ಸೆಕ್ಸ್ ಒಂದು ನೈಸರ್ಗಿಕ ಕ್ರಿಯೆ. ವಂಶಾಭಿವೃದ್ಧಿಗೆ ಇದು ಅಗತ್ಯ. ಹಾಗಂತ ಅತಿಯಾದ ಸೆಕ್ಸ್ ಅನಾಹುತಕ್ಕೆ ಕಾರಣವಾಗಬಹುದು. ಅದರ ಬಗ್ಗೆ ನಾಚಿಕೆಪಡುವ ಬದಲು ನಿಯಂತ್ರಣದ ಕಲಿಕೆ ಮುಖ್ಯ.
ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ಜನರಿಗೆ ಅಗತ್ಯವಿರುವ ಅನೇಕ ವಿಷ್ಯಗಳ ಬಗ್ಗೆ ಮಾಹಿತಿ ನೀಡ್ತಾರೆ. ಲೈಂಗಿಕತೆಯ ಪ್ರಚೋದನೆಯನ್ನು ಹೇಗೆ ನಿಭಾಯಿಸಬಹುದು ಎಂಬ ಬಗ್ಗೆಯೂ ಅವರು ಜನರಿಗೆ ತಿಳಿಸಿದ್ದಾರೆ. ಸದ್ಗುರು ಸೆಕ್ಸ್ ಬಗ್ಗೆ ಬಯಕೆ ಸಹಜ ಮತ್ತು ನೈಸರ್ಗಿಕ ಭಾವನೆಯಾಗಿದೆ. ಆದರೆ ನಾವು ಅದನ್ನು ಸರಿಯಾದ ಸಂದರ್ಭದಲ್ಲಿ ನಿಯಂತ್ರಿಸಬೇಕಾಗಿದೆ ಎಂದು ಹೇಳಿದ್ದಾರೆ. ಮಂಗನಿಂದ ನಾವು ಮಾನವರಾಗಿದ್ದೇವೆ. ಆದ್ರೆ ಯಾವ ರೀತಿ ಮಾನವರಾಗಬೇಕು ಎಂಬುದು ನಮ್ಮ ಆಯ್ಕೆ ಎನ್ನುವ ಸದ್ಗುರು, ಲೈಂಗಿಕ ಬಯಕೆ ನಿಯಂತ್ರಣಕ್ಕೆ ಏನು ಮಾಡ್ಬೇಕು ಎಂಬುದನ್ನು ತಿಳಿಸಿದ್ದಾರೆ.
ಸೆಕ್ಸ್ (Sex ) ಇಚ್ಛೆಯನ್ನು ನಿಯಂತ್ರಿಸಲು ಏನು ಮಾಡ್ಬೇಕು? :
ಲೈಂಗಿಕ ಬಯಕೆಯನ್ನು ಅರ್ಥ ಮಾಡಿಕೊಳ್ಳಿ : ಸದ್ಗುರು (Sadhguru) ಗಳ ಪ್ರಕಾರ, ಲೈಂಗಿಕ ಬಯಕೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಹ ಮತ್ತು ಮನಸ್ಸಿನ ಸಂಕೇತಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮ ದೇಹದಲ್ಲಿ ಲೈಂಗಿಕ ಬಯಕೆ ಏಕೆ ಉಂಟಾಗುತ್ತದೆ ಮತ್ತು ಅದನ್ನು ಹೇಗೆ ತೃಪ್ತಿಪಡಿಸಬಹುದು ಎಂಬುದನ್ನು ನಾವು ತಿಳಿದಿರಬೇಕು. ಸೆಕ್ಸ್ ನಮ್ಮ ದೇಹದ ಮೂಲ ಸ್ವಭಾವದಲ್ಲಿ ಒಂದು. ನಾವು ಬೇರೆಯವರ ಸೆಕ್ಸ್ ಬಯಕೆಯಿಂದ ಜನ್ಮ ತಾಳಿದ್ದೇವೆ. ನಮ್ಮ ಜೀವನದ ಅಂತ್ಯದವರೆಗೆ ನಾವು ಅದ್ರಲ್ಲೇ ಇರಬೇಕಾಗಿಲ್ಲ. ಹಾಗಂತ ಸೆಕ್ಸ್ ಕೆಟ್ಟದ್ದು ಎನ್ನುವ ಭಾವನೆಯಲ್ಲಿರುವುದು ಕೂಡ ತಪ್ಪು ಎನ್ನುತ್ತಾರೆ ಸದ್ಗುರು. ನಮ್ಮ ಸುತ್ತಮುತ್ತಲ ಪರಿಸರ ಕೆಲವೊಂದನ್ನು ತಪ್ಪು ಎಂದು ನಮಗೆ ಹೇಳಿದೆ. ಆದ್ರೆ ನಾವು ಅದ್ರ ಬಗ್ಗೆ ಸರಿಯಾಗಿ ತಿಳಿದು ವರ್ತಿಸಬೇಕು ಎನ್ನುತ್ತಾರೆ ಸದ್ಗುರು.
ಕಿಮೋಥೆರಪಿಗೊಳಗಾದ ಮಹಿಳೆ ಕೂದಲು ಕಟ್..ತಲೆ ಬೋಳಿಸಿಕೊಂಡು ಸಾಂತ್ವಾನ ಹೇಳಿದ ಸಲೂನ್ ಬಾಯ್!
ಬ್ರಹ್ಮಚರ್ಯವನ್ನು ಅಭ್ಯಾಸ ಮಾಡಿ : ಸದ್ಗುರುಗಳು ಬ್ರಹ್ಮಚರ್ಯದ ಮಹತ್ವವನ್ನು ವಿವರಿಸಿದ್ದಾರೆ. ಅದು ಲೈಂಗಿಕ ಬಯಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಬ್ರಹ್ಮಚರ್ಯವು ಶಕ್ತಿಯನ್ನು ಹೆಚ್ಚಿಸುವ ಮತ್ತು ತೃಪ್ತಿಪಡಿಸಲು ಒಂದು ಮಾರ್ಗವಾಗಿದೆ. ಇದು ಲೈಂಗಿಕ ಬಯಕೆಯನ್ನು ನಿಭಾಯಿಸಲು ಮತ್ತು ಅದನ್ನು ಸರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದವರು ತಿಳಿಸಿದ್ದಾರೆ.
ಧ್ಯಾನ (Meditation) ಅಭ್ಯಾಸ ಮಾಡಿ : ಸದ್ಗುರುಗಳ ಪ್ರಕಾರ, ಲೈಂಗಿಕ ಬಯಕೆಯನ್ನು ನಿಯಂತ್ರಿಸಲು ಧ್ಯಾನವು ಒಂದು ಪ್ರಮುಖ ಸಾಧನವಾಗಿದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಇಂದ್ರಿಯಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಮೂಲಕ ನಾವು ನಮ್ಮ ಆಸೆಗಳನ್ನು ಪೂರೈಸುವ ಮತ್ತು ಅವುಗಳನ್ನು ಸರಿಯಾಗಿ ನಿಯಂತ್ರಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತೇವೆ.
ವಿಮಾನದಲ್ಲಿ ಸರ್‌ಪ್ರೈಸ್ ಆಗಿ ಗೆಳತಿಗೆ ಪ್ರಪೋಸ್ ಮಾಡಿದ ಪೈಲೆಟ್, ವಿಡಿಯೋ ವೈರಲ್
ತೃಪ್ತಿಯ ಅನುಭವ : ತೃಪ್ತಿಯ ಅನುಭವದಿಂದ ಲೈಂಗಿಕ ಬಯಕೆಯನ್ನು ನಿಭಾಯಿಸಬಹುದು ಎಂದು ಸದ್ಗುರು ಹೇಳ್ತಾರೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆಸೆಗಳನ್ನು ಈಡೇರಿಸುತ್ತದೆ.
ಶಾಂತವಾಗಿರಿ (Be Calm) : ಸೆಕ್ಸ್ ಬಯಕೆಯನ್ನು ನಿಭಾಯಿಸಲು ಶಾಂತವಾಗಿರುವುದು ಬಹಳ ಮುಖ್ಯ. ನಾವು ನಮ್ಮ ಆಲೋಚನೆಗಳು, ಆಸೆಗಳು ಮತ್ತು ಕಾರ್ಯಗಳನ್ನು ನಿಗ್ರಹಿಸಬೇಕು. ಇಂದ್ರಿಯನಿಗ್ರಹ ಮತ್ತು ತಪಸ್ಸಿನ ಮೂಲಕ ನಾವು ನಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ನಿಯಂತ್ರಿಸಬಹುದು ಮತ್ತು ಲೈಂಗಿಕ ಬಯಕೆಯನ್ನು ನಿಭಾಯಿಸಬಹುದು ಎಂದು ಸದ್ಗುರು ಹೇಳಿದ್ದಾರೆ.
ಉನ್ನತಿ ಸಾಧನೆ : ಆಂತರಿಕ ಮಟ್ಟದಲ್ಲಿ ನಾವು ಉನ್ನತಿಯನ್ನು ಪಡೆದಾಗ ನಮ್ಮ ಬಯಕೆಗಳು ಸ್ವತಃ ತೃಪ್ತಿಗೊಳ್ಳುತ್ತವೆ. ಆಧ್ಯಾತ್ಮಿಕ ಅಭ್ಯಾಸ ಮತ್ತು ಧ್ಯಾನ ನಮಗೆ ಸಹಕಾರಿಯಾಗುತ್ತದೆ ಎನ್ನುತ್ತಾರೆ ಸದ್ಗುರು. ಆಧ್ಯಾತ್ಮಿಕತೆಯು ಲೈಂಗಿಕ ಬಯಕೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ನಾವು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಿದಾಗ, ನಮ್ಮ ಬಯಕೆಗಳನ್ನು ತಾವು ತೃಪ್ತಿಪಡಿಸಿಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತವೆ. ಇದರೊಂದಿಗೆ ನಾವು ಲೈಂಗಿಕ ಬಯಕೆಯನ್ನು ನಿಭಾಯಿಸಬಹುದು ಮತ್ತು ಅದನ್ನು ಸರಿಯಾಗಿ ನಿಯಂತ್ರಿಸಬಹುದು.