
ಸಂಬಂಧ (Relationship) ರೊಮ್ಯಾಂಟಿಕ್ ಆಗಿರಬೇಕು ಅಂದರೆ ಸದಾ ಮುದ್ದು ಮಾಡ್ತಾ, ಮಾಡಿಸ್ಕೊಳ್ತಾ ಇರ್ಬೇಕು ಅನ್ನೋದು ಮಾತ್ರ ಅರ್ಥ ಅಲ್ಲ. ನಾವು ಸಿಕ್ಕಾಪಟ್ಟೆ ರೊಮ್ಯಾಂಟಿಕ್ (Romantic) ಅಂತ ತೋರಿಸಿಕೊಳ್ಳೋಕೆ ಕೆಲವರು ಪಬ್ಲಿಕ್‌ನಲ್ಲಿ ಕಿಸ್ (Kiss) ಮಾಡೋದೋ, ಮುದ್ದಾಡೋದೋ ಮಾಡ್ತಾರೆ. ಆದರೆ ಇದು ಪಕ್ಕದಲ್ಲಿರುವವರಿಗೆ ಕಸಿವಿಸಿ, ಮುಜುಗರ ತರುತ್ತದೆಯೇ ವಿನಃ ಇದರಿಂದ ನಿಮ್ಮದು ರೊಮ್ಯಾಂಟಿಕ್ ಸಂಬಂಧ ಅಂತ ಸಾಬೀತಾಗಲ್ಲ. ಹಾಗಿದ್ರೆ ನಮ್ ಸಂಬಂಧ ನಿಜಕ್ಕೂ ರೊಮ್ಯಾಂಟಿಕ್ ಹೌದೋ ಅಲ್ವೋ ಅಂತ ಹೇಗೆ ನೋಡೋದು ಅನ್ನೋದಕ್ಕೆ ಇಲ್ಲಿ ಕೆಲವು ಪಾಯಿಂಟ್ಸ್ ಇದೆ. ಆ ಪ್ರಕಾರ ಅಥವಾ ಅದಕ್ಕೆ ಹತ್ತಿರವಾಗಿ ನಿಮ್ಮ ಸಂಬಂಧ ಇದ್ದರೆ ಖಂಡಿತಾ ನೀವು ರೊಮ್ಯಾಂಟಿಕ್ ಕಪಲ್ಸ್ (Romantic Couple)
1. ಕ್ರಾಸ್ ಚೆಕ್ ಮಾಡೋ ಪ್ರಸಂಗ ಬರಲ್ಲ:
ಸಂಗಾತಿಯಲ್ಲಿ ಒಬ್ಬರು ಒಂದ್ವಿಷ್ಯ ಹೇಳಿದ್ರು ಅಂದರೆ ೧೦೦ ಪರ್ಸೆಂಟ್ (100 percent) ಇನ್ನೊಬ್ಬರು ನಂಬುತ್ತಾರೆ. ಕ್ರಾಸ್ ಚೆಕ್ ಮಾಡೋಕೆ ಹೋಗಲ್ಲ. ಇದು ಭಾವನಾತ್ಮಕ ವಿಚಾರ ಆಗಿರಬಹುದು, ಆರ್ಥಿಕ ಸಂಗತಿಗಳಾಗಿರಬಹುದು, ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿಚಾಗಳಾಗಿರಬಹುದು, ಒಬ್ಬರ ಮಾತಿನಲ್ಲಿ ಇನ್ನೊಬ್ಬರಿಗೆ ನಂಬಿಕೆ ಇರುತ್ತೆ. ಅವನು ಅಥವಾ ಅವಳು ನನಗೆ ಸುಳ್ಳು ಹೇಳ್ತಿರಬಹುದು ಅಥವಾ ಮೋಸ ಮಾಡ್ತಿರಬಹುದು ಅನ್ನುವ ಭಾವನೆ ಇರಲ್ಲ. ಸಂಗಾತಿಯ ಮೇಲೆ ಸಂಪೂರ್ಣ ನಂಬಿಕೆ ಇಡೋದು ಸಂಬಂಧಗಳಲ್ಲಿ ಬಹು ಮುಖ್ಯ ಸಂಗತಿ. ಇನ್ನೊಬ್ಬರೂ ಆ ನಂಬಿಕೆಗೆ ಯಾವತ್ತೂ ದ್ರೋಹ ಮಾಡಬಾರದು.
2. ಸೆಕ್ಸ್‌ನಲ್ಲಿ ಹೊಂದಾಣಿಕೆ, ತೃಪ್ತಿ:
ಸೆಕ್ಸ್‌ನಲ್ಲಿ ಸಂಗಾತಿಗಳಿಬ್ಬರಿಗೂ ಹೊಂದಾಣಿಕೆ ಇರಬೇಕು. ನೀವು ದೀರ್ಘಾವಧಿಯ ಪ್ರಣಯ ಸಂಬಂಧದಲ್ಲಿದ್ದರೆ, ನಿಮ್ಮ ಸಂಗಾತಿಯು ನಿಮ್ಮ ಅಗತ್ಯಗಳನ್ನು ಮತ್ತು ನಿಮ್ಮ ಆತಂಕಗಳನ್ನು ಸಹ ಅರ್ಥಮಾಡಿಕೊಳ್ಳಬೇಕು. ಹಾಗೇ ಇಬ್ಬರಿಗೂ ಇಷ್ಟವಿರುವ ರೀತಿ, ಕಂಫರ್ಟ್ ಅನಿಸುವ ರೀತಿ ಸೆಕ್ಸ್ ಮಾಡಿದರೆ ಇಬ್ಬರಿಗೂ ತೃಪ್ತಿ ಇರುತ್ತದೆ. ಅದಕ್ಕೆ ಸಂಗಾತಿಗೆ ಈ ವಿಚಾರದಲ್ಲಿ ಏನಿಷ್ಟ ಅನ್ನೋದನ್ನು ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿರಬೇಕು. ಇಷ್ಟವಾಗದ್ದನ್ನು ಮಾಡಲು ಪ್ರಯತ್ನಿಸಬಾರದು. ಇದರಿಂದ ಇನ್ನೊಬ್ಬರಿಗೆ ಆಸಕ್ತಿ ಕಡಿಮೆ ಆಗಬಹುದು.
3. ಪರಸ್ಪರ ಗೌರವ:
ಇಬ್ಬರೂ ಎಷ್ಟೇ ಕ್ಲೋಸ್ ಆಗಿದ್ದರೂ, ಇಬ್ಬರ ನಡುವೆ ಎಷ್ಟೇ ಸಲುಗೆ ಇದ್ದರೂ ಪರಸ್ಪರ ಗೌರವ ಇದ್ದೇ ಇರಬೇಕು. ಗೌರವ ಇಲ್ಲ ಅಂದರೆ ಇಬ್ಬರೂ ಈ ಸಂಬಂಧ ಒಂದಲ್ಲ ಒಂದು ದಿನ ಹಳಸುವ ಸಾಧ್ಯತೆ ಇದೆ. ಇನ್ನೊಬ್ಬರ ಕಾಲೆಳೆಯೋದು, ನಗೋದು ಎಲ್ಲ ಕಾಮನ್. ಆದರೆ ಅದು ಅವರ ಗೌರವಕ್ಕೆ ಕುಂದು ತರುವ ಹಾಗಿರಬಾರದು. ಅವರಲ್ಲಿ ಗಿಲ್ಟ್ ಅಥವಾ ಕೀಳರಿಮೆ ಹುಟ್ಟುವಂತೆ ಮಾಡಬಾರದು. ವಾದ, ಚರ್ಚೆಗಳೆಲ್ಲ ಇದ್ದರೂ ಅದನ್ನು ಇಗೋ ಗೆ ಹರ್ಟ್ ಮಾಡೋ ಥರ ಬೆಳೆಸಬಾರದು. ಅದನ್ನೂ ಗೌರವಯುತವಾಗಿ ನಿರ್ವಹಿಸಿದರೆ ನಿಮ್ಮ ಸಂಬಂಧ ರೊಮ್ಯಾಂಟಿಕ್ ಆಗಿದೆ ಅನ್ನೋದಕ್ಕೆ ಇದೂ ಒಂದು ಗ್ರೀನ್ ಸಿಗ್ನಲ್.
ಮದುವೆಯ ಮೊದ್ಲು ಗಂಡಸರು ಹೀಗೆಲ್ಲಾ ಮಾಡಿರ್ತಾರೆ, ಆದ್ರೆ ಹೆಂಡ್ತಿಗೆ ಹೇಳಲ್ಲ ಅಷ್ಟೆ !
4. ಇಬ್ಬರಲ್ಲೂ ಓಪನ್‌ನೆಸ್ (Openness):
ಇಬ್ಬರ ಯೋಚನೆಗಳು ಡಿಫರೆಂಟಾಗಿರುತ್ತವೆ. ಇಬ್ಬರೂ ಬೇರೆ ಪರಿಸರದಿಂದ ಬಂದಿರುತ್ತಾರೆ. ಆದರೆ ಇಬ್ಬರ ನಡುವೆ ಇನ್ನೊಬ್ಬರ ಅಭಿಪ್ರಾಯ ಸ್ವೀಕರಿಸೋ ಓಪನ್‌ನೆಸ್ ಇರಬೇಕು. ಸಂಬಂಧದ ವಿಚಾರ ಮಾತ್ರ ಅಲ್ಲ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಕೌಟುಂಬಿಕ ನಂಬಿಕೆಗಳ ಬಗ್ಗೆ ಪರಸ್ಪರರ ಅಭಿಪ್ರಾಯವನ್ನು ಗೌರವಿಸುವ, ತಿಳಿಯುವ ಮುಕ್ತ ಮನಸ್ಸು ಇರಬೇಕು.
ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ಮಾಡಿದ ನಂತರ ಮಹಿಳೆಯರು ಇವಿಷ್ಟನ್ನು ಮಾಡಲೇಬೇಕು
5. ನಮ್ಮ ಅಗತ್ಯವನ್ನು ನೇರವಾಗಿ ಹೇಳುವುದು:
ಸಂವಹನ ಅಥವಾ ಕಮ್ಯೂನಿಕೇಶನ್ ಇಬ್ಬರ ನಡುವೆ ಚೆನ್ನಾಗಿದ್ದರೆ ಲೈಫೂ ಚೆನ್ನಾಗಿರುತ್ತೆ. ಇಬ್ಬರೂ ಏನನ್ನಾದರೂ ಹೇಳದೇ ಮುಚ್ಚಿಟ್ಟರೆ, ಅಥವಾ ನಾನು ಹೀಗಂದರೆ ಆಕೆ ಅಥವಾ ಆತ ಏನು ತಿಳ್ಕೊಳ್ಳಬಹುದು ಅನ್ನೋ ಅನುಮಾನದಲ್ಲೇ ಅಂದುಕೊಂಡದ್ದನ್ನು ಹೇಳದೇ ಇರೋದು ಒಳ್ಳೆಯದಲ್ಲ. ಇಬ್ಬರ ನಡುವೆ ಜಗಳ ಆದರೆ ಅವರವರೇ ಪರಿಹರಿಸಿಕೊಳ್ಳಬೇಕೇ ಹೊರತು ಮೂರನೆಯವರ ಮಧ್ಯಪ್ರವೇಶಕ್ಕೆ ಅವಕಾಶ ಇರಬಾರದು. ಇಬ್ಬರ ಜಗಳ, ಸಮಸ್ಯೆಗಳನ್ನು ಅವರವರೇ ಮಾತನಾಡಿ ಬಗೆಹರಿಸಬೇಕು. ಆಗ ಸಂಬಂಧ ಹೆಚ್ಚು ರೊಮ್ಯಾಂಟಿಕ್ ಆಗಿರುತ್ತೆ.
ಹೆಚ್ಚು ಮುತ್ತು ಕೊಡಬೇಡಿ, ಚುಂಬನ ದಂತ ಕುಳಿಗೂ ಕಾರಣವಾಗುತ್ತೆ ಹುಷಾರ್ !
ಇದರ ಜೊತೆಗೆ ತಾಳ್ಮೆ, ಯಾವುದೇ ನಿರ್ಧಾರವನ್ನು ಇಬ್ಬರೂ ಚರ್ಚಿಸಿ ತೆಗೆದುಕೊಳ್ಳುವುದು, ಸಂಬಂಧದ ವಿಷಯಗಳಲ್ಲಿ ಪ್ರಾಮಾಣಿಕರಾಗಿರೋದು ಬಹಳ ಮುಖ್ಯ. ಇಂಥಾ ಸೂಕ್ಷ್ಮಗಳೆಲ್ಲ ನಿಮ್ಮ ಸಂಬಂಧದಲ್ಲಿ ಇದ್ದರೆ ನೀವಿಬ್ಬರೂ ರೊಮ್ಯಾಂಟಿಕ್ ಕಪಲ್ ಅನ್ನಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.