ಈಗೆಲ್ಲಾ ಸ್ಕೂಲ್ ಅಂದ್ರೆ ಸ್ಟ್ರಿಕ್ಟ್ ಟೀಚರ್, ಮ್ಯಾನೇಜ್‌ಮೆಂಟ್, ಆಗಾಗ ನಡೆಯೋ ಪೇರೆಂಟ್ಸ್ ಮೀಟಿಂಗ್ ನೆನಪಾಗುತ್ತೆ. ಪ್ರೈವೇಟ್ ಸ್ಕೂಲ್‌ಗಳು ಸಾಮಾನ್ಯವಾಗಿ ಹೀಗೆ ಇರುತ್ತವೆ. ಆದರೆ ಸರ್ಕಾರಿ ಶಾಲೆಗಳು ಹಾಗಲ್ಲ. ಅಲ್ಲಿ ಶಿಕ್ಷಕಿ ಹಾಗೂ ಮಕ್ಕಳ ನಡುವಿನ ಬಾಂಧವ್ಯವೇ ಮನಸ್ಸು ಮುಟ್ಟುವಂತಿರುತ್ತೆ. ಅಂಥದ್ದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಿಂದೆಯೆಲ್ಲಾ ಶಾಲೆಗೆ ಹೋಗುವುದು ಅಂದರೆ ಮಕ್ಕಳಿಗೆ ಅದೇನೋ ಸಂಭ್ರಮ, ಸಡಗರ. ಚೀಲದಲ್ಲಿ ಪುಸ್ತಕ ತುಂಬಿ ಮಕ್ಕಳೆಲ್ಲಾ ನಡೆಯುತ್ತಲೇ ಶಾಲೆಗೆ ಹೋಗಿ ಸೇರುವುದೇ ಚೆಂದ. ಬೆಳಗ್ಗಿನ ಪ್ರಾರ್ಥನೆ, ಪಾಠ, ಮಧ್ಯಾಹ್ನದ ಊಟ, ಸಂಜೆಯ ಊಟ. ಮತ್ತೆ ಮರಳಿ ಮನೆಯ ಹಾದಿ. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ತಮ್ಮ ಶಿಕ್ಷಕರಿಂದ ಜೀವನ ಪಾಠವನ್ನೂ ಕಲಿಯುತ್ತಿದ್ದರು. ಶಿಕ್ಷಕರು ಸಹ ತಮ್ಮ ಮಕ್ಕಳ ಬಳಿ ಕೇವಲ ಪಾಠದ ಬಗ್ಗೆ ಮಾತ್ರವಲ್ಲ ಅವರ ಆರೋಗ್ಯ, ಮನೆಯವರ ಬಗ್ಗೆಯೂ ವಿಚಾರಿಸಿಕೊಳ್ಳುತ್ತಿದ್ದರು. ಈಗೆಲ್ಲಾ ಸ್ಕೂಲ್ ಅಂದ್ರೆ ಸ್ಟ್ರಿಕ್ಟ್ ಟೀಚರ್, ಮ್ಯಾನೇಜ್‌ಮೆಂಟ್, ಆಗಾಗ ನಡೆಯೋ ಪೇರೆಂಟ್ಸ್ ಮೀಟಿಂಗ್ ನೆನಪಾಗುತ್ತೆ. ಪ್ರೈವೇಟ್ ಸ್ಕೂಲ್‌ಗಳು ಸಾಮಾನ್ಯವಾಗಿ ಹೀಗೆ ಇರುತ್ತವೆ. ಆದರೆ ಸರ್ಕಾರಿ ಶಾಲೆಗಳು ಹಾಗಲ್ಲ. ಅಲ್ಲಿ ಶಿಕ್ಷಕಿ ಹಾಗೂ ಮಕ್ಕಳ ನಡುವಿನ ಬಾಂಧವ್ಯವೇ ಮನಸ್ಸು ಮುಟ್ಟುವಂತಿರುತ್ತೆ.
ಇವತ್ತಿನ ದಿನಗಳಲ್ಲಿ ಶಿಕ್ಷಕರು (Teachers) ಹಾಗೂ ವಿದ್ಯಾರ್ಥಿಗಳ (Students) ನಡುವಿನ ಸಂಬಂಧ ತುಂಬಾ ಔಪಚಾರಿಕವಾಗಿದೆ ಅಷ್ಟೆ. ನಾವು ಫೀಸ್ ಕಟ್ತೀವಿ. ನೀವು ಪಾಠ ಕಲಿಸ್ತೀರಿ ಅನ್ನುವಂತೆ. ಮಕ್ಕಳು ಓದದಿದ್ದರೆ ಶಿಕ್ಷಕರು ಹೊಡೆಯೋಕೆ ಹೋಗಲ್ಲ. ಹೊಡೆದರೆ ಬೈದರೆ ಮೀಟಿಂಗ್‌ಗಳು ನಡೆಯುತ್ತೆ. ಮಕ್ಕಳು ತಮ್ಮದೇ ಅಹಂ, ಸ್ವಾರ್ಥ, ಹಠಗಳ ಮಧ್ಯೆಯೇ ಬೆಳೆಯುತ್ತಿರುತ್ತಾರೆ. ಮನೆ ಮಂದಿ ಸರಿಪಡಿಸೋಕೆ ಆಗಲ್ಲ, ಶಿಕ್ಷಕರು ಸರಿಪಡಿಸೋಕೆ ಹೋಗಲ್ಲ.
ಪಾಠ ಮಾಡೋದು ಮಾತ್ರ ಅಲ್ಲ ಮಕ್ಕಳ ಹಲ್ಲೂ ಕೀಳ್ತಾರೆ ಈ ವಂದನಾ ಟೀಚರ್
ಹಳ್ಳಿ ಶಾಲೇಲಿ ಶಿಕ್ಷಕಿ-ವಿದ್ಯಾರ್ಥಿಗಳ ಸುಮಧುರ ಬಾಂಧವ್ಯ
ಪ್ರೈವೇಟ್ ಸ್ಕೂಲ್‌ಗಳಲ್ಲಿ ಟೀಚರ್ಸ್ ಅಂದ್ರೆ ಮಕ್ಕಳು ಗುಡ್‌ಮಾರ್ನಿಂಗ್ ಮ್ಯಾಮ್, ಗುಡ್‌ಮಾರ್ನಿಂಗ್ ಸರ್ ಅಂತ ಮಾತನಾಡೋದು ಬಿಟ್ಟು ಒಂದಕ್ಷರ ಹೆಚ್ಚು ಮಾತನಾಡಲು ಇಷ್ಟಪಡಲ್ಲ. ಶಿಕ್ಷಕರೂ ಅಷ್ಟೆ ಪಿರಿಯಡ್ ಟೈಂನಲ್ಲಿ ಕ್ಲಾಸ್ ಮಾಡಿ ಮತ್ತು ತಮಗೂ ಮಕ್ಕಳಿಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಇದ್ದುಬಿಡುತ್ತಾರೆ. ಆದ್ರೆ ಗ್ರಾಮೀಣ, ಸರ್ಕಾರಿ ಶಾಲೆಗಳಲ್ಲಿ (Government school) ಹೀಗಿಲ್ಲ. ಇಲ್ಲಿ ಮಕ್ಕಳ ಮತ್ತು ಶಿಕ್ಷಕ-ಶಿಕ್ಷಕಿಯರ ನಡುವಿನ ಅನೂಹ್ಯ ಬಂಧವನ್ನು ನೋಡುವುದೇ ಚೆಂದ.
ಹಳ್ಳಿಗಳ ಶಾಲೆಗಳಲ್ಲಿ ಈಗಲೂ ಹೀಗೆಯೇ. ಮಕ್ಕಳು ಶಾಲೆಗೆ ಹೋದರೆ ಪೋಷಕರು (Parents) ನಿಶ್ಚಿಂತೆಯಿಂದ ಇರುತ್ತಾರೆ. ಯಾಕೆಂದರೆ ಶಾಲೆಯಲ್ಲಿ ಶಿಕ್ಷಕರು ಅವರನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸ. ಹೊಟ್ಟೆ ತುಂಬಾ ಊಟ ಬಡಿಸುತ್ತಾರೆ. ಆಟವಾಡುವಾಗ ಬಿದ್ದರೆ ಕಾಳಜಿಯಿಂದ ಶುಶ್ರೂಷೆ ನೀಡುತ್ತಾರೆ. ಬಿಸಿಲಿನಲ್ಲಿ ತಲೆಸುತ್ತಿ ಬಿದ್ದ ಮಕ್ಕಳನ್ನು ಎತ್ತಿ ಕೊಂಡೊಯ್ದು ಮಲಗಿಸಿ ಉಪಚಾರ ಮಾಡುತ್ತಾರೆ. ಅದಲ್ಲದೆ ಪಠ್ಯೇತರ ಚಟುವಟಿಕೆಯೆಂದು ಮಕ್ಕಳು ಕಾಡು, ಭತ್ತದ ಗದ್ದೆ, ಕೃಷಿ ಚಟುವಟಿಕೆಗಳನ್ನು ಒಟ್ಟಿಗೆ ಹೋಗಿ ವೀಕ್ಷಿಸುವುದೂ ಇದೆ. ಒಟ್ಟಿನಲ್ಲಿ ಶಿಕ್ಷಕರೂ ಮಕ್ಕಳ ಖುಷಿಯಲ್ಲಿ, ದುಃಖದಲ್ಲಿ ಭಾಗಿಯಾಗುತ್ತಾರೆ. ಮಕ್ಕಳ ಜೊತೆ ಸೇರಿ ತಾವೂ ಮಕ್ಕಳಾಗುತ್ತಾರೆ.
Big Salute : ಎರಡು ನದಿ ದಾಟಿ ಶಾಲೆಗೆ ಹೋಗುವ ಈ ಶಿಕ್ಷಕಿಗೆ ನಮ್ಮದೊಂದು ಸಲಾಂ
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸದ್ಯ ಅಂಥಹದ್ದೇ ಸುಂದರ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದರಲ್ಲಿ ಶಿಕ್ಷಕಿ ಮಕ್ಕಳ ಜೊತೆ ಸೇರಿ ಖುಷಿಯಿಂದ ಓಡಾಡಿ ಖೋ ಖೋ ಆಟ ಆಡುವುದನ್ನು ನೋಡಬಹುದು. ಶಿಕ್ಷಕಿ ಯಾವುದೇ ಹಿಂಜರಿಕೆಯಿಲ್ಲದೆ ಮಕ್ಕಳ ಜೊತೆ ಬೆರೆತು ಓಡುತ್ತಾ ಆಟವಾಡುತ್ತಾರೆ. ಆದರೆ ಸೋ ಕಾಲ್ಡ್ ಪ್ರೈವೇಟ್ ಸ್ಕೂಲ್‌ಗಳಲ್ಲಿ ಪಿಟಿ ಟೀಚರ್ ಮಕ್ಕಳಿಗೆ ಇನ್‌ಸ್ಟ್ರಕ್ಟ್ ಮಾಡುತ್ತಾ, ಗದರುತ್ತಾ, ಪರ್ಫಾಮೆನ್ಸ್ ಪೂವರ್ ಎಂದು ಗದರುತ್ತಾ ದೂರದಲ್ಲೇ ನಿಂತಿರುತ್ತಾರೆ. ಹೀಗಿರುವಾಗ ಹಳ್ಳಿಯ ಶಾಲೆ, ಅಲ್ಲಿನ ಶಿಕ್ಷಕಿ ಮಕ್ಕಳ ಬಾಂಧವ್ಯ ಅದೆಷ್ಟು ಅದ್ಭುತವಾಗಿದೆಯೆಲ್ಲಾ ಅನಿಸದೇ ಇರದು.