ಮನೆಯಲ್ಲಿ ಮಕ್ಕಳಿಗೆ ಮೊದಲ ಸ್ಥಾನ. ಯಾವುದೇ ಕೆಲಸ ಮಾಡುವ ಮೊದಲು ಪಾಲಕರಿಗೆ ನೆನಪಾಗೋದು ಮಕ್ಕಳು. ತಮ್ಮೆಲ್ಲ ಆಸೆ ಅದುಮಿಟ್ಟು ಮಕ್ಕಳ ಇಷ್ಟದಂತೆ ನಡೆಯುವ ಪಾಲಕರು ಅರಿವಿಲ್ಲದೆ ಅಮೂಲ್ಯ ದಿನಗಳನ್ನು ಕಳೆದುಕೊಳ್ತಾರೆ.
ಮಕ್ಕಳಾದ್ಮೇಲೆ ದಂಪತಿ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತೆ ಎನ್ನುವ ಮಾತು ನೂರಕ್ಕೆ ನೂರು ಸತ್ಯ. ಮಕ್ಕಳಾಗುವುದಕ್ಕಿಂತ ಮೊದಲು ವೀಕೆಂಡ್, ರಜಾ ದಿನದ ಹೆಸರಿನಲ್ಲಿ ಆರಾಮವಾಗಿ ಸುತ್ತಾಡಿಕೊಂಡಿರುವ ಜೋಡಿ ಮಕ್ಕಳಾಗ್ತಿದ್ದಂತೆ ಜವಾಬ್ದಾರಿಯುತವಾಗಿ ವರ್ತಿಸಲು ಶುರು ಮಾಡ್ತಾರೆ. ಅವರ ಜೀವನದಲ್ಲಿ ಅವರಿಗೆ ಅರಿವಿಲ್ಲದೆ ಕೆಲ ಬದಲಾವಣೆ ಆಗಿರುತ್ತದೆ. ಮಕ್ಕಳ ಆಹಾರ, ಆರೋಗ್ಯ, ನಿದ್ರೆ, ವಿದ್ಯಾಭ್ಯಾಸ ಇವೆಲ್ಲದಕ್ಕೂ ಗಮನ ಹರಿಸುವ ಪಾಲಕರಿಗೆ ತಮ್ಮ ಆಸಕ್ತಿ, ಆಸೆ, ಆಶಯಗಳ ಬಗ್ಗೆ ಆಲೋಚನೆ ಮಾಡಲೂ ಸಮಯವಿರೋದಿಲ್ಲ. ಮಕ್ಕಳು ಸ್ವಲ್ಪ ದೊಡ್ಡವರಾಗ್ಲಿ ಎನ್ನುತ್ತಲೇ ತಮ್ಮ ಎಲ್ಲ ಪ್ಲಾನ್ ಗಳನ್ನು ಮುಂದೂಡಲು ಶುರು ಮಾಡ್ತಾರೆ. ಮಕ್ಕಳೇನೋ ದೊಡ್ಡವರಾಗ್ತಾರೆ ನಿಜ ಆದ್ರೆ ಅಷ್ಟರಲ್ಲಿ ದಂಪತಿ ವಯಸ್ಸು ಹೆಚ್ಚಾಗಿರುತ್ತೆ. ಮೊದಲಿನಂತೆ ಆರಾಮವಾಗಿ ಬೆಟ್ಟ ಹತ್ತೋದು, ಗುಡ್ಡ ಇಳಿಯೋದು, ಪ್ರವಾಸಕ್ಕೆ ಹೋಗೋದು, ಡೇಟಿಂಟ್, ಈಟಿಂಗ್ ಎಂಜಾಯ್ ಮಾಡಲು ಸಾಧ್ಯವಾಗೋದಿಲ್ಲ. ಮಕ್ಕಳ ಪಾಲನೆ ಹೆಸರಿನಲ್ಲಿ ಪಾಲಕರು ತಮ್ಮತನವನ್ನು ಸಂಪೂರ್ಣ ತ್ಯಾಗ ಮಾಡಬೇಕಾ ಎನ್ನುವ ಪ್ರಶ್ನೆ ಇಲ್ಲಿ ಮೂಡೋದು ಸಹಜ.
ಮಕ್ಕಳು ಹಾಗೂ ತ್ಯಾಗ (Sacrifice) ದ ವಿಷ್ಯ ಬಂದಾಗ ಬಹುತೇಕ ಪಾಲಕರು (Parents) ತ್ಯಾಗವನ್ನೇ ಆಯ್ಕೆ ಮಾಡಿಕೊಳ್ತಾರೆ. ಮಕ್ಕಳಿಗೆ 40 ವರ್ಷವಾದ್ರೂ ಅವರ ಆರೈಕೆಯಲ್ಲೇ ದಿನ ಕಳೆಯುವ ಪಾಲಕರಿದ್ದಾರೆ. ಮಕ್ಕಳ ಮೇಲಿನ ಅತಿಯಾದ ಪ್ರೀತಿ ಅವರಿಗೆ ಎಲ್ಲವನ್ನು ಮರೆಸುತ್ತದೆ. ಮಕ್ಕಳೇ ಎಲ್ಲ ಆಗಿರುವಾಗ ಇನ್ನೇನು ಬೇಕು ಎನ್ನುವವರಿದ್ದಾರೆ. ಆದ್ರೆ ಮಕ್ಕಳು (Children) ನಮ್ಮ ಜೊತೆ ಶಾಶ್ವತವಾಗಿ ಇರೋದಿಲ್ಲ ಎನ್ನುವ ಸತ್ಯ ಪಾಲಕರಿಗೆ ತಿಳಿದಿರಲಿ. ವಯಸ್ಸಿದ್ದಾಗ ಮಕ್ಕಳಿಗಾಗಿ ಎಲ್ಲವನ್ನೂ ಮಾಡಿ, ವಯಸ್ಸಾದ್ಮೇಲೆ ಮಕ್ಕಳು ಬಿಟ್ಟು ಹೋದಾಗ ನೋವು ತಿನ್ನುವ ಬದಲು, ಮಕ್ಕಳನ್ನು ಬೆಳೆಸುವ ಜೊತೆ ಜೊತೆಯಲ್ಲೇ ನಿಮ್ಮ ಜೀವನವನ್ನು ನೀವು ಅನುಭವಿಸಿದ್ರೆ ಒಳ್ಳೆಯದು.
RELATIONSHIP TIPS: ಕೋಪದಲ್ಲಾದರೂ ಇಂಥ ಮಾತುಗಳನ್ನ ಎಂದಿಗೂ ಆಡ್ಬೇಡಿ!
ಆರೋಗ್ಯಕರ ಕುಟುಂಬವನ್ನು ಉಳಿಸಿಕೊಳ್ಳಲು ಆರೋಗ್ಯಕರ ದಾಂಪತ್ಯ ಬಹಳ ಮುಖ್ಯ ಎನ್ನುವ ಅರಿವು ದಂಪತಿಗೆ ಇರಬೇಕು. ಹಾಗಂತ ಮಕ್ಕಳನ್ನು ದೂರ ಮಾಡ್ಬೇಕು ಎಂಬುದು ಈ ಮಾತಿನ ಅರ್ಥವಲ್ಲ. ಮಕ್ಕಳ ಜೊತೆ ನೀವು ನಿಮ್ಮನ್ನು ಪ್ರೀತಿಸಬೇಕು, ನಿಮ್ಮ ಪಾಲುದಾರರನ್ನು ಪ್ರೀತಿಸಬೇಕು. ನಮ್ಮ ಸಮಯ ಮತ್ತು ಹಣವನ್ನು ಮಕ್ಕಳಿಗಾಗಿ ತ್ಯಾಗ ಮಾಡುವ ಮೂಲಕ ನಾವು ಮಕ್ಕಳ ಮೇಲೆ ಮಾತ್ರ ಗಮನಹರಿಸುತ್ತೇವೆ. ನಮ್ಮ ಸ್ವಂತ ಅಗತ್ಯಗಳನ್ನು ನಾವು ಮರೆತುಬಿಡುತ್ತೇವೆ. ಆದ್ರೆ ಇಷ್ಟೊಂದು ತ್ಯಾಗ ಅಗತ್ಯವಿಲ್ಲ. ಮಕ್ಕಳು ಒಂದು ಹಂತಕ್ಕೆ ಬರುವವರೆಗೆ ಅವರ ಜೊತೆ ಸದಾ ನೀವಿರಬೇಕಾಗುತ್ತದೆ. ಅದೇ ಮಕ್ಕಳು ಟಿನೇಜ್ ಗೆ ಬರ್ತಿದ್ದಂತೆ ಅವರಿಗೆ ಪಾಲಕರ ಅಗತ್ಯವಿರೋದಿಲ್ಲ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಅರ್ಹರಾಗುವ ಮಕ್ಕಳು, ತಮ್ಮ ಸುತ್ತ ಪಾಲಕರು ಬರದಂತೆ ಎಚ್ಚರವಹಿಸ್ತಾರೆ. ಅವರಿಗೆ ಸ್ನೇಹಿತರೇ ಪ್ರಪಂಚವಾಗ್ತಾರೆ. ಸ್ವತಂತ್ರವನ್ನು ಮಕ್ಕಳು ಬಯಸ್ತಾರೆ. ಪಾಲಕರು ಮಕ್ಕಳಿಗೆ ನೀಡುವಷ್ಟು ಪ್ರೀತಿಯನ್ನು ಮಕ್ಕಳು ಪಾಲಕರಿಗೆ ನೀಡೋದಿಲ್ಲ. ಇದು ಮಕ್ಕಳು ದೊಡ್ಡವರಾಗ್ತಿದ್ದಂತೆ ಪ್ರತಿಯೊಬ್ಬ ಪಾಲಕರ ಅರಿವಿಗೆ ಬರುವ ಸತ್ಯ.
ಸೆಕ್ಸ್ ನಂತರ ಮಹಿಳೆಯರಲ್ಲಿ ಈ ಲಕ್ಷಣ ಕಂಡು ಬಂದ್ರೆ ನಿರ್ಲಕ್ಷ ಮಾಡ್ಲೇಬೇಡಿ!
ನೀವು ಮಕ್ಕಳನ್ನು ಪ್ರೀತಿಸಿ, ಅವರಿಗೆ ರಕ್ಷಣೆ ನೀಡಿ, ಅವರನ್ನು ಆರೈಕೆ ಮಾಡಿ. ಮಕ್ಕಳು ನಿಮ್ಮ ಜವಾಬ್ದಾರಿ. ನೀವು ಅವರನ್ನು ಷರತ್ತುರಹಿತವಾಗಿ ಪ್ರೀತಿ ಮಾಡ್ಬಹುದು. ಅದನ್ನು ತಡೆಯೋರು ಯಾರೂ ಇಲ್ಲ. ಹಾಗಂತ ಅದಕ್ಕಾಗಿ ನಿಮ್ಮ ತನವನ್ನು ತ್ಯಾಗ ಮಾಡುವ ಅಗತ್ಯವಿಲ್ಲ.
ಸಂಗಾತಿ ಹಾಗೂ ನೀವು ಒಟ್ಟಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಳ್ಳಿ. ನಿಮ್ಮಿಷ್ಟದ ಕೆಲಸವನ್ನು ಮಾಡಲು ಪ್ರಯತ್ನಿಸಿ. ಇಬ್ಬರೂ ಒಂದಿಷ್ಟು ಪ್ರದೇಶಗಳನ್ನು ಕೈಕಾಲು ಗಟ್ಟಿಯಿರುವಾಗ್ಲೇ ಸುತ್ತಿ ಬನ್ನಿ. ಹಣವನ್ನು ಮಕ್ಕಳಿಗಾಗಿ ಮಾತ್ರ ಉಳಿಸುವ ಅಭ್ಯಾಸ ಬೇಡ. ನಿಮಗಾಗಿ ಸ್ವಲ್ಪ ಹಣವನ್ನು ಉಳಿತಾಯ ಮಾಡಲು ಎಂದೂ ಮರೆಯಬೇಡಿ.