ಏಜ್ ಗ್ಯಾಪ್ ತುಂಬಾ ಇದ್ಯಾ? ಆದ್ರೂ ಡೇಟಿಂಗ್ ಮಾಡ್ತಾ ಇದೀರಿ ಅಂದ್ರೆ ಈ ಕಡೆ ಇರಲಿ ಗಮನ!

By Suvarna News  |  First Published Dec 11, 2023, 3:50 PM IST

ನಿಮಗಿಂತ ವಯಸ್ಸಿನಲ್ಲಿ ಹೆಚ್ಚಿರುವ ಅಥವಾ ಅತಿ ಕಡಿಮೆ ಇರುವ ವ್ಯಕ್ತಿ ಜೊತೆ ಪ್ರೀತಿಯಲ್ಲಿ ಬೀಳೋದು ತಪ್ಪಲ್ಲ. ಆ ಪ್ರೀತಿ ಉಳಿಸಿಕೊಂಡು ಹೋಗೋದು ಬಹಳ ಮುಖ್ಯ. ಅದಕ್ಕೆ ಇಬ್ಬರ ಪ್ರಯತ್ನವೂ ಅಗತ್ಯ.   
 


ಹಿಂದೆ ಮದುವೆ ಮಾಡುವ ಮುನ್ನ ಅನೇಕ ಸಂಗತಿಗಳನ್ನು ಗಮನಿಸುತ್ತಿದ್ದರು. ಹುಡುಗ, ಹುಡುಗಿ ವಯಸ್ಸು ಇದರಲ್ಲಿ ಮುಖ್ಯವಾಗಿತ್ತು. ಒಂದೇ ವಯಸ್ಸಿನ ಹುಡುಗ – ಹುಡುಗಿ ಮದುವೆಗೆ ಮನೆಯವರು ಒಪ್ಪುತ್ತಿರಲಿಲ್ಲ. ಇಬ್ಬರ ಮಧ್ಯೆ ೫ -೬ ವರ್ಷವಾದ್ರೂ ಅಂತರವಿರಬೇಕು ಎಂಬುದು ಅವರ ನಿಯಮವಾಗಿತ್ತು. ಪತಿಗಿಂತ ಪತ್ನಿ ದೊಡ್ಡವಳಿರಬಾರದು ಎನ್ನುವ ಅಲಿಖಿತ ನಿಯಮವನ್ನೂ ಮದುವೆ ಮಾಡುವ ಸಮಯದಲ್ಲಿ ಪಾಲನೆ ಮಾಡಲಾಗ್ತಿತ್ತು. ಅರೆಂಜ್ ಮ್ಯಾರೇಜ್ ನಲ್ಲಿ ಇದೆಲ್ಲವನ್ನೂ ಜನ ಗಮನಿಸ್ತಾರೆ. ಲವ್ ಮ್ಯಾರೇಜ್ ನಲ್ಲಿ ವಯಸ್ಸು ಗಮನಕ್ಕೆ ಬರೋದಿಲ್ಲ. ಒಂದೇ ವಯಸ್ಸಿನ ತಮ್ಮ ಸ್ನೇಹಿತರ ಕೈ ಹಿಡಿಯುವ ಅನೇಕರಿದ್ದಾರೆ. ಅದೇ ತಮಗಿಂತ ಹೆಚ್ಚು ವಯಸ್ಸಾಗಿರುವ ವ್ಯಕ್ತಿಯನ್ನು ಮದುವೆಯಾಗುವ ಜನರೂ ನಮ್ಮಲ್ಲಿದ್ದಾರೆ. ಈಗಿನ ದಿನಗಳಲ್ಲಿ ಮದುವೆಯಾಗುವ ಹುಡುಗಿ ವಯಸ್ಸು ೪೦ ಆದ್ರೆ ಹುಡುಗನ ವಯಸ್ಸು ೨೦ ಆಗಿರುತ್ತದೆ. ಅಂದ್ರೆ ಇಬ್ಬರಲ್ಲಿ ಒಬ್ಬರು ದೊಡ್ಡವರಿದ್ರೆ ಆಯ್ತು. ಹೊಂದಾಣಿಕೆ ಮುಖ್ಯ ಎನ್ನುವವರೇ ಹೆಚ್ಚು. ನೀವೂ ನಿಮ್ಮ ವಯಸ್ಸಿಗಿಂತ ಹತ್ತು – ಹದಿನೈದು ವರ್ಷ ದೊಡ್ಡವರ ಜೊತೆ ಡೇಟ್ ಮಾಡ್ತಿದ್ದರೆ ಕೆಲವೊಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮಗಿಂತ ಹಿರಿಯ ವ್ಯಕ್ತಿ ಜೊತೆ ಡೇಟ್ ಮಾಡೋದು ತಪ್ಪಲ್ಲ. ಅನೇಕ ಬಾರಿ ಈ ಸಂಬಂಧದಲ್ಲಿಯೇ ಹೆಚ್ಚು ಹೊಂದಾಣಿಕೆ ಕಂಡು ಬರೋದಿದೆ. ಅದು ನಿಮ್ಮಲ್ಲೂ ಆಗ್ಬೇಕೆಂದ್ರೆ ನೀವು ಕೆಲ ನಿಯಮ ಪಾಲನೆ ಮಾಡ್ಬೇಕಾಗುತ್ತದೆ.

ಹಿರಿಯ ವಯಸ್ಸಿನ ವ್ಯಕ್ತಿ ಜೊತೆ ಡೇಟ್ ಮಾಡುವಾಗ ಇದು ನೆನಪಿರಲಿ : 

ಸಂಬಂಧ (Relationship) ದ ಬ್ಯಾಲೆನ್ಸ್ ಹೀಗಿರಲಿ : ನೀವು ನಿಮಗಿಂತ ವಯಸ್ಸಿನಲ್ಲಿ ಹಿರಿಯರಾಗಿರುವ , 15- 20 ವರ್ಷ ವಯಸ್ಸಿನ ಅಂತರವಿರುವ ವ್ಯಕ್ತಿ ಜೊತೆ ಡೇಟಿಂಗ್ ನಲ್ಲಿದ್ದರೆ ನಿಸ್ವಾರ್ಥ ಪ್ರೀತಿ (Love) , ಗೌರವ ಮತ್ತು ಕಾಳಜಿಯನ್ನು ಮಾತ್ರ ಗಮನಿಸಿ. ಬೇರೆ ಯಾವುದೇ ವಿಷ್ಯಕ್ಕೆ ಮಹತ್ವ ನೀಡಲು ಹೋಗ್ಬೇಡಿ. ಹಾಗೆಯೇ ಈ ಸಂಬಂಧದ ಬಗ್ಗೆ ಜನರು ಏನು ಹೇಳ್ತಾರೆ ಎಂಬುದನ್ನು ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸಂಬಂಧ ಬಲಪಡೆಯಬೇಕೆಂದ್ರೆ ನಿಮ್ಮ ಕುಟುಂಬಸ್ಥರ ಬೆಂಬಲ ಅಗತ್ಯವಿರುತ್ತದೆ. ಹಾಗಾಗಿ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿ. 

Tap to resize

Latest Videos

ನನ್ನ ಮಲ ಸಹೋದರನೇ ನನ್ನ ಪತಿ; ಕುಟುಂಬದ ರಹಸ್ಯ ಬಿಚ್ಚಿಟ್ಟ ಮಹಿಳೆ!

ಭವಿಷ್ಯ (Future) ದ ಬಗ್ಗೆ ಚರ್ಚಿಸಿ : ವಯಸ್ಸಾದ ವ್ಯಕ್ತಿ ಜೊತೆ ಡೇಟಿಂಗ್ ಮಾಡ್ತಿದ್ದು, ಅದನ್ನು ಮುಂದುವರೆಸುವ ಆಲೋಚನೆಯಲ್ಲಿದ್ದರೆ ಭವಿಷ್ಯದ ಬಗ್ಗೆ ಮೊದಲು ಮಾತನಾಡಬೇಕು. ಯಾಕೆಂದ್ರೆ ನಿಮ್ಮ ಸಂಬಂಧ ಭವಿಷ್ಯದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ವಯಸ್ಸಾದ ವ್ಯಕ್ತಿಗಳು ಭಾವನೆಗೆ ಬೆಲೆ ನೀಡುತ್ತಾರೆ. ಅನುಭವದಿಂದ ಸಾಕಷ್ಟು ಜ್ಞಾನ ಹೊಂದಿರುತ್ತಾರೆ. ಹಾಗಂತ ನೀವು ಅವರಂತೆ ವಿಶ್ರಾಂತಿ ಮೂಡ್ ನಲ್ಲಿ ಇರಬೇಕಾಗಿಲ್ಲ. ಅವರ ಜೊತೆ ನೀವು ಜೀವನವನ್ನು ಹೇಗೆ ಕಳೆಯಬೇಕು ಎನ್ನುವ ಬಗ್ಗೆ ಮೊದಲೇ ಪ್ಲಾನ್ ಮಾಡಿರಬೇಕು.

ನೀವೂ ಬ್ಯಾಕ್ ಬರ್ನರ್ ಸಂಬಂಧದಲ್ಲಿದ್ದೀರಾ? ಹೀಗೆ ಪತ್ತೆ ಮಾಡಿ

ಸಂವಹನ (Communication): ವಯಸ್ಸಿನ ಅಂತರ ಹೆಚ್ಚಾದಾಗ ಜನರ ಚುಚ್ಚು ಮಾತುಗಳು ಹೆಚ್ಚಾಗುತ್ತವೆ. ಜನರು ನಿಮ್ಮ ಬಗ್ಗೆ ಕಮೆಂಟ್ ಶುರು ಮಾಡ್ತಾರೆ. ಇದೆಲ್ಲವನ್ನು ನೀವಿಬ್ಬರೂ ಎದುರಿಸಬೇಕಾಗುತ್ತದೆ. ಹಾಗಾಗಿ ನೀವಿಬ್ಬರು ನಿಮ್ಮ ಮನಸ್ಸು ಬಿಚ್ಚಿ ಮಾತನಾಡಿದಾಗ, ನಿಮ್ಮ ಸಮಸ್ಯೆಗಳೇನು ಹೇಳಿಕೊಂಡಾಗ, ಸಮಾಜವನ್ನು ಹೇಗೆ ಎದುರಿಸಬೇಕೆಂದು ಚರ್ಚಿಸಿದಾಗ ಒತ್ತಡ ಕಡಿಮೆ ಆಗುತ್ತದೆ. ಸಂಗಾತಿ ಮಧ್ಯೆ ಸಂವಹನ ಬಹಳ ಮುಖ್ಯವಾಗುತ್ತದೆ.

ಜನರೇಷನ್ ಗ್ಯಾಪ್ (Generation Gap) ಬಗ್ಗೆ ತಿಳಿದಿರಿ : ಸಂಗಾತಿ ವಯಸ್ಸಿನಲ್ಲಿ ದೊಡ್ಡ ಅಂತರವಿದ್ದಾಗ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಪೀಳಿಗೆಯಿಂದ ಪೀಳಿಗೆಗೆ ಪ್ರೀತಿಯ ಅರ್ಥ ಬದಲಾಗುತ್ತ ಹೋಗುತ್ತದೆ. ಅವರ ನಿರೀಕ್ಷೆ, ಆಸೆಗಳು ಭಿನ್ನವಾಗಿರುತ್ತವೆ. ಅದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಂಗಾತಿಯ ಭಾವನೆಗಳಿಗೆ ಸ್ಪಂದಿಸಬೇಕು. ಅವರಂತೆ ನೀವು ಆಲೋಚನೆ ಮಾಡಲು ಕಲಿಯಬೇಕು.

click me!