ಭಾರತೀಯ ವರನ ಹುಡುಕಾಟದಲ್ಲಿ ರಷ್ಯಾ ಬೆಡಗಿ, 4 ಗುಣ ನಿಮ್ಮಲ್ಲಿದ್ದರೆ ಮದುವೆಗೆ ತಯಾರಿ ಮಾಡಿಕೊಳ್ಳಿ!

Published : Oct 21, 2024, 08:11 PM IST
ಭಾರತೀಯ ವರನ ಹುಡುಕಾಟದಲ್ಲಿ ರಷ್ಯಾ ಬೆಡಗಿ, 4 ಗುಣ ನಿಮ್ಮಲ್ಲಿದ್ದರೆ ಮದುವೆಗೆ ತಯಾರಿ ಮಾಡಿಕೊಳ್ಳಿ!

ಸಾರಾಂಶ

ರಷ್ಯಾದ ಬೆಡಗಿ ಮದುವೆಯಾಗಲು ಬಯಸಿದ್ದಾಳೆ. ಹುಡುಗ ಭಾರತೀಯನಾಗಿರಬೇಕು. ಇನ್ನು ಮ್ಯೂಸಿಕ್ ಇಷ್ಟಪಡಬೇಕು, ಪ್ರಯಾಣ ಮಾಡಬೇಕು ಸೇರಿ ನಾಲ್ಕು ಕಂಡೀಷನ್ ಹಾಕಿದ್ದಾಳೆ. ಈ ಪೈಕಿ ಕೊನೆಯ ಕ್ವಾಲಿಟಿ ನಿಮ್ಮಲ್ಲಿದ್ದರೆ ಹಾಟ್ ಬೆಡಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಾಧ್ಯ.

ದುಬೈ(ಅ.21) ರಷ್ಯಾದ ಹಾಟ್ ಬೆಡಗಿ ಮದುವೆಯಾಗುವ ಸುವರ್ಣ ಅವಕಾಶ ಇದೀಗ ಭಾರತೀಯರಿಗೆ ಒಲಿದು ಬಂದಿದೆ. ಮದುವೆಯಾಗಲು ಸಜ್ಜಾಗಿರುವ, ಹುಡುಗಿ ಹುಡುಕುತ್ತಿರುವ ಯುವಕರಿಗೆ ಇಲ್ಲೊಂದು ಸುವರ್ಣ ಅವಕಾಶವಿದೆ. ರಷ್ಯಾ ಮೂಲದ ಬೆಡಗಿ ಮದುವೆಯಾಗಲು ತಯಾರಿ ಮಾಡುತ್ತಿದ್ದಾರೆ. ಭಾರತೀಯ ವರನ ಮಾತ್ರ ಮದುವೆಯಾಗಲು ಬಯಸಿದ್ದಾರೆ. ಇದರ ಜೊತೆ ನಾಲ್ಕು ಕಂಡೀಷನ್ ಕೂಡ ಹಾಕಿದ್ದಾರೆ. ಮ್ಯೂಸಿಕ್ ಇಷ್ಟಪಡಬೇಕು, ಪ್ರಯಾಣದಲ್ಲಿ ಆಸಕ್ತಿ ಇರಬೇಕು ಸೇರಿದಂತೆ ಕೆಲ ಕಂಡೀಷನ್. ಈ ಪೈಕಿ ಕೊನೆಯ ಎರಡು ಕಂಡೀಷನ್‌ ಹಾಗೂ ಕ್ವಾಲಿಟಿ ನಿಮ್ಮಲ್ಲಿದ್ದರೆ ಈಗಲೇ ರಷ್ಯಾ ಬೆಡಗಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಿ ಮಾಡಿಕೊಳ್ಳಬಹುದು.

ರಷ್ಯಾ ಬೆಡಗಿ ಹೆಸರು ನೈಲ್. ಸದ್ಯ ದುಬೈನಲ್ಲಿ ನೆಲೆಸಿದ್ದಾಳೆ. ಭಾರತೀಯ ಸಂಸ್ಕೃತಿ, ಪದ್ಧತಿಗಳಿಗೆ ಮಾರು ಹೋಗಿರುವ ನೈಲ್ ಇದೀಗ ಭಾರತೀಯ ಹುಡುಗನನ್ನೇ ಮದುವೆಯಾಗಲು ಬಯಸಿದ್ದಾಳೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಅಕ್ಟೋಬರ್ 18ಕ್ಕೆ ಈಕೆ ಭಾರತೀಯ ವರನ ಮದುವೆಯಾಗಲು ಬಯಸಿರುವ ವಿಡಿಯೋ ಹಂಚಿಕೊಂಡಿದ್ದಾಳೆ. ಹೀಗಾಗಿ ತಡ ಮಾಡದೇ ಅಪ್ಲೇ ಮಾಡಿದರೆ ರಷ್ಯಾ ಬೆಡಗಿಯ ಪತಿಯಾಗುವ ಸಾಧ್ಯತೆಗಳಿವೆ.

ಮದುವೆ ಆಗ್ತಿದ್ದೀರಾ? ಮಗ, ಮಗಳಿಗೆ ವಿವಾಹ ಸಿದ್ಧತೆ ನಡೆಸಿದ್ದೀರಾ? ಹಾಗಾದರೆ ವೆಡ್ಡಿಂಗ್ ಇನ್ಶೂರೆನ್ಸ್‌ ಬಗ್ಗೆ ತಿಳಿಯಿರಿ!

ತಾನು ಮದುವೆಯಾಗುವ ಹುಡುಗನಲ್ಲಿ ಯಾವೆಲ್ಲಾ ಕ್ವಾಲಿಟಿ ಇರಬೇಕು ಅನ್ನೋದನ್ನು ಈ ವಿಡಿಯೋದಲ್ಲಿ ಹೇಳಿದ್ದಾಳೆ. ನನ್ನ ಮದುವೆಯಾಗುವ ಹುಡುಗನಿಗೆ ಮ್ಯೂಸಿಕ್ ಕೇಳುವ ಹವ್ಯಾಸ ಆಸಕ್ತಿ ಇರಬೇಕು. ಡ್ಯಾನ್ಸ್ ಇಷ್ಟಪಡಬೇಕು, ಸಂದರ್ಭಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವಂತಿರಬೇಕು. ಪ್ರಯಾಣ ಇಷ್ಟಪಡಬೇಕು, ಈ ಮೂಲಕ ಜೊತೆಯಾಗಿ ಟ್ರಿಪ್ ಮಾಡಲು ಆಸಕ್ತಿ ಇರಬೇಕು. ರಷ್ಯಾ ಮೇಲೆ ಪ್ರೀತಿ ಇರಲಿ, ನನ್ನನ್ನೂ ಪ್ರೀತಿಸಬೇಕು ಎಂದು ಕಂಡೀಷನ್ ಹಾಕಿದ್ದಾಳೆ. ಇದರ ಜೊತೆಗೆ ಇನ್ನೆರಡು ಕ್ವಾಲಿಟಿ ಇರಬೇಕು ಎಂದಿದ್ದಾಳೆ. ಒಂದು ಮದುವೆಯಾಗುವ ಹುಡುಗ 6 ಅಡಿ ಎತ್ತರ ಇರಬೇಕು, ಹಸಿರು ಕಣ್ಣು ಹೊಂದಿರಬೇಕು ಎಂದಿದ್ದಾಳೆ.

 

 

6 ಫೀಟ್ ಎತ್ತರ, ಹಸಿರು ಕಣ್ಣು ಈ ಎರಡು ಕ್ವಾಲಿಟಿ ಇದ್ದ ಹುಡುಗರು ಇನ್ನುಳಿದ ಕಂಡೀಷನ್ ಆಸಕ್ತಿ ಬೆಳೆಸಿಕೊಂಡರೂ ಮದುವೆಯಾಗುವ ಅವಕಾಶ ಪಡೆಯುತ್ತಾರೆ. ಈಕೆಯ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ರಷ್ಯಾ ಯುವತಿಯ ಕಂಡೀಷನ್ ಹಾಗೂ ಸಂಪೂರ್ಣ ಕ್ವಾಲಿಟಿ ಇರುವ ಹುಡುಗ ಭಾರತದಲ್ಲಿ ಇಲ್ಲ, ಸ್ವಲ್ಪ ಮ್ಯಾಚ್ ಆಗುವ ಹುಡುಗ ಹೃತಿಕ್ ರೋಶನ್ ಮಾತ್ರ ಎಂದಿದ್ದಾರೆ. ಮತ್ತೆ ಕೆಲವರು ನಾನು 6 ಫೀಟ್ ಎತ್ತರವಿದ್ದೇನೆ, ಗ್ರೀನ್ ಲೆನ್ಸ್ ಹಾಕಿದರೆ ಸಮ್ಮತಿಯೇ ಎಂದು ಪ್ರಶ್ನಿಸಿದ್ದಾರೆ.

ಚಾಣಕ್ಯ ನೀತಿ: ಮಕ್ಕಳಿಗೆ ಈ 10 ವಿಷಯ ಕಲಿಸಿದ್ರೆ ಜೀವನದಲ್ಲಿ ಎಂದಿಗೂ ಸೋಲಲಾರರು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?