ಈಗೀಗ ಬ್ರೇಕಪ್ ಆದ್ರೆ ಯಾರೂ ಆಗೋಲ್ಲ ದೇವದಾಸ, ಬಿಂದಾಸ್ ಮಾಡ್ತಾರೆ ಪಾರ್ಟಿ!

By Suvarna News  |  First Published Dec 11, 2023, 4:03 PM IST

ವಿಚ್ಛೇದನವಾದಾಗ, ಪ್ರೀತಿ ಮುರಿದು ಬಿದ್ದಾಗ ಅಳುವ ಕಾಲ ಹೋಯ್ತು. ಈಗೇನಿದ್ರೂ ಸ್ವಾತಂತ್ರ್ಯವನ್ನು ಎಂಜಾಯ್ ಮಾಡುವ ಸಮಯ. ಭಾರತಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿಲ್ಲವಾದ್ರೂ ವಿದೇಶದಲ್ಲಿ ಬ್ರೇಕ್ ಅಪ್ ಪಾರ್ಟಿಗಳ (Break Up Party) ಸಂಖ್ಯೆ ಹೆಚ್ಚಾಗ್ತಿದೆ. 
 


ಸಂಬಂಧ ಮುರಿದು ಬಿದ್ದಾಗ ಇಡೀ ಜೀವನವೇ ಕುಸಿದ ಅನುಭವವಾಗುತ್ತದೆ ಎನ್ನುವ ಮಾತನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಅದು ಪ್ರೀತಿ ಸಂಬಂಧವಿರಲಿ ಇಲ್ಲ ಮದುವೆ ಇರಲಿ. ಬ್ರೇಕ್ ಅಪ್ ನಂತ್ರ ಅಥವಾ ವಿಚ್ಛೇದನದ ನಂತ್ರ ನಮ್ಮನ್ನು ನಾವು ಸಂಭಾಳಿಸಿಕೊಳ್ಳೋದು ಕಷ್ಟವಾಗುತ್ತದೆ. ಅನೇಕ ಸವಾಲುಗಳನ್ನು ಈ ಸಂದರ್ಭದಲ್ಲಿ ಜನರು ಎದುರಿಸಬೇಕಾಗುತ್ತದೆ. ಮಾನಸಿಕ ನೋವು, ಗೊಂದಲ ಒಂದು ಕಡೆಯಾದ್ರೆ ಸಮಾಜ ನಮ್ಮನ್ನು ಯಾವ ದೃಷ್ಟಿಯಲ್ಲಿ ನೋಡುತ್ತದೆ ಎನ್ನುವ ಭಯ ಇನ್ನೊಂದೆಡೆ ಇರುತ್ತದೆ. ಇಡೀ ದಿನ ಮನೆಯ ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕುವವರಿದ್ದಾರೆ. ಮತ್ತೆ ಕೆಲವರು ಕುಡಿತಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ತಾರೆ. ಎಲ್ಲ ಮುಗಿತು ಅಂತಾ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಬಹಳಷ್ಟಿದೆ. ಆದ್ರೆ ನಾವು ಹೇಳಿದ್ದೆಲ್ಲ ಹಿಂದಿನ ಕಥೆ. ಈಗಿನ ಜನರೇಷನ್ ಬದಲಾಗಿದೆ. ಅವರ ಆಲೋಚನೆಗಳು ನಮ್ಮ ಆಲೋಚನೆಗಿಂತ ಸಂಪೂರ್ಣ ಭಿನ್ನವಾಗಿದೆ. ಬ್ರೇಕ್ ಅಪ್, ವಿಚ್ಛೇದನವನ್ನು ಅವರು ಸಾಮಾನ್ಯ ಎನ್ನುವಂತೆ ತೆಗೆದುಕೊಳ್ತಾರೆ. ವಿಶೇಷವೆಂದ್ರೆ ಈಗಿನ ದಿನಗಳಲ್ಲಿ ಬ್ರೇಕ್ ಅಪ್ ನಂತ್ರ ದೊಡ್ಡ ದೊಡ್ಡ ಪಾರ್ಟಿಗಳು ಏರ್ಪಾಡಾಗೋದನ್ನು ನಾವು ನೋಡ್ತಿದ್ದೇವೆ. ವಿಚ್ಛೇದನ ಅಥವಾ ಬ್ರೇಕ್ ಅಪ್ ನಂತ್ರ ಸಂತೋಷದಿಂದ ಫೋಟೋ ತೆಗೆಸಿಕೊಳ್ಳುವ ಜನರು ಅದನ್ನು ಸಂಭ್ರಮಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರ ಫೋಟೋಗಳು ಈಗ ವೈರಲ್ ಆಗ್ತಿವೆ.

ಪತಿಯಿಂದ ಡೈವೋಸ್ (Divorce) – ಪತ್ನಿಯ ಭರ್ಜರಿ ಪಾರ್ಟಿ (Party) : ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳ ಸ್ನೇಹಿತರು, ಮಹಿಳೆಗೆ ಡೈವೋರ್ಸ್ ಸಿಕ್ಕಿದ್ದಕ್ಕೆ ಪಾರ್ಟಿ ಮಾಡಿದ್ದ ಸುದ್ದಿ ಚರ್ಚೆಯಾಗಿತ್ತು. ಮಹಿಳೆಗೆ ತಿಳಿಯದೆ ಆಕೆ ಸ್ನೇಹಿತರು ಪಾರ್ಟಿ ಏರ್ಪಡಿಸಿ ಸರ್ಪ್ರೈಸ್ ನೀಡಿದ್ದರು. ಈಗ ಇನ್ನೊಂದು ಮಹಿಳೆ ಕೂಡ ಪಾರ್ಟಿ ಮಾಡಿದ್ದಾಳೆ. ಆಗ್ನೇಯ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಸಾಂಗ್ ಎಂಬ ಮಹಿಳೆ ತನ್ನ ಸ್ನೇಹಿತೆಯರಿಗೆ ಪಾರ್ಟಿ ನೀಡಿದ್ದಾಳೆ. 
ಪಾರ್ಟಿ ಅದ್ಧೂರಿಯಾಗಿತ್ತು. ಕೆಂಪು ಬಣ್ಣದ ಬ್ಯಾನರ್ ಮೇಲೆ ಕೆಟ್ಟ ಮದುವೆ ಅಂತ್ಯವಾಯ್ತು ಎಂದು ಬರೆದಿದ್ದರು. ಮತ್ತೆ ಸಿಂಗಲ್ ಆದ ಸ್ನೇಹಿತೆಗೆ ಶುಭಾಷಯ ಎಂದು ಸ್ನೇಹಿತರು ವಿಶ್ ಮಾಡಿದ್ರು. ಸ್ಥಳೀಯ ಸಂಪ್ರದಾಯದಂತೆ ಮಹಿಳೆಯನ್ನು ಪವಿತ್ರಗೊಳಿಸುವ ಕೆಲಸ ನಡೆಯಿತು. ಆ ನಂತ್ರ ಮಹಿಳೆಯರು ಬ್ರೇಕ್ ಅಪ್ ಗೆ ಸಂಬಂಧಿಸಿದ ಹಾಡು ಹಾಡಿದ್ರು. ಈ ಹಾಡಿನಲ್ಲಿ ಬ್ರೇಕ್ ಅಪ್ ಒಳ್ಳೆಯದು ಎನ್ನುವ ಸಂದೇಶವಿತ್ತು. 

Latest Videos

undefined

ರಣಬೀರ್ ಜೊತೆ ಸಂಪೂರ್ಣ ಬೆತ್ತಲಾಗಿ ನಟಿಸಿದ ತೃಪ್ತಿ ದಿಮ್ರಿ ಬಗ್ಗೆ ತಂದೆ-ತಾಯಿ ಹೀಗೆಲ್ಲಾ ಹೇಳೋದಾ?

ಒಬ್ಬ ಫೋಟೋಗ್ರಾಫರ್ ಕರೆಸಿದ್ದ ಮಹಿಳೆ, ಬ್ರೇಕ್ ಅಪ್ ಖುಷಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಳು. ಮಹಿಳೆ ವಯಸ್ಸು 34 ವರ್ಷ. ಆಕೆಗೆ ಮೇ ತಿಂಗಳಿನಲ್ಲಿ ನನ್ನ ಪತಿ ತನಗೆ ಮೋಸ ಮಾಡ್ತಿದ್ದಾನೆ ಎಂಬ ಸತ್ಯ ಗೊತ್ತಾಗಿತ್ತು. ಪತಿಯಿಂದ ದೂರವಾಗಿ ಜೀವನ ನಡೆಸುವ ನಿರ್ಧಾರವನ್ನು ಆಕೆ ತೆಗೆದುಕೊಂಡಿದ್ದಳು. ಸಾಂಗ್ ಮಾತ್ರವಲ್ಲ ಅನೇಕರು ಈಗ ಬ್ರೇಕ್ ಅಪ್ ಪಾರ್ಟಿ ಆಯೋಜನೆ ಮಾಡ್ತಿದ್ದಾರೆ. ಸ್ಥಳೀಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Xiaohongshu ನಲ್ಲಿ, #divorce ಎಂಬ ಹ್ಯಾಶ್‌ಟ್ಯಾಗ್ 2.76 ಬಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. #divorcephotography 8.3 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. 

ಈವರೆಗೆ ಏಳಕ್ಕೂ ಹೆಚ್ಚು ಬ್ರೇಕ್ ಅಪ್ ಪಾರ್ಟಿ ಫೋಟೋಶೂಟ್ ಮಾಡಿದ್ದಾಗಿ ಫೋಟೋಗ್ರಾಫರ್ ಒಬ್ಬ ಹೇಳಿದ್ದಾನೆ. ಭಾರತ ಮಾತ್ರವಲ್ಲ ಚೀನಾದಲ್ಲೂ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿತ್ತು. 2000 ರಲ್ಲಿ ಶೇಕಡಾ 0.096ರಷ್ಟಿದ್ದ ವಿಚ್ಛೇದನ ಪ್ರಕರಣ 2020 ರಲ್ಲಿ ಶೇಕಡಾ 0.31 ರಷ್ಟು ಏರಿತ್ತು. ಆದ್ರೆ ವಿಚ್ಛೇದನ ಕೂಲಿಂಗ್-ಆಫ್ ಕಾನೂನನ್ನು ಜಾರಿಗೊಳಿಸಿದ ನಂತರ ಇದ್ರಲ್ಲಿ ಇಳಿಕೆ ಕಂಡು ಬಂದಿದೆ. ಇದು 2021 ರಲ್ಲಿ ಶೇಕಡಾ 0.2 ಕ್ಕೆ ಇಳಿದಿದೆ. ಕಾನೂನಿನ ಪ್ರಕಾರ, ದಾಖಲೆಗಳನ್ನು ಅಂತಿಮಗೊಳಿಸುವ ಮೊದಲು ದಂಪತಿ 30 ದಿನ ಕಾಯಬೇಕಾಗುತ್ತದೆ. 

ಸೆಕ್ಸ್ ಟೈಮಿಂಗ್ ಹೆಚ್ಚಿಸೋ ಬಗ್ಗೆ ನೀವು ಯೋಚನೆ ಮಾಡ್ತಿದ್ರೆ ಇಲ್ಲಿದೆ ಸರಿಯಾದ ಮಾರ್ಗ!

click me!