈಂಗಿಕ ಕ್ರಿಯೆ ನಡೆಸುವಂತೆ ನನಗೆ ಒತ್ತಡ ಹೇರ್ತಾಳೆ. ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಶಾರೀರಿಕ ಸಂಬಂಧ ನಡೆಸಬೇಕು. ಪ್ರತಿ ರಾತ್ರಿ ಮೂರು ಬಾರಿ ದೈಹಿಕ ಸಂಬಂಧ ಹೊಂದಲೇಬೇಕು ಎಂಬುದು ಆಕೆಯ ಒತ್ತಾಯ ಎಂದು ಪತಿ ಅರ್ಜಿಯಲ್ಲಿ ತಿಳಿಸಿದ್ದಾನೆ.

Tap to resize

Latest Videos

undefined

ಅರಿಶಿಣ ಕುಟ್ಟುವುದರೊಂದಿಗೆ ಶೋಭಿತಾ -ನಾಗ ಚೈತನ್ಯ ಮದುವೆ ಸಂಭ್ರಮ ಶುರು

ದೈಹಿಕವಾಗಿ ಅಸ್ವಸ್ಥನಾಗಿದ್ದ ಪತಿಯನ್ನು ಪತ್ನಿ ಗೇಲಿ ಮಾಡುತ್ತಿದ್ದಳು. ಅಲ್ಲದೆ ಬೇರೊಬ್ಬನ ಜೊತೆ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಳು. ಆಕೆ ಬಯಸಿದಷ್ಟು ದೈಹಿಕ ಸುಖ ನೀಡಲು ಸಾಧ್ಯವಾಗದ ಪತಿಯನ್ನು ನಪುಂಸಕ ಎಂದು ಕರೆದಿದ್ದಳು ಎಂದು ಪತಿ ದೂರಿದ್ದಾನೆ.

ವಿಚಾರಣೆ ವೇಳೆ ಪತ್ನಿ ಕೂಡ ಪತಿ ವಿರುದ್ಧ ಒಂದಿಷ್ಟು ಆರೋಪ ಮಾಡಿದ್ದಾಳೆ. ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ಅತ್ತೆ, ಅಮಲು ಮಾತ್ರೆಗಳನ್ನು ನೀಡುತ್ತಿದ್ದಳು. ಪ್ರಜ್ಞೆ ತಪ್ಪಿದಾಗ ತಾಂತ್ರಿಕನನ್ನು ಕರೆಸಿ, ತಾಯತ ಹಾಕುತ್ತಿದ್ದರು. ಅವರು ಹೇಳಿದಂತೆ ಕೇಳ್ಬೇಕು ಎನ್ನುವ ಕಾರಣಕ್ಕೆ ಅಮಲಿನ ನೀರು ಕುಡಿಸುತ್ತಿದ್ದರು ಎಂದು ದೂರಿದ್ದಾಳೆ.  

ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿ ಮನವಿಯನ್ನು ತಿರಸ್ಕರಿಸಿ, ಕೌಟುಂಬಿಕ ನ್ಯಾಯಾಲಯ ನೀಡಿದ ವಿಚ್ಛೇದನವನ್ನು ಎತ್ತಿ ಹಿಡಿದಿದೆ. ಆರು ವರ್ಷಗಳಿಂದ ಬೇರೆ ವಾಸವಾಗಿದ್ದ ದಂಪತಿ ಮತ್ತೆ ಒಂದಾಗಲು ಸಾಧ್ಯವಿಲ್ಲ. ಇಬ್ಬರ ಮಧ್ಯೆ ಒಮ್ಮತವಿಲ್ಲ ಎಂದಿರುವ ಕೋರ್ಟ್,  ವಿಚ್ಛೇದನ ನೀಡಿದೆ.  

ಮದುವೆ ಆಗ್ತಿದ್ದೀರಾ? ಮಗ, ಮಗಳಿಗೆ ವಿವಾಹ ಸಿದ್ಧತೆ ನಡೆಸಿದ್ದೀರಾ? ಹಾಗಾದರೆ ವೆಡ್ಡಿಂಗ್

ಜುಲೈ 12 ರಂದು ಕೌಟುಂಬಿಕ ನ್ಯಾಯಾಲಯ ಪತಿ ಪರವಾಗಿಯೇ ವಿಚ್ಛೇದನದ ತೀರ್ಪು ನೀಡಿತ್ತು. ಮಹಿಳೆಯ ಅತ್ತೆ ತೀರ್ಪು ನೀಡುವಾಗ, ಸೊಸೆ ನನ್ನ ಮಗನನ್ನು ನಪುಂಸಕ ಎಂದು ಕರೆಯುತ್ತಿದ್ದಳು ಎಂದಿದ್ದರು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡ ಹೈಕೋರ್ಟ್ ನ್ಯಾಯಮೂರ್ತಿಗಳು, ಮಹಿಳೆ ಪತಿಯನ್ನು ನಪುಂಸಕ ಎಂದು ಕರೆಯುವುದು ಕ್ರೌರ್ಯ. ಆಕೆ ಅತ್ತೆಗೆ, ನೀನು ನಪುಂಸಕನಿಗೆ ಜನ್ಮ ನೀಡಿದ್ದೀಯಾ ಎಂದು ಹೇಳುವುದು ಕೂಡ ಕ್ರೌರ್ಯ ಎಂದಿದೆ. ಆದ್ರೆ ಕೋರ್ಟ್ ತೀರ್ಪನ್ನು ಮಹಿಳೆ ವಿರೋಧಿಸಿದ್ದಾಳೆ. ಕೋರ್ಟ್ ಬರಿ ಪತಿ ಮಾತನ್ನು ಮಾತ್ರ ಪರಿಗಣಿಸಿದೆ. ನನಗೆ ನ್ಯಾಯ ನೀಡಿಲ್ಲ ಎಂದು ದೂರಿದ್ದಾಳೆ. 

click me!