ಅರ್ಬಾಜ್ ಪತ್ನಿಗೆ ಅತ್ತಿಗೆ ಅತ್ತಿಗೆ ಅಂತ ಕರೆದ ಪಪಾರಾಜಿಗಳು: ನಾಚಿ ಗಂಡನ ಹಿಂದೆ ಅಡಗಿದ ಶುರಾ ಖಾನ್

By Anusha Kb  |  First Published Jan 19, 2024, 12:38 PM IST

ಅರ್ಬಾಜ್ ಖಾನ್ ಪತ್ನಿ ಶುರಾ ಖಾನ್ ಬರ್ತ್‌ಡೇ ಸಂಭ್ರಮದಲ್ಲಿದ್ದು, ಪತಿಯ ಜೊತೆ ಬರ್ತ್‌ಡೇ ಡಿನ್ನರ್‌ಗಾಗಿ ಹೋಗುವ ವೇಳೆ ಪಪಾರಾಜಿಗಳು ಎದುರಾಗಿದ್ದು, ಆಕೆಯನ್ನು ಜೋರಾಗಿ ಅತ್ತಿಗೆ ಅತ್ತಿಗೆ ಎಂದು ಕೂಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಈ ಪಪಾರಾಜಿಗಳ ಈ ಕೂಗಿಗೆ ನಾಚಿ ನೀರಾದ ಶುರಾ ಖಾನ್ ಪತಿ ಅರ್ಬಾಜ್ ಖಾನ್ ಹಿಂದೆ ಅಡಗಿದ್ದಾರೆ. ಈ ಕ್ಯೂಟ್ ವೀಡಿಯೋ ಈಗ ಸಖತ್ ವೈರಲ್ ಆಗಿದೆ.


ಅರ್ಬಾಜ್ ಖಾನ್ ಪತ್ನಿ ಶುರಾ ಖಾನ್ ಬರ್ತ್‌ಡೇ ಸಂಭ್ರಮದಲ್ಲಿದ್ದು, ಪತಿಯ ಜೊತೆ ಬರ್ತ್‌ಡೇ ಡಿನ್ನರ್‌ಗಾಗಿ ಹೋಗುವ ವೇಳೆ ಪಪಾರಾಜಿಗಳು ಎದುರಾಗಿದ್ದು, ಆಕೆಯನ್ನು ಜೋರಾಗಿ ಅತ್ತಿಗೆ ಅತ್ತಿಗೆ ಎಂದು ಕೂಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಈ ಪಪಾರಾಜಿಗಳ ಈ ಕೂಗಿಗೆ ನಾಚಿ ನೀರಾದ ಶುರಾ ಖಾನ್ ಪತಿ ಅರ್ಬಾಜ್ ಖಾನ್ ಹಿಂದೆ ಅಡಗಲು ನೋಡಿದ್ದು, ಬಳಿಕ ನಾಚಿಕೆಯಿಂದಲೇ ಪಪಾರಾಜಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.  

ಸಲ್ಮಾನ್ ಖಾನ್ ಸೋದರ ಹಾಗೂ ಬಾಲಿವುಡ್ ನಟಿ ಮಲೈಕಾ ಆರೋರಾ ಮಾಜಿ ಪತಿ ಅರ್ಬಾಜ್ ಖಾನ್ ಹಾಗೂ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌ ಶುರಾ ಖಾನ್ ಬಾಲಿವುಡ್‌ನ ನವದಂಪತಿಗಳಾಗಿದ್ದು, ಕಳೆದ ವರ್ಷಾಂತ್ಯದಲ್ಲಿ ಸ್ನೇಹಿತರು ಬಂಧುಗಳ ಸಮ್ಮುಖದಲ್ಲಿ ವಿವಾಹವಾಗಿದ್ದರು.  ಬಾಲಿವುಡ್‌ ನಟಿ  ರವೀನಾ ಟಂಡನ್ ಹಾಗೂ ಮಗಳು ರಾಶಾ ತದ್ನಾನಿಗೆ ಬಹಳ ಆತ್ಮೀಯರಾಗಿರುವ ಶುರಾ ಖಾನ್‌ಗೆ, ಪಪಾರಾಜಿಗಳ ಕ್ಯಾಮರಾಗಳು ಎಂದರೆ ತುಸು ಇರಿಸು ಮುರಿಸು, ಸದಾ ತಲೆಕೆಳಗೆ ಹಾಕಿಯೇ ನಡೆಯುವ ಈಕೆಯನ್ನು ಅರ್ಬಾಜ್ ಖಾನ್‌ ಜೊತೆ ವಿವಾಹದ ನಂತರ ಪಪಾರಾಜಿ ಕ್ಯಾಮರಾಗಳು ಹಿಂಬಾಲಿಸುವುದು ಸಾಮಾನ್ಯವಾಗಿದೆ.  ಇಂತಹ ಶುರಾ ಖಾನ್‌ಗೆ ಈಗ ತಮ್ಮ 31ನೇ ವಸಂತಕ್ಕೆ ಕಾಲಿರಿಸಿದ್ದು, ಈ ಹಿನ್ನೆಲೆಯಲ್ಲಿ ಪತಿಯೊಂದಿಗೆ ಡಿನ್ನರ್‌ಗಾಗಿ ಹೊರಗೆ ಬಂದ ವೇಳೆ ಪಪಾರಾಜಿಗಳು ಅತ್ತಿಗೆ ಅತ್ತಿಗೆ ಎಂದು ಕರೆದಿದ್ದು, ಶುರಾ ನಾಚಿ ನೀರಾಗಿದ್ದಾರೆ.

Tap to resize

Latest Videos

ರವೀನಾ ಟಂಡನ್‌ ಪುತ್ರಿ ಜೊತೆ ಸುತ್ತಾಡುತ್ತಿರುವ ಅರ್ಬಾಜ್‌ ಖಾನ್ ಮಲೈಕಾ ಪುತ್ರ: ಡೇಟಿಂಗ್‌ನಲ್ಲಿದ್ದಾರ ಈ ಸ್ಟಾರ್ ಕಿಡ್‌

ಸೆಲೆಬ್ರಿಟಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿರುವ ಶುರಾಗೆ ಸ್ಟೈಲ್ ಮಾಡೋದೇಗೆ ಎಂದು ಯಾರು ಹೇಳಿಕೊಡಬೇಕಾಗಿಲ್ಲ, ಹಿತವಾದ ಮೇಕಪ್ ಹಾಕಿದ್ದ ಇವರು ಕೆಂಪು ಬಣ್ಣದ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದರು. ಇತ್ತ ಅರ್ಬಾಜ್, ಜೀನ್ಸ್ ಪ್ಯಾಂಟ್ ಮೇಲೆ ಡೆನಿಮ್ ಜಾಕೆಟ್ ಧರಿಸಿದ್ದರು. ಮದುವೆಯ ನಂತರ ಶುರಾ ಆಚರಿಸುವ ಮೊದಲ ಬರ್ತ್‌ಡೇ ಇದಾಗಿದೆ. ಇನ್ನು ವೀಡಿಯೋ ನೋಡಿದ ಅಭಿಮಾನಿಗಳು ನವಜೋಡಿಗೆ ಶುಭಹಾರೈಸುವ ಜೊತೆ ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಒಬ್ಬರು ಯಾಕೆ ಆಕೆ ಯಾವಾಗಲೂ ಮುಖ ಮುಚ್ಚಿಕೊಳ್ಳುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅರ್ಬಾಜ್ ತಮ್ಮ ವಯಸ್ಸಿಗೆ ಹೋಲಿಸಿದರೆ ಬಹಳ ಯಂಗ್ ಆಗಿ ಕಾಣಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಯಾಕೋ ಗೊತ್ತಿಲ್ಲ, ಈ ಜೋಡಿಯನ್ನು ನೋಡಿದರೆ ಇತ್ತೀಚೆಗೆ ಬಹಳ ಮುದ್ದಾದ ಜೋಡಿ ಎಂದು ಅನಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮದುವೆಯ ನಂತರ ಅರ್ಬಾಜ್ ಕೂಡ ಖುಷಿಯಾಗಿರುವುದು ಕಾಣಿಸುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಹರೆಯದ ಮಗನ ಮುಂದೆ 2ನೇ ಹೆಂಡ್ತಿಗೆ ಹುಡುಗನಂತೆ ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿದ ಅರ್ಬಾಜ್ ಖಾನ್

ಕಳೆದ ಡಿಸೆಂಬರ್‌ನಲ್ಲಿ ಅರ್ಬಾಜ್ ಖಾನ್ ಶುರಾ ಖಾನ್‌ರನ್ನು ಮದುವೆಯಾಗಿದ್ದರು, ಈ ಮದುವೆಯ ದಿನವೇ ಅರ್ಬಾಜ್ ಖಾನ್ ಪತ್ನಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗಿತ್ತು. ಅರ್ಬಾಜ್ ಖಾನ್ ಬಾಲಿವುಡ್ ನಟಿ ಮಲೈಕಾ ಆರೋರಾ 1998ರಲ್ಲಿ ಮದುವೆಯಾಗಿದ್ದು, ದಾಂಪತ್ಯದಲ್ಲಿ ವಿರಸದ ಕಾರಣಕ್ಕೆ 2017ರಲ್ಲಿ ಈ ಕೋಡಿ ವಿಚ್ಛೇದನ ಪಡೆದುಕೊಂಡಿದ್ದರು. ಇವರಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ.

 

click me!