
ಪ್ರೀತಿ ಎಂದರೆ ಹಾಗೆಯೇ. ಅದಕ್ಕೆ ಜಾತಿ-ಧರ್ಮ ಅಡ್ಡಿಯಾಗಲ್ಲ. ಗಡಿ, ರಾಜ್ಯ, ದೇಶಗಳು ಅಡೆತಡೆ ಅನಿಸಲ್ಲ. ಪ್ರೀತಿಸಿದವರು ತಮ್ಮವರಿಗಾಗಿ ಎಲ್ಲಾ ಎಲ್ಲೆಯನ್ನು ಮೀರುತ್ತಾರೆ. ಯಾವುದೇ ಸಮಸ್ಯೆಯನ್ನು ಎದುರಿಸಲು ಸಿದ್ಧವಾಗುತ್ತಾರೆ. ಇತ್ತೀಚಿಗೆ ಕೆಲ ವರ್ಷಗಳಿಂದ ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಾಗಿರುವ ಕಾರಣ ಜನರು ಎಲ್ಲಿಂದ, ಮತ್ತೆಲ್ಲಿಗೋ ಸುಲಭವಾಗಿ ಸಂಪರ್ಕವನ್ನು ಬೆಳೆಸಲು ಸಾಧ್ಯವಾಗುತ್ತದೆ. ಗ್ರಾಮ, ಜಿಲ್ಲೆ, ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟಕ್ಕೂ ಈ ಸೋಷಿಯಲ್ ಮೀಡಿಯಾಗಳು ಕೊಂಡಿಯಾಗಿ ಬಿಡುತ್ತವೆ. ಈ ಮೂಲಕವೇ ಸ್ನೇಹ, ಪ್ರೀತಿ ಮೂಡುತ್ತದೆ. ಇದೇ ರೀತಿ ವಾರಗಳ ಹಿಂದೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ತನ್ನ ಪ್ರಿಯಕರನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದಳು.
ಅದೇ ರೀತಿಯ ಇನ್ನೊಂದು ಘಟನೆ ವರದಿಯಾಗಿದೆ. ಪೋಲಿಷ್ ಮಹಿಳೆ (Woman) ಜಾರ್ಖಂಡ್‌ನ ಸೋಷಿಯಲ್ ಮೀಡಿಯಾ ಸ್ನೇಹಿತನನ್ನು ಮದುವೆಯಾಗಲು (Marriage) ಭಾರತಕ್ಕೆ ಬಂದಿದ್ದಾಳೆ. ವರದಿಗಳ ಪ್ರಕಾರ, ಜಾರ್ಖಂಡ್‌ನ ಹಜಾರಿಬಾಗ್‌ನ ಖುತ್ರಾ ಗ್ರಾಮದಲ್ಲಿ ವಾಸಿಸುತ್ತಿದ್ದ ಶಾದಾಬ್‌ನೊಂದಿಗೆ ಸ್ನೇಹ (Friendship) ಬೆಳೆಸಿದ್ದ ಪೋಲಿಷ್ ಪ್ರಜೆ ಬಾರ್ಬರಾ ಪೋಲಾಕ್ ಭಾರತಕ್ಕೆ ಬಂದಿದ್ದಾಳೆ. ಬಾರ್ಬರಾ ತನ್ನ ಐದು ವರ್ಷದ ಮಗಳು ಅನಿಯಾ ಪೊಲಾಕ್‌ನೊಂದಿಗೆ ತನ್ನ ಗೆಳೆಯನನ್ನು ಭೇಟಿಯಾಗಲು ಪೋಲೆಂಡ್‌ನಿಂದ ಹಜಾರಿಬಾಗ್ ತಲುಪಿದ್ದಾಳೆ.
ಬಾಗೇಶ್ವರ ಧಾಮದಲ್ಲಿ ಸಪ್ತಪದಿ ತುಳಿಯುವ ಇಚ್ಛೆ ವ್ಯಕ್ತಪಡಿಸಿದ ಪಬ್‌ಜಿ ಲವರ್ಸ್!
ಇನ್‌ಸ್ಟಾಗ್ರಾಂನಲ್ಲಿ ಆರಂಭವಾದ ಪ್ರೀತಿ
ಇಬ್ಬರೂ ಮೊದಲು 2021ರಲ್ಲಿ ಭಾರತದಲ್ಲಿ ಭೇಟಿ (Meet)ಯಾಗಿದ್ದರು. ಅಲ್ಲಿಂದ ಇಬ್ಬರ ನಡುವೆಯಿದ್ದ ಸ್ನೇಹ ಪ್ರೀತಿಯಾಗಿ ಅರಳಿತ್ತು. ಇದೀಗ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಹಜಾರಿಬಾಗ್ ಎಸ್‌ಡಿಎಂ ನ್ಯಾಯಾಲಯದಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದಾರೆ. ಬಾರ್ಬರಾಗೆ 8 ವರ್ಷದ ಮಗಳು ಅನ್ಯಾ ಪೊಲಾಕ್ ಇದ್ದಾಳೆ. ಶಾದಾಬ್ ತಮ್ಮ ಪ್ರೇಮಕಥೆಯ (Love story) ಬಗ್ಗೆ ವಿವರವಾಗಿ ಹೇಳಿದ್ದಾರೆ. ತಮ್ಮ ಇಡೀ ಜೀವನವನ್ನು ಬಾರ್ಬರಾಳೊಂದಿಗೆ ಕಳೆಯಲು ಬಯಸುತ್ತೇನೆ ಎಂದಿದ್ದಾರೆ. ಶಾದಾಬ್ ಪ್ರಕಾರ, ಒಬ್ಬ ವ್ಯಕ್ತಿಗೆ ಪ್ರೀತಿಸುವ ಇನ್ನೊಬ್ಬ ವ್ಯಕ್ತಿ ಇಲ್ಲದಿದ್ದರೆ ಅವನ ಜೀವನವು ಪೂರ್ಣವಾಗುವುದಿಲ್ಲ. ಅವರು ತಮ್ಮ ಜೀವನದ (Life) ಪ್ರತಿ ಕ್ಷಣದಲ್ಲಿ ಬಾರ್ಬರಾ ಅವರನ್ನು ಬೆಂಬಲಿಸಲು ಬಯಸುತ್ತಾರೆ ಎಂದು ಹೇಳಿದರು.
ಪ್ರಕರಣದ ತನಿಖೆ ನಡೆಸಿದ ಡಿಎಸ್ಪಿ
ಹಜಾರಿಬಾಗ್ ತಲುಪಿದ ನಂತರ ಪೋಲಿಷ್ ಮಹಿಳೆ ಶಾದಾಬ್ ಗ್ರಾಮ ಖುತ್ರಾ ತಲುಪಿದಳು. ಎರಡು ದಿನಗಳ ಹಿಂದೆ ಖುತ್ರಾಗೆ ಪೋಲೆಂಡ್ ಮಹಿಳೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಡಿಎಸ್ಪಿ ರಾಜೀವ್ ಕುಮಾರ್ ಮತ್ತು ಪೆಲಾವಲ್ ಒಪಿ ಉಸ್ತುವಾರಿ ಶಾದಾಬ್ ಮಲಿಕ್ ಖುತ್ರಾ ಮನೆಗೆ ಆಗಮಿಸಿ ತನಿಖೆ (Investigation) ನಡೆಸಿದರು. ಬಾರ್ಬರಾ 2028 ರವರೆಗೆ ಭಾರತ ವೀಸಾವನ್ನು ಹೊಂದಿರುವುದನ್ನು ತಿಳಿದುಕೊಂಡರು. ತನಿಖೆಯ ವೇಳೆ ಹಜಾರಿಬಾಗ್ ಪೊಲೀಸರು ಮಹಿಳೆಗೆ ನಗರದ ಹೋಟೆಲ್‌ನಲ್ಲಿ ತಂಗುವಂತೆ ಸೂಚಿಸಿದ್ದಾರೆ. ಆದರೆ ಮಹಿಳೆ ಮಾತ್ರ ಖುತ್ರಾ ಗ್ರಾಮದಲ್ಲಿಯೇ ಶಾದಾಬ್ ಮಲಿಕ್ ಮನೆಯಲ್ಲಿ ವಾಸಿಸುತ್ತಿದ್ದಾಳೆ.
ಭಿಕ್ಷುಕ ಎಂದ್ಕೊಂಡಿದ್ದವಳಿಗೆ ರಾಜನೆಂದು ಗೊತ್ತಾದರೆ? ಸಂಗಾತಿ ಮೊದಲ ಭೇಟಿ ಬಗ್ಗೆ ಇವ್ರೆಲ್ಲ ಹೇಳಿದ್ದೇನು?
ಪೋಲೆಂಡ್‌ಗೆ ಹೋಗಲು ಬಯಸಿದ ಮಹಿಳೆ
ಬಾರ್ಬರಾ ಪೊಲಾಕ್ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಪೋಲೆಂಡ್‌ನಲ್ಲಿ ಕಂಪನಿಯನ್ನು ಮತ್ತು ಶೇಕಡ ಐವತ್ತರಷ್ಟು ಷೇರನ್ನೂ ಹೊಂದಿದ್ದಾಳೆ. ಮಹಿಳೆಯ ಪತಿ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದಾರೆ. ಶಾದಾಬ್ ಪ್ರಕಾರ, ಬಾರ್ಬರಾ ಅವರನ್ನು ಪೋಲೆಂಡ್‌ಗೆ ಕರೆದೊಯ್ಯಲು ಬಯಸುತ್ತಾರೆ. ಅಷ್ಟೇ ಅಲ್ಲ, ಆ ಮಹಿಳೆಯ ಮಗು ಶಾಬಾದ್ ಅನ್ನು ಡ್ಯಾಡಿ ಎಂದು ಕರೆಯುತ್ತದೆ. ಶಾದಾಬ್ ಅವಿವಾಹಿತ. ಅವರು ಮುಂಬೈನಲ್ಲಿ ಬಿಎ ಆನರ್ಸ್ ಓದಿದ್ದಾರೆ. ಅವರ ತಾಯಿಯ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದಾರೆ.
ಇಂಗ್ಲಿಷ್ ಬರುತ್ತಿದ್ದ ಕಾರಣ ಇಬ್ಬರ ಪ್ರೀತಿಗೆ ಭಾಷೆ ಅಡ್ಡಿಯಾಗಲಿಲ್ಲ. ಬಾರ್ಬರಾ ಭಾರತವು ತುಂಬಾ ಸುಂದರವಾದ ಸ್ಥಳವಾಗಿದೆ. ಈ ಊರು, ಊರಿನ ಜನರನ್ನು ನಾನು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.