ಗಂಡನಿಗೆ ಮೋಸ ಮಾಡಿ ಮಾವನ ಜೊತೆ ಸಂಬಂಧ, ಅವಳಿ ಮಕ್ಕಳ ನಿರೀಕ್ಷೆಯಲ್ಲಿ ಜೋಡಿ!

By Santosh Naik  |  First Published Jun 2, 2023, 5:27 PM IST

ತನ್ನ ತಂದೆಯೊಂದಿಗೆ ಪತ್ನಿ ಅನೈತಿಕ ಸಂಬಂಧ ಬೆಳೆಸಿದ ಹಿನ್ನಲೆಯಲ್ಲಿ ಇಂಗ್ಲೆಂಡ್‌ನಲ್ಲಿ ವ್ಯಕ್ತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ ಘಟನೆ ನಡೆದಿದೆ.


ನವದೆಹಲಿ (ಜೂ.2): ಪತ್ನಿಯಿಂದಲೇ ಮೋಸಕ್ಕೆ ಒಳಗಾದ ಕಾರಣಕ್ಕೆ ಪತಿ ಆಕೆಗೆ ವಿಚ್ಛೇದನ ನೀಡಿದ್ದಾನೆ. ಇದರಲ್ಲೇನು ವಿಶೇಷ ಎಂದು ಕೇಳಬೇಡಿ. ಈತನಿಗೆ ಮೋಸವಾಗಿದ್ದು ಪತ್ನಿಯಿಂದ ಮಾತ್ರವೇ ಅಲ್ಲ, ತನ್ನ ತಂದೆಯಿಂದಲೂ ಮೋಸವಾಗಿದೆ. ಶವಾಗಾರದಲ್ಲಿ ಕೆಲಸ ಮಾಡುವ ವ್ಯಕ್ತಿಯ ಪತ್ನಿ ತನ್ನ ತಂದೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಕಾರಣಕ್ಕೆ ವ್ಯಕ್ತಿ ಆಕೆಯನ್ನು ದೂರ ಮಾಡಿದ್ದಾನೆ. ಇನ್ನೊಂದೆಡೆ ಹೊಸ ಜೋಡಿ ಅವಳ ಮಕ್ಕಳ ನಿರೀಕ್ಷೆಯಲ್ಲಿದೆ. ದಕ್ಷಿಣ ವೇಲ್ಸ್‌ನ ರೊಹೊಂಡಾದ ನಿವಾಸಿಯಾಗಿರುವ 22 ವರ್ಷದ ಡೆಕ್ಲನ್‌ ಫುಲ್ಲರ್‌, ತನ್ನ ಮಾಜಿ ಗೆಳತಿ ಹಾಗೂ ಪತ್ನಿಯೂ ಆಗಿದ್ದ 22 ವರ್ಷದ ಸ್ಟೆಫಾನಿ ತನ್ನ ತಂದೆ 44 ವರ್ಷದ ಡರೇನ್‌ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದನ್ನು ಗಮನಿಸಿದ್ದಾರೆ. ಇದನ್ನು ಮೊದಲ ಬಾರಿಗೆ ಗಮನಿಸಿದ ಬೆನ್ನಲ್ಲೇ ಡೆಕ್ಲನ್‌ ಫುಲ್ಲರ್‌, ಸ್ಟೆಫಾನಿಗೆ ಇದೇ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ. 'ನಾವು ದಿ ಸಿಂಪ್ಸನ್‌ ಶೋ ಅನ್ನು ಟಿವಿಯನ್ನು ನೋಡುತ್ತಿದ್ದೆವು' ಎಂದು ಆಕೆ ಈ ವೇಳೆ ಹೇಳಿದ್ದಾರೆ. ಇದಾದ ಕೆಲವೇ ದಿನಕ್ಕೆ ಡರೇನ್‌ ಹಾಗೂ ಸ್ಟೆಫಾನಿ 'ಸೆಕ್ಸ್‌' ನಡೆಸುವಾಗಲೇ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಾಗ ಡೆಕ್ಲನ್‌ ಫುಲ್ಲರ್‌ಗೆ ಆಕಾಶವೇ ತಲೆಯ ಮೇಲೆ ಬಿದ್ದಂತ ಅನುಭವವಾಗಿದೆ.

ಸ್ಟೆಫಾನಿ ಈಗ ಡೆಕ್ಲನ್‌ನ ತಂದೆ ಡರೇನ್‌ನ ಅವಳಿ ಮಕ್ಕಳಿಗೆ ಗರ್ಭವತಿಯಾಗಿದ್ದಾಳೆ. ಇಬ್ಬರೂ ಕೂಡ ಅಂದಾಜು 6 ಮೈಲಿ ದೂರದಲ್ಲಿರುವ ಪಾಂಟಿಪ್ರಿಡ್‌ನಲ್ಲಿ ಜೊತೆಯಾಗಿ ವಾಸ ಮಾಡುತ್ತಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಮಾತನಾಡಿರುವ ಸ್ಟೆಫಾನಿ, ಎಂದಿಗೂ ಕೂಡ ನಾನು ಡೆಕ್ಲನ್‌ಗೆ ವಿಶ್ವಾಸ ದ್ರೋಹ ಮಾಡಿಲ್ಲ ಎಂದು ಹೇಳಿದ್ದಾಳೆ. ನಾನು  ಡೆಕ್ಲನ್‌ಗೆ ಮೋಸ ಮಾಡಿಲ್ಲ. ಆತನೇ ನನ್ನನ್ನು ಬಿಟ್ಟು ಹೋದ ಒಂದು ವಾರದ ಬಳಿಕ ನಾನು ಹಾಗೂ ಡರೇನ್‌ ಜೊತೆಯಾಗಿ ಬದುಕಲು ಆರಂಭ ಮಾಡಿದ್ದೇವೆ' ಎಂದಿದ್ದಾರೆ. ಇನ್ನೊಂದೆಡೆ ಡೆಕ್ಲನ್‌ ನನ್ನ ಜೀವನ ಈಸ್ಟ್‌ಎಂಡರ್ಸ್‌ ಚಿತ್ರದ ಕಥೆಯ ರೀತಿಯ ಆಗಿದೆ ಎಂದು ಬೇಸರ ಪಟ್ಟುಕೊಂಡಿದ್ದಾರೆ. ಇದೇನು ಸಾಮಾನ್ಯ ವಿಚಾರವಲ್ಲ. ನನಗೆ ದ್ರೋಹವಾದಂತೆ ಅನಿಸುತ್ತಿದೆ. ಅವರಿಬ್ಬರೂ ನನ್ನ ಜೀವನದಲ್ಲಿ ಇಲ್ಲದೇ ಹೋದರೆ ಒಳ್ಳೆಯದು ಎಂದು ತೀರ್ಮಾನ ಮಾಡಿದ್ದೇನೆ ಎಂದಿದ್ದಾರೆ.

ಇನ್ನೊಂದೆಡೆ 44 ವರ್ಷದ ಡರೇನ್‌ ವಿಚ್ಛೇದಿತರಾಗಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಎಡರು ವರ್ಷದ ಮಗಳು ವಿಲ್ಲೋ ಜೊತೆ ಡೆಕ್ಲನ್‌ ಹಾಗೂ ಸ್ಟೆಫಾನಿ ಜೊತೆ ವಾಸಿಸಲು ಮನೆಗೆ ಬಂದಿದ್ದರು. ಇನ್ನು ತಮ್ಮೊಂದಿಗೆ ಡರೇನ್‌ ಬದುಕಲು ಆರಂಭ ಮಾಡಿದ ಬಳಿಕ ಒಮ್ಮೆ ಡೆಕ್ಲನ್‌ ತನ್ನ ತಂದೆಯ ಇರುವ ಕೋಣೆಯ ಬಾಗಿಲಿನ ಮೇಲಿದ್ದ ಮಗುವಿನ ವಿಡಿಯೋ ಮಾನಿಟರ್‌ ಅನ್ನು ಪರಿಶೀಲನೆ ಮಾಡಿದ್ದ. ಸಾಮಾನ್ಯವಾಗಿ ಇಂಗ್ಲೆಂಡ್‌ನಂಥ ದೇಶಗಳಲ್ಲಿ ಚಿಕ್ಕ ಮಕ್ಕಳಿರುವ ಮನೆಯಲ್ಲಿ ಮಗುವಿನ ಚಲನವಲನವನ್ನು ನೋಡಲು ಬೇಬಿ ಮಾನಿಟರ್‌ಅನ್ನು ಬಳಸಲಾಗುತ್ತದೆ. ಈ ಬೇಬಿ ಮಾನಿಟರ್‌ಗೆ ಮೊಬೈಲ್‌ಅನ್ನು ಕನೆಕ್ಟ್‌ ಮಾಡಿ ಅದರಲ್ಲಿನ ವಿಡಿಯೋಗಳನ್ನು ಡೆಕ್ಲನ್‌ ನೋಡಿದಾಗ, ಡರೇನ್‌ ಹಾಗೂ ಸ್ಟೆಫಾನಿ ಜೊತೆಯಲ್ಲಿರುವ ಸಾಕಷ್ಟು ವಿಡಿಯೋಗಳು ಲಭ್ಯವಾಗಿದೆ.

'ಸೆಕ್ಸ್‌' ಅನ್ನು ಕ್ರೀಡೆಯಾಗಿ ಪರಿಗಣಿಸಿದ ಸ್ವೀಡನ್, ಜೂ.8ಕ್ಕೆ ಮೊದಲ ಯುರೋಪಿಯನ್‌ ಸೆಕ್ಸ್‌ ಚಾಂಪಿಯನ್‌ಷಿಪ್‌!

Tap to resize

Latest Videos

ಈ ಕುರಿತು ಪ್ರಶ್ನೆ ಮಾಡಿದಾಗ, ಸ್ಟೆಫಾನಿಯ ಯಾವ ಉತ್ತರವೂ ಡೆಕ್ಲನ್‌ಗೆ ಸರಿ ಎನಿಸಲಿಲ್ಲ. ಕೊನೆಗೆ ತನ್ನ ತಂದೆ ಹಾಗೂ ಪತ್ನಿ ಇಬ್ಬರನ್ನೂ ಮನೆಯಿಂದ ಹೊರಹಾಕಿದ್ದಾನೆ. ಹಾಗೇನಾದರೂ ಸ್ಟೆಫಾನಿ, ಡರೇನ್‌ಅನ್ನು ಮದುವೆಯಾದಲ್ಲಿ ಡರೇನ್‌ನ ಮಗಳಾಗಿರುವ ವಿಲ್ಲೋಗೆ ಡೆಕ್ಲನ್‌ ಫುಲ್ಲರ್‌ ಏಕಕಾಲದಲ್ಲಿ ಅಜ್ಜ ಹಾಗೂ ಮಲತಂದೆ ಕೂಡ ಆಗಲಿದ್ದಾನೆ ಅನ್ನೋದನ್ನು ನೆನೆಸಿಕೊಂಡೇ ಮುಜುಗರಕ್ಕೆ ಒಳಗಾಗಿದ್ದಾನೆ.

'ನಿನ್ನ ಖುಷಿಯೇ ನನ್ನ ಖುಷಿ' ಕೈಹಿಡಿದ 20 ದಿನಕ್ಕೆ ಪತ್ನಿಯನ್ನು ಲವರ್‌ಗೆ ಕೊಟ್ಟು ಮದುವೆ ಮಾಡಿಸಿದ ಪತಿ!

click me!