ನಾದಿನಿ ಹಾಗೂ ಅತ್ತಿಗೆ ಸಂಬಂಧ ವಿಶೇಷವಾಗಿರುತ್ತದೆ. ಇಬ್ಬರ ಮಧ್ಯೆ ಹೊಂದಾಣಿಕೆ ಬಹಳ ಮುಖ್ಯ. ಮದುವೆಗೆ ಮುನ್ನ ಒಂದು ರೀತಿ ವರ್ತಿಸುವ ನಾದಿನಿ ಮದುವೆ ನಂತ್ರ ಬದಲಾಗ್ತಾಳೆ. ಅದಕ್ಕೆ ಅತ್ತಿಗೆಯಾದವಳು ಹೊಂದಿಕೊಳ್ಳೋದು ಮುಖ್ಯ.
ಮದುವೆ ನಂತ್ರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ನಾವು ಕಾಣ್ಬಹುದು. ಮದುವೆಯಾದ್ಮೇಲೆ ಅನೇಕ ಹೊಸ ಸಂಬಂಧಗಳು ಜೋಡಣೆಯಾಗುತ್ತವೆ. ಹೊಸ ಮನೆ, ಹೊಸ ವ್ಯಕ್ತಿಗಳ ಜೊತೆ ಜೀವನ ನಡೆಸಬೇಕಾಗುತ್ತದೆ. ಅತ್ತೆ, ಮಾವ, ಪತಿ, ನಾದಿನಿ, ಮೈದುನ ಹೀಗೆ ಅನೇಕ ಹೊಸ ಸಂಬಂಧಿಕರು ಸಿಗ್ತಾರೆ. ನಾದಿನಿ ಮತ್ತು ಅತ್ತಿಗೆ ಸಂಬಂಧ ವಿಶೇಷವಾಗಿರುತ್ತದೆ. ಅನೇಕರು ಅಕ್ಕ – ತಂಗಿಯಂತೆ ಜೀವನ ನಡೆಸ್ತಾರೆ. ನಾದಿನಿ ಹಾಗೂ ಅತ್ತಿಗೆ ಮಧ್ಯೆ ಒಳ್ಳೆ ಬಾಂಧವ್ಯವಿದ್ರೆ ಸಂಸಾರ ಮತ್ತಷ್ಟು ಸುಖಕರವಾಗಿರುತ್ತದೆ.
ಮದುವೆ (Marriage) ಮೊದಲು ಹಾಗೂ ಮದುವೆ ನಂತ್ರ ಪತಿ ಮನೆಯವರ ವರ್ತನೆಯಲ್ಲಿ ಬದಲಾವಣೆಯಾಗೋದು ಸಾಮಾನ್ಯ. ಮದುವೆಗಿಂತ ಮೊದಲು, ಮನೆಗೆ ಬರುವ ಸೊಸೆ ಅಥವಾ ಅತ್ತಿಗೆ (Sister In Law) ಯನ್ನು ವಿಶೇಷ ಕಾಳಜಿವಹಿಸಿ ನೋಡಲಾಗುತ್ತದೆ. ಮದುವೆಯಾಗಿ ಮನೆಗೆ ಬಂದ್ಮೇಲೆ ಅವರ ನಿಜ ಸ್ವರೂಪ ಬದಲಾಗುತ್ತದೆ. ಅತ್ತಿಗೆಯ ಯಾವುದೇ ಕೆಲಸವನ್ನು ಇಷ್ಟಪಡದ ನಾದಿನಿ ಸದಾ ಒಂದಿಲ್ಲೊಂದು ವಿಷ್ಯಕ್ಕೆ ಗಲಾಟೆ ಮಾಡಬಹುದು. ಇಬ್ಬರ ಗಲಾಟೆ ಅತಿರೇಕಕ್ಕೆ ಹೋಗಿ, ಮನೆಯ ವಾತಾವರಣವೇ ಬದಲಾಗಬಹುದು. ಮದುವೆ ನಂತ್ರ ನಾದಿನಿಯನ್ನು ಹೇಗೆ ಸಂಬಾಳಿಸಬೇಕು ಎಂಬುದು ಮಹಿಳೆಗೆ ತಿಳಿದಿರಬೇಕು. ಇಂದು ನಾವು ಅತ್ತಿಗೆಯಾದವಳು ನಾದಿನಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಹೇಳ್ತೇವೆ.
Crazy ಎಂದೆನಿಸಿದರೂ ಸಂಗಾತಿ ಈ ಗುಣ ಯಾರಿಗೆ ಇಷ್ಟವಾಗೋಲ್ಲ ಹೇಳಿ?
ನಾದಿನಿಯನ್ನು ಮನೆ (House) ಮಗಳಂತೆ ನೋಡಿ: ನೀವು ಮದುವೆಯಾಗಿ ಬೇರೆ ಮನೆಗೆ ಹೋದ್ರೂ ತವರಿಗೆ ಬಂದಾಗ ನೀವು ಸಣ್ಣ ಮಕ್ಕಳಂತೆ ಆಡ್ತೀರಿ. ತವರಿನಲ್ಲಿ ನಿಮಗೆ ಎಲ್ಲ ಸಾತಂತ್ರ್ಯ (Freedom) ಇರುತ್ತದೆ. ಅದೇ ರೀತಿ ನಿಮ್ಮ ಗಂಡನ ಮನೆಗೆ ಬರುವ ನಾದಿನಿ ಕೂಡ ನಿಮ್ಮಂತೆ ಆಡ್ತಾಳೆ. ಅದನ್ನು ನೀವು ಪ್ರತ್ಯೇಕವಾಗಿ ನೋಡ್ಬಾರದು. ಆಕೆಯನ್ನು ಮಗಳಂತೆ ನೋಡ್ಬೇಕು. ಆಗ ಮಾತ್ರ ಅತ್ತಿಗೆ ಮತ್ತು ನಾದಿನಿ ಸಂಬಂಧ ಚೆನ್ನಾಗಿರುತ್ತದೆ.
ಜಗಳವಾಗುವಾಗ ಶಾಂತತೆ ಮುಖ್ಯ : ಸಹೋದರ – ಸಹೋದರಿ ಮಧ್ಯೆ ಅನೇಕ ವಿಷ್ಯಕ್ಕೆ ಗಲಾಟೆಯಾಗುತ್ತದೆ. ಪತಿ ಹಾಗೂ ನಾದಿನಿ ಜಗಳ ಮಾಡ್ತಿದ್ದಾರೆಂದ್ರೆ ಅದ್ರಲ್ಲಿ ನಿಮ್ಮ ಮಧ್ಯೆ ಪ್ರವೇಶ ಇರಬಾರದು. ಅವರಿಬ್ಬರು ಜಗಳ ಆಡುವಾಗ ನೀವು ಮೌನವಾಗಿರುವುದು ಒಳ್ಳೆಯದು. ಒಂದ್ವೇಳೆ ನಿಮ್ಮ ಮೌನ ಪ್ರಯೋಜನಕ್ಕೆ ಬಂದಿಲ್ಲವೆಂದ್ರೆ ನಿಮ್ಮ ಪತಿಯನ್ನು ಕರೆದು ನೀವು ಮಾತನಾಡ್ಬೇಕು. ಇಬ್ಬರ ಮಧ್ಯೆ ಹಸ್ತಕ್ಷೇಪ ಮಾಡುವ ಕೆಲಸಕ್ಕೆ ಹೋಗಬಾರದು. ಹಾಗೆಯೇ ಪತಿ ಮುಂದೆ ಎಂದಿಗೂ ಆತನ ಸಹೋದರಿ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಇದು ಆತನ ಮನಸ್ಸನ್ನು ಘಾಸಿಗೊಳಿಸುತ್ತದೆ.
ನಾದಿನಿ ಏನೇ ಮಾಡಿದ್ರೂ ನಿಮ್ಮ ವರ್ತನೆ ಬದಲಿಸಬೇಡಿ : ನಾದಿನಿ ಮನೆಯಲ್ಲಿ ಎಲ್ಲರ ಅಚ್ಚುಮೆಚ್ಚಿನವಳಾಗಿದ್ದರೆ ಆಕೆ ಗಲಾಟೆ ಕೂಡ ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ಆಕೆ ನಿಮ್ಮನ್ನು ಅವಮಾನಿಸುವ ಸಾಧ್ಯತೆಯಿರುತ್ತದೆ. ಒಂದ್ವೇಳೆ ಆಕೆ ನಿಮ್ಮನ್ನು ಅವಮಾನಿಸಿದ್ರೆ ಅಥವಾ ಪದೇ ಪದೇ ನಿಮ್ಮ ಜೊತೆ ಜಗಳಕ್ಕೆ ಬಂದ್ರೆ ನೀವು ಸುಮ್ಮನಿರಿ. ಯಾವುದೇ ಕಾರಣಕ್ಕೂ ನಿಮ್ಮ ವರ್ತನೆಯನ್ನು ಬದಲಿಸಬೇಡಿ. ನೀವು ಶಾಂತವಾದ್ರೆ ಯುದ್ಧದಲ್ಲಿ ಅರ್ಧ ಗೆದ್ದಂತೆ.
ಮದ್ವೆಯಾಗಿ ವರ್ಷವಾಯಿತಾ? ಆಗದಿದ್ದರೆ ಈ ಕೆಲ್ಸಕ್ಕೆ ಕೈ ಹಾಕಬೇಡಿ!
ಅವರನ್ನು ಕಾಡುತ್ತೆ ಅಸುರಕ್ಷತೆ : ಕುಟುಂಬದಲ್ಲಿ ಪ್ರೀತಿಯ ಮಗಳಾಗಿದ್ದವಳು ಮದುವೆಯಾಗಿ ಹೋದ್ಮೇಲೆ ಅಲ್ಲಿಗೆ ಹೊಂದಿಕೊಳ್ಳಬೇಕು. ಆಗ ತವರಿಗೆ ಆಕೆಯ ಬದಲು ನೀವು ಮೊದಲ ಆದ್ಯತೆಯಾಗಿರ್ತೀರಿ. ಎಲ್ಲ ಕೆಲಸವನ್ನು ಸಹೋದರಿ ಜೊತೆ ಚರ್ಚಿಸಿ ಮಾಡ್ತಿದ್ದ ಸಹೋದರ ಈಗ ಅತ್ತಿಗೆಗೆ ಆದ್ಯತೆ ನೀಡ್ತಿದ್ದಾನೆ ಎಂದಾಗ ಆಕೆ ಅಸುರಕ್ಷತೆ ಭಾವ ಎದುರಿಸ್ತಾಳೆ. ಅತ್ತಿಗೆಗೆ ಸಿಗ್ತಿರುವ ಮಹತ್ವ ತನಗೂ ಸಿಗ್ಬೇಕೆಂದು ಬಯಸ್ತಾಳೆ. ಇದೇ ಕಾರಣಕ್ಕೆ ಅತ್ತಿಗೆ ಮೇಲೆ ದಬ್ಬಾಳಿಕೆ ಮಾಡಲು ಶುರು ಮಾಡ್ತಾಳೆ.
ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ : ನಾದಿನಿ ನಿಮ್ಮನ್ನು ದ್ವೇಷಿಸುತ್ತಿದ್ದರೆ ಮೋಸದ ನಾಟಕವಾಡಬಹುದು. ಎಲ್ಲರ ಮುಂದೆ ನಿಮ್ಮನ್ನು ಕೆಟ್ಟವರನ್ನಾಗಿ ಮಾಡ್ಬಹುದು. ನಾದಿನಿ ಸ್ವಭಾವ ಗೊತ್ತಾಗ್ತಿದ್ದಂತೆ ನೀವು ಎಚ್ಚೆತ್ತುಕೊಳ್ಳಬೇಕು. ಯಾವುದಕ್ಕೆ ಪ್ರತಿಕ್ರಿಯೆ ನೀಡ್ಬೇಕು ಯಾವುದಕ್ಕೆ ನೀಡ್ಬಾರದು ಎಂಬುದು ನಿಮಗೆ ತಿಳಿದಿರಬೇಕು.