ಪುಟ್ಟ ಮಕ್ಕಳು ಅಂದ್ರೆ ಎಲ್ಲರಿಗೂ ಇಷ್ಟಾನೆ. ಮುದ್ದಾದ ಮಕ್ಕಳನ್ನು ನೋಡಿದ್ರೆ ಯಾರಾದ್ರೂ ಎತ್ತಿಕೊಂಡು ಮುದ್ದಾಡೋಕೆ ಇಷ್ಟಪಡ್ತಾರೆ. ಹೆಚ್ಚಿನವರು ಮುತ್ತನ್ನು ಸಹ ಕೊಡ್ತಾರೆ. ಆದ್ರೆ ಮಕ್ಕಳಿಗೆ ಚುಂಬಿಸೋದು ಆರೋಗ್ಯಕ್ಕೆ ಒಳ್ಳೆಯದಾ ? ಹೀಗೆ ಮುತ್ತು ಕೊಡೋದ್ರಿಂದ ಮಕ್ಕಳ ಆರೋಗ್ಯಕ್ಕೆ ತೊಂದ್ರೆ ಇದೆಯಾ ?
ಪ್ರತಿ ಪಾಲಕರು ಸಹ ತಮ್ಮ ಮಗುವನ್ನು ತುಂಬಾ ಪ್ರೀತಿಸುತ್ತಾರೆ. ಆದ್ರೆ ಪ್ರತಿಯೊಬ್ಬರೂ ಈ ಪ್ರೀತಿಯನ್ನು ತೋರಿಸುವ ವಿಧಾನ ವಿಭಿನ್ನವಾಗಿದೆ ಪೋಷಕರು ಮಕ್ಕಳ ಮೇಲಿನ ಪ್ರೀತಿಯನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಮಗುವಿನ ತುಟಿಗಳಿಗೆ ಚುಂಬಿಸುವ ಮೂಲಕ ಪ್ರೀತಿಯನ್ನು ತೋರಿಸಲಾಗುತ್ತದೆ. ಆದ್ರೆ ಕೆಲವೊಬ್ಬರು ಚಿಕ್ಕ ಮಗುವಿಗೆ ಮುತ್ತಿಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ರೀತಿ ಮಾಡುವುದರಿಂದ ಬ್ಯಾಕ್ಟಿರೀಯಾ ಹರಡುತ್ತದೆ. ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ತಿಳಿಸುತ್ತಾರೆ. ಆದ್ರೆ ಮಕ್ಕಳಿಗೆ ಮುತ್ತಿಡುವುದರಿಂದಲೂ ತುಂಬಾ ಪ್ರಯೋಜನವಿದೆ ಅನ್ನೋ ವಿಷ್ಯ ನಿಮ್ಗೊತ್ತಾ ?
ಅನ್ಯೋನ್ಯತೆಯು ಪೋಷಕರು (Parents) ಮತ್ತು ಮಗುವಿನ ನಡುವಿನ ಸಂಬಂಧ (Relationship)ವನ್ನು ಬಲಪಡಿಸುತ್ತದೆ. ಚುಂಬಿಸುವುದು (Kiss), ಅಪ್ಪಿಕೊಳ್ಳುವುದು ಮತ್ತು ಕಚಗುಳಿಯಿಡುವುದು ಮುಂತಾದ ದೈಹಿಕ ಸನ್ನೆಗಳು ಸಹ ನಿಮ್ಮ ಪ್ರೀತಿ (Love)ಯನ್ನು ಮಗುವಿಗೆ ತೋರಿಸಲು ಒಂದು ಮಾರ್ಗವಾಗಿದೆ. ಅಲೆನ್ಸ್ ಸಬೆ 2017ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಪೋಷಕರು ಮತ್ತು ಮಕ್ಕಳು ಇಬ್ಬರೂ ದೈಹಿಕ ಪ್ರೀತಿಯಿಂದ ಪ್ರಯೋಜನ ಪಡೆಯುತ್ತಾರೆ. ಪೋಷಕರು ತಮ್ಮ ಮಕ್ಕಳ (Children) ಪ್ರೀತಿಯ ಅಭಿವ್ಯಕ್ತಿಗಳಿಗೆ ಸಂವೇದನಾಶೀಲರಾಗಿರಬೇಕು ಎಂದು ಅಧ್ಯಯನವು ತೋರಿಸಿದೆ.
ಮನೇಲಿ ಪುಟ್ಟ ಮಕ್ಕಳಿದ್ದಾರಾ ? ಅನಾಹುತವಾಗ್ಬಾರ್ದು ಅಂದ್ರೆ ಹೀಗ್ ಮಾಡಿ
ಮಕ್ಕಳಿಗೆ ಚುಂಬಿಸುವುದರಿಂದ ಸಿಗುವ ಪ್ರಯೋಜನಗಳೇನು ?
ಬುದ್ಧಿ ಚುರುಕಾಗುತ್ತದೆ: ಮಗುವನ್ನು ಚುಂಬಿಸುವುದು ದೈಹಿಕ ಮತ್ತು ಭಾವನಾತ್ಮಕ ಪ್ರಯೋಜನಗಳನ್ನು ಹೊಂದಿದೆ. ಗಾಟ್‌ಮ್ಯಾನ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಚಿಕ್ಕ ವಯಸ್ಸಿನಲ್ಲೇ ಧನಾತ್ಮಕ ಸ್ಪರ್ಶವನ್ನು ಪಡೆಯುವ ಮಕ್ಕಳು ಹೆಚ್ಚಿನ ಸ್ವಾಭಿಮಾನವನ್ನು ಹೊಂದಿರುತ್ತಾರೆ, ಅಧ್ಯಯನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ, ಉತ್ತಮ ಪೋಷಕರು-ಮಕ್ಕಳ ಸಂವಹನವನ್ನು ಹೊಂದಿರುತ್ತಾರೆ ಮತ್ತು ಕಡಿಮೆ ಮಾನಸಿಕ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂಬುದು ಸಾಬೀತಾಗಿದೆ.
ಸಂಬಂಧಗಳು ಬಲವಾಗಿರುತ್ತವೆ: ಎನ್‌ಸಿಬಿಐ ಅಧ್ಯಯನದಲ್ಲಿ, ಬಾಲ್ಯದಲ್ಲಿ ಸಕಾರಾತ್ಮಕ ಸ್ಪರ್ಶವನ್ನು ಪಡೆಯುವುದು ಸ್ವಾಭಿಮಾನವನ್ನು ಹೆಚ್ಚಿಸಲು, ತೃಪ್ತಿ ಹೊಂದಲು ಸಂಬಂಧಿಸಿದೆ ಎಂದು ಹೇಳಲಾಗಿದೆ. ಪೋಷಕರು ಮಕ್ಕಳಿಗೆ ಮುತ್ತಿಡುವುದರಿಂದ ಮಕ್ಕಳು ಮತ್ತು ಪೇರೆಂಟ್ಸ್ ನಡುವಿನ ಸಂಬಂಧ ಹೆಚ್ಚು ಗಾಢವಾಗುತ್ತದೆ ಎಂದು ತಿಳಿದುಬಂದಿದೆ.
Johnson & Johnsons ಬೇಬಿ ಪೌಡರ್ ಶಿಶುಗಳ ಚರ್ಮಕ್ಕೆ ಡೇಂಜರ್ !
ಖಿನ್ನತೆಯಿಂದ ದೂರವಿರಿಸುತ್ತದೆ: ಬಾಲ್ಯದಲ್ಲಿ ಸಕಾರಾತ್ಮಕ ಸ್ಪರ್ಶವನ್ನು ಪಡೆಯುವ ಮಕ್ಕಳು ಭವಿಷ್ಯದಲ್ಲಿ ಖಿನ್ನತೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಕಡಿಮೆ ಮತ್ತು ಪ್ರಣಯ ಸಂಬಂಧಗಳಲ್ಲಿ ಹೆಚ್ಚಿನ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಯಾವುದೇ ವಿಷಯದಲ್ಲಿ ಖಿನ್ನತೆ ಅಂಥವರನ್ನು ಕಾಡುವುದಿಲ್ಲ. ಯಾವಾಗಲೂ ಮನಸ್ಸಿಗೆ ಒತ್ತಡವಿಲ್ಲದೆ ಸಮಯ ಕಳೆಯಲು ಸಾಧ್ಯವಾಗುತ್ತದೆ.
ಸಂತೋಷವಾಗಿರುವಂತೆ ಮಾಡುತ್ತದೆ: ತಾಯಂದಿರು ಹೆಚ್ಚಿನ ಪ್ರೀತಿಯನ್ನು ತೋರಿಸುವ ಮಕ್ಕಳು ಸಂತೋಷದಿಂದ, ಕಡಿಮೆ ಮಾನಸಿಕ ಸಮಸ್ಯೆಯನ್ನು ಅನುಭವಿಸುತ್ತಾರೆ. ಸುಲಭವಾಗಿ ಇತರ ಜನರೊಂದಿಗೆ ಬೆರೆಯುತ್ತಾರೆ. ಅಂತರ್ಮುಖಿ ವ್ಯಕ್ತಿತ್ವದವರಾಗಿದರೆ ಎಲ್ಲರೊಂದಿಗೂ ಖುಷಿಯಿಂದ ಬೆರೆಯುತ್ತಾರೆ.
Children Care: ಮಗು ರಾತ್ರಿ ಪದೇ ಪದೇ ಎದ್ದೇಳುತ್ತಾ? ಹಸಿವಾಗಿರಬಹುದು ನೋಡಿ
ಹೆಚ್ಚು ತೃಪ್ತರಾಗಿರುತ್ತಾರೆ: ಸೈನ್ಸ್‌ಡೈರೆಕ್ಟ್‌ನ ಅಧ್ಯಯನವು ಬಾಲ್ಯದಲ್ಲಿ ತಮ್ಮ ಹೆತ್ತವರಿಗೆ ಹತ್ತಿರವಿರುವ ಮಕ್ಕಳು ಅಥವಾ ಪೋಷಕರು ಮತ್ತು ಮಗುವಿನ ನಡುವೆ ದೈಹಿಕ ಸಂಬಂಧವಿರುವಲ್ಲಿ ಮಕ್ಕಳು ತಮ್ಮ ಜೀವನದಲ್ಲಿ ನಂತರ ಹೆಚ್ಚು ಸಂತೃಪ್ತರಾಗುತ್ತಾರೆ ಎಂದು ಕಂಡುಹಿಡಿದಿದೆ.