ಸೆಕ್ಸ್ ಮಾಡಬೇಕು ಅಂತಿದೆ, ಆದರೆ ಮೂಡ್ ಬರಲ್ಲ ಅನ್ನೋರಿಗೆ!

By Suvarna News  |  First Published Sep 1, 2022, 12:02 PM IST

ಕೆಲಸದ ಒತ್ತಡ, ದಣಿವು, ಜವಾಬ್ದಾರಿಗಳು ತಾತ್ಕಾಲಿಕವಾಗಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡಬಹುದು. ಇದರಿಂದ ಇನ್ನೊಬ್ಬ ಸಂಗಾತಿಗೆ ನಿರಾಸೆ, ಅತೃಪ್ತಿ ಉಂಟಾಗಬಹುದು. ವೈವಾಹಿಕ ಸಂಬಂಧ ದೀರ್ಘಕಾಲ ಚೆನ್ನಾಗಿರಲು ಸೆಕ್ಸ್ ಸಹಕಾರಿ. ಇದು ಅನೇಕ ಮಾನಸಿಕ ಸಮಸ್ಯೆಗೂ ಬೆಸ್ಟ್ ಮೆಡಿಸಿನ್.


ಶಾರದಾ ಮದುವೆ ಆಗಿ ಐದು ವರ್ಷಗಳಾದವು. ಒಬ್ಬ ಮಗಳಿದ್ದಾಳೆ. ಮಗಳ ಓದು, ಮನೆ ಜವಾಬ್ದಾರಿ, ಆಫೀಸ್ ವರ್ಕ್ ಅಂತ ಸದಾ ಬ್ಯುಸಿ ಇರುವ ಅವಳಿಗೆ ಹಾಸಿಗೆಯಲ್ಲೂ ಕೆಲಸದ್ದೇ ಚಿಂತೆ. ಗಂಡ ಸೆಕ್ಸ್‌ಗಾಗಿ ಬಳಿ ಸಾರಿದಾಗ ಆಸಕ್ತಿ ಇಲ್ಲ ಅಂತಲೋ, ನಂಗೆ ಸುಸ್ತಾಗಿದೆ ಅಂತಲೋ ಪಕ್ಕಕ್ಕೆ ತಿರುಗಿ ಮಲಗುತ್ತಾಳೆ. ಆದರೆ ಇತ್ತೀಚೆಗೆ ಗಂಡ ಮನೆಗೆ ಲೇಟಾಗಿ ಬರುವುದು, ಸಿಡುಕುವುದು ಹೆಚ್ಚಾಗಿರೋದು ಅವಳ ಗಮನಕ್ಕೆ ಬಂದಾಗ ಸೂಕ್ಷ್ಮ ಮನಸ್ಸಿನ ಅವಳು ಇದಕ್ಕೆ ತನ್ನ ವರ್ತನೆಯೇ ಮುಖ್ಯ ಕಾರಣ ಅಂತ ಗೊತ್ತಾಗಿದೆ. ಆದರೆ ಸೆಕ್ಸ್ ನಲ್ಲಿ ಆಸಕ್ತಿ ಬರುತ್ತಿಲ್ಲ ಅಂತ ಅವಳು ಏನೇನೋ ಆಹಾರ ಪದಾರ್ಥ ಟ್ರೈ ಮಾಡಿದ್ದಾಳೆ. ಆದರೆ ಅವ್ಯಾವುದೂ ಪ್ರಯೋಜನ ಆಗಿಲ್ಲ. ಕೊನೆಗೆ ತನ್ನ ಸ್ಥಿತಿಯನ್ನು ಗಂಡನ ಬಳಿಯೇ ಹೇಳಿಕೊಂಡಾಗ ಕ್ರಮೇಣ ಅವಳ ಸಮಸ್ಯೆ ಸರಿಹೋಗಿದೆ. ಪತ್ನಿಯ ಸಮಸ್ಯೆ ತಿಳಿದ ಮೇಲೆ ಗಂಡ ಅವಳ ಜೊತೆ ಹೆಚ್ಚೆಚ್ಚು ಇಂಟಿಮೇಟ್(Intimate) ಆಗಿರಲು ಪ್ರಯತ್ನಿಸಿದ್ದಾನೆ. ಮಗಳನ್ನು ಕೆಲ ದಿನಗಳ ಮಟ್ಟಿಗೆ ಅಜ್ಜಿಮನೆಯಲ್ಲಿ ಬಿಟ್ಟು ಪತ್ನಿಯ ಜೊತೆ ಟ್ರಿಪ್‌ಗೆ ಹೋಗಿ ಬಂದಿದ್ದಾನೆ. ಅಲ್ಲಿನ ಏಕಾಂತ, ಪರಿಸರದಲ್ಲಿನ ಬದಲಾವಣೆ, ಗಂಡನ ಪ್ರಚೋದಕ ವರ್ತನೆಯಿಂದ ಅವಳಿಗೆ ಮತ್ತೆ ಸೆಕ್ಸ್(Sex) ನಲ್ಲಿ ಆಸಕ್ತಿ ಬಂದಿದೆ. ಅವನ ಸಿಡುಕುತನದ ಜೊತೆಗೆ ಅವಳ ಮನಸ್ಸೂ ರಿಫ್ರೆಶಿಂಗ್ (Refreshing) ಆಗಿ ಅವಳೀಗ ಹೆಚ್ಚೆಚ್ಚು ಖುಷಿಯಿಂದಿರುವುದು ಸಾಧ್ಯವಾಗಿದೆ.

ಇನ್ನೊಂದು ಕೇಸ್‌ನಲ್ಲಿ ಶರತ್‌ಗೆ ಆಫೀಸಿನ ಅತಿಯಾದ ಒತ್ತಡದಿಂದ ಮನೆಯ ಕಡೆ ಗಮನ ಕೊಡುವುದು ಸಾಧ್ಯವಾಗುತ್ತಿರಲಿಲ್ಲ. ಬ್ಯುಸಿನೆಸ್ ಮೀಟಿಂಗ್(Business meeting), ಟೂರ್ ಅಂತ ಆತನ ಹಾಗೂ ಪತ್ನಿಯ ಸೆಕ್ಸ್ ಲೈಫ್‌ ತೀರಾ ಅಪರೂಪವಾಗಿದೆ. ಇದರಿಂದ ತನ್ನ ಪತ್ನಿಗೆ ಕಿರಿಕಿರಿ ಆಗುತ್ತಿದೆ ಅಂತ ಆತ ತಿಳಿದುಕೊಂದಿದ್ದಾನೆ. ಒಮ್ಮೆ ಅವಳ ಸಹೋದ್ಯೋಗಿ ಜೊತೆಗೆ ಅವಳನ್ನು ಹೊರಗೆಲ್ಲೋ ಕಂಡಾಗಿನಿಂದ ಹೊಸ ಅನುಮಾನಗಳೂ ಶುರುವಾಗಿ ಕೆಲವೊಂದು ಮಾನಸಿಕ ಸಮಸ್ಯೆಗಳೂ ಶುರುವಾಗಿದೆ. ಒಂದಿಷ್ಟು ಸಮಯ ಕೌನ್ಸಿಲಿಂಗ್(Counselling) ಪಡೆದ ಬಳಿಕ ಪತ್ನಿಯೊಂದಿಗಿನ ಆತನ ವರ್ತನೆ ಬದಲಾಗಿದೆ, ಬ್ಯುಸಿನೆಸ್‌ನಷ್ಟೇ ಮನೆ, ಸಂಗಾತಿ ಜೊತೆ ಸಂಬಂಧವೂ ಮುಖ್ಯ ಎಂದು ಅದಕ್ಕೂ ಸಮಯ ಕೊಡತೊಡಗಿದ್ದಾನೆ. ತಕ್ಷಣಕ್ಕೆ ಅಲ್ಲದಿದ್ದರೂ ಕ್ರಮೇಣ ಆತನ ಸಾಂಸಾರಿಕ ಬದುಕು ಸರಿ ಹೋಗಿದೆ. ಸಹೋದ್ಯೋಗಿಯ ಜೊತೆಗೆ ಪತ್ನಿಗೆ ಫ್ರೆಂಡ್‌ಶಿಪ್ ಅಷ್ಟೇ ಇದ್ದದ್ದು, ತನ್ನ ಅನುಮಾನ ಸುಳ್ಳು ಅನ್ನೋದು ತಿಳಿದ ಮೇಲೆ ಆತನ ಆತಂಕ, ಖಿನ್ನತೆ ಇತ್ಯಾದಿ ಕಡಿಮೆ ಆಗಿದೆ. ಅವರಿಬ್ಬರ ನಡುವೆ ಆಪ್ತವಾದ ಸಮಯ ಹೆಚ್ಚಿರುವ ಕಾರಣ ನಿಧಾನಕ್ಕೆ ಸೆಕ್ಸ್‌ ಲೈಫೂ ಚೆನ್ನಾಗಾಗುತ್ತಿದೆ.

Tap to resize

Latest Videos

ಅಬ್ಬಬ್ಬಾ..ವೀರ್ಯ ಬಳಸಿ ಮುತ್ತಿನ ನೆಕ್ಲೇಸ್ ತಯಾರಿಸ್ತಿದ್ದಾಳೆ ಮಹಿಳೆ !

ಇವೆರಡು ಪಾಸಿಟಿವ್ ಸ್ಟೋರಿಗಳು. ಆದರೆ ಎಲ್ಲಾ ಲೈಂಗಿಕ ಸಮಸ್ಯೆಗಳಿಂದ ದೂರವಾಗುವ ದಾಂಪತ್ಯದ (Married Life) ಕೊನೆ ಎಲ್ಲ ಕೇಸ್‌ಗಳಲ್ಲೂ ಹ್ಯಾಪಿ ಎಂಡಿಂಗ್(Happy ending) ಆಗೋದಿಲ್ಲ.

ಹಾಗಿದ್ದರೆ ಸೆಕ್ಸ್ ಗೋಸ್ಕರ ವೈವಾಹಿಕ ಸಂಬಂಧವಾ ಎಂಬ ಪ್ರಶ್ನೆ ಬರಬಹುದು. ಸೆಕ್ಸ್‌ಗೋಸ್ಕರವೇ ವೈವಾಹಿಕ ಜೀವನ ಅಲ್ಲ. ಆದರೆ ಸೆಕ್ಸ್‌ನಿಂದ ಸಂಗಾತಿಗಳ ನಡುವಿನ ಸಂಬಂಧ ಚೆನ್ನಾಗಾಗುತ್ತೆ. ಬದುಕಿನ ಹಾದಿ ದೂರವಿದ್ದರೂ ನಡೆದ ಆಯಾಸ ಗಮನಕ್ಕೆ ಬರೋದಿಲ್ಲ. ಸೆಕ್ಸ್ ಸಂಬಂಧ ಸರಿಪಡಿಸಿಕೊಳ್ಳಲು ಗಂಡ ಹೆಂಡತಿ ನಡುವೆ ಇಂಟಿಮೆಸಿ ಅಂದರೆ ಆಪ್ತತೆ ಹೆಚ್ಚಾಗಬೇಕಾದ್ದು ಮೊದಲ ಹೆಜ್ಜೆ. ಕೆಲವೊಮ್ಮೆ ಪತಿ ಪತ್ನಿ ಕ್ಲೋಸ್ ಇದ್ದರೂ ಮೂಡ್ ಬರೋದಿಲ್ಲ. ಅದಕ್ಕೆ ಹಾರ್ಮೋನಲ್ ಸಮಸ್ಯೆಗಳೂ ಕಾರಣ ಆಗಬಹುದು.

ಆಕೆ ವಿವಾಹಿತೆ, ಆದರೂ ಗಾಢ ಪ್ರೇಮದಲ್ಲಿ ಬಿದ್ದಿದ್ದಾನೆ, ಏನು ಮಾಡೋದು?

- ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡೋದು, ಕಾಮ ಪ್ರಚೋದಿಸುವ ವೀಡಿಯೋ ನೋಡೋದು ಲೈಂಗಿಕತೆಯಲ್ಲಿ ಆಸಕ್ತಿ ತರಬಹುದು.
- ಮಸಾಜ್ ಸ್ನಾನ ಮೂಡ್ ತರಿಸೋದಕ್ಕೆ ಬೆಸ್ಟ್.
- ಪತಿ ಪತ್ನಿ ಇಬ್ಬರೇ ಪ್ರಶಾಂತ ಪ್ರಕೃತಿ ಸೌಂದರ್ಯದ (Nature) ಜಾಗಕ್ಕೆ ಪ್ರವಾಸ ಹೋಗೋದು ಪತಿ ಪತ್ನಿಯರ ನಡುವಿನ ಸಂಬಂಧ ಸುಧಾರಿಸಲು ಉತ್ತಮ.
- ಬೆತ್ತಲಾಗಿ ಸ್ನಾನ ಮಾಡೋದು ಸೆಕ್ಸ್ ಡ್ರೈವ್ ಹೆಚ್ಚು ಮಾಡುತ್ತೆ.
- ಸೆಕ್ಸ್‌ನಲ್ಲಿ ಬೇರೆ ಬೇರೆ ಭಂಗಿಗಳನ್ನು ಟ್ರೈ ಮಾಡೋದು, ಆ ಕುರಿತ ವಿಚಾರ ಓದೋದು ಸಹ ಲೈಂಗಿಕ ಆಸಕ್ತಿ ಹೆಚ್ಚಲು ಉತ್ತಮ.

click me!