
ವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಯಾಗ್ಬೇಕೆಂದ್ರೆ ಪಾಲಕರ ಜವಾಬ್ದಾರಿ ಹೆಚ್ಚಿರುತ್ತದೆ. ಪಾಲಕರು ನಿತ್ಯದ ಕೆಲಸದಲ್ಲೂ ಎಚ್ಚರಿಕೆ ಹೆಜ್ಜೆ ಇಡಬೇಕು. ಒಂದು ಹೆಜ್ಜೆ ಹೆಚ್ಚುಕಮ್ಮಿ ಆದ್ರೂ ಅದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದೆಷ್ಟೇ ಕಷ್ಟಗಳಿದ್ರೂ ಮಕ್ಕಳ ಮುಂದೆ ಎಲ್ಲವನ್ನೂ ತೋರಿಸಬಾರದು ಎಂದು ತಜ್ಞರು ಹೇಳ್ತಾರೆ. ಪಾಲಕರ ಮಧ್ಯೆ ನಡೆಯುವ ಭಿನ್ನಾಭಿಪ್ರಾಯ ಕೂಡ ಇದ್ರಲ್ಲಿ ಸೇರಿದೆ. ಮನುಷ್ಯನ ಆಲೋಚನೆ, ಆಸಕ್ತಿ, ಆಸೆ ಎಲ್ಲವೂ ಭಿನ್ನವಾಗಿರುತ್ತದೆ. ಮಗ ದೊಡ್ಡ ಇಂಜಿನಿಯರ್ ಆಗ್ಬೇಕು ಎನ್ನುವುದು ಅಪ್ಪನ ಆಸೆಯಾದ್ರೆ, ಮಗ ವೈದ್ಯನಾಗ್ಬೇಕು ಎಂಬ ಕನಸನ್ನು ಅಮ್ಮ ಕಂಡಿರುತ್ತಾಳೆ. ಇಬ್ಬರ ಮಧ್ಯೆ ಮಗನ ಆಸೆ ಚಿವುಟಿ ಹೋಗುತ್ತದೆ. ಮಗ ಏನಾಗ್ಬೇಕು ಎಂಬ ಗೊಂದಲದಲ್ಲಿಯೇ ತನ್ನ ಅರ್ಧ ಜೀವ ಕಳೆದಿರುತ್ತಾನೆ. ಪಾಲಕರ ಮಧ್ಯೆ ಅದೆಷ್ಟೇ ಭಿನ್ನಾಭಿಪ್ರಾಯವಿರಲಿ ಅದನ್ನು ಮಕ್ಕಳ ಮುಂದೆ ಹೇಳೋದು ಸರಿಯಲ್ಲ. ನಿಮ್ಮ ಮಕ್ಕಳು ಜೀವನದಲ್ಲಿ ದೃಢ ನಿರ್ಧಾರ ತೆಗೆದುಕೊಂಡು ಮುನ್ನುಗ್ಗಬೇಕು ಅಂದ್ರೆ ನೀವು ಒಂದೇ ತೀರ್ಮಾನವನ್ನು ಮಕ್ಕಳ ಮುಂದಿಡಬೇಕು.
ಡಬಲ್ ಮೈಂಡ್ (Double Mind) ಪಾಲಕರು : ಜೀವನದ ದೊಡ್ಡ ತೀರ್ಮಾನದ ಬಗ್ಗೆ ಅಲ್ಲ ಸಣ್ಣಪುಟ್ಟ ನಿತ್ಯದ ಕೆಲಸದಲ್ಲೂ ಪತಿ – ಪತ್ನಿ ಮಧ್ಯೆ ಭಿನ್ನಾಭಿಪ್ರಾಯ (Disagreement ) ನಡೆಯುತ್ತದೆ. ಮಕ್ಕಳ ಮುಂದೆ ಇದೇ ವಿಷ್ಯಕ್ಕೆ ತಿಕ್ಕಾಟವಾಗುತ್ತದೆ. ಬಿಡುವಿನ ಸಮಯದಲ್ಲಿ ಬ್ಯಾಡ್ಮಿಂಟನ್ (Badminton) ಆಡು ಅಂತ ತಂದೆ ಹೇಳಿದ್ರೆ, ಡಾನ್ಸ್ ಕಲಿ ಅಂತ ಅಮ್ಮ ಹೇಳ್ತಾಳೆ. ಇಬ್ಬರ ಮಧ್ಯೆ ಇದೇ ವಿಷ್ಯಕ್ಕೆ ಗಲಾಟೆ ಶುರುವಾಗುತ್ತದೆ. ಇದನ್ನು ಸೈಕಾಲಜಿಯಲ್ಲಿ ಡಬಲ್ ಮೈಂಡ್ ಎಂದು ಕರೆಯಲಾಗುತ್ತದೆ. ಇಬ್ಬರ ಮುಖವನ್ನು ನೋಡ್ತ ನಿಂತಿರುವ ಮಗುವಿಗೆ ಏನು ಮಾಡ್ಬೇಕು ಅನ್ನೋದು ತಿಳಿಯೋದಿಲ್ಲ. ಅಪ್ಪ ಮತ್ತು ಅಮ್ಮ ಇಬ್ಬರನ್ನೂ ಸಮಾಧಾನ ಮಾಡುವ ಪ್ಲಾನ್ ಆತ ಮಾಡ್ತಾನೆ. ಇದೇ ಕೆಲಸವನ್ನು ಮುಂದುವರೆಸ್ತಾನೆ. ಯಾರಿಗೆ ಏನು ಬೇಕು ಅನ್ನೋದನ್ನು ತಿಳಿದು ಅವರ ಮುಂದೆ ನಾಟಕವಾಡ್ತಾನೆಯೇ ವಿನಃ ಸತ್ಯವಂತಿಕೆ, ಪ್ರಾಮಾಣಿಕತೆಯಿಂದ ವರ್ತಿಸೋದಿಲ್ಲ. ಮತ್ತೆ ಕೆಲಮಕ್ಕಳಿಗೆ ಇವರಿಬ್ಬರ ಜಗಳ ಗೊಂದಲವನ್ನುಂಟು ಮಾಡುತ್ತದೆ.
ಮಗಳೇ ಎಂದು ಕರೆದಿದ್ದವಳನ್ನೇ ಮದುವೆಯಾಗಿ ಮಕ್ಕಳನ್ನು ಕೊಟ್ಟ ಸೈಫ್ ಅಲಿ ಖಾನ್!
ಮಕ್ಕಳ ಮುಂದೆ ಪಾಲಕರು ಯಾವುದೇ ಕಾರಣಕ್ಕೂ ತಮ್ಮಿಬ್ಬರ ಭಿನ್ನಾಭಿಪ್ರಾಯವನ್ನು ಇಡಬಾರದು. ಇಬ್ಬರಿಗೆ ಒಂದು ವಿಷ್ಯದಲ್ಲಿ ಒಂದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗ್ತಿಲ್ಲ ಎಂದಾಗ ಮಕ್ಕಳ ಮುಂದೆ ಆ ವಿಷ್ಯ ಚರ್ಚಿಸಬಾರದು. ಮೊದಲು ಮಕ್ಕಳಿರದ ಸಮಯದಲ್ಲಿ ಅಥವಾ ರೂಮಿನಲ್ಲಿ ಇಬ್ಬರೇ ಕುಳಿತು ಈ ವಿಷ್ಯದ ಬಗ್ಗೆ ಚರ್ಚೆ ನಡೆಸಿ. ಪತಿ ಇರಲಿ ಇಲ್ಲ ಪತ್ನಿ ಇರಲಿ, ಇಬ್ಬರಲ್ಲಿ ಒಬ್ಬರು ಹೊಂದಾಣಿಕೆ ಮಾಡಿಕೊಂಡು ಒಂದೇ ನಿರ್ಧಾರಕ್ಕೆ ಬನ್ನಿ. ಆ ನಂತ್ರ ಆ ವಿಷ್ಯವನ್ನು ಮಕ್ಕಳ ಮುಂದೆ ಪ್ರಸ್ತಾಪಿಸಿ.
ತಂದೆಯಾದವನು ಮಕ್ಕಳ ಮುಂದೆ ಯಾವುದೇ ವಿಷ್ಯ ಹೇಳಿದ್ರೂ ಆ ಕ್ಷಣಕ್ಕೆ ತಾಯಿಯಾದವಳಿಗೆ ಅದು ಇಷ್ಟವಿಲ್ಲ ಎಂದ್ರೂ ಅದನ್ನು ಒಪ್ಪಿಕೊಳ್ಳಬೇಕು. ಪತಿ ಕೂಡ ಪತ್ನಿಯ ಮಾತಿಗೆ ಬೆಂಬಲ ನೀಡ್ಬೇಕು. ಮಕ್ಕಳ ಮುಂದೆಯೇ ಕಿತ್ತಾಟ ಶುರು ಮಾಡಬಾರದು.
ಮಕ್ಕಳ ಮುಂದೆ ವಾದ ಮಾಡುವುದು ಯಾವುದೇ ಸಂದರ್ಭದಲ್ಲೂ ಸರಿಯಲ್ಲ. ಇದು ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ದಿನವೂ ಒಬ್ಬರಿಗೊಬ್ಬರು ಜಗಳವಾಡುವುದನ್ನು ಮತ್ತು ಕೂಗಾಡುವುದನ್ನು ನೋಡಿ, ಮಕ್ಕಳು ಸಹ ಕೋಪಗೊಳ್ಳುತ್ತಾರೆ. ಹಿಂಸಾತ್ಮಕ ಕೆಲಸ ಮಾಡ್ತಾರೆ. ಮಕ್ಕಳ ಮುಂದೆ ಕೂಗಾಡುವ ಬದಲು ಸಣ್ಣ ಧ್ವನಿಯಲ್ಲಿ ಮಾತನಾಡಿ. ಕೂಗಾಟ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಮಕ್ಕಳಲ್ಲಿ ಭಯವನ್ನು ಉಂಟುಮಾಡುತ್ತದೆ.
ಸಂಗಾತಿ ನಿಮ್ಮನ್ನು ಪ್ರೀತಿಸುತ್ತಿದ್ದಾರಾ ಅನ್ನೋದನ್ನು ತಿಳಿದುಕೊಳ್ಳೋದು ಹೇಗೆ?
ಮಕ್ಕಳ ಮುಂದೆ ಜಗಳವಾಡುವಾಗ ಪರಸ್ಪರ ಕೈ ಎತ್ತಬೇಡಿ. ಕೆಲವೊಮ್ಮೆ ಕೆಲವು ಪುರುಷರು ತುಂಬಾ ಆಕ್ರಮಣಕಾರಿ ಆಗುತ್ತಾರೆ. ಕೋಪದ ಭರದಲ್ಲಿ, ಅವರು ಮಗುವಿನ ಮುಂದೆ ತಾಯಿಯ ಮೇಲೆ ಕೈ ಎತ್ತುತ್ತಾರೆ. ಅಪ್ಪಿತಪ್ಪಿಯೂ ಇದನ್ನು ಮಾಡಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.