
ಮಗು (Child ) ಬೆಳೆದಂತೆ ಮಕ್ಕಳ ಬಗ್ಗೆ ಪೋಷಕರ ಜವಾಬ್ದಾರಿ (Responsibility) ಯೂ ಹೆಚ್ಚುತ್ತದೆ. ಕೊರೊನಾ (Corona) ನಂತರ ಶಾಲೆ (School) ಗಳು ಮತ್ತೆ ಶುರುವಾಗ್ತಿವೆ. ಈ ಬಾರಿ ಶಾಲೆಗಳನ್ನು ಬೇಗ ಶುರು ಮಾಡಲು ತೀರ್ಮಾನಿಸಲಾಗಿದೆ. ಸತತ ಎರಡು ವರ್ಷಗಳ ಕಾಲ ಮನೆಯಲ್ಲಿದ್ದ ಅನೇಕ ಮಕ್ಕಳಿಗೆ ಶಾಲೆ ಹೊಸದು. ಮೊದಲ ಬಾರಿ ಶಾಲೆಗೆ ಹೋಗುವಾಗ ಮಕ್ಕಳು ಅಳುವುದು ಸಾಮಾನ್ಯ. ಅದರಲ್ಲೂ ಚಿಕ್ಕ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ಮಗುವನ್ನು ಶಾಲೆಗೆ ಕಳುಹಿಸಬೇಕೆಂದ್ರೆ ಮಕ್ಕಳು ಮಾತ್ರವಲ್ಲ ಪಾಲಕರ ಕೂಡ ಅಳುವುದಿದೆ. ಬೆಳಿಗ್ಗೆ ಎದ್ದಾಗಿನಿಂದ ಅಳು ಶುರು ಮಾಡುವ ಮಕ್ಕಳು, ಶಾಲೆಯಿಂದ ಮರಳಿ ಬರುವವರೆಗೂ ಅಳ್ತಿರುತ್ತಾರೆ. ಇದು ಪಾಲಕರಿಗೆ ದೊಡ್ಡ ತಲೆನೋವು. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಯಾವ ಟ್ರಿಕ್ಸ್ ಉಪಯೋಗಿಸಬೇಕು ಹಾಗೆ ಮಕ್ಕಳು ಅಳದಂತೆ ಹೇಗೆ ತಡೆಯಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಮಗುವಿನ ಭಯವನ್ನು ಕಡಿಮೆ ಮಾಡಿ : ಶಾಲೆಯ ಹೆಸರು ಕೇಳಿದ ತಕ್ಷಣ ಮಕ್ಕಳಿಗೆ ಭಯ ಶುರುವಾಗುತ್ತದೆ. ನೀವು ಅವರನ್ನು ಶಾಲೆಗೆ ಹೋಗಲು ಮಾನಸಿಕವಾಗಿ ಸಿದ್ಧಪಡಿಸಬೇಕು. ಹಾಗಾಗಿ ಶಾಲೆಯಲ್ಲಿ ನಡೆಯುವ ಆಸಕ್ತಿದಾಯಕ ಕಥೆಗಳನ್ನು ಅವರಿಗೆ ಹೇಳ್ಬೇಕು. ಶಾಲೆಯಲ್ಲಿ ಯಾರೆಲ್ಲ ಇರ್ತಾರೆ, ಏನೆಲ್ಲ ಮಾಡಬಹುದು ಎಂಬುದನ್ನೆಲ್ಲ ಮಕ್ಕಳಿಗೆ ಹೇಳಬೇಕು. ಈ ಮೂಲಕ ಮಕ್ಕಳನ್ನು ಶಾಲೆಗೆ ಹೋಗಲು ಸಿದ್ಧಗೊಳಿಸಬೇಕು. ಶಾಲೆಯ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿದ್ರೆ ಅವರು ಭಯಪಡುವುದಿಲ್ಲ. ಅನೇಕ ಪಾಲಕರು, ಗಲಾಟೆ ಮಾಡಿದ್ರೆ ಶಾಲೆಗೆ ಕಳಿಸ್ತೇನೆ ಎಂದು ಹೆದರಿಸುತ್ತಾರೆ. ಹಾಗಾಗಿ ಮಕ್ಕಳು,ಶಾಲೆಯೆಂದ್ರೆ ಭಯದ ಪ್ರದೇಶ ಎಂಬ ನಂಬಿಕೆಯಲ್ಲಿರ್ತಾರೆ.
ಆಕಸ್ಮಿಕವಾಗಿ ವಿಮಾನದಲ್ಲಿ ಹಸೆಮಣೆ ಏರಿದ ಜೋಡಿ: ವಿಡಿಯೋ ವೈರಲ್
ಆಟಿಕೆಗಳು ಮತ್ತು ನೆಚ್ಚಿನ ಆಹಾರವನ್ನು ನೀಡಿ : ನಿಮ್ಮ ಮಗುವಿಗೆ ಊಟದ ಬಾಕ್ಸ್ ನಲ್ಲಿ ಅವರ ಆಯ್ಕೆಯ ಆಹಾರವನ್ನು ನೀಡಬೇಕು. ಇದರಿಂದ ಅವರ ಮನಸ್ಸಿಗೆ ಸಂತೋಷವಾಗುತ್ತದೆ. ನೀವು ಅವರ ನೆಚ್ಚಿನ ಆಟಿಕೆಯನ್ನು ಅವರ ಬ್ಯಾಗ್ ನಲ್ಲಿ ಇಟ್ಟಿಡಿ. ಊಟಕ್ಕೆ ನಿನ್ನಿಷ್ಟದ ಆಹಾರ ಹಾಕಿದ್ದೇನೆ ಎಂಬುದನ್ನು ಮಕ್ಕಳಿಗೆ ತಿಳಿಸಿ. ಇಷ್ಟದ ಆಟಿಕೆ ಹಾಗೂ ಊಟ ಬ್ಯಾಗ್ ನಲ್ಲಿದೆ ಎಂದಾಗ ಮಕ್ಕಳು ಶಾಲೆಗೆ ಹೋಗಲು ಖುಷಿಯಿಂದ ಸಿದ್ಧವಾಗ್ತಾರೆ.
ಮುಂಜಾನೆ ಬೇಗ ಎದ್ದೇಳು : ಮಕ್ಕಳ ಜೊತೆ ಪಾಲಕರು ಕೂಡ ಸಿದ್ಧತೆ ನಡೆಸಬೇಕು. ಮಕ್ಕಳಿಗೆ ಯಾವ ಆಹಾರ ನೀಡ್ಬೇಕು ಎಂಬುದನ್ನು ಹಿಂದಿನ ದಿನವೇ ಪ್ಲಾನ್ ಮಾಡಿ. ಹಾಗೆ ಬೇಗ ಮಲಗುವ ರೂಢಿ ಮಾಡಿಕೊಳ್ಳಿ. ಪಾಲಕರು ಮಲಗ್ತಿದ್ದಂತೆ ಮಕ್ಕಳು ಬೇಗ ಮಲಗುತ್ತಾರೆ. ಆಗ ಬೆಳಿಗ್ಗೆ ಇಬ್ಬರಿಗೂ ಬೇಗ ಎಚ್ಚರಾಗುತ್ತದೆ. ಬೆಳ್ಳಂಬೆಳಿಗ್ಗೆ ಆಹಾರ ತಿನ್ನಲು ಮಗು ನಿರಾಕರಿಸಿದ್ರೆ ಒತ್ತಡ ಹೇರಬೇಡಿ. ಲಘು ಆಹಾರ ನೀಡಿ ಕಳುಹಿಸಿ. ಹಾಗೆಯೇ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಏಳಿಸ್ಬೇಡಿ. ಮಗುವಿನ ಬ್ಯಾಗ್ ಸಿದ್ಧಪಡಿಸಿಡಿ. ಕೊನೆಯಲ್ಲಿ ಆತುರವಾದ್ರೆ ಮಗು ಕೂಡ ಕಿರಿಕಿರಿ ಅನುಭವಿಸಬಹುದು. 3-5 ವರ್ಷ ವಯಸ್ಸಿನ ಮಗುವಿಗೆ 10-12 ಗಂಟೆಗಳ ನಿದ್ರೆ ಬಹಳ ಮುಖ್ಯ. ಮಗುವಿನ ನಿದ್ರೆ ಪೂರ್ಣಗೊಂಡಾಗ ಅದು ಶಾಲೆಯಲ್ಲೂ ಸಂತೋಷವಾಗಿರುತ್ತದೆ.
ಅಣ್ಣ ತಂಗಿ ಎಂದು ತಿಳಿಯದೇ ಪ್ರೀತಿ: ನಾಲ್ಕು ಮಕ್ಕಳ ಪಡೆದವರಿಗೆ ಸಂಕಷ್ಟ
ಮಗುವಿನ ಮೇಲೆ ಕೋಪ ಬೇಡ : ಮಗು ಆರಂಭದಲ್ಲಿ ಶಾಲೆಗೆ ಹೋಗಲು ನಿರಾಕರಿಸಿದರೆ ಚಿಂತಿಸ್ಬೇಡಿ. ಅದು ಅಳ್ತಿದ್ದರೆ ನೀವು ಮತ್ತಷ್ಟು ಒತ್ತಡ ಹೇರುವುದು, ಬೈಯ್ಯುವುದು ಅಥವಾ ಹೊಡೆಯುವುದು ಮಾಡ್ಬೇಡಿ. ಮಗುವಿಗೆ ಶಾಂತವಾಗಿ ವಿಷ್ಯವನ್ನು ಮನವರಿಕೆ ಮಾಡಿ. ಹಾಗೆ ಶಾಲೆಗೆ ಬಿಟ್ಟು ಬರಲು ಹಾಗೂ ಕರೆದುಕೊಂಡು ಬರಲು ನೀವೇ ಹೋಗಿ. ಆಗ ಮಗು ಸ್ವಲ್ಪ ರಿಲ್ಯಾಕ್ಸ್ ಆಗುತ್ತದೆ. ಹಾಗೆ ಮಗುವಿಗೆ ಒಂದು ಚಾಕೋಲೇಟ್ ಅಥವಾ ಐಸ್ ಕ್ರೀಂ ನೀಡಿ ಅದರ ಮನಸ್ಸನ್ನು ಖುಷಿಗೊಳಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.