ಭಾವನಾತ್ಮಕವಾಗಿ ಸೂಕ್ಷ್ಮತೆ ಹೊಂದಿರುವುದರಿಂದ ಎಷ್ಟೋ ಲಾಭವಿದೆ. ಆದರೆ, ಸಂಬಂಧದಲ್ಲಿ ಅತಿಯಾದ ಸೂಕ್ಷ್ಮತೆ ಹೊಂದಿರುವುದರಿಂದ ಹಾನಿಯೇ ಹೆಚ್ಚು, ಅಂಥವರು ಪದೇ ಪದೆ ಕೆಲವು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ.
ಸೂಕ್ಷ್ಮಮತಿಗಳಾಗಿರುವುದರಿಂದ ಹಲವು ರೀತಿಯಲ್ಲಿ ಲಾಭವಿದೆ. ಸೂಕ್ಷ್ಮಮತಿಗಳು ಬೇರೆಯವರ ಕಣ್ಣಿಗೆ ಕಾಣದ ಪ್ರಪಂಚವನ್ನೂ ಕಾಣಬಲ್ಲರು. ಇತರರನ್ನು ಬಹುಬೇಗ ಅರಿತುಕೊಳ್ಳಬಲ್ಲರು. ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವವರು ಇತರರಿಗೆ ನೋವುಂಟು ಮಾಡುವುದು ಸಹ ಕಡಿಮೆ. ಆದರೆ, ಅತಿಯಾಗಿ ಸೂಕ್ಷ್ಮತನ ಹೊಂದಿದ್ದರೆ ಸಂಬಂಧಗಳಲ್ಲಿ ಏಗುವುದು ಕಷ್ಟವಾಗುತ್ತದೆ. ಸೂಕ್ಷ್ಮ ಜನರು ಸಂಬಂಧಗಳಲ್ಲಿ ತಪ್ಪುಗಳನ್ನು ಮಾಡುವುದು ಹೆಚ್ಚು. ದಪ್ಪನೆಯ ಚರ್ಮದವರು ಸುಲಭವಾಗಿ ಅವಾಯ್ಡ್ ಮಾಡಬಲ್ಲ ಸನ್ನಿವೇಶಗಳಲ್ಲಿ ಇವರು ತಪ್ಪುಗಳನ್ನು ಮಾಡುತ್ತ ನೋವಿಗೆ ಒಳಗಾಗುತ್ತಾರೆ. ಹೀಗಾಗಿ, ನೀವೂ ಒಂದೊಮ್ಮೆ ಸೂಕ್ಷ್ಮ ಬುದ್ಧಿ ಹೊಂದಿದ್ದರೆ ಕೆಲವು ತಪ್ಪುಗಳನ್ನು ಮಾಡುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಸೂಕ್ಷ್ಮಮತಿಗಳಾದವರು ತಮ್ಮ ತಮ್ಮ ಸಂಬಂಧಗಳಲ್ಲಿ ಮಾಡುವ ತಪ್ಪುಗಳನ್ನು ಅರಿತುಕೊಳ್ಳಿ. ಅವುಗಳನ್ನು ನೀವೂ ಮಾಡದಂತೆ ಎಚ್ಚರಿಕೆ ವಹಿಸಿ. ಸಾಮಾನ್ಯವಾಗಿ ಸೂಕ್ಷ್ಮ ಬುದ್ಧಿಯುಳ್ಳವರು ಸಂಬಂಧವನ್ನು ಬಹಳ ಅರ್ಜೆಂಟಾಗಿ ಡಿಫೈನ್ ಮಾಡಲು ಮುಂದಾಗುತ್ತಾರೆ. ಸರಿಯಾಗಿ ಹೇಳಲು ಬಾರದ ಸಂಬಂಧಗಳನ್ನು ನಿಭಾಯಿಸಲು ಅವರು ಹೆಣಗುತ್ತಾರೆ. ಹೀಗಾಗಿ, ಆ ಸಂಬಂಧಕ್ಕೊಂದು ಲೇಬಲ್ ಹಚ್ಚಲು ಗಡಿಬಿಡಿ ಮಾಡುತ್ತಾರೆ. ಇದು ಎಷ್ಟೋ ಬಾರಿ ದೊಡ್ಡ ತಪ್ಪಾಗುತ್ತದೆ. ಬಳಿಕ, ತಪ್ಪಿನ ಅರಿವಾದಾಗ ಇನ್ನಷ್ಟು ನೋವಾಗುತ್ತದೆ. ಅದರ ಬದಲು ಆ ಸಂಬಂಧ ಸ್ವಲ್ಪ ಸಮಯ ಯಾವುದೇ ಹೆಸರಿಲ್ಲದೇ ಹಾಗೆಯೇ ಇರಲು ಬಿಟ್ಟುಬಿಡಬೇಕು.
• ಬೇಗ ಅಸೂಯೆ (Jealousy) ಪಡುವ ಸಾಧ್ಯತೆ
ಸೂಕ್ಷ್ಮ ಮನಸ್ಥಿತಿ (Over Sensitive) ಉಳ್ಳವರು ಬಹಳ ಬೇಗ ಅಸೂಯೆಗೆ ಒಳಗಾಗುವ ಸಾಧ್ಯತೆ ಅಧಿಕ. ಸಂಬಂಧದಲ್ಲಿ (Relation) ಅದೆಷ್ಟೋ ಸನ್ನಿವೇಶಗಳು ಅಸೂಯೆ ಪಡುವಂತೆ ನಿರ್ಮಾಣವಾಗಿರುತ್ತವೆ. ಒಂದೊಮ್ಮೆ ಹಾಗೆ ಅಸೂಯೆ ಪಟ್ಟ ಬಳಿಕ ನೀವು ಸಿಕ್ಕಾಪಟ್ಟೆ ಕಿರಿಕಿರಿಗೆ ಒಳಗಾಗುತ್ತೀರಿ. ಸಂಬಂಧದಲ್ಲಿ ಅಸೂಯೆ ಪಡುವುದು ತಪ್ಪು. ಇದು ನಿಮ್ಮಲ್ಲಿರುವ ಅಭದ್ರತೆ (Insecure) ತೋರುತ್ತದೆ ಅಷ್ಟೆ.
Relationship Tips: ಎಲ್ಲದಕ್ಕೂ ಮತ್ತೊಬ್ಬರ ಅನುಮತಿಗೆ ಕಾಯೋದ್ಯಾಕೆ?
• ಅಂಟಿಕೊಳ್ಳುವ (Clingy) ಬುದ್ಧಿ
ಯಾರನ್ನಾದರೂ ಇಷ್ಟಪಟ್ಟಾಗ ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎನಿಸುವುದು ಸಹಜ. ಆದರೆ, ಭಾವನಾತ್ಮಕ ತೀವ್ರತೆಯ ಜನರು ಪ್ರೀತಿಪಾತ್ರರನ್ನು (Loved Ones) ಹೊರತುಪಡಿಸಿ ಸಮಯ ಕಳೆಯಲು ಸಾಧ್ಯವಿಲ್ಲದಂತೆ ಚಡಪಡಿಸುತ್ತಾರೆ. ಇದು ಅಂಟಿಕೊಳ್ಳುವ ಅಭ್ಯಾಸಕ್ಕೆ ಎಡೆ ಮಾಡುತ್ತದೆ. ಸಂಬಂಧದಲ್ಲಿ ಇದು ಭಾರೀ ಅಸಮರ್ಪಕ ಗುಣ. ಪ್ರೀತಿಪಾತ್ರರ ಮೇಲೆ ಅತಿಯಾಗಿ ಅವಲಂಬಿಸಿದಾಗ ನೀವು ಕೆಟ್ಟವರೆಂದು ಅನಿಸಿಕೊಳ್ಳುವುದಿಲ್ಲ. ಆದರೆ, ಇದು ಸಂಬಂಧಕ್ಕೆ ಪೂರಕವಾಗಿ ಇರುವುದಿಲ್ಲ. ಅತಿಯಾಗಿ ಸ್ಪಂದಿಸುವುದು, ಅತಿಯಾಗಿ ಅವಲಂಬಿಸುವುದು (Depend), ಅತಿಯಾಗಿ ಅಂಟಿಕೊಳ್ಳುವುದು ವ್ಯಕ್ತಿತ್ವಕ್ಕೂ ಹಾನಿಕರ.
• ಜಗಳಗಳಿಗೆ (Fight) ಅತಿ ಪ್ರತಿಕ್ರಿಯೆ (Over Reaction)
ಪ್ರತಿ ಸಂಬಂಧದಲ್ಲೂ ಏನಾದರೂ ಜಗಳ, ಮಾತು, ಮುನಿಸು ಉಂಟಾಗುವುದು ಸಹಜ. ಅವು ಎಲ್ಲ ಬಾರಿಯೂ ದೊಡ್ಡದಾಗಿರುವುದಿಲ್ಲ. ಅವುಗಳನ್ನು ಹಾಗೆಯೇ ಸಹಜವಾಗಿ ಸ್ವೀಕರಿಸಿಬಿಟ್ಟಾಗ ಆ ಸನ್ನಿವೇಶ ಮುಂದುವರಿಯುವುದಿಲ್ಲ. ಆದರೆ, ಸೂಕ್ಷ್ಮ ಬುದ್ಧಿಯ ಜನ ಜಗಳಿಗೆ ಅತಿಯಾಗಿ ಸ್ಪಂದಿಸುತ್ತಾರೆ. ಪದೇ ಪದೆ ಸಾರಿ ಕೇಳುತ್ತಾರೆ ಅಥವಾ ಸಂಗಾತಿಗೆ (Partner) ಮತ್ತೆ ಹೀಗೆ ಮಾಡದಂತೆ ಪದೇ ಪದೆ ಹೇಳುತ್ತಾರೆ. ಒಂದು ಜಗಳದಿಂದ ಸಂಬಂಧ ಮುಗಿದೇ ಹೋಗುವ ಭಾವನೆಯಿಂದ ನಲುಗುತ್ತಾರೆ.
• ಪದೇ ಪದೆ ದೃಢೀಕರಣ (Validation) ಕೇಳುವುದು
ಭಾವನಾತ್ಮಕವಾಗಿ ಅನಗತ್ಯ ಸೂಕ್ಷ್ಮವಾಗಿದ್ದರೆ ನಿಮ್ಮ ಸಂಗಾತಿ ನಿಮಗೆ ಎಷ್ಟು ಭರವಸೆ ನೀಡಿದರೂ ಸಾಕಾಗುವುದಿಲ್ಲ. ಮುಖ್ಯವಾಗಿ ಪುರುಷರು ಈ ಗುಣ ಹೊಂದಿದ್ದರೆ ಅವರು ತಮ್ಮ ಸಂಗಾತಿಯಿಂದ ಗೌರವ (Respect) ಮತ್ತು ಆಕರ್ಷಣೆಯನ್ನು (Attraction) ಕಳೆದುಕೊಳ್ಳುತ್ತಾರೆ.
Relationship Tips: ಸಂಬಂಧ ವಿಷವಾಗ್ತಿದೆ ಅನ್ನೋದನ್ನು ಹೀಗೆ ಪತ್ತೆ ಮಾಡಿ
• ಎಲ್ಲ ಕೃತ್ಯಕ್ಕೂ ಅರ್ಥವಿವರಣೆ (Over Explain)
ಸೂಕ್ಷ್ಮ ಬುದ್ಧಿಯ ಜನ ತಾವು ಮಾಡುವ ಎಲ್ಲ ಕೃತ್ಯಗಳಿಗೂ ಅರ್ಥ ವಿವರಣೆ ನೀಡಲು ಮುಂದಾಗುತ್ತಾರೆ. ಸಂಗಾತಿ ಯಾವುದೇ ಕಾರಣಕ್ಕೂ ತಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎನ್ನುವುದು ಇವರ ಉದ್ದೇಶವಾಗಿರುತ್ತದೆ. ಆದರೆ, ಇದು ಒಳ್ಳೆಯ ಅಭ್ಯಾಸವಲ್ಲ.