ಇಂದಿನ ದಿನಗಳಲ್ಲಿ ಡೇಟಿಂಗ್, ಲಿವ್ ಇನ್ ರಿಲೇಶನ್‌ಶಿಪ್ ಅಂತಹ ವಿಚಾರಗಳು ಹೆಚ್ಚು ಚಾಲ್ತಿಯಲ್ಲಿವೆ. ಸಂಗಾತಿ ನಮ್ಮನ್ನ ನಮ್ಮಂತೆಯೇ ಹೆಚ್ಚು ಪ್ರೀತಿ ಮಾಡ್ತಾರೋ ಅಥವಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಕಾತುರರಾಗಿರುತ್ತಾರೆ.
ನೀವು ಪ್ರೀತಿ ಮಾಡುತ್ತಿರುವ ವ್ಯಕ್ತಿ ನಿಮ್ಮನ್ನು ಪ್ರೀತಿ ಮಾಡುತ್ತಿದ್ದಾರೆಯೇ ಇಲ್ಲವಾ ಎಂಬುದನ್ನು ತಿಳಿದುಕೊಳ್ಳೋದು ಹೇಗೆ ಅಂತ ಯೋಚಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಡೇಟಿಂಗ್, ಲವ್ ಇನ್ ರಿಲೇಶನ್‌ಶಿಪ್ ಪದ್ಧತಿ ಹೆಚ್ಚು ಟ್ರೆಂಡ್ ಉಂಟಾಗುತ್ತಿದೆ. ರಿಲೇಶನ್‌ಶಿಪ್‌ನಲ್ಲಿರೋ ಇಂದಿನ ಯುವ ಜನತೆಯಲ್ಲಿ ಸಂಗಾತಿ ನಮ್ಮನ್ನು ಪ್ರೀತಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿರುತ್ತದೆ.
ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ನಿಮ್ಮ ಜೊತೆ ಸಂಬಂಧದಲ್ಲಿದ್ದಾಗ ಸಂಗಾತಿಯಲ್ಲಿ ಕೆಲವು ಬದಲಾವಣೆಗಳು ಆಗ್ತವಂತೆ. ನೀವು ಜೊತೆಯಲ್ಲಿರುವಾಗ ಸಂಗಾತಿಯಲ್ಲಿ (ಅವಳು/ಅವನು) ಈ ಬದಲಾವಣೆಗಳು ಆಕೆ ಅಥವಾ ಅವನು ನಿಮ್ಮನ್ನು ತುಂಬಾ ಪ್ರೀತಿಸುತ್ತಾನೆ ಎಂದರ್ಥ. ಸಂಗಾತಿಯ ನಡವಳಿಕೆಯಿಂದಲೇ ತಿಳಿದುಕೊಳ್ಳಬಹುದಾಗಿದೆ.
ಆ ಲಕ್ಷಣಗಳು ಏನು ಗೊತ್ತಾ?
1.ನಿಕ್‌ನೇಮ್: ಪ್ರೀತಿ ಹೆಚ್ಚಾದಾಗ ಸಂಗಾತಿ ನಿಮ್ಮನ್ನು ನಿಕ್‌ನೇಮ್‌ನಿಂದ ಕರೆಯಲು ಆರಂಭಿಸುತ್ತಾರೆ. ನಿಮ್ಮ ಹೆಸರನ್ನು ಸಂಕ್ಷಿಪ್ತವಾಗಿ ಮಾಡಿ ಕರೆಯುತ್ತಾರೆ ಅಥವಾ ತಾವೇ ಹೊಸ ಹೆಸರನ್ನು ಸಹ ಇಡಬಹುದು.
2.ಹೆಚ್ಚು ಸಂಭಾಷಣೆ ಮತ್ತು ಸ್ವರ್ಶ: ಪ್ರೀತಿಯಲ್ಲಿ ಮುಳುಗಿದಾಗ ಸಂಗಾತಿ ಜೊತೆ ಪದೇ ಪದೇ ಮಾತನಾಡಬೇಕೆಂದು ಅನ್ನಿಸುತ್ತದೆ. ಕಾರಣವಿಲ್ಲದಿದ್ದರೂ ಫೋನ್ ಮಾಡಿ ಮಾತನಾಡುವ ಇಂಗಿತ ವ್ಯಕ್ತಪಡಿಸುತ್ತಾರೆ. ಭೇಟಿಯ ಸಂದರ್ಭದಲ್ಲಿ ಸಂಗಾತಿಯ ಸ್ಪರ್ಶಕ್ಕಾಗಿ ಹಾತೊರೆಯುತ್ತಿರುತ್ತಾರೆ.
ಪಂಜಾಬಿ ಲುಕ್‌ನಲ್ಲಿ ಮುದ್ದಾಗಿ ಕಾಣಿಸ್ಕೊಂಡ ಜಾನ್ವಿ ಕಪೂರ್, ಶ್ರೀದೇವಿ ಮಗಳ ಅಂದಕ್ಕೆ ಮನಸೋತ ಫ್ಯಾನ್ಸ್
3.ಹೆಚ್ಚು ಭೇಟಿಯಾಗುವಿಕೆ: ತಾನು ಪ್ರೀತಿಸುವ ಸಂಗಾತಿ ಭೇಟಿಯಾಗಲು ಕಾರಣಗಳನ್ನು ಹುಡುಕುತ್ತಿರುತ್ತಾರೆ. ಕೆಲಸದ ಬ್ಯುಸಿ ನಡುವೆಯೂ ಸಂಗಾತಿಗಾಗಿ ಸಮಯವನ್ನು ಮೀಸಲಿರಿಸುತ್ತಾರೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಕಾರಣಗಳನ್ನು ಹುಡುಕುತ್ತಾರೆ.
4.ಎಲ್ಲದಕ್ಕೂ ಒಪ್ಪಿಗೆ ಸೂಚಿಸೋದು: ಸಂಗಾತಿ ಮೇಲಿನ ಭರವಸೆಯಿಂದಾಗಿ ಆತ/ಅವಳು ತೆಗೆದುಕೊಳ್ಳುವ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತಾರೆ. ಪ್ರೀತಿಯ ಸಂಗಾತಿ ಮಾತುಗಳು ಹಿತವಾಗಿ ಕೇಳಿಸೋದರಿಂದ ಒಳ್ಳೆಯ ಕೇಳುಗರಾಗಿ ಬದಲಾಗುತ್ತಾರೆ.
5.ಸ್ಪಂದಿಸುವಿಕೆ: ಪ್ರೀತಿಯ ಪಾಶದಲ್ಲಿ ಸಿಲುಕಿದ್ದಾಗ ಸಂಗಾತಿಯ ಸಂದೇಶ ಅಥವಾ ಕರೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಾರೆ. ನಿಮ್ಮ ಜೊತೆ ಮಾತನಾಡಲ ಸದಾ ಉತ್ಸುಕರಾಗಿರುತ್ತಾರೆ. ನಿಮಗಾಗಿಯೇ ಯಾವಾಗಲು ಬಿಡುವ ಮಾಡಿಕೊಳ್ಳಲು ಮುಂದಾಗುತ್ತಾರೆ.
ರಾತ್ರಿ ಮಲಗುವ ಮುನ್ನ ಒಂದು ಬೆಳ್ಳುಳ್ಳಿ ಎಸಳು ತಿಂದ್ರೆ ದೇಹದಲ್ಲಾಗುವ ಬದಲಾವಣೆಗಳೇನು ಗೊತ್ತಾ?
6.ನಿಮ್ಮಿಷ್ಟಕ್ಕೆ ಮೊದಲ ಆದ್ಯತೆ: ಸಂಗಾತಿ ಇಷ್ಟಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.ಉದಾಹರಣೆಗೆ ಹೋಟೆಲ್‌ಗೆ ಹೋದಂತಹ ಸಂದರ್ಭದಲ್ಲಿ ನಿಮಗೆ ಇಷ್ಟವಾದ ಆಹಾರವನ್ನು ಆರ್ಡರ್ ಮಾಡೋದು. ನಿಮ್ಮನ್ನು ಖುಷಿಪಡಿಸೋ ವಿಚಾರಗಳ ಕುರಿತು ಹೆಚ್ಚು ಮಾತನಾಡುತ್ತಾರೆ.
7.ಸದಾ ನಗುಮೊಗ: ಸಂಗಾತಿ ನಿಮ್ಮ ಜೊತೆಯಲ್ಲಿದ್ದಾಗ ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಸದಾ ನಗು ಮುಖದಿಂದಲೇ ಇರುತ್ತಾರೆ. ಆ ನಗು ಅವರ ಕಣ್ಣುಗಳು, ಹಾವಭಾವದಲ್ಲಿಯೂ ನೀವು ಗಮನಿಸಬಹುದು.