ಕೊರೋನಾ ವೈರಸ್‌ಗೆ ಅರಳುತ್ತಿವೆ ಆನ್‌ಲೈನ್ ಅಫೇರ್ಸ್

By Suvarna NewsFirst Published Apr 2, 2020, 6:31 PM IST
Highlights

ಲಾಕ್ಡ್‌‍‌ಡೌನ್ ಸನ್ನಿವೇಶವನ್ನೇ ಕಾರಣವಾಗಿ ಬಳಸಿಕೊಂಡು ಆನ್ಲೈನ್ ಡೇಟಿಂಗ್ ಆ್ಯಪ್ ಹಾಗೂ ಎಕ್ಸ್ಟ್ರಾ ಮೆರೈಟಲ್ ಆ್ಯಪ್‌ಗಳನ್ನು ತಮ್ಮ ರೊಮ್ಯಾಂಟಿಕ್ ಅಫೇರ್‌ಗಾಗಿ ಸಿಕ್ಕಾಪಟ್ಟೆ ಬಳಸಲಾರಂಭಿಸಿದ್ದಾರಂತೆ ವಿವಾಹಿತರು.

ಕೊರೋನಾ ವೈರಸ್ ಎಂಬ ಕಣ್ಣಿಗೆ ಕಾಣದ ಜೀವಿಯು ಜಗತ್ತನ್ನೇ ಗೃಹಬಂಧನಕ್ಕೆ ಈಡು ಮಾಡಿದೆ. ಜನರು ಸ್ಟ್ರಿಕ್ಟ್ ಆಗಿ ಸೋಷ್ಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡುತ್ತಿದ್ದಾರೆ. ಕಚೇರಿಗೆ ಹೋಗುವವರೆಲ್ಲ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಪ್ರತಿ ನಿಮಿಷವೂ ಜೀವನ ಯಾವಾಗ ಸಾಮಾನ್ಯತೆಗೆ ಮರಳುತ್ತದೆ ಎಂದೇ ಕಾಯುವಂತಾಗಿದೆ. ಭಾರತ ಕೂಡಾ ಎಲ್ಲ ದೇಶಗಳಂತೆ ಸಂಪೂರ್ಣ ಲಾಕ್ಡ್ ಡೌನ್ ಆಗಿರುವ ಈ ಸಂದರ್ಭದಲ್ಲಿ ಬಹುತೇಕ ಜನರು ಇಂಟರ್ನೆಟ್ ಬಳಕೆ ಹೆಚ್ಚಿಸಿದ್ದಾರೆ. 

ಈ ಇಂಟರ್ನೆಟ್‌ನಿಂದಾಗಿ ವಿಶ್ವಾದ್ಯಂತದ ಸುದ್ದಿಗಳು ದೊರೆಯುತ್ತಿವೆ, ಕಚೇರಿ ಕೆಲಸಗಳು ಆಗುತ್ತಿವೆ, ಸೋಷ್ಯಲ್ ಮೀಡಿಯಾಗಳು ಟೈಂಪಾಸ್ ಮಾಡಿಸುತ್ತಿವೆ, ಮೂವಿಗಳನ್ನು ನೋಡುತ್ತಾ ಕಾಲ ಕಳೆಯಬಹುದಾಗಿದೆ. ಈ ಸಂದರ್ಭದಲ್ಲಿ ಅಂತರ್ಜಾಲ ಎಂಬುದು ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಕೈ ಹಿಡಿದು ನಡೆಸುತ್ತಿದೆ. ಈ ಅಂತರ್ಜಾಲದ ಬಳಕೆಯನ್ನು ಇನ್ನೂ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿ ತಮ್ಮ ಲವ್ ಲೈಫ್‌ಗೆ ಬಣ್ಣ ತುಂಬಿಕೊಳ್ಳುತ್ತಿರುವವರು ಹಲವರು. ಇದೆಲ್ಲ ಓಕೆ, ಆದರೆ ಈ ಪ್ಲಾಟ್‌ಫಾರಂನ್ನು ರಾಂಗ್ ರೂಟ್‌ಗಾಗಿ ಬಳಸುತ್ತಿದ್ದಾರೆ ಕೆಲ ವಿವಾಹಿತರು. ಹೌದು, ಲಾಕ್ಡ್‌‍‌ಡೌನ್ ಸನ್ನಿವೇಶವನ್ನೇ ಕಾರಣವಾಗಿ ಬಳಸಿಕೊಂಡು ಆನ್ಲೈನ್ ಡೇಟಿಂಗ್ ಆ್ಯಪ್ ಹಾಗೂ ಎಕ್ಸ್ಟ್ರಾ ಮೆರೈಟಲ್ ಆ್ಯಪ್‌ಗಳನ್ನು ತಮ್ಮ ರೊಮ್ಯಾಂಟಿಕ್ ಅಫೇರ್‌ಗಾಗಿ ಸಿಕ್ಕಾಪಟ್ಟೆ ಬಳಸಲಾರಂಭಿಸಿದ್ದಾರಂತೆ ವಿವಾಹಿತರು. 

ಶ್ರೀ ರಾಮ ನವಮಿ ಬಳಿಕ ಕಡಿಮೆಯಾಗುತ್ತಾ ಕೊರೊನಾ ವೈರಸ್‌?

ವಿವಾಹೇತರ ಸಂಬಂಧ ಹೆಚ್ಚಳ
ಗ್ಲೀಡನ್ ಎಂಬ ಎಕ್ಸ್ಟ್ರಾ ಮೆರೈಟಲ್ ಆ್ಯಪ್‌ ಈ ಬಗ್ಗೆ ತಿಳಿಸಿದ್ದು, ಲಾಕ್ಡ್‌ಡೌನ್ ಹೇರಿಕೆಯಾದ ಮೇಲೆ ತಮ್ಮ ಆ್ಯಪ್ ಸಬ್‌ಸ್ಕ್ರೈಬರ್ಸ್ ಸಂಖ್ಯೆ ಶೇ.70ರಷ್ಟು ಏರಿಕೆಯಾಗಿದೆಯಂತೆ! ವಿವಾಹಿತರ ಆನ್‌ಲೈನ್ ಅಫೇರ್‌ಗಾಗಿಯೇ ಕೆಲಸ ಮಾಡುವ ಈ ಆ್ಯಪ್‌ಗೆ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವುದು ವಿಪರ್ಯಾಸವೇ ಸರಿ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಜನರು ಮನೆಯಲ್ಲೇ ಉಳಿದು, ಅಂತರ್ಜಾಲ ಬಳಕೆ ಹೆಚ್ಚಾಗಿರುವುದು ಎಂದು ಆ್ಯಪ್ ಹೇಳಿಕೊಂಡಿದೆ. 

ಹೌದು, ಮನೆಯಲ್ಲೇ ಇದ್ದು ಬೋರಾಗುತ್ತದೆ ನಿಜ. ಹಾಗಂಥ ಪತ್ನಿ ಮಕ್ಕಳು ಜೊತೆಗಿರುವ ಈ ಸಂದರ್ಭವನ್ನು ಎಂಜಾಯ್ ಮಾಡಬೇಕಾದ ಜನರು  ಅದನ್ನು ಬಿಟ್ಟು, ಹತ್ತಿರವಿರುವವರೊಡನೆ ಪದೇ ಪದೆ ಜಗಳವಾಡಿಕೊಂಡು ಆನ್‌ಲೈನ್‌ನಲ್ಲಿ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಹುಡುಕಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಜನ ಯೋಚಿಸುವ ವಿಧಾನ ಸ್ವಲ್ಪ ಬದಲಿಸಿಕೊಂಡು, ಹೊಂದಿಕೊಳ್ಳುವ ಸ್ವಭಾವ ಹೆಚ್ಚಿಸಿಕೊಂಡರೆ ಕೊರೋನಾ ಲಾಕ್ಡ್‌ಡೌನ್‌ನ ನೆಗೆಟಿವ್ ಪರಿಣಾಮಗಳನ್ನು ಪಾಸಿಟಿವ್ ಆಗಿ ಬದಲಿಸಿಕೊಂಡು ತಮ್ಮ ಪಾರ್ಟ್ನರ್ ಜೊತೆಗೆ ಅರ್ಥಬದ್ಧವಾಗಿ, ಜೀವನಪೂರ್ತಿ ನೆನಪಿಡುವಂಥ ಸಮಯ ಕಳೆಯಲು ಅವಕಾಶವಿದೆ. ಆನ್ಲೈನ್ ಅಫೇರ್‌ಗಳಿಂದ ಹೊರಬಂದು ಪಾರ್ಟ್ನರ್ ಜೊತೆ ಹೀಗೆ ಕಳೆಯಬಹುದು. 

ಒಟ್ಟಾಗಿ ಕೆಲಸ ಮಾಡಿ
ಇದೇ ಮೊದಲ ಬಾರಿಗೆ ಪತಿಪತ್ನಿ ಇಬ್ಬರೂ ಮನೆಯೊಳಗೆ ದಿನದ 24 ಗಂಟೆಗಳನ್ನೂ ಕಳೆಯಲು ಅವಕಾಶ ಸಿಕ್ಕಿದೆ. ಹಾಗಾಗಿ, ಇಬ್ಬರೂ ಒಟ್ಟಿಗಿರಲು ಏನೇನು ಮಾಡಬಹುದೋ ಅವನ್ನೆಲ್ಲ ಮಾಡಿ. ಒಟ್ಟಿಗೇ ಅಡಿಗೆ ಮಾಡಿ, ಒಟ್ಟಾಗಿ ಮನೆಯ ಟೆರೇಸ್ ಮೇಲೆ ವಾಕ್ ಮಾಡಿ, ಕೇರಂ ಆಡಿ, ಒಟ್ಟಾಗಿ ಕುಳಿತು ಹಳೆಯ ದಿನಗಳನ್ನು ಮೆಲುಕು ಹಾಕಿ. ಸಂಬಂಧ ಚೆನ್ನಾಗಿರಲು ಒಟ್ಟಿಗೇ ಸಮಯ ಕಳೆಯುವುದಕ್ಕಿಂತ ಉತ್ತಮ ಮೆಡಿಸಿನ್ ಇನ್ನೊಂದಿಲ್ಲ. 

ನಿಮ್ಮ ಕಮ್ಯೂನಿಕೇಶನ್ ಸ್ಕಿಲ್ ಹೆಚ್ಚಿಸಿಕೊಳ್ಳಿ
ಯಶಸ್ವೀ ಸಂಬಂಧವೊಂದರ ಮುಖ್ಯ ಗುಟ್ಟೆಂದರೆ ಉತ್ತಮ ಮಾತುಕತೆ. ನಿಮ್ಮಿಬ್ಬರ ನಡುವಿನ ಮಾತುಕತೆ ಹೆಚ್ಚಿಸಿ. ಸಮಸ್ಯೆಗಳಿದ್ದರೆ ಅದನ್ನು ಹೇಳಿಕೊಂಡು ಆ ಬಗ್ಗೆ ಚರ್ಚಿಸಿ ಸರಿ ಮಾಡಿಕೊಳ್ಳಿ. ಅವರ ಯಾವ ಗುಣ ಇಷ್ಟ, ಯಾವುದು ಬದಲಿಸಿಕೊಂಡರೆ ಚೆನ್ನಾಗಿರುತ್ತದೆ ಎಂದು ಇಬ್ಬರೂ ಹೇಳಿಕೊಂಡು ಆ ಬಗ್ಗೆ ಗಮನ ಹರಿಸಿ. 

ಕೊರೋನಾ ವೈರಸ್ ಪೀಡಿತರ ಸೇವೆಗೆ ಮದ್ವೆಯನ್ನೇ ಮುಂದೂಡಿದ ವೈದ್ಯೆ!

ಮೂವೀಸ್, ಬುಕ್ಸ್
ಮೂವಿಗೆ ಕರೆದುಕೊಂಡು ಹೋಗೋಲ್ಲ ಎಂದೇ ಎಷ್ಟೋ ಬಾರಿ ಗಂಡಹೆಂಡತಿ ನಡುವೆ ಜಗಳವಾಗುವುದಿದೆ. ಆದರೆ, ಈಗ ಹೊರಗೆ ಹೋಗುವ ಹಾಗಿಲ್ಲ, ಸಮಯ ಬೇಕಾದಷ್ಟಿದೆ. ಈ ಸಮಯವನ್ನು ಬಳಸಿಕೊಂಡು ಇಬ್ಬರೂ ವಾರಕ್ಕೆ ನಾಲ್ಕು ಮೂವಿಗಳನ್ನು ನೋಡಬಹುದು. ಜೊತೆಗೆ ಕುಳಿತು ಪುಸ್ತಕಗಳನ್ನು ಓದಿ ನಂತರ ಆ ಬಗ್ಗೆ ಚರ್ಚಿಸಬಹುದು. ಮಕ್ಕಳಿದ್ದರೆ ಅವರೊಂದಿಗೆ ಒಂದೆರಡು ಗಂಟೆ ಆಟವಾಡಬಹುದು. ಈ ಎಲ್ಲ ಚಟುವಟಿಕೆಗಳೂ ಮುಂದಿನ ದಿನಗಳಲ್ಲಿ ಉತ್ತಮ ನೆನಪಾಗಿ ಜೊತೆಗುಳಿಯದಿದ್ದರೆ ಕೇಳಿ. 

click me!